Asianet Suvarna News Asianet Suvarna News

ಅಜ್ಜಿಯೊಂದಿಗೆ ಮಲಗಿದ್ದ 2 ತಿಂಗಳ ಮಗುವನ್ನು ಎತ್ತಿ ನೀರಿಗೆಸೆದ ಮಂಗಗಳು...

  • ಮಗುವನ್ನು ಎತ್ತಿ ನೀರಿಗೆಸೆದ ಮಂಗಗಳು
  • ಉತ್ತರಪ್ರದೇಶದ ಭಾಗ್ಪತ್‌ನಲ್ಲಿ ಘಟನೆ
  • ದುರಂತದಲ್ಲಿ ಮಗು ಸಾವು
Monkeys snatch 2 month old baby and throw it in water tank akb
Author
Bangalore, First Published Jan 10, 2022, 9:36 PM IST

ಉತ್ತರಪ್ರದೇಶ(ಜ.10) ಆಘಾತಕಾರಿ ಘಟನೆಯೊಂದರಲ್ಲಿ ಮಂಗಗಳ ಗುಂಪೊಂದು ಟೆರೇಸ್ ಮೇಲಿನ ರೂಮೊಂದರಲ್ಲಿ ಮಲಗಿಸಿದ್ದ ಎರಡು ತಿಂಗಳ ಪುಟ್ಟ ಮಗುವನ್ನು ಎತ್ತಿಕೊಂಡು ಹೋಗಿ ನೀರಿನ ಟ್ಯಾಂಕಿಗೆ ಎಸೆದ ಭಯಾನಕ ಘಟನೆ ನಡೆದಿದೆ. ಈ ದುರಂತದಲ್ಲಿ ಮಗು ಪ್ರಾಣ ಬಿಟ್ಟಿದ್ದು, ಉತ್ತರ ಪ್ರದೇಶದ (Uttar Pradesh) ಭಾಗ್ಪತ್‌ನಲ್ಲಿ (Baghpat) ಭಾನುವಾರ ಈ ಘಟನೆ ನಡೆದಿದೆ. 

ವರದಿಗಳ ಪ್ರಕಾರ ಮಗು ಕೇಶವ್‌ ಕುಮಾರ್‌ (Keshav Kumar) ತನ್ನ ಅಜ್ಜಿಯೊಂದಿಗೆ ಟೆರೇಸ್‌ ಮೇಲೆ ಇರುವ ರೂಮೊಂದರಲ್ಲಿ ಮಲಗಿತ್ತು. ಈ ಕೋಣೆಯ ಬಾಗಿಲು ಸ್ವಲ್ಪ ತೆರೆದಿತ್ತು. ಸ್ವಲ್ಪ ತೆರೆದಿದ್ದ ಬಾಗಿಲಿನ ಮೂಲಕ ಒಳಬಂದ ಮಂಗಗಳು ಮಗುವನ್ನು ಎಳೆದುಕೊಂಡು ಹೋಗಿವೆ. ಈ ವೇಳೆ ಮಗು ನಾಪತ್ತೆಯಾಗಿರುವುದು ಅಜ್ಜಿಯ ಗಮನಕ್ಕೆ ಬಂದಿದ್ದು, ಆಕೆ ಜೋರಾಗಿ ಬೊಬ್ಬೆ ಹೊಡೆಯಲು ಶುರು ಮಾಡಿದ್ದಾಳೆ. ಈ ವೇಳೆ ಅಜ್ಜಿ ಬೊಬ್ಬೆ ಕೇಳಿ ಮನೆಯವರು ಕೂಡ ಅಲ್ಲಿಗೆ ಬಂದಿದ್ದು ಮಗುವನ್ನು ಹುಡುಕಲು ಶುರು ಮಾಡಿದ್ದಾರೆ.  ಈ ವೇಳೆ ಮಗು ನೀರಿನ ಟ್ಯಾಂಕಿಯಲ್ಲಿ ಪತ್ತೆಯಾಗಿದೆ. 

Operation For Monkeys : ರಾಜ್ಯದಲ್ಲಿ ಮಂಗಗಳ ಸಂತಾನ ಹರಣಕ್ಕೆ ಯೋಜನೆ

ಈ ಹಿಂದೆಯೂ ಮಂಗಗಳು ಮಗುವನ್ನು ಎಳೆದೊಯ್ಯಲು ಪ್ರಯತ್ನಿಸಿದ್ದವು. ಈ ವೇಳೆ ಅಲ್ಲೇ ಇದ್ದ ಸಂಬಂಧಿಗಳು ಮಂಗಗಳ ಯತ್ನವನ್ನು ವಿಫಲಗೊಳಿಸಿದ್ದವು ಎಂದು ಮಗುವಿನ ಪೋಷಕರು ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಂದಿನಗರ (Chandinagar) ಪೊಲೀಸ್ ಠಾಣೆಯ  ಅಧಿಕಾರಿ ಒ.ಪಿ. ಸಿಂಗ್‌ ( O.P. Singh) ಮಾಧ್ಯಮಗಳೊಂದಿಗೆ ಮಾತನಾಡಿ, ಇಲ್ಲಿ ಮಂಗಗಳ ಹಾವಳಿ ವಿಪರೀತವಾಗಿದ್ದು, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಗೆ ತಿಳಿಸಿದ್ದೇವೆ ಎಂದರು.

ಮಹಾರಾಷ್ಟ್ರದಲ್ಲೂ ಈ ಹಿಂದೆ ವಿಚಿತ್ರವಾದ ಘಟನೆಯೊಂದು ನಡೆದಿತ್ತು. ತಮ್ಮ ಮರಿಯೊಂದನ್ನು ನಾಯಿಗಳು ಕೊಂದಿವೆ ಎಂದು ಕ್ರೋಧಗೊಂಡ ಕೋತಿಗಳ ಗುಂಪು ಇಡೀ ನಾಯಿಗಳನ್ನೆಲ್ಲಾ ಅಟ್ಟಾಡಿಸಿ ಅವುಗಳ ಮರಿಗಳನ್ನು ಹುಡುಕಿ ಹುಡುಕಿ ಕೊಲ್ಲುತ್ತಿರುವ ವಿಚಿತ್ರಕಾರಿ ಘಟನೆ ನಡೆದಿತ್ತು. ಮಹಾರಾಷ್ಟ್ರ (Maharashtra) ರಾಜ್ಯದ ಬೀಡ್(Beed) ಜಿಲ್ಲೆಯ ಮಜಲಗಾನ್‌( Majalgaon) ಪ್ರದೇಶದ ಲಾವೂಲಾ (Lavool) ಗ್ರಾಮದಲ್ಲಿ ಘಟನೆ ನಡೆದಿದ್ದು, ನಾಯಿ ಮರಿಗಳನ್ನು ಮರದ ತುದಿ ಅಥವಾ ದೊಡ್ಡ ಕಟ್ಟಡಗಳ ತುದಿಯಷ್ಟು ಎತ್ತರಕ್ಕೆ ಹೊತ್ತೊಯ್ದ ಕೋತಿಗಳು ಅಷ್ಟು ಎತ್ತರದಿಂದ ನಾಯಿ ಮರಿಗಳನ್ನು ಕೆಳಕ್ಕೆಸೆದು ಸಾಯಿಸುತ್ತಿವೆ ಎಂದು ಗ್ರಾಮಸ್ಥರು ಹೇಳಿದ್ದರು.

Viral News: ತಿಂಗಳಲ್ಲಿ 250 ನಾಯಿ ಮರಿಗಳನ್ನು ಕೊಂದ ಕೋತಿಗಳು, ಹೊರಗೆ ಓಡಾಡಲು ಜನರಿಗೆ ಭಯ

ಇದನ್ನು ಕೋತಿಗಳು ಹಾಗೂ ನಾಯಿಗಳ ನಡುವಿನ ಗ್ಯಾಂಗ್‌ವಾರ್‌ ಎಂದು ಬಿಂಬಿಸಲಾಗಿತ್ತು. ಕೋತಿ ಮರಿಯೊಂದನ್ನು ನಾಯಿಗಳು ಮೇಲೆರಗಿ ಹತ್ಯೆ ಮಾಡಿದನ್ನು ನೋಡಿದ ಮಂಗಗಳು ನಂತರ ಈ ಕೃತ್ಯಕ್ಕೆ ಸೇಡು ತೀರಿಸಲು ಮುಂದಾಗಿದ್ದು ಈ ಪ್ರದೇಶದಲ್ಲಿ ಇರುವ ನಾಯಿಗಳ ಮರಿಗಳನ್ನು ಹೊತ್ತೊಯ್ದು ಹಲ್ಲೆ ಮಾಡಿ ಸಾಯಿಸುತ್ತಿವೆ ಎಂದು ಗ್ರಾಮಸ್ಥರು ಹೇಳಿದ್ದಾರೆ. 

ನಾಯಿಗಳು ಓಡಿಸುತ್ತಿದ್ದರೂ ಕೋತಿಗಳು ನಾಯಿಗಳ ಮರಿಗಳನ್ನು ಹೇಗಾದರೂ ಮಾಡಿ ಎಗರಿಸಿ ಹೊತ್ತೊಯ್ಯುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಸಂಚಲನ ಮೂಡಿಸಿದ್ದವು. ನಾಯಿ ಮರಿಗಳ ಮಾರಣ ಹೋಮಕ್ಕೆ ಮುಂದಾಗಿರುವ ಈ ಕೋತಿಗಳು ಗ್ರಾಮದಲ್ಲಿರುವ ಒಂದೇ ಒಂದು ನಾಯಿ ಮರಿಯನ್ನು ಕೂಡ ಬಿಟ್ಟಿಲ್ಲ ಎಂದು ತಿಳಿದು ಬಂದಿದೆ.  ಇನ್ನು ಗ್ರಾಮದ ಹೊರ ಭಾಗದಿಂದ ಈ ಗ್ರಾಮಕ್ಕೆ ಬರುವ ಕೋತಿಗಳು ಇಲ್ಲಿ ನಾಯಿ ಮರಿಗಳನ್ನು ಹುಡುಕಾಡಿ ಕೊಲ್ಲುತ್ತಿವೆ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.

Follow Us:
Download App:
  • android
  • ios