Asianet Suvarna News Asianet Suvarna News

ಹುಲಿ ಗಣತಿ: ಈ ಬಾರಿ ಕರ್ನಾಟಕಕ್ಕೆ ಮತ್ತೆ ನಂ. 1 ಸ್ಥಾನ..?

ಹುಲಿಗಳ ಪ್ರಮಾಣದಲ್ಲಿ ಕರ್ನಾಟಕ ಮತ್ತೆ ನಂ.1 ಸ್ಥಾನ ಸಿಗಲಿದೆ ಎಂದು ಹೇಳಲಾಗುತ್ತಿದೆ. 2022ರಲ್ಲಿ ಮಧ್ಯಪ್ರದೇಶದಲ್ಲಿ 34, ಕರ್ನಾಟಕದಲ್ಲಿ 15 ಹುಲಿಗಳು ಮೃತಪಟ್ಟಿವೆ. ಇನ್ನು, 2018ರ ವರದಿಯಲ್ಲಿ ಮಧ್ಯ ಪ್ರದೇಶಕ್ಕಿಂತ ಕರ್ನಾಟಕದಲ್ಲಿ 2 ಹುಲಿ ಕಡಿಮೆಯಾಗಿದೆ. 

madhya pradesh loses more than double big cats compared to karnataka its nearest rival for tiger state tag in 2022 ash
Author
First Published Jan 9, 2023, 11:24 AM IST

ಭೋಪಾಲ್‌: ದೇಶದ ಪ್ರಮುಖ ಹುಲಿ ಆವಾಸ ಸ್ಥಾನಗಳಲ್ಲಿ ಒಂದಾಗಿರುವ ಕರ್ನಾಟಕ, ದೇಶದಲ್ಲಿ ಅತ್ಯಂತ ಹೆಚ್ಚಿನ ಹುಲಿ ಹೊಂದಿರುವ ರಾಜ್ಯವಾಗಿ ಹೊರಹೊಮ್ಮಿರುವ ಸಾಧ್ಯತೆ ಇದೆ. ಕಾರಣ 2018ರಲ್ಲಿ ಬಿಡುಗಡೆಯಾದ ಹುಲಿ ಗಣತಿಯಲ್ಲಿ 526 ಹುಲಿಗಳನ್ನು ಹೊಂದಿದ್ದ ಮಧ್ಯಪ್ರದೇಶ ನಂ. 1 ಸ್ಥಾನ ಪಡೆದಿದ್ದರೆ, 524 ಹುಲಿಗಳನ್ನು ಹೊಂದಿದ್ದ ಕರ್ನಾಟಕ 2ನೇ ಸ್ಥಾನದಲ್ಲಿತ್ತು. ಆದರೆ 2021ರಲ್ಲಿ ಮಧ್ಯಪ್ರದೇಶದಲ್ಲಿ 42, ಕರ್ನಾಟಕದಲ್ಲಿ 15 ಹುಲಿಗಳು, 2022ರಲ್ಲಿ ಮಧ್ಯಪ್ರದೇಶದಲ್ಲಿ 34 ಮತ್ತು ಕರ್ನಾಟಕದಲ್ಲಿ 15 ಹುಲಿಗಳು ಮೃತಪಟ್ಟಿವೆ. ಈ ಲೆಕ್ಕಾಚಾರದಲ್ಲಿ ನೋಡಿದರೆ 2022ರಲ್ಲಿ ನಡೆಸಲಾದ ಹುಲಿ ಗಣತಿ ವೇಳೆಗೆ ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯವಾಗಿ ಹೊರಹೊಮ್ಮುವ ಎಲ್ಲಾ ಸಾಧ್ಯತೆಗಳೂ ಇವೆ. ಈ ವರದಿ 2023ರಲ್ಲಿ ಬಿಡುಗಡೆಯಾಗಲಿದೆ.

ದೇಶದಲ್ಲಿ (Country) ಪ್ರತಿ 4 ವರ್ಷಗಳಿಗೆ ಒಮ್ಮೆ ಹುಲಿ ಗಣತಿ (Tiger Census) ನಡೆಸಲಾಗುತ್ತದೆ. 2018ರಲ್ಲಿ ನಡೆಸಲಾದ ಗಣತಿಯ ಅನ್ವಯ ದೇಶದಲ್ಲಿ 2,967 ಹುಲಿಗಳಿದ್ದವು ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (National Tiger Conservation Authority) (ಎನ್‌ಟಿಸಿಎ) (NTCA) ತಿಳಿಸಿದೆ. ಎನ್‌ಟಿಸಿಎ ಹುಲಿ ಸಂರಕ್ಷಣೆಯನ್ನು (Tiger Conservation) ಬಲಪಡಿಸುವುದಕ್ಕಾಗಿ ವನ್ಯಜೀವಿ (ಸಂರಕ್ಷಣೆ) ಕಾಯ್ದೆ, 1972 ರ  (Wildlife (Protection) Act, 1972) ಅಡಿಯಲ್ಲಿ ರಚಿಸಲಾದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ (Ministry of Environment, Forests and Climate Change) ಅಡಿಯಲ್ಲಿ ಶಾಸನಬದ್ಧ ಸಂಸ್ಥೆಯಾಗಿದೆ. ಎನ್‌ಟಿಸಿಎ ವೆಬ್‌ಸೈಟ್‌ನ ಪ್ರಕಾರ 2022ರಲ್ಲಿ ಭಾರತದಲ್ಲಿ ಒಟ್ಟು 117 ಹುಲಿಗಳು ಮೃತಪಟ್ಟಿವೆ.

ಇದನ್ನು ಓದಿ: Chikkamagaluru: ಭದ್ರಾ ಅಭಯಾರಣ್ಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳ, ಡಿ.1ರಿಂದ ಆರಂಭವಾಗಿದೆ ಹುಲಿ ಗಣತಿ

“ನಾವು (ಮಧ್ಯ ಪ್ರದೇಶ) ಗರಿಷ್ಠ ಸಂಖ್ಯೆಯ ಹುಲಿಗಳನ್ನು ಹೊಂದಿದ್ದೇವೆ ಮತ್ತು ನಮ್ಮ ರಾಜ್ಯದಲ್ಲಿ ಕಂಡುಬರುವ ಎಲ್ಲಾ ಶವಗಳನ್ನು ನಾವು ಗಣನೆಗೆ ತೆಗೆದುಕೊಳ್ಳುತ್ತೇವೆ. ದೊಡ್ಡ ಬೆಕ್ಕುಗಳ ಸಂಖ್ಯೆ ಬಹುತೇಕ ಒಂದೇ ಆಗಿರುವಾಗ ಅಲ್ಲಿ (ಕರ್ನಾಟಕ) ಕಡಿಮೆ ಹುಲಿ ಸಾವುಗಳು ಏಕೆ ವರದಿಯಾಗಿವೆ ಎಂಬುದು ನಮಗೆ ನಿಗೂಢವಾಗಿದೆ ”ಎಂದು ಎರಡು ರಾಜ್ಯಗಳಲ್ಲಿ ಸಾವಿನ ಅಂಕಿಅಂಶಗಳಲ್ಲಿನ ವ್ಯಾಪಕ ಅಂತರದ ಬಗ್ಗೆ ಕೇಳಿದಾಗ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಜೆ.ಎಸ್‌. ಚೌಹಾಣ್‌ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಅಲ್ಲದೆ, ಹುಲಿಗಳ ಸರಾಸರಿ ವಯಸ್ಸು 12 ರಿಂದ 18 ವರ್ಷಗಳು ಎಂದೂ ಅವರು ಹೇಳಿದರು.

ದೀರ್ಘಾಯುಷ್ಯದ ಮಾನದಂಡಗಳನ್ನು ಗಣನೆಗೆ ತೆಗೆದುಕೊಂಡರೆ, 2018 ರಲ್ಲಿ ನಡೆಸಿದ ಕೊನೆಯ ಅಂದಾಜಿನಲ್ಲಿ ರಾಜ್ಯವು 526 ಹುಲಿಗಳು ಇರುವುದನ್ನು ದಾಖಲಿಸಿದ್ದರಿಂದ ವಾರ್ಷಿಕವಾಗಿ ಸುಮಾರು 40 ಸಾವುಗಳನ್ನು ಸಹಜ ಎಂದು ಪರಿಗಣಿಸಬೇಕು ಎಂದೂ ಅವರು ಹೇಳಿದರು. 2021 ರಲ್ಲಿ, ಆ ವರ್ಷ ದೇಶದಲ್ಲಿ ದಾಖಲಾದ 127 ಸಾವುಗಳಲ್ಲಿ ಮಧ್ಯಪ್ರದೇಶವು 42 ಹುಲಿಗಳನ್ನು ಕಳೆದುಕೊಂಡಿತ್ತು.

ಇದನ್ನು ಓದಿ: ಅತಿ ಹೆಚ್ಚು ಹುಲಿ; 2 ನೇ ಸ್ಥಾನದಲ್ಲಿರುವ ಕರ್ನಾಟಕ ಶೀಘ್ರವೇ ನಂ 1

ಹಾಗೂ, ನನಗೆ ಬೇರೆ ರಾಜ್ಯಗಳ ಬಗ್ಗೆ ಗೊತ್ತಿಲ್ಲ, ಆದರೆ ಮಧ್ಯಪ್ರದೇಶದಲ್ಲಿ ಯಾವುದೇ ಹುಲಿ ಸಾವು ವರದಿಯಾಗುವುದಿಲ್ಲ. ಹುಲಿ ಸಾವಿನ ಪ್ರತಿಯೊಂದು ಪ್ರಕರಣವನ್ನು ನಾವು ತನಿಖೆ ಮಾಡುತ್ತೇವೆ ಮತ್ತು ಅನುಮಾನಾಸ್ಪದವಾಗಿ ಕಂಡುಬಂದರೆ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದೂ ಹಿರಿಯ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಹಾಗೂ, ಕೆಲವೊಮ್ಮೆ ಅರಣ್ಯಗಳು ಮತ್ತು ಗುಹೆಗಳ ಒಳಗೆ ನೈಸರ್ಗಿಕವಾಗಿ ಹುಲಿಗಳು ಸಾಯುತ್ತವೆ, ಅದನ್ನು ಗುರುತಿಸಲು ಸಾಧ್ಯವಿಲ್ಲ ಎಂದೂ ಹೇಳಿದರು.
ಇನ್ನು, ಎನ್‌ಟಿಸಿಎ ವೆಬ್‌ಸೈಟ್‌ನ ಪ್ರಕಾರ, 2012 ರಿಂದ ಜುಲೈ 2022 ರ ಅವಧಿಯಲ್ಲಿ ದೇಶದಲ್ಲಿ ಅತಿ ಹೆಚ್ಚು ಹುಲಿಗಳು ಬಾಂಧವ್‌ಗಡ್‌ನಲ್ಲಿ (66) ಮೃತಪಟ್ಟಿರುವುದು  ದಾಖಲಾಗಿದೆ ಮತ್ತು ನಂತರ ಕಾನ್ಹಾ (55)ದಲ್ಲಿ ಸಾವಿಗೀಡಾಗಿವೆ ಎಂದೂ ತಿಳಿದುಬಂದಿದೆ. 
 

ಇದನ್ನೂ ಓದಿ: ಗಿನ್ನಿಸ್ ದಾಖಲೆ ಸೇರಿದ ಭಾರತದ ಹುಲಿ ಗಣತಿ..!

Follow Us:
Download App:
  • android
  • ios