Asianet Suvarna News Asianet Suvarna News

ಪ್ರೀತಿ ಬಯಸಿ ಬಂದ ಕೋತಿ... ವ್ಯಕ್ತಿಯ ಗಟ್ಟಿಯಾಗಿ ತಬ್ಬಿಕೊಂಡ ವಾನರ.. ಭಾವುಕ ವಿಡಿಯೋ

  • ವ್ಯಕ್ತಿಯ ಮೇಲೇರಿ ಬಂದು ತಬ್ಬಿಕೊಂಡ ಕೋತಿ
  • ಕೋತಿಯ ಅಪ್ಪುಗೆಗೆ ಭಾವುಕನಾದ ವ್ಯಕ್ತಿ
  • ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
     
Monkey Climbs Into Mans Arms Gives Him a Warm Hug akb
Author
Bangalore, First Published Jan 28, 2022, 1:04 PM IST

ಎಲ್ಲಿಂದಲೋ ಬಂದ ಕೋತಿಯೊಂದು ವ್ಯಕ್ತಿಯೊಬ್ಬನ ಮೇಲೇರಿ ಆತನನ್ನು ಗಟ್ಟಿಯಾಗಿ ತಬ್ಬಿಕೊಂಡು ಅವನ ಮೇಲೆಯೇ ಮಲಗಿಕೊಂಡ ಮುದ್ದಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಾಣಿಗಳು ಕೂಡ ಮನುಷ್ಯರಂತೆ ಭಾವನೆಗಳನ್ನು ಹೊಂದಿವೆ. ಅವುಗಳಿಗೂ ಪ್ರೀತಿಯ ಅಗತ್ಯವಿದೆ ಎಂಬುದಕ್ಕೆ ಹಲವು ನಿದರ್ಶನಗಳನ್ನು ನೀವು ಈಗಾಗಲೇ ನೋಡಿರಬಹುದು. ಇದು ಕೂಡ ಅಂತಹದ್ದೇ ಒಂದು ಪ್ರೀತಿ ಬಯಸಿ ಬಂದ ಕೋತಿಯ ಹಾಗೂ ದೂರ ತಳ್ಳದೇ ಪ್ರೀತಿ ನೀಡಿದ ವ್ಯಕ್ತಿಯ ಚಿತ್ರಣ. 

ವಿಡಿಯೋದಲ್ಲಿ ಮನೆಯ ಬಾಲ್ಕನಿ (balcony) ಯಲ್ಲಿ ವ್ಯಕ್ತಿಯೊಬ್ಬ ಕುರ್ಚಿಯಲ್ಲಿ ಕುಳಿತಿದ್ದಾನೆ. ಅಲ್ಲಿಗೆ ಬರುವ ಸಣ್ಣ ಕೋತಿಯೊಂದು ಪಕಪಕನೇ ಆತನ ಮೇಲೇರಿ ಹಾಗೇಯೇ ಆತನನ್ನು ಗಟ್ಟಿಯಾಗಿ ತಬ್ಬಿಕೊಳ್ಳುತ್ತದೆ ಜೊತೆಗೆ ಆತನ ಎದೆಗೊರಗಿ ಮಲಗಿ ಬಿಡುತ್ತದೆ. ವ್ಯಕ್ತಿಯೂ ಕೂಡ ಈ ಕೋತಿಗೆ ಪೂರಕವಾಗಿ ಸ್ಪಂದಿಸುತ್ತಿದ್ದು, ಆತನೂ ಕೋತಿಯನ್ನು ಪ್ರೀತಿಯಿಂದ ತಬ್ಬಿಕೊಂಡು ಬೆನ್ನು ಸವರುತ್ತಾನೆ. ಈ ಘಟನೆ ಕುಟುಂಬವೊಂದು ಮೆಕ್ಸಿಕೋ (Mexico) ದಲ್ಲಿ ತನ್ನ ರಜಾದಿನಗಳನ್ನು ಕಳೆಯುತ್ತಿದ್ದಾಗ ನಡೆದಿದೆ. 

ಈ ವಿಡಿಯೋ ಗುಡ್ ನ್ಯೂಸ್ ಮೂವ್‌ಮೆಂಟ್ ಎಂಬ ಇನ್‌ಸ್ಟಾಗ್ರಾಮ್‌ (Instagram) ಖಾತೆಯಿಂದ  ಪೋಸ್ಟ್ ಆಗಿದೆ. 'ಪ್ರೀತಿ ಎಂಬುದು ಸಾರ್ವತ್ರಿಕ' ಈ ಕೋತಿ ಸ್ವಲ್ಪ ಪ್ರೀತಿಗಾಗಿ ಬಾಲ್ಕನಿಯಲ್ಲಿ ಮೇಲೇರಿತು. ನಂತರ ಕೋತಿ ತನ್ನ ನೈಸರ್ಗಿಕ ಆವಾಸಸ್ಥಾನಕ್ಕೆ ಹಿಂತಿರುಗಿತು ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್‌ ಮಾಡಲಾಗಿದೆ.  

ಕಟ್ಟಡದ ಮೇಲೆ ಕುಳಿತು ಗಾಳಿಪಟ ಹಾರಿಸಿದ ಕಿಲಾಡಿ ಕೋತಿ... ವಿಡಿಯೋ ವೈರಲ್

ಈ ವಿಡಿಯೋ ವೈರಲ್ ಆಗಿದ್ದು, ಜನರನ್ನು ಭಾವುಕರನ್ನಾಗಿಸಿದೆ. ಒಬ್ಬ ಬಳಕೆದಾರ ಪ್ರೀತಿ ಎಂಬುದು ಔಷಧಿ, ನನ್ನನ್ನು ಹುಚ್ಚ ಎಂದೂ ನೀವು ಕರೆಯಬಹುದು ಆದರೂ ನಾನು ಆ ಕೋತಿಗಾಗಿ ಅಗತ್ಯವಿದ್ದಷ್ಟು ಹೊತ್ತು ಆತನ ಬಳಿ ನಾ ಇರಲು ಬಯಸುವೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಕಳೆದ ಡಿಸೆಂಬರ್‌ನಲ್ಲಿ ಮಂಗವೊಂದು ಸಲೂನ್‌ನಲ್ಲಿ ಟ್ರಿಮ್‌ ಮಾಡಿಸಿಕೊಳ್ಳಲು ಚೇರ್‌ನಲ್ಲಿ ಕುಳಿತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಮಾನವರನ್ನು ಅನುಕರಿಸುತ್ತಿರುವ ಮಂಗನ ವಿಡಿಯೋಗಳು ಈ ಹಿಂದೆಯೂ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಕೆಲವು ನಿಮ್ಮನ್ನು ಕುತೂಹಲದಿಂದ ನೋಡುವಂತೆ ಮಾಡಿದರೆ ಮತ್ತೆ ಕೆಲವು ನಿಮ್ಮನ್ನು ನಗೆಗಡಲಲ್ಲಿ ತೇಲುವಂತೆ ಮಾಡುತ್ತವೆ. ಈ ವಿಡಿಯೋವನ್ನು ಐಪಿಎಸ್‌( ಭಾರತೀಯ ಪೊಲೀಸ್‌ ಸೇವೆ) ಅಧಿಕಾರಿ ರುಪಿನ್ ಶರ್ಮಾ ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿದ್ದರು. 

Viral Video: ಉಸಿರು ನೀಡಿ ಗಂಭೀರ ಸ್ಥಿತಿಯಲ್ಲಿದ್ದ ಕೋತಿಯ ಜೀವ ಉಳಿಸಿದ ಆಟೋ ಚಾಲಕ

45 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಮಂಗವೂ ಸಲೂನ್‌ನ ಕನ್ನಡಿ ಮುಂದೆ ಚೇರ್‌ನಲ್ಲಿ ಕುಳಿತಿದೆ. ತನ್ನ ಕತ್ತಿನ ಸುತ್ತ ಮಂಗನಿಗೆ ಬಟ್ಟೆಯನ್ನು ಸುತ್ತಿದ್ದು, ಹೇರ್‌ ಡ್ರೆಸರ್‌ ಈ ಮಂಗದ ಮುಖದಲ್ಲಿರುವ ಕೂದಲನ್ನು ಬಾಚಿ ಟ್ರಿಮ್‌ ಮಾಡುತ್ತಿದ್ದಾರೆ. ಇಲೆಕ್ಟ್ರಿಕ್‌ ಟ್ರಿಮರ್‌ನಲ್ಲಿ ಟ್ರಿಮ್‌ ಮಾಡುತ್ತಿದ್ದು, ಮಂಗವೂ ತುಂಬಾ ತಾಳ್ಮೆಯಿಂದ ಕುಳಿತು ಶೇವ್‌ ಮಾಡಿಸಿಕೊಳ್ಳುತ್ತಿದೆ. 

ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿರುವ ಐಪಿಎಸ್ ಅಧಿಕಾರಿ ರುಪಿನ್‌ ಶರ್ಮಾ 'ಅಬ್ ಲಗ್‌ ರಹೇ ಸ್ಮಾರ್ಟ್‌' ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ. ಅಂದರೆ ಈಗ ಸುಂದರವಾಗಿ ಕಾಣಿಸುತ್ತಿದ್ದೀಯಾ ಎಂದು ಅವರು ಹೇಳಿದ್ದಾರೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸುತ್ತು ಹೊಡೆಯುತ್ತಿದ್ದು, ಇದನ್ನು ಟ್ಟಿಟ್ಟರ್‌ನಲ್ಲಿಸಾವಿರಾರು ಜನ ವೀಕ್ಷಿಸಿದ್ದಾರೆ. 

Follow Us:
Download App:
  • android
  • ios