ಈಟಿಂಗ್ ಡಿಸಾರ್ಡರ್‌ಗೆ ತುತ್ತಾಗಿದ್ದೆ!
ಫಾತಿಮಾ ದಂಗಲ್ ಸಿನಿಮಾ ವೇಳೆಗೆ ಕರೆಕ್ಟ್ ಡಯೆಟ್ ಮಾಡಿ ಫಿಟ್‌ನೆಸ್ ಮೈಂಟೇನ್ ಮಾಡಿದ್ದರು. ಯಾವಾಗ ಆ ಸಿನಿಮಾ ಮುಗಿಯಿತೋ ಡಯೆಟ್‌ಗೂ ಗುಡ್‌ಬೈ ಹೇಳಾಯ್ತು. ಮತ್ತೆ ದೇಹ ಊದಿಕೊಂಡಿತು. ಸ್ವಲ್ಪ ಸಮಯಕ್ಕೆ ‘ಥಗ್ಸ್ ಆಫ್ ಹಿಂದೂಸ್ತಾನ್’ ಸಿನಿಮಾಕ್ಕೆ ಆಯ್ಕೆಯಾದರು. ಊದಿಕೊಂಡಿದ್ದು ಇಳೀಲೇ ಬೇಕಿತ್ತು. ತಕ್ಕಡಿ ಹಿಡಿದು ಅಳತೆ ಮಾಡಿ ಕ್ಯಾಲೊರಿಗೆ ತಕ್ಕಂತೆ ತಿನ್ನೋ ಪ್ರಾರಬ್ಧ. ಒಂದು ಹಂತದಲ್ಲಿ ಈ ಮನಸ್ಥಿತಿ ಯಾವ ಮಟ್ಟಕ್ಕೆ ಬೆಳೆಯಿತು ಅಂದರೆ ಸನಾ ‘ಈಟಿಂಗ್ ಡಿಸಾರ್ಡರ್’ಗೆ ತುತ್ತಾದರು. ಬೇಗ ರಿಸಲ್ಟ್ ಸಿಗಲಿ ಅಂತ ಡಯೆಟ್ ಚಾರ್ಟ್‌ನಲ್ಲಿರ ಇರೋದಕ್ಕಿಂತಲೂ ಕಡಿಮೆ ತಿಂದು ಆಮೇಲೆ ವಿಪರೀತ ಹಸಿವಾಗಿ ಸಿಕ್ಕಾಪಟ್ಟೆ ತಿಂದು....ತೂಕ ಇಳೀಲೇ ಇಲ್ಲ. ಮಾನಸಿಕವಾಗಿಯೂ ಸ್ಟ್ರೆಸ್, ಉದ್ವೇಗ, ಡಿಪ್ರೆಶನ್, ಕೀಳರಿಮೆ ಎಲ್ಲ ಶುರುವಾಯ್ತು. ಸದ್ಯಕ್ಕೀಗ ಇದರಿಂದ ಹೊರಬಂದು ಆರೋಗ್ಯಪೂರ್ಣ ಕಳೆಯಿಂದ ಮಿಂಚುತ್ತಿದ್ದಾರೆ. 

ಎಕ್ಸರ್‌ಸೈಸ್ ಚ್ಯೂಸಿ
ಒಂದೇ ಎಕ್ಸರ್‌ಸೈಸ್ ಅನ್ನು ದಿನಾ ಮಾಡೋದು ಈಕೆಗೆ ಬೋರು. ಅದಕ್ಕೆ ದಿನಕ್ಕೊಂದು ಬಗೆಯ ಎಕ್ಸರ್‌ಸೈಸ್ ಮಾಡೋ ರೂಢಿ. ಕೆಲವೊಮ್ಮೆ ಈಕೆ ಫಿಟ್‌ನೆಸ್‌ಗಾಗಿ ಆಕೆಗಿಂತ ಎತ್ತರದ ಟೈಯರ್ ಎತ್ತಿ ಇಳಿಸೋದೂ ಇದೆ. ಹಗ್ಗ ಹಾರಿಸಿ ಮಾಡೋ ಎಕ್ಸರ್‌ಸೈಸ್, ಫಿಟ್‌ನೆಸ್ ಟ್ರೈನಿಂಗ್‌ಗಳನ್ನೂ ತಗೊಳ್ತಾಳೆ. ಬಿಲ್ಲುಗಾರಿಕೆ, ಕತ್ತಿವರಸೆಯಲ್ಲಿ ಈಕೆ ನಿಪುಣೆ. ಒಂಚೂರೇ ತಿಂದು ಎಕ್ಸರ್‌ಸೈಸ್ ಮಾಡಿ ಬೆವರಿದರೆ ಅವತ್ತಿನ ದಿನ ಸಾರ್ಥಕ. 

ಹೈಟ್: 5'6 | ತೂಕ: 51 ಕೆಜಿ | ಸುತ್ತಳತೆ: 33-25-33