ಮುಂಬೈ (ಡಿ. 26): ನಟ ಅಮೀರ್‌ ಖಾನ್‌ ಜೊತೆ ತಾವು ಸಂಬಂಧ ಹೊಂದಿರುವುದಾಗಿ ಹರಡಿರುವ ಸುದ್ದಿ ಸುಳ್ಳೇ ಸುಳ್ಳು ಎಂದು ದಂಗಲ್‌ ಖ್ಯಾತಿಯ ನಟಿ ಫಾತಿಮಾ ಸನಾ ಶೇಖ್‌ ಸ್ಪಷ್ಟಪಡಿಸಿದ್ದಾರೆ.

ಅಮೀರ್ ಖಾನ್‌ಗೆ ಎಷ್ಟು ಹೇಳಿ ಕೊಟ್ರೂ ಇದೊಂದು ಮಾತ್ರ ಬರ್ತಾ ಇರ್ಲಿಲ್ವಂತೆ!

ಇತ್ತೀಚೆಗೆ ಟೀವಿ ಚಾನೆಲ್‌ನ ಕಾರ್ಯಕ್ರಮವೊಂದರಲ್ಲಿ ಅಮೀರ್‌ ಜೊತೆ ತಾನು ನಂಟು ಹೊಂದಿರುವ ಸುದ್ದಿ ಪ್ರಸಾರವಾಗಿತ್ತು. ಚಿತ್ರರಂಗಕ್ಕೆ ಆಗಮಿಸಿದ ಮೊದಲಲ್ಲಿ ಇಂಥ ಗಾಸಿಪ್‌ ಸುದ್ದಿಗಳು ಭಾರೀ ನೋವು ಕೊಡುತ್ತಿತ್ತು. ಆದರೆ ಇಂಥ ಸುದ್ದಿಗಳನ್ನು ಎದುರಿಸುವುದು ಹೇಗೆ ಎಂಬುದನ್ನು ಇದೀಗ ಕಲಿತುಕೊಂಡಿರುವೆ ಎಂದು ಅಮೀರ್‌ ಜೊತೆ ದಂಗಲ್‌ ಮತ್ತು ಇತ್ತೀಚಿನ ಥಗ್ಸ್‌ ಆಫ್‌ ಹಿಂದುಸ್ತಾನ್‌ ಚಿತ್ರದಲ್ಲಿ ನಟಿಸಿರುವ ಫಾತಿಮಾ ಹೇಳಿದ್ದಾರೆ.