ಭಾರತ ಮತ್ತು ಚೀನಾ ಎರಡೂ ದೇಶಗಳಲ್ಲಿ ಸೂಪರ್‌ಹಿಟ್‌ ಆಗಿದ್ದ, ಭಾರತದ ಮಹಿಳಾ ಕುಸ್ತಿಪಟು ಬಬಿತಾ ಪೋಗಟ್‌ ಮತ್ತು ಅವರ ತಂದೆಯ ನಿಜಜೀವನ ಆಧರಿತ ‘ದಂಗಲ್‌’ ಚಿತ್ರವನ್ನು ಸ್ವತಃ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ವೀಕ್ಷಿಸಿದ್ದಾರಂತೆ.  

ಹರ್ಯಾಣ (ಅ. 16): ಭಾರತ ಮತ್ತು ಚೀನಾ ಎರಡೂ ದೇಶಗಳಲ್ಲಿ ಸೂಪರ್‌ಹಿಟ್‌ ಆಗಿದ್ದ, ಭಾರತದ ಮಹಿಳಾ ಕುಸ್ತಿಪಟು ಬಬಿತಾ ಪೋಗಟ್‌ ಮತ್ತು ಅವರ ತಂದೆಯ ನಿಜಜೀವನ ಆಧರಿತ ‘ದಂಗಲ್‌’ ಚಿತ್ರವನ್ನು ಸ್ವತಃ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ವೀಕ್ಷಿಸಿದ್ದಾರಂತೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಮಿರ್ ಖಾನ್ ಜೊತೆ ಸಂಬಂಧ ಹೊಂದಿಲ್ಲ: ದಂಗಲ್ ನಟಿ

ಈ ವಿಷಯವನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಇಲ್ಲಿ ಬಹಿರಂಗಪಡಿಸಿದರು. ಕುಸ್ತಿಪಟು ಬಬಿತಾ ಈ ಬಾರಿ ಬಿಜೆಪಿಯಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದು, ಅವರ ಪರ ಮಾಡಿದ ಚುನಾವಣಾ ಪ್ರಚಾರದ ವೇಳೆ ಮೋದಿ ಈ ವಿಷಯ ಬಹಿರಂಗಪಡಿಸಿದ್ದಾರೆ.

ದಂಗಲ್ ಹುಡುಗಿ ಡಯೆಟ್ ಕಥೆ

ಕೆಲ ದಿನಗಳ ಹಿಂದೆ ಭಾರತಕ್ಕೆ ಬಂದಿದ್ದ ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್‌, ಬಬಿತಾ ಹಾಗೂ ಅವರ ತಂದೆಯ ಜೀವನಾಧಾರಿತ ‘ದಂಗಲ್‌’ ಸಿನಿಮಾ ನೋಡಿದ್ದಾಗಿ ಹೇಳಿದ್ದರು. ಅವರ ಮಾತು ನನಗೆ ಹೆಮ್ಮೆ ತರಿಸಿತು ಎಂದು ಹೇಳಿದ್ದಾರೆ. ಅಲ್ಲದೇ ನಮ್ಮ ಯುವತಿಯರು ಯುವಕರಿಗಿಂತ ಯಾವುದೇ ರೀತಿಯಲ್ಲೂ ಕಡಿಮೆ ಇಲ್ಲ ಎಂದು ಪ್ರಧಾನಿ ಶ್ಲಾಘಿಸಿದ್ದಾರೆ.