Asianet Suvarna News Asianet Suvarna News

Viral Video: ಉಸಿರು ನೀಡಿ ಗಂಭೀರ ಸ್ಥಿತಿಯಲ್ಲಿದ್ದ ಕೋತಿಯ ಜೀವ ಉಳಿಸಿದ ಆಟೋ ಚಾಲಕ

 

  • ಕೋತಿಯ ಜೀವ ಉಳಿಸಿದ ಆಟೋ ಚಾಲಕ
  • ಆಟೋ ಚಾಲಕ ಪ್ರಭು ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ
  • ನಾಯಿ ದಾಳಿಯಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದ ಕೋತಿ
Man Revives Monkey by Performing CPR video got viral in Social media
Author
Bangalore, First Published Dec 14, 2021, 1:21 PM IST

ಪೆರಂಬಲೂರ್‌:  ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಮಂಗವೊಂದಕ್ಕೆ ಆಟೋ ಚಾಲಕರೊಬ್ಬರು ಸಿಪಿಆರ್‌(Cardiopulmonary resuscitation) ಮಾಡಿ ಜೀವ ಉಳಿಸಿದ ಘಟನೆ ತಮಿಳುನಾಡಿ(Tamil Nadu)ನ ಪೆರಂಬಲೂರಿ(Perambalur)ನಲ್ಲಿ ನಡೆದಿದೆ.  ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ನೆಟ್ಟಿಜನ್‌ಗಳು ಆಟೋ ಚಾಲಕನ ಮಾನವೀಯ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 38 ವರ್ಷದ ಆಟೋ ಚಾಲಕ ಪ್ರಭು ಅವರು ಅಸ್ವಸ್ಥಗೊಂಡು ಬಿದ್ದಿದ್ದ ಮಂಗನ ಜೀವ ಉಳಿಸುವ ಸಲುವಾಗಿ ಅದರ ಹೃದಯಕ್ಕೆ ಚೆಸ್ಟ್‌ ಕಂಪ್ರೇಶನ್‌ ಮಾಡಿದ್ದಾರೆ. 

ಕಠಿಣ ಮತ್ತು ಪ್ರಾಯಶಃ ಮಾರಣಾಂತಿಕ ಪರಿಸ್ಥಿತಿಯು ಉದ್ಭವಿಸಿದಾಗ, ತುಂಬಾ ಜನಕ್ಕೆ ಏನು ಮಾಡಬಹುದು ಎಂಬ ಯೋಚನೆಯೂ ಬಾರದೆ ಅಲ್ಲೇ ನಿಂತು ಬಿಡುತ್ತಾರೆ. ಆದರೆ ಇವರು ತಮ್ಮ ಸಮಯ ಪ್ರಜ್ಞೆ ಮೆರೆದು ಕೋತಿಯ ಜೀವ ಉಳಿಸಿದ್ದಾರೆ. ತಮಿಳುನಾಡಿನ ಪೆರಂಬಲೂರಿನಲ್ಲಿ ವ್ಯಕ್ತಿಯೊಬ್ಬರು ಕೋತಿಗೆ ಮರುಜೀವ ನೀಡಿದ ವಿಡಿಯೋ ಈಗ ವೈರಲ್ ಆಗಿದೆ. ಆ ಪ್ರದೇಶದಲ್ಲಿ ಬೀದಿನಾಯಿಗಳ ದಾಳಿಯಿಂದ ಗಾಯಗೊಂಡಿದ್ದ ಕೋತಿಗೆ ಸಿಪಿಆರ್ ಮಾಡಿ ಮರುಜೀವ ನೀಡಲು ಆಟೋ ಚಾಲಕ ಪ್ರಭು(prabhu) ನಿರ್ಧರಿಸಿದ್ದಾರೆ. ಇವರು ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಕೋತಿ ಪ್ರಜ್ಞೆ ತಪ್ಪಿ ಬಿದ್ದಿತ್ತು. ಈ ಕೋತಿಗೆ ಸಹಾಯ ಮಾಡಲು ತಕ್ಷಣ ತಮ್ಮ ಬೈಕನ್ನು ಮಧ್ಯದಲ್ಲಿ ನಿಲ್ಲಿಸಿದ ಅವರು ಕೋತಿಗೆ ಸಿಪಿಆರ್‌ ಮಾಡಿದ್ದಾರೆ. 

viral video:ಟ್ರಿಮ್‌ ಆಗಲು ಸಲೂನ್‌ಗೆ ತೆರಳುವ ಮಂಗ

ಕೋತಿಯೊಂದಿಗೆ ಮಾತನಾಡುತ್ತಲೆ ಅವರು ಅದರ ಎದೆಯನ್ನು ಸವರಿ ಸಮಾಧಾನಪಡಿಸುವ ಚಿತ್ರಣ ವಿಡಿಯೋದಲ್ಲಿದೆ. ನಂತರದಲ್ಲಿ ಕೋತಿ ಸ್ವಲ್ಪಮಟ್ಟಿಗೆ ಪ್ರತಿಕ್ರಿಯಿಸಲು ಪ್ರಾರಂಭಿಸಿದೆ. ನಂತರ ಪ್ರಭು ಅದನ್ನು ಪಶುವೈದ್ಯರ ಬಳಿಗೆ ಸಾಗಿಸಿದ್ದಾರೆ. ಪ್ರಭು ಅವರ ಈ ಕಾರ್ಯವನ್ನು ಸಾಮಾಜಿಕ ಜಾಲತಾಣ(social media)ಗಳಲ್ಲಿ ಭಿನ್ನ ವಿಭಿನ್ನವಾಗಿ ಕೊಂಡಾಡಲಾಗುತ್ತಿದೆ. 

ಕೋವ್ಯಾಕ್ಸಿನ್‌ ಪರೀಕ್ಷೆಗೆ ಕೋತಿ ಹುಡುಕಿದ್ದು ಹೇಗೆ? ಕುತೂಹಲದ ಅಂಶ ಬಯಲು!

ಇತ್ತೀಚೆಗೆ ಕೋತಿಯೇ ಕೊತಿಯೊಂದರ ಜೀವ ಉಳಿಸಿದ ಘಟನೆಯ ವಿಡಿಯೋ ಕೂಡ ವೈರಲ್‌(viral video)ಆಗಿತ್ತು. ಒಮ್ಮೊಮ್ಮೆ ಪ್ರಾಣಿಗಳು ತೋರುವ ಬುದ್ಧಿವಂತಿಕೆ, ಸಮಯಪ್ರಜ್ಞೆ, ಹೃದಯವಂತಿಕೆ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಜತೆಗೆ, ಕಣ್ಣಾಲಿಗಳು ತುಂಬಿ ಬರುವಂತೆಯೂ ಮಾಡುತ್ತದೆ. ತಮ್ಮ ಜೀವವನ್ನೇ ಪಣಕ್ಕಿಟ್ಟು ಬೇರೆಯವರನ್ನು ಉಳಿಸಿದ ಸಾಕಷ್ಟು ಧೀರರಿದ್ದಾರೆ. ಮತ್ತೊಬ್ಬರ ಜೀವ ಉಳಿಸಿ ತಾವು ಪ್ರಾಣ ಬಿಟ್ಟ ತ್ಯಾಗಿಗಳೂ ಇದ್ದಾರೆ. ಹಾಗಂತ, ಬರೀ ಮನುಷ್ಯರಲ್ಲಿ ಮಾತ್ರವಲ್ಲ. ಪ್ರಾಣಿಗಳಲ್ಲೂ ನಾವು ಇದೇ ತೆರನಾದ ಹೃದಯವಂತಿಕೆಯನ್ನು ನೋಡಬಹುದು. 

 

ಇದು ಕೋತಿಯೊಂದು ತನ್ನ ಜತೆಗಿದ್ದ ಮಂಗನನ್ನು ರಕ್ಷಣೆ ಮಾಡುವ ದೃಶ್ಯ. ಈ ದೃಶ್ಯ ಒಂದು ಕ್ಷಣ ನಮ್ಮ ಕಣ್ಣಾಲಿಗಳು ತುಂಬಿ ಬರುವಂತೆ ಮಾಡುತ್ತವೆ. @RebeccaH2030 ಎಂಬ ಟ್ವಿಟ್ಟರ್(twitter) ಖಾತೆಯಲ್ಲಿ ಅಪ್ಲೋಡ್ ಆಗಿರುವ ದೃಶ್ಯವಿದು. ರೈಲ್ವೇ ಟ್ರ್ಯಾಕ್‌ ಬಳಿ ವಿದ್ಯುತ್ ಶಾಕ್ ತಗುಲಿ ಕೋತಿಯೊಂದು ಜೀವನ್ಮರಣ ಸ್ಥಿತಿಯಲ್ಲಿತ್ತು. ಇದನ್ನು ಅಲ್ಲೇ ಇದ್ದ ಜತೆಗಾರ ಕೋತಿ ನೋಡಿತ್ತು. ತಕ್ಷಣ ತನ್ನ ಬಳಗದ ಕೋತಿಯ ರಕ್ಷಣೆಗೆ ಧಾವಿಸಿದ್ದ ಈ ಕೋತಿ ತನ್ನದೇ ರೀತಿಯಲ್ಲಿ ಜೀವ ಉಳಿಸುವ ಸಾಕಷ್ಟು ಪ್ರಯತ್ನ ಮಾಡಿತ್ತು. ಹೀಗೆ ನಿರಂತರ ಪ್ರಯತ್ನಪಟ್ಟ ಕೋತಿ ಕೊನೆಗೂ ತನ್ನ ಪ್ರಯತ್ನದಲ್ಲಿ ಯಶಸ್ಸು ಗಳಿಸಿತ್ತು. ಜೀವನ್ಮರಣ ಸ್ಥಿತಿಯಲ್ಲಿದ್ದ ಕೋತಿ ಕೊನೆಗೆ ಎದ್ದು ಕುಳಿತುಕೊಳ್ಳುವಷ್ಟು ಚೇತರಿಕೆ ಕಂಡಿತ್ತು.

 

ಇದು ಮಾತ್ರವಲ್ಲ ನಾಯಿಯೊಂದು ಸಮುದ್ರದಲ್ಲಿ ಮುಳುಗುತ್ತಿದ್ದ ಪುಟ್ಟ ಬಾಲಕಿಯೊಬ್ಬಳನ್ನು ರಕ್ಷಿಸಿದ ಘಟನೆ ಈ ಹಿಂದೆ ನಡೆದಿತ್ತು. ಸಮುದ್ರ ತೀರದಲ್ಲಿ ಮಗುವೊಂದು ಆಡುತ್ತಿರುವಾಗಲೇ ದೊಡ್ಡ ಅಲೆಯೊಂದು ಬಂದು ಮಗುವನ್ನು ಆವರಿಸುತ್ತದೆ. ಇದನ್ನು ನೋಡಿದ ಅಲ್ಲೇ ಇದ್ದ ನಾಯಿಯೊಂದು ಮಗು ಸುರಕ್ಷಿತವಾಗಿಲ್ಲ ಎಂದು ಭಾವಿಸಿ, ಕೂಡಲೇ ಆಕೆಯನ್ನು ದಡಕ್ಕೆಳೆದೊಯ್ಯುವ ಯತ್ನ ನಡೆಸುತ್ತದೆ. ಮಗುವಿಗೆ ನೋವಾಗದಂತೆ, ಬಟ್ಟೆಯನ್ನು ಬಾಯಿಯಿಂದ ಕಚ್ಚಿ ಹಿಡಿಯುವ ನಾಯಿ, ಆಕೆಯನ್ನು ದಡಕ್ಕೆಳೆದುಕೊಂಡು ಹೋದ ಈ ದೃಶ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದರು. 

Follow Us:
Download App:
  • android
  • ios