Chamarajanagar: ಬೆಳೆ ರಕ್ಷಣೆಗಾಗಿ ರೈತನಿಂದ ನಾಯಿಗೆ ಹುಲಿ ಬಣ್ಣ!

ರೈತರು ಜಮೀನಿನಲ್ಲಿ ಬೆಳೆದಿರುವ ಬೆಳೆಗಳನ್ನು ಕಾಡುಪ್ರಾಣಿಗಳಿಂದ ರಕ್ಷಿಸುವ ನಿಟ್ಟಿನಲ್ಲಿ ಚಾಣಾಕ್ಷ ರೈತರೊಬ್ಬರು ನಾಯಿಯೊಂದಕ್ಕೆ ಹುಲಿಯ ಬಣ್ಣವನ್ನು ಬಳಿಯುವ ಮಾರ್ಗ ಅನುಸರಿಸಿದ್ದಾರೆ.

Farmer in Hanur Chamarajanagar paints dog as tiger to protect his crop but localites are amused at amazing idea gvd

ಹನೂರು (ಜ.11): ರೈತರು ಜಮೀನಿನಲ್ಲಿ ಬೆಳೆದಿರುವ ಬೆಳೆಗಳನ್ನು ಕಾಡುಪ್ರಾಣಿಗಳಿಂದ ರಕ್ಷಿಸುವ ನಿಟ್ಟಿನಲ್ಲಿ ಚಾಣಾಕ್ಷ ರೈತರೊಬ್ಬರು ನಾಯಿಯೊಂದಕ್ಕೆ ಹುಲಿಯ ಬಣ್ಣವನ್ನು ಬಳಿಯುವ ಮಾರ್ಗ ಅನುಸರಿಸಿದ್ದಾರೆ. ಈ ಒಂದು ವಿಲಕ್ಷಣ ತಂತ್ರದಿಂದ ವನ್ಯಜೀವಿಗಳು ಹೆದರುತ್ತವೋ ಗೊತ್ತಿಲ್ಲ ಆದರೇ ಸಾರ್ವಜನಿಕರು ಭಯಭೀತರಾಗುವುದರ ಜೊತೆಗೆ ನಗೆಗಡಲಿನಲ್ಲಿ ತೇಲುವಂತ ಪ್ರಸಂಗ ತಾಲೋಕಿನ ಅಜ್ಜಿಪುರ ಗ್ರಾಮದಲ್ಲಿ ಕಂಡು ಬಂದಿದೆ.

ಮನುಷ್ಯನು ನಿಂತಿರುವಂತಹ ರೂಪದ ಮಾದರಿ (ಪೆಂಜು) ನಿರ್ಮಿಸುವುದು, ಪ್ರಾಣಿಗಳನ್ನು ಓಡಿಸುವ ರೀತಿಯಲ್ಲಿ ವಾಯ್ಸ್‌ ರೆಕಾರ್ಡ್‌ ಮೂಲಕ ಕೂಗುವುದು, ಜಮೀನಿನ ಬೇಲಿಯ ಸುತ್ತ ಪ್ಲಾಸ್ಟಿಕ್ ಹಾಗೂ ಇನ್ನಿತರೆ ಸಾಧನ ಸಲಕರಣೆಗಳಿಂದ ಶಬ್ದ ಮಾಡುವುದು ಸಾಮಾನ್ಯವಾಗಿದೆ ಆದರೆ ನಾಯಿಯೊಂದಕ್ಕೆ ಹುಲಿ ಬಣ್ಣ ಬಳಿದು ಬೆಲೆ ರಕ್ಷಣೆಗೆ ಮುಂದಾಗಿರುವುದು ವಿಶೇಷವಾಗಿದೆ.

ಸಾರ್ವಜನಿಕರು ದಾರಿಹೋಕರ ಪಡಿಪಾಟಿಲು: ನಾಯಿಗೆ ಹುಲಿ ರೂಪದ ಬಣ್ಣ ಬಳಿದಿರುವುದರಿಂದ ಈ ಭಾಗದಲ್ಲಿ ಸಂಚರಿಸುವ ಸಾರ್ವಜನಿಕರು ಹಾಗೂ ದಾರಿಹೋಕರು ಹುಲಿ ರೂಪದ ನಾಯಿಯನ್ನು ನೋಡಿ ಭಯ ಬೀಳುವುದರ ಜೊತೆಗೆ ವಿಚಲಿತರಾಗುತ್ತಿದ್ದಾರೆ. ಹೇ ಹುಲಿ ಹುಲಿ ಎಂದು ಹೌಹಾರಿದ್ದಾರೆ. ಇದು ನಿಜವಾದ ವ್ಯಾಘ್ರವಲ್ಲ ಎಂದು ತಿಳಿಯುತ್ತಿದ್ದಂತೆ ಬದುಕಿದೆಯಾ ಬಡ ಜೀವವೇ ಎಂಬಂತೆ ನಿಟ್ಟುಸಿರು ಬಿಡುತ್ತಾ ಇದು ಹುಲಿಯಲ್ಲ ನಾಯಿ ಎಂದು ನಗುತ್ತಿರುವುದು ಸರ್ವೇಸಾಮಾನ್ಯವಾಗಿದೆ.

Chamarajanagar: ಇನ್ಸ್‌ಪೆಕ್ಟರ್‌ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಎಂಟ್ರಿಕೊಟ್ಟ ಪುಟ್ಟಸ್ವಾಮಿ!

ವಿಪರ್ಯಾಸವೆಂದರೆ ಕಾಡುಪ್ರಾಣಗಳಿಗಿಂತ ಮನುಷ್ಯರೇ ಕೆಲಕಾಲ ನಾನು ಹುಲಿ ನೋಡಿದೆ ಎಂದು ಭಯ ಬೀಳುವ ವಾತಾವರಣ ಸೃಷ್ಟಿಯಾಗಿರುವುದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮನುಷ್ಯರ ಕೈಚಳಕದಿಂದ ಹುಲಿಯ ರೂಪವನ್ನು ಪಡೆದಿರುವ ಮೂಕ ಮುಗ್ಧ ನಾಯಿಯು ಎಂದಿನಂತೆ ಓಡಾಡುತ್ತಿದೆ.

Latest Videos
Follow Us:
Download App:
  • android
  • ios