ಭ್ರಷ್ಟಾ​ಚಾರ, ಕಮಿ​ಷ​ನ್‌, ಒಡೆದು ಆಳುವ ನೀತಿ, ವೋಟ್‌ ಬ್ಯಾಂಕ್‌ ರಾಜ​ಕೀಯ ಕಾಂಗ್ರೆಸ್‌ ಪಕ್ಷದ ಟ್ರೇಡ್‌ ಮಾರ್ಕ್ಗಳು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಗಂಭೀರ ಆರೋಪ ಮಾಡಿದ್ದಾರೆ. 

ಹಾಸ​ನ/​ಬೇ​ಲೂ​ರು/​ಚಿ​ಕ್ಕ​ಮ​ಗ​ಳೂ​ರು (ಫೆ.22): ಭ್ರಷ್ಟಾ​ಚಾರ, ಕಮಿ​ಷ​ನ್‌, ಒಡೆದು ಆಳುವ ನೀತಿ, ವೋಟ್‌ ಬ್ಯಾಂಕ್‌ ರಾಜ​ಕೀಯ ಕಾಂಗ್ರೆಸ್‌ ಪಕ್ಷದ ಟ್ರೇಡ್‌ ಮಾರ್ಕ್ಗಳು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಗಂಭೀರ ಆರೋಪ ಮಾಡಿದ್ದಾರೆ. ಚಿಕ್ಕ​ಮ​ಗ​ಳೂ​ರಿ​ನಲ್ಲಿ ವೃತ್ತಿಪರರು ಮತ್ತು ಚಿಂತಕರ ಸಭೆ, ಹಾಸ​ನದಲ್ಲಿ ಬೂತ್‌ ಮಟ್ಟದ ಸಭೆ ಹಾಗೂ ಬೇಲೂ​ರಿ​ನಲ್ಲಿ ಬಿಜೆಪಿ ಕಾರ್ಯ​ಕ​ರ್ತರ ಸಮಾ​ವೇಶ ಉದ್ಘಾ​ಟಿಸಿ ಮಾತ​ನಾಡಿದ ಅವರು ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆ​ಸಿ​ದ​ರು.

ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ಪಿಎಫ್‌ಐ ಸಂಘಟನೆಯನ್ನು ದೇಶ​ದ​ಲ್ಲೀಗ ಬ್ಯಾನ್‌ ಮಾಡಲಾಗಿದೆ. ಆದರೆ, ಸಿದ್ದರಾಮಯ್ಯ ​ಮು​ಖ್ಯ​ಮಂತ್ರಿ ಆಗಿದ್ದ ಸಂದರ್ಭದಲ್ಲಿ ಇದೇ ಪಿಎಫ್‌ಐ ಮೇಲಿದ್ದ ಸುಮಾರು 175 ಕೇಸನ್ನು ವಾಪಸ್‌ ಪಡೆಯಲಾಯಿತು. ಇದು, ವೋಟ್‌ ಬ್ಯಾಂಕ್‌ ರಾಜಕಾರಣ ಅಲ್ವಾ ? ಭ್ರಷ್ಟಾ​ಚಾ​ರದ ಬಗ್ಗೆ ಮಾತ​ನಾ​ಡುವ ಕಾಂಗ್ರೆ​ಸ್ಸಿ​ಗರು ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಿದ್ದು ಏಕೆ? ಭ್ರಷ್ಟಾ​ಚಾ​ರದ ರೂವಾ​ರಿಯೇ ಕಾಂಗ್ರೆ​ಸ್‌ ಎಂದು ನಡ್ಡಾ ​ಕಿ​ಡಿ​ಕಾ​ರಿ​ದ​ರು.

ಭಗವದ್ಗೀತೆ ಮೇಲೆ ನಂಬಿಕೆ ಇಟ್ಟಷ್ಟೇ, ನಮ್ಮ ಪ್ರಣಾಳಿಕೆ ಮೇಲೆ ನಂಬಿಕೆಯಿಡಿ: ಸಚಿವ ಸುಧಾಕರ್‌

ಬಿಜೆಪಿ ನೇತೃ​ತ್ವ​ದ ಡಬಲ್‌ ಎಂಜಿನ್‌ ಸರ್ಕಾರ ರಾಷ್ಟ್ರ-ರಾಜ್ಯದಲ್ಲಿ ಉತ್ತಮ ಆಡಳಿತ ನೀಡುತ್ತಿದೆ. ಡಬಲ್‌ ಎಂಜಿನ್‌ ಸರ್ಕಾರ ರೈತರು, ಮಹಿಳೆಯರು, ಬಡವರು, ದಲಿತರು, ಯುವಕರು ಸೇರಿ ಸಮಾಜದ ಎಲ್ಲ ವರ್ಗದವರನ್ನು ಸಬಲೀಕರಣಗೊಳಿಸಲು ಪ್ರಯತ್ನಿಸುತ್ತಿದೆ. ಗ್ರಾಮೀಣ ಮತ್ತು ನಗರ ಪ್ರದೇಶದ ಸಬಲೀಕರಣದತ್ತ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದ​ರು.

ಬಿಜೆಪಿ ಹೊರತುಪಡಿಸಿ ವಿಶ್ವದ ಯಾವ ರಾಜಕೀಯ ಪಕ್ಷವೂ ಸಿದ್ಧಾಂತಗಳ ಮೇಲೆ ಗಟ್ಟಿಯಾಗಿ ನಿಂತಿಲ್ಲ. ಅತಿದೊಡ್ಡ ಕಾರ್ಯಕರ್ತರ ಪಡೆಯನ್ನೂ ಹೊಂದಿಲ್ಲ. ಎಲ್ಲ ರಾಜಕೀಯ ಪಕ್ಷಗಳೂ ಕುಟುಂಬ ರಾಜಕಾರಣದ ಹಿಡಿತದಲ್ಲಿವೆ. ಸಮಾಜವಾದಿ ಪಕ್ಷ, ಆರ್‌ಜೆಡಿ, ಶಿವಸೇನೆ, ತೃಣಮೂಲ ಕಾಂಗ್ರೆಸ್‌, ವೈಎಸ್‌ಆರ್‌ಸಿಪಿ, ಟಿಆರ್‌ಎಸ್‌, ಎಐಡಿಎಂಕೆ ಹೀಗೆ ಎಲ್ಲವೂ ಕುಟುಂಬ ರಾಜಕಾರಣ ಪೋಷಿಸಿಕೊಂಡು ಬಂದಿವೆ. ಆದರೆ, ಬಿಜೆಪಿಯಲ್ಲಿ ಮಾತ್ರ ಪಕ್ಷವೇ ಕುಟುಂಬ ಎಂದ​ರು.

ಚಿಕ್ಕಮಗಳೂರಿನಲ್ಲಿ ಬಿಜೆಪಿ-‘ಕೈ’ ಬೈಕ್‌ ರ್ಯಾಲಿ: ವಿಧಾನಸಭಾ ಚುನಾವಣೆಗೂ ಮೊದಲೇ ಜಿಲ್ಲೆ​ಯಲ್ಲಿ ರಾಜಕೀಯ ಚಟುವಟಿಕೆಗಳು ಗರಿ​ಗೆ​ದ​ರಿದ್ದು, ಚಿಕ್ಕಮಗಳೂರು ನಗರದಲ್ಲಿ ಮಂಗಳವಾರ ಒಂದೇ ದಿನ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷದ ರಾರ‍ಯಲಿ ನಡೆಯಿತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಚಿಕ್ಕಮಗಳೂರಿಗೆ ಆಗಮಿಸಿದ ಹಿನ್ನಲೆಯಲ್ಲಿ ಬಿಜೆಪಿ ರಾರ‍ಯಲಿ ಆಯೋಜಿಸಿ​ದ್ದ​ರೆ, ಇತ್ತೀ​ಚೆ​ಗಷ್ಟೇ ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಶಾಸಕ ಸಿ.ಟಿ.ರವಿ ಅವರ ಆಪ್ತ ಎಚ್‌.ಡಿ.ತಮ್ಮಯ್ಯ ಕೂಡ ರ್ಯಾಲಿ ನಡೆಸಿ ಶಕ್ತಿ​ಪ್ರ​ದ​ರ್ಶನ ನಡೆ​ಸಿ​ದ​ರು.

ಗೆಲ್ಸಿದ ಆನೆ ಕಾಡಿಗಟ್ಟಿ ಸ್ವಾರ್ಥಕ್ಕೆ ಕಮಲ ಹಿಡಿದ ಮಹೇಶ್‌: ಡಿ.ಕೆ.ಶಿವಕುಮಾರ್‌

ಶಾಸಕ ಸಿ.ಟಿ.​ರವಿ ಅವರ ಮನೆಗೆ ಆಗ​ಮಿ​ಸಿದ್ದ ನಡ್ಡಾ ಅವರನ್ನು ಪಕ್ಷದ ಕಾರ್ಯಕರ್ತರು, ಮುಖಂಡರು ಬೆಳಗ್ಗೆ 11ಕ್ಕೆ ಬೈಕ್‌ ರಾರ‍ಯಲಿಯಲ್ಲಿ ಐಜಿ ರಸ್ತೆ ವರೆ​ಗೆ ಕರೆ​ದೊ​ಯ್ದರು. ಇತ್ತ ಎಚ್‌.ಡಿ.ತಮ್ಮಯ್ಯ ಹಾಗೂ ಬೆಂಬಲಿಗರು ಬೇಲೂರು ರಸ್ತೆಯ ಕರ್ತಿಕೆರೆ ಗ್ರಾಮದಿಂದ 12.15ಕ್ಕೆ ಬೈಕ್‌ ರಾರ‍ಯಲಿಯಲ್ಲಿ ಹೊರಟರು. ಈ ರಾರ‍ಯಲಿ ಐಜಿ ರಸ್ತೆ ಮೂಲಕ ಕಾಂಗ್ರೆಸ್‌ ಕಚೇರಿ ತಲುಪಿತು.