ಜಗತ್ತು ಭಾರತವನ್ನು ನೋಡುವ ರೀತಿಯನ್ನು ಪ್ರಧಾನಿ ನರೇಂದ್ರ ಮೋದಿ ಬದಲಿಸಿದರು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ.
ನವದೆಹಲಿ: ಜಗತ್ತು ಭಾರತವನ್ನು ನೋಡುವ ರೀತಿಯನ್ನು ಪ್ರಧಾನಿ ನರೇಂದ್ರ ಮೋದಿ ಬದಲಿಸಿದರು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ. ಮೋದಿ ನಾಯಕತ್ವದಲ್ಲಿ ಭಾರತವೂ ಅತ್ಯಂತ ಸಂಕೀರ್ಣವಾದ ವಿಚಾರಗಳ ಬಗ್ಗೆ ನಿರ್ಧಾರಗಳನ್ನು ಕೈಗೊಳ್ಳಲು ಯಾವುದೇ ಹಿಂಜರಿಕೆ ಮಾಡಿಲ್ಲ ಎಂದು ನಡ್ಡಾ ಹೇಳಿದರು. ಅವರು ರಾಷ್ಟ್ರ ರಾಜಧಾನಿಯಲ್ಲಿ ಪ್ರಧಾನಿ ಅವರ ನಿಲುವಿಗೆ ಸಂಬಂಧಿಸಿದ 'Modi: Shaping a Global Order in Flux' ಎಂಬ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದರು.
ಪ್ರಸ್ತುತ ದೇಶದ ವಿದೇಶಾಂಗ ನೀತಿಯೂ ಈ ಹಿಂದೆಂದಿಗಿಂತಲೂ ತುಂಬಾ ಧೃಡವಾಗಿದೆ. ಈ ಹಿಂದೆ ಭಾರತ ಸರ್ಕಾರದ (Indian Govt) ನಾಯಕರು ದೇಶದ ಅಂತರಿಕ ವೋಟ್ ಬ್ಯಾಂಕ್ ಅನ್ನು ಗಮನದಲ್ಲಿರಿಸಿಕೊಂಡು ಇಸ್ರೇಲ್ (Isrel) ದೇಶಕ್ಕೆ ಭೇಟಿ ನೀಡಲು ಅಂಜುತ್ತಿದ್ದರು. ಹೀಗಾಗಿ ಇಸ್ರೇಲ್ ಜೊತೆ ಸಂಬಂಧ ಬೆಳೆಸಲು ಭಾರತಕ್ಕೆ ಸಾಧ್ಯವಾಗಿರಲಿಲ್ಲ. ಆದರೆ ಪ್ರಧಾನಿ ಇದ್ಯಾವುದರ ಬಗ್ಗೆ ತಲೆಕೆಡಿಸಿಕೊಳ್ಳದೇ ಇಸ್ರೇಲ್‌ಗೆ ಭೇಟಿ ನೀಡಿದರು. ಅದರ ಜೊತೆಗೆ ಪ್ಯಾಲೇಸ್ತೀನ್‌ಗೂ (Palestine) ಹೋದರು. ಭಾರತವೂ ಎರಡು ವಿಭಿನ್ನ ದೇಶಗಳನ್ನು ತನಗೆ ಸಾಧ್ಯವಾದಷ್ಟು ಸಮರ್ಥ ರೀತಿಯಲ್ಲಿ ನಿಭಾಯಿಸುತ್ತಿದೆ ಎಂಬುದನ್ನು ಇದು ತೋರಿಸಿತು ಎಂದು ನಡ್ಡಾ ಮೋದಿ ಅವರ ವಿದೇಶಾಂಗ ನೀತಿಯನ್ನು (Foreign Policyಶ್ಲಾಘಿಸಿದ್ದಾರೆ.
ಮೋದಿ, ನಡ್ಡಾ ರಾಜ್ಯಕ್ಕೆ ನೂರು ಸಲ ಬಂದ್ರೂ ಪ್ರಯೋಜನ ಇಲ್ಲ; ಮುಂದಿನ ಸರ್ಕಾರ ನಮ್ಮದೇ: ಸಿದ್ದರಾಮಯ್ಯ
ಈ ಹಿಂದೆ ಭಾರತದೊಂದಿಗೆ ಪಾಕಿಸ್ತಾನವನ್ನು(Pakistan) ಕೂಡ ವಿಶ್ವದ ನಾಯಕರು ಉಲ್ಲೇಖ ಮಾಡುತ್ತಿದ್ದರು. ಆದರೆ ಭಾರತ ವಿಶ್ವ ಮಟ್ಟದಲ್ಲಿ ಮುಂದುವರೆದಿದ್ದು, ವಿಶ್ವನಾಯಕರು ಪಾಕಿಸ್ತಾನವನ್ನು ಭಾರತದ ಜೊತೆ ಉಲ್ಲೇಖಿಸದಂತೆ ಮಾಡುವಲ್ಲಿ ಪ್ರಧಾನಿ (Narendre Modi) ಯಶಸ್ವಿಯಾಗಿದ್ದಾರೆ. ಜಾಗತಿಕವಾಗಿ ಭಾರತವನ್ನು ಹೇಗೆ ನೋಡಲಾಗುತ್ತಿತ್ತು ಎಂಬುದನ್ನು ಬದಲಿಸಲು ಪ್ರಧಾನಿ ನೀಡಿದ ಕೊಡುಗೆಯ ಬಗ್ಗೆ ಈ ಪುಸ್ತಕದಲ್ಲಿ ಹೆಚ್ಚಿಲ್ಲ. ಆದರೆ ಈ ಪುಸ್ತಕವು ಚರ್ಚೆಯನ್ನು ಆರಂಭಿಸುತ್ತದೆ ಎಂದು ನಡ್ಡಾ ಹೇಳಿದರು.
ಮೋದಿ ಪ್ರಧಾನಿಯಾಗುವ ಮೊದಲು ಭಾರತದ ಸ್ಥಾನಮಾನ ವಿದೇಶದಲ್ಲಿ ಹೇಗಿತ್ತು ಎಂಬುದನ್ನು ಅಗತ್ಯವಾಗಿ ಅರ್ಥ ಮಾಡಿಕೊಳ್ಳಬೇಕಿದೆ. ಕುಸಿಯುತ್ತಿದ್ದ ಆರ್ಥಿಕತೆಯ ಜೊತೆ ಭಾರತ ಭ್ರಷ್ಟ ದೇಶ ಎಂಬ ಚಿತ್ರಣ ಹೊಂದಿತ್ತು. ನಿರಂತರ ಉಗ್ರರ ದಾಳಿ ಹಾಗೂ ಸ್ಥಿರವಾದ ಸರ್ಕಾರದ ಕೊರತೆ ಇತ್ತು. ಅತ್ಯಂತ ದುಃಖದ ಭಾಗವೆಂದರೆ ಪ್ರಧಾನಿಗೆ ಅಧಿಕಾರವಿರಲಿಲ್ಲ ಎಂದು ನಡ್ಡಾ ಹೇಳಿದರು.