Asianet Suvarna News Asianet Suvarna News

ಜಿಂಕೆ ಮರಿಯ ಕೊಂಬಿನಲ್ಲಿ ಸಿಲುಕಿದ್ದ ಗಿಡ ಕಿತ್ತೆಸೆದ ಜಿರಾಫೆ : ವಿಡಿಯೋ ವೈರಲ್

ಜಿರಾಫೆಯೊಂದು ಜಿಂಕೆ ಮರಿಯ ತಲೆಯಲ್ಲಿದ್ದ ಗಿಡದ ಕೊಂಬೆಯನ್ನು ತನ್ನ ಬಾಯಿಯಿಂದ ತೆಗೆದು ಅದು ಸ್ವತಂತ್ರವಾಗಿ ಓಡಾಡಲು ಸಹಾಯ ಮಾಡುತ್ತದೆ. ಇದರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Giraffe Helps Baby Deer video goes viral akb
Author
Bangalore, First Published Jun 26, 2022, 11:44 AM IST | Last Updated Jun 26, 2022, 12:31 PM IST

ಪ್ರಾಣಿಗಳು ನಿಸ್ವಾರ್ಥವಾಗಿ ಪ್ರೀತಿ ತೋರುವ, ಪರಸ್ಪರ ಮುದ್ದಾಡುವ ಪ್ರಾಣಿ ಪಕ್ಷಿಗಳ ಒಡನಾಟದ ಹಲವು ವಿಡಿಯೋಗಳನ್ನು ನಾವು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ.. ಹಾಗೆಯೇ ಇಲ್ಲೊಂದು ಜಿಂಕೆಯ ಕೊಂಬಿನಲ್ಲಿ ಗಿಡವೊಂದರ ಕೊಂಬೆ ಸಿಲುಕಿದ್ದು, ಜಿಂಕೆ ಮರಿ ಕೊಂಬಿನಲ್ಲಿದ್ದ ಗಿಡದ ಕೊಂಬೆಯನ್ನು ತೆಗೆಯಲು ಒದ್ದಾಡುತ್ತಿತ್ತು. ಇದನ್ನು ಗಮನಿಸಿದ ಜಿರಾಫೆಯೊಂದು ಜಿಂಕೆ ಮರಿಯ ತಲೆಯಲ್ಲಿದ್ದ ಗಿಡದ ಕೊಂಬೆಯನ್ನು ತನ್ನ ಬಾಯಿಯಿಂದ ತೆಗೆದು ಅದು ಸ್ವತಂತ್ರವಾಗಿ ಓಡಾಡಲು ಸಹಾಯ ಮಾಡುತ್ತದೆ. ಟ್ಟಿಟ್ಟರ್‌ನಲ್ಲಿ ಈ ವಿಡಿಯೋವನ್ನು ಯೋಧ ಫಾರೆವರ್‌ ಎಂಬ ಖಾತೆಯಿಂದ ಪೋಸ್ಟ್ ಮಾಡಲಾಗಿದೆ. ಮಿಲಿಯನ್‌ಗೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸುತ್ತಿದ್ದಾರೆ. 55 ಸಾವಿರಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 

ತನಗೆ ಹಸಿವಾಗದೇ ಹೋದರೆ ಯಾವ ಪ್ರಾಣಿಯೂ ಮತ್ತೊಂದರ ಮೇಲೆ ದಾಳಿ ನಡೆಸದು. ಹೊಟ್ಟೆ ತುಂಬಿದಲ್ಲಿ ಅದು ತನ್ನ ಆಹಾರ ಕಣ್ಣೆದುರೇ ಓಡಾಡಿದರು ಕ್ಯಾರೇ ಎನ್ನದು. ಇದಕ್ಕೊಂದು ಉತ್ತಮ ಉದಾಹರಣೆ ನಾಗರಹೊಳೆ ಅಭಯರಾಣ್ಯದ ಈ ವಿಡಿಯೋ.  ವಿಡಿಯೋದಲ್ಲಿ ತೋರಿಸುವಂತೆ ನೂರಾರು ಜಿಂಕೆಗಳು ಕಾಡಿನಲ್ಲಿ ಅಲೆದಾಡುತ್ತಿರುತ್ತವೆ. ಅವುಗಳ ಎದುರೇ ಬರುವ ಹುಲಿ ತನಗೂ ಅವುಗಳಿಗೂ ಯಾವುದೇ ಸಂಬಂಧವಿಲ್ಲದಂತೆ ರಾಜ ಗಾಂಭೀರ್ಯ ನಡೆಯ ಮೂಲಕ ಮುಂದೆ ಸಾಗುತ್ತದೆ. ಆದರೆ ಜಿಂಕೆಗಳು ಮಾತ್ರ ಆತಂಕದಿಂದ ಅತ್ತಿತ್ತ ಚದುರಿ ಓಡಲು ಪ್ರಯತ್ನಿಸುತ್ತವೆ. 

 

ದಾಳಿ ಮಾಡಲು ಬಂದ ಚಿರತೆ ಮುಂದೆ ಧೈರ್ಯವಾಗಿ ನಿಂತ ಮೂರುಕಾಲಿನ ಜಿಂಕೆ

2016 ರ ಸೆಪ್ಟೆಂಬರ್‌  17 ರಂದು ಸೆರೆಯಾದ ನಾಗರಹೊಳೆ ಅಭಯಾರಣ್ಯದಲ್ಲಿ ಸೆರೆಯಾದ ವಿಡಿಯೋ ಇದಾಗಿದ್ದು,  ವೈರಲ್‌ ಹಗ್‌ ಎಂಬ ಯೂಟ್ಯೂಬ್‌ ಚಾನೆಲ್‌ 2019ರ ಮಾರ್ಚ್‌  29 ರಂದು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು, ಈಗ ಸಾಮಾಜಿಕ ಜಾಲತಾಣದೆಲ್ಲೆಡೆ ವೈರಲ್‌ ಆಗುತ್ತಿದೆ. 

ಹಿಂದೆ ರಾಜೀವ್ ಗಾಂಧಿ (Rajiv Gandhi) ರಾಷ್ಟ್ರೀಯ ಉದ್ಯಾನವನ ಎಂದು ಕರೆಯಲ್ಪಡುತ್ತಿದ್ದ ಕರ್ನಾಟಕದ ನಾಗರಹೊಳೆ (Nagarahole) ಹುಲಿ ಸಂರಕ್ಷಿತ ಪ್ರದೇಶದಲ್ಲಿ ಈ ಘಟನೆ ನಡೆದಿದೆ.  ಈ ಸ್ಥಳವು ಪ್ರಾಜೆಕ್ಟ್ ಟೈಗರ್ ಮತ್ತು ಪ್ರಾಜೆಕ್ಟ್ ಎಲಿಫೆಂಟ್ ಅಡಿಯಲ್ಲಿ ವನ್ಯಜೀವಿ ಸಂರಕ್ಷಣೆಯ ಪ್ರಮುಖ ಕೇಂದ್ರವಾಗಿದೆ. ಹುಲಿ ಮತ್ತು ಜಿಂಕೆಗಳಲ್ಲದೆ, ಈ ಸ್ಥಳವು ಚಿರತೆ (leopard), ನೈಋತ್ಯ ಲಾಂಗೂರ್, ಏಷ್ಯಾಟಿಕ್ ಆನೆ (Asiatic Elephant), ಗೌರ್, ಸ್ಲೋತ್ ಕರಡಿ ಮತ್ತು ಇನ್ನೂ ಅನೇಕ ಪ್ರಾಣಿಗಳಿಗೆ ತನ್ನ ಒಡಲಲ್ಲಿ ಆಶ್ರಯ ನೀಡಿದೆ. 

ಕಣ್ಣ ಮುಂದೆ ಜಿಂಕೆಗಳ ಹಿಂಡೆ ಇದ್ದರೂ ಕ್ಯಾರೇ ಅನ್ನದ ಹುಲಿ... ವಿಡಿಯೋ ವೈರಲ್


ಕಾಡಿನಲ್ಲಿ ಜಿಂಕೆಗಳ ಹಿಂಡು ಚಲಿಸುತ್ತಿರುವುದು ವಿಡಿಯೋದಲ್ಲಿದೆ. ಕೆಲವೇ ಕ್ಷಣಗಳಲ್ಲಿ, ಒಂದು ಹುಲಿ ವಿರುದ್ಧ ದಿಕ್ಕಿನಿಂದ  ಹಿಂಡಿನ ಕಡೆಗೆ ಹೋಗುತ್ತದೆ. ಆದಾಗ್ಯೂ, ತನ್ನ ಸಾಮಾನ್ಯ ನಡವಳಿಕೆಯ ಬದಲಿಗೆ, ಈ ಹುಲಿ ಶಾಂತವಾಗಿ ಏನನ್ನೂ ಮಾಡದೆ ಗುಂಪನ್ನು ಹಾದು ಹೋಗುತ್ತದೆ. ಕೆಲವು ಕುತೂಹಲಕಾರಿ ಜಿಂಕೆಗಳು ಹುಲಿಯನ್ನು ವಿಚಲಿತವಾಗಿ ನೋಡುತ್ತಾ ನಿಂತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ರಾಜಸ್ತಾನ (Rajasthan)ದ ಅಲ್ವಾರ್ (Alwar) ನಲ್ಲಿರುವ  ಸರಿಸ್ಕಾ ಹುಲಿ ಸಂರಕ್ಷಿತಾರಣ್ಯದಲ್ಲಿ ಹುಲಿಗಳೆರಡು ಸರಸವಾಡುವ ದೃಶ್ಯವೊಂದು ವಿಡಿಯೋದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಕಳೆದ ವರ್ಷ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.ಹವ್ಯಾಸಿ ಫೋಟೋಗ್ರಾಪರ್‌ ಒಬ್ಬರು ಈ ಸುಂದರ  ಕ್ಷಣವನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಮಹೇಶ್‌ ಶರ್ಮಾ ಎಂಬ ಟ್ವಿಟ್ಟರ್‌ ಖಾತೆದಾರರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇಲ್ಲಿವರೆಗೆ 8 ಸಾವಿರಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 
 

Latest Videos
Follow Us:
Download App:
  • android
  • ios