ಮೋದಿ, ನಡ್ಡಾ ಕರ್ನಾಟಕಕ್ಕೆ ನೂರು ಸಾರಿ ಬಂದ್ರೂ ಯಾವುದೇ ಪ್ರಯೋಜನ ಆಗಲ್ಲ. ರಾಜ್ಯದ ಜನ ಬಿಜೆಪಿ ಸೋಲಿಸಿ, ಕಾಂಗ್ರೆಸ್‌ ಅಧಿಕಾರಕ್ಕೆ ತರುವ ತೀರ್ಮಾನ ಮಾಡಿದ್ದಾರೆಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಚಿತ್ರದುರ್ಗ (ಫೆ.23) : ಮೋದಿ, ನಡ್ಡಾ ಕರ್ನಾಟಕಕ್ಕೆ ನೂರು ಸಾರಿ ಬಂದ್ರೂ ಯಾವುದೇ ಪ್ರಯೋಜನ ಆಗಲ್ಲ. ರಾಜ್ಯದ ಜನ ಬಿಜೆಪಿ ಸೋಲಿಸಿ, ಕಾಂಗ್ರೆಸ್‌ ಅಧಿಕಾರಕ್ಕೆ ತರುವ ತೀರ್ಮಾನ ಮಾಡಿದ್ದಾರೆಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಡಳಿತದಿಂದ ಜನ ರೋಸಿ ಹೋಗಿದ್ದಾರೆ. ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಶತಸಿದ್ಧ.ಕಾಂಗ್ರೆಸ್‌ಗೆ ಸಿದ್ಧಾಂತ ಇಲ್ಲ ಎಂದ ಜೆ.ಪಿ.ನಡ್ಡಾ ಹೇಳಿಕೆಗೆ ಟಾಂಗ್‌ ನೀಡಿದ ಸಿದ್ದರಾಮಯ್ಯ(Siddaramaiah), ಅಬ್ಬಕ್ಕ ವರ್ಸಸ್‌ ಟಿಪ್ಪು ಚರ್ಚೆ ಅಗಲಿದೆ ಎಂದು ಶಾ ಹೇಳಿದ್ದು ಸಿದ್ದಾಂತವೇ? ಗಾಂಧಿ ವರ್ಸಸ್‌ ಸಾವರ್ಕರ್‌ ಅನ್ನುವುದು ಸಿದ್ಧಾಂತವೇ? ಸಿದ್ದರಾಮಯ್ಯನ ಮುಗಿಸಿ ಎಂಬುದು ಸಿದ್ಧಾಂತವೇ? ಬಿಜೆಪಿ ಅವರಿಗೆ ಯಾವ ಸಿದ್ಧಾಂತ ಇದೆ ? ಎಂದು ಪ್ರಶ್ನೆ ಮಾಡಿದರು..

Pancharatna rathayatre: ಶಾರದಾ ಗೆದ್ದರೆ ಸಚಿವ ಸ್ಥಾನ ನಿಶ್ಚಿತ: ಎಚ್‌ಡಿ ಕುಮಾರಸ್ವಾಮಿ ಭರವಸೆ

ಕಾಂಗ್ರೆಸ್‌ನಿಂದ ಮುಸ್ಲಿಂ ಓಲೈಕೆ ರಾಜಕಾರಣ ಮಾಡಲಾಗುತ್ತಿದೆ ಎಂಬ ಶೋಭಾ ಕರಂದ್ಲಾಜೆ(Shobha karandlaje) ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಯಾರ ಓಲೈಕೆ ಮಾಡಲ್ಲ. ಕಾಂಗ್ರೆಸ್‌ ಮನುಷ್ಯತ್ವದ ರಾಜಕಾರಣ ಮಾಡುತ್ತಿದೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ದ ಲಿತರೆಲ್ಲಾ ಮನುಷ್ಯರು ಎಂದರು.

ಅಹಿಂದ ಹೆಸರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯರಿಂದ ಟಿಪ್ಪು ಜಯಂತಿ(Tippu jayanti), ಜಾತಿ, ಧರ್ಮ ಬೇಧ ಎಂದು ಶೋಭಾ ಕರಂದ್ಲಾಜೆ ಆರೋಪಕ್ಕೆ ನಗೆಯಾಡಿದ ಸಿದ್ದರಾಮಯ್ಯ, ಪಾಪ ಶೋಭಾ ಕರಂದ್ಲಾಜೆ ಹೆಣ್ಣು ಮಗಳು. ಜಾತಿ ,ಧರ್ಮ ಅಂದರೇನು ಗೊತ್ತಿಲ್ಲ . ನಾವು ಎಲ್ಲಾ ಜಾತಿ, ಧರ್ಮದ ಬಗ್ಗೆ ಗೌರವವಿಟ್ಟುಕೊಂಡಿದ್ದೇವೆ. ಎಲ್ಲಾ ಜಾತಿಯಲ್ಲಿರುವ ಬಡವರಿಗೆ ಕಾರ್ಯಕ್ರಮ ನೀಡಿದ್ದೇವೆ ಎಂದರು.

ಸಿದ್ದು-ಡಿಕೆಶಿ ನಡುವೆ 'ಸಿಎಂ ಪಟ್ಟ'ದ ಜಿದ್ದು: ಕೋಲಾರದಲ್ಲಿ ಟಗರಿಗೆ ವಿಘ್ನ