ಜಿಂಕೆಗಳ ಮೇವಿಗಾಗಿ ಮರದ ಕೊಂಬೆಗಳ ಬಾಗಿಸಿದ ಕೋತಿ... ವೈರಲ್ ವಿಡಿಯೋ
ಕೋತಿಯೊಂದು ಜಿಂಕೆಗಳಿಗಾಗಿ ಮರದ ಕೊಂಬೆಯೊಂದನ್ನು ಕೆಳಗೆ ಬಗ್ಗಿಸಿ ಅವುಗಳು ತಿನ್ನಲು ಸಹಾಯ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ಕೋತಿಯ ಪರೋಪಕಾರದ ವಿಡಿಯೋ ಎಲ್ಲರ ಮನಸೆಳೆದಿದೆ.
ಮನುಷ್ಯನ ಹೊರತುಪಡಿಸಿ ಈ ಪ್ರಪಂಚದಲ್ಲಿರುವ ಬಹುತೇಕ ಎಲ್ಲಾ ಪ್ರಾಣಿಗಳು ಬಹಳ ಸಹಬಾಳ್ವೆಯಿಂದ ಜೀವನ ನಡೆಸುತ್ತವೆ. ಮಾಂಸಹಾರಿ ಪ್ರಾಣಿಗಳು ಕೂಡ ಅಷ್ಟೇ ತಮ್ಮ ಹಸಿವಿದ್ದಲ್ಲಿ ಮಾತ್ರ ಬೇಟೆಯಾಡುವವು. ಹೊಟ್ಟೆ ತುಂಬಿದ ನಂತರ ತಮ್ಮ ನೆಚ್ಚಿನ ಪ್ರಾಣಿ ಕಣ್ಣ ಮುಂದೆಯೇ ಸಾಗಿದರೂ ಬೇಟೆಯಾಡುವ ಮನಸ್ಸು ಮಾಡುವುದಿಲ್ಲ. ಹೀಗೆ ಪ್ರಾಣಿಗಳ ಪರಸ್ಪರ ಸ್ನೇಹ ಒಡನಾಟದ ಸಾಕಷ್ಟು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅದೇ ರೀತಿ ಈಗ ಕೋತಿಯೊಂದು ಜಿಂಕೆಗಳಿಗಾಗಿ ಮರದ ಕೊಂಬೆಯೊಂದನ್ನು ಕೆಳಗೆ ಬಗ್ಗಿಸಿ ಅವುಗಳು ತಿನ್ನಲು ಸಹಾಯ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ಕೋತಿಯ ಪರೋಪಕಾರದ ವಿಡಿಯೋ ಎಲ್ಲರ ಮನಸೆಳೆದಿದೆ.
ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ (Sushanth nanda) ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಸಾವಿರಾರು ಜನ ಈ ವಿಡಿಯೋವನ್ನು ಗಮನಿಸಿದ್ದಾರೆ. ಕಾಡಿನಲ್ಲಿ ಕೋತಿ ಹಾಗೂ ಜಿಂಕೆಗಳ ಸ್ನೇಹದ ಅನೇಕ ದೃಶ್ಯಾವಳಿಗಳು ಈಗಾಗಲೇ ಸೆರೆ ಆಗಿವೆ. ಇದು ಕಾಡಿನಿಂದ ಹೊರಗೆ ಕೋತಿ (Monkey) ತನ್ನ ಪ್ರೀತಿಯ ಕೋತಿಗೆ ಆಹಾರ ತಿನ್ನಲು ಸಹಾಯ ಮಾಡುತ್ತಿದೆ ಎಂದು ಸುಶಾಂತ್ ನಂದಾ ಅವರು ಬರೆದುಕೊಂಡಿದ್ದಾರೆ. 28 ಸೆಕೆಂಡುಗಳ ವಿಡಿಯೋದಲ್ಲಿ ಮರವೊಂದರಲ್ಲಿ ನೇತಾಡುತ್ತಿರುವ ಕೋತಿಯೊಂದು ಮರದ ಕೊಂಬೆಯನ್ನು ನಿಧಾನಕ್ಕೆ ಬಗ್ಗಿಸುತ್ತಿದೆ. ಈ ವೇಳೆ ಜಿಂಕೆಗಳು ಆ ಬಾಗಿದ ಕೊಂಬೆಯ ಎಲೆಗಳನ್ನು ತಿನ್ನಲು ಶುರು ಮಾಡುತ್ತವೆ. ಜಿಂಕೆಗಳು ತಿನ್ನುವವರೆಗೂ ಕೋತಿ ಆ ಮರದ ಕೊಂಬೆಯನ್ನು ಬಾಗಿಸಿ ಹಿಡಿದುಕೊಂಡಿದೆ. ಅಲ್ಲೇ ಕೆಲವರು ಸೈಕ್ಲಿಂಗ್ ನಡೆಸುತ್ತಿರುವುದು ವಿಡಿಯೋದಲ್ಲಿ ಸೆರೆ ಆಗಿದೆ.
ಈ ವಿಡಿಯೋ ನೋಡಿದ ಅನೇಕರು ಪ್ರತಿಕ್ರಿಯಿಸಿದ್ದಾರೆ. ಇದೊಂದು ಅಪರೂಪದ ದೃಶ್ಯ ಇಂತಹ ದೃಶ್ಯಗಳು ನಿಮಗೆಲ್ಲಿ ಸಿಗುತ್ತವೆ. ನೀವು ಹಂಚಿಕೊಳ್ಳುವ ಪ್ರತಿಯೊಂದು ದೃಶ್ಯಗಳು ಕೂಡ ತುಂಬಾ ಸುಂದರ ಹಾಗೂ ಅಪರೂಪದ್ದಾಗಿರುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದೊಂದು ಸುಂದರವಾದ ದೃಶ್ಯ ನಮಗೆ ಈ ಪರಿಸರ ಹಲವು ಪಾಠಗಳನ್ನು ಮಾಡುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಸಾಮಾನ್ಯವಾಗಿ ಕೋತಿಗಳು ತುಂಟಾಟಕ್ಕೆ ಸಖತ್ ಫೇಮಸ್ ಕೆಲ ವರ್ಷಗಳ ಹಿಂದೆ ಮಲಗಿದ್ದ ಹುಲಿಯ ಬಾಲವನ್ನು ಎಳೆದಾಡುತ್ತಾ ಅದು ಸಿಟ್ಟಿಗೆದ್ದು ಕೆರಳಿ ಮೇಲೇಳುತ್ತಿದ್ದಂತೆ ಮರದ ಕೊಂಬೆಯೇರಿ ನೇತಾಡುವ ಕೋತಿಯ ವಿಡಿಯೋವೊಂದು ಸಾಕಷ್ಟು ವೈರಲ್ ಆಗಿತ್ತು. ಇದಲ್ಲದೇ ಕೆಲ ದಿನಗಳ ಹಿಂದೆ ಮದ್ರಾಸ್ ಐಐಟಿಯ (Madrass IIT) ಆವರಣದಲ್ಲಿ ಕೋತಿಯೊಂದು ಜಿಂಕೆಯ ಬೆನ್ನೇರಿ ಸವಾರಿ ಮಾಡುವ ವಿಡಿಯೋವೊಂದು ಸಾಕಷ್ಟು ವೈರಲ್ ಆಗಿತ್ತು.
ವಿಡಿಯೋದಲ್ಲಿ ಕಾಣಿಸುವಂತೆ ಮದ್ರಾಸ್ ಕ್ಯಾಂಪಸ್‌ನ ಬಿಳಿ ಚುಕ್ಕೆಯ ಜಿಂಕೆಯೊಂದು (deer) ಆಹಾರ ಹುಡುಕುತ್ತಾ ಸಾಗುತ್ತಿದ್ದು, ಅದರ ಬೆನ್ನ ಮೇಲೆ ಕೋತಿಯೊಂದು ಆರಾಮವಾಗಿ ಕುಳಿತುಕೊಂಡು ಸವಾರಿ ಮಾಡುತ್ತಿದೆ. ಹೀಗೆ ಕ್ಯಾಂಪಸ್‌ನಲ್ಲಿ ಅಲೆದಾಡುತ್ತಿರುವ ಜಿಂಕೆ ಮಧ್ಯೆ ಮಧ್ಯೆ ತಲೆ ಬಗ್ಗಿಸಿ ಹುಲ್ಲು ತಿನ್ನುತ್ತಿದೆ. ಈ ವೇಳೆ ಕೋತಿ ಜಿಂಕೆಯನ್ನು ಗಟ್ಟಿಯಾಗಿ ಬೆನ್ನಿನಲ್ಲಿ ಹಿಡಿದುಕೊಂಡು ಸಾಗುತ್ತಿದೆ. ಈ ವಿಡಿಯೋಗೆ ಅನೇಕರು ಕಾಮೆಂಟ್ ಮಾಡಿದ್ದು, ಪ್ರಾಣಿಗಳ ಉಬರ್ ವೆಹಿಕಲ್ ಅಂತ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಐಐಟಿಯ ಕೋತಿ ಅಂದ್ರೆ ಸುಮ್ನೆನಾ ಪಕ್ಕಾ ಅದೂ ಕೂಡ ಅಲ್ಲಿಯ ವಿದ್ಯಾರ್ಥಿಗಳಂತೆ ಸ್ಮಾರ್ಟ್ ಇರುತ್ತೆ ಎಂದು ಕಾಮೆಂಟ್ ಮಾಡಿದ್ದಾರೆ.
ಮದ್ರಾಸ್ ಐಐಟಿಯ ಕ್ಯಾಂಪಸ್ (IIT Madras campus), ಚೆನ್ನೈನಲ್ಲಿರುವ (Chennai) ಗಿಂಡಿ ರಾಷ್ಟ್ರೀಯ ಉದ್ಯಾನವನದ (Guindy National Park) ವ್ಯಾಪ್ತಿಯಲ್ಲಿದ್ದು, ಕ್ಯಾಂಪಸ್‌ನ ಹೆಚ್ಚಿನ ಭಾಗವೂ ಸಂರಕ್ಷಿತ ಅರಣ್ಯವಾಗಿದೆ (protected forest). ಈ ಕಾರಣದಿಂದಾಗಿ ಕ್ಯಾಂಪಸ್ ಸುತ್ತಮುತ್ತ ಜಿಂಕೆ, ಅಳಿಲು ಕೋತಿಗಳು ಮುಂತಾದ ಕಾಡು ಪ್ರಾಣಿಗಳು ಅಲ್ಲಿ ಸಾಮಾನ್ಯ ಎನಿಸಿವೆ.
ನಾಯಿಗಳಿಂದ ರಕ್ಷಿಸಿಕೊಳ್ಳಲು ಎಟಿಎಂಗೆ ನುಗ್ಗಿದ್ದ ಜಿಂಕೆ
ಯಾರದೋ ಶ್ರಮ ಯಾರದೋ ಪಾಲು... ಎರಡು ಚಿರತೆಗಳ ಅಪರೂಪದ ದೃಶ್ಯ ವೈರಲ್
ತಬ್ಬಿ ಹಿಡಿದು ಜಿಂಕೆಗೆ ಮುತ್ತಿಕ್ಕಿದ ಪೋರ: ವಿಡಿಯೋ ವೈರಲ್
ಜಿಂಕೆ ಮರಿಯ ಕೊಂಬಿನಲ್ಲಿ ಸಿಲುಕಿದ್ದ ಗಿಡ ಕಿತ್ತೆಸೆದ ಜಿರಾಫೆ : ವಿಡಿಯೋ ವೈರಲ್