ಯಾರದೋ ಶ್ರಮ ಯಾರದೋ ಪಾಲು... ಎರಡು ಚಿರತೆಗಳ ಅಪರೂಪದ ದೃಶ್ಯ ವೈರಲ್
ಕಪ್ಪು ಚಿರತೆಯೊಂದು ಕತ್ತಲಿನಲ್ಲಿ ಜಿಂಕೆಯನ್ನು ಬೇಟೆಯಾಡಿದ ಅಪರೂಪದ ದೃಶ್ಯದ ವಿಡಿಯೋವೊಂದು ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಪ್ಪು ಚಿರತೆಯೊಂದು ಕತ್ತಲಿನಲ್ಲಿ ಜಿಂಕೆಯನ್ನು ಬೇಟೆಯಾಡಿದ ಅಪರೂಪದ ದೃಶ್ಯದ ವಿಡಿಯೋವೊಂದು ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತ್ ನಂದಾ ಅವರು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಸಾಕಷ್ಟು ವೈರಲ್ ಆಗಿದೆ.
ವಿಡಿಯೋದಲ್ಲಿ ಕಾಣಿಸುವಂತೆ ಕಪ್ಪು ಬಣ್ಣದ ಚಿರತೆಯೊಂದು (Leopard) ಜಿಂಕೆಯೊಂದನ್ನು ಬೇಟೆಯಾಡಿದೆ. ಬೇಟೆಯಾಡಿ ಸುಸ್ತಾದ ಚಿರತೆ ಬಾಯಲ್ಲಿ ಜಿಂಕೆಯನ್ನು ಕಚ್ಚಿಕೊಂಡು ಎದುಸಿರು ಬಿಡುತ್ತಾ ಒಂದೆಡೆ ವಿಶ್ರಮಿಸುತ್ತಿದೆ. ನಂತರ ಬೇಟೆಯನ್ನು ಬಾಯಿಯಿಂದ ಕೆಳಗಿರಿಸಿ ಸುತ್ತಮುತ್ತ ನೋಡುತ್ತಿದೆ. ಅಷ್ಟರಲ್ಲೇ ಮತ್ತೊಂದು ಹಳದಿ ಬಣ್ಣದ ಚಿರತೆಯೊಂದು ಬಂದಿದ್ದು, ಅದನ್ನು ನೋಡಿ ಕಪ್ಪು ಚಿರತೆ ತನ್ನ ಬೇಟೆಯನ್ನು ಅಲ್ಲೇ ಬಿಟ್ಟು ಓಡಿದರೆ ಇತ್ತ ಹಳದಿ ಬಣ್ಣದ ಚಿರತೆ ಜಿಂಕೆಯನ್ನು ಎತ್ತಿಕೊಂಡು ಓಡುತ್ತಿದೆ.
ಎಳನೀರು ಬೇಕಿತ್ತೆ... ತೆಂಗಿನ ಮರವೇರಿದ ಚಿರತೆ viral video
ಇದೊಂದು ಪರಿಪೂರ್ಣವಾದ ಸೆರೆ, ಚಿರತೆ ಹಾಗೂ ವಿಡಿಯೋಗ್ರಾಫರ್ (videoGraphy) ಇಬ್ಬರೂ ಪರಿಪೂರ್ಣವಾಗಿ ಸೆರೆ ಹಿಡಿದಿದ್ದಾರೆ. ಆದರೆ ಹೀಗೆ ಪ್ರಾಣಿಗಳ ಅಪರೂಪದ ಚಟುವಟಿಕೆಯನ್ನು ಸೆರೆ ಹಿಡಿಯಲು ಅನುಮತಿ ಕೊಟ್ಟವರು ಯಾರು ಎಂದು ಅವರು ಪ್ರಶ್ನಿಸಿದ್ದಾರೆ. ಈ ವಿಡಿಯೋವನ್ನು 31 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, ಸಾವಿರಾರು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ವಿಡಿಯೋ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾರತಕ್ಕೆ ಬಂದಿಳಿದ ಆಫ್ರಿಕನ್ ಚೀತಾಗೆ ಯಾಕಿಷ್ಟು ಮಹತ್ವ: ವನ್ಯಜೀವಿ ತಜ್ಞರ ಮಾತು ಕೇಳಿ
ಕಾಡಿನ ಪ್ರಾಣಿಗಳು (Wild Animal) ಕಾಡಿನಲ್ಲೇ ಇರಲಿ ಅವುಗಳು ಕ್ಯಾಮರಾದಲ್ಲಿ(Camera) ಸೆರೆಯಾಗುವುದು ಬೇಡ. ರಾತ್ರಿಯ ವೇಳೆ ಅರಣ್ಯದಲ್ಲಿ ಫೋಟೋಗ್ರಾಫರ್‌ಗಳಿಗೆ (Photographer) ಅವಕಾಶ ನೀಡುವುದು ಬೇಡ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನಾವು ಪ್ರಕೃತಿಯಲ್ಲಿ ಮಧ್ಯಪ್ರವೇಶಿಸುತ್ತಿದ್ದೇವೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಸರಿಯಾಗಿ ಹೇಳಿದ್ದೀರಿ, ನಾವು ತುಂಬಾ ಸ್ವಾರ್ಥಿಗಳು ನಾವು ಎಲ್ಲಾ ಹಾಗೂ ಎಂಥಹಾ ದೃಶ್ಯವನ್ನು ಕೂಡ ಸೆರೆ ಹಿಡಿಯುತ್ತೇವೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಆದರೆ ಈ ದೃಶ್ಯವನ್ನು ಎಲ್ಲಿ ಸೆರೆ ಹಿಡಿಯಲಾಗಿದೆ ಎಂಬ ಬಗ್ಗೆ ವಿಡಿಯೋದಲ್ಲಿ ಎಲ್ಲೂ ಉಲ್ಲೇಖವಿಲ್ಲ.