ಸದ್ಯದ ಟ್ರೆಂಡ್‌ ಪ್ರಕಾರ ನೂತನ ZPM ಪಕ್ಷ ಮ್ಯಾಜಿಕ್‌ ನಂಬರ್‌ಗೆ ಬೇಕಾದ 21 ದಾಟಿದೆಯಾದರೂ, ಇನ್ನೂ ಹಾವು ಏಣಿ ಆಟ ಮುಂದುವರಿದಿದೆ. ಆಡಳಿತಾರೂಢ MNFಗೆ ಮುಖಭಂಗದ ಮುನ್ಸೂಚನೆಯೂ ಇದೆ. 

ನವದೆಹಲಿ (ಡಿಸೆಂಬರ್ 4, 2023): ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಪೈಕಿ 4 ರಾಜ್ಯಗಳ ಮತ ಎಣಿಕೆ ಭಾನುವಾರ ಅಂತ್ಯಗೊಂಡಿದ್ದು, ಈ ಪೈಕಿ ಹಿಂದಿ ಭಾಷಿಕ ರಾಜ್ಯಗಳಾದ ಛತ್ತೀಸ್‌ಗಢ, ರಾಜಸ್ಥಾನ ಹಾಗೂ ಮಧ್ಯ ಪ್ರದೇಶದಲ್ಲಿ ಬಿಜೆಪಿ ಗೆದ್ದು ಬೀಗುತ್ತಿದೆ. ತೆಲಂಗಾಣದಲ್ಲಿ ಕಾಂಗ್ರೆಸ್‌ ಅಧಿಕಾರ ಸ್ಥಾಪಿಸಲಿದ್ದು, ಕೆಸಿಆರ್‌ ಕನಸಿನ ಕಾರಿಗೆ ಬ್ರೇಕ್‌ ಹಾಕಿದೆ. ಇನ್ನೊಂದೆಡೆ, ಈಶಾನ್ಯ ರಾಜ್ಯ ಮಿಜೋರಾಂನಲ್ಲಿ ಸದ್ಯ ಮತ ಎಣಿಕೆ ನಡೆಯುತ್ತಿದೆ. ಇಲ್ಲೂ, ಎನ್‌ಡಿಎ ಕಮಾಲ್‌ ಮಾಡುತ್ತಾ ಅನ್ನೋದು ಇನ್ನು ಕೆಲವೇ ಗಂಟೆಗಳಲ್ಲಿ ಬಯಲಾಗಲಿದೆ. 

ಸೋಮವಾರ ಬೆಳಗ್ಗೆ 8 ಗಂಟೆಗೆ ಮಿಜೋರಾಂ ವಿಧಾನಸಭಾ ಚುನಾವಣೆಗೆ ಮತ ಎಣಿಕೆ ಆರಂಭವಾಗಿದ್ದು, ಸದ್ಯದ ಟ್ರೆಂಡ್‌ ಪ್ರಕಾರ ನೂತನ ZPM ಪಕ್ಷ ಮ್ಯಾಜಿಕ್‌ ನಂಬರ್‌ಗೆ ಬೇಕಾದ 21 ದಾಟಿದೆಯಾದರೂ, ಇನ್ನೂ ಹಾವು ಏಣಿ ಆಟ ಮುಂದುವರಿದಿದೆ. ಆಡಳಿತಾರೂಢ MNFಗೆ ಮುಖಭಂಗದ ಮುನ್ಸೂಚನೆಯೂ ಇದೆ. ಸದ್ಯ ಈ ಪಕ್ಷ ಎರಡನೇ ಸ್ಥಾನದಲ್ಲಿದ್ದು, ಸುಮಾರು 10 ಸೀಟುಗಳಲ್ಲಿ ಮುನ್ನಡೆ ಸಾಧಿಸಿದೆ. ಸದ್ಯದ ಈ ಟ್ರೆಂಡ್‌ ಬದಲಾಗಬಹುದಾಗಿದ್ದು, ಮಧ್ಯಾಹ್ನದ ವೇಳೆಗೆ ಸ್ಪಷ್ಟ ಫಲಿತಾಂಶ ಹೊರಬೀಳೋ ಸಾಧ್ಯತೆ ಇದೆ. 

ಇದನ್ನು ಓದಿ: ತೃತೀಯ ರಂಗ ರಾಷ್ಟ್ರ ನಾಯಕನಾಗಲು ಹೊರಟ ಕೆಸಿಆರ್‌ಗೆ ತವರಲ್ಲೇ ಮುಖಭಂಗ: ಕನಸಿನ ಕಾರಿಗೆ ಬ್ರೇಕ್‌ ಹಾಕಿದ ಹಸ್ತ!

ಇನ್ನು, ಕಾಂಗ್ರೆಸ್‌ ಹಾಗೂ ಬಿಜೆಪಿ 2 - 3 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆಯಲ್ಲಿದೆ. ಈ ಹಿನ್ನೆಲೆ ಮಿಜೋರಾಂನಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗುತ್ತದೋ ಅಥವಾ ಹೊಸ ಪಕ್ಷವೇ ಅಧಿಕಾರ ಸ್ಥಾಪಿಸುತ್ತಾ ಅನ್ನೋದನ್ನು ಕಾದುನೋಡಬೇಕಾಗಿದೆ. 

ಈಶಾನ್ಯ ರಾಜ್ಯ ಮಿಜೋರಾಂನಲ್ಲಿ ಮುಖ್ಯಮಂತ್ರಿ ಝೋರಂತಂಗಾ ನೇತೃತ್ವದ ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್ ಮತ್ತು ಜೋರಾಮ್ ಪೀಪಲ್ಸ್ ಮೂವ್‌ಮೆಂಟ್‌ ನಡುವೆ ಅಧಿಕಾರ ಯಾರ ಪಾಲಾಗುತ್ತೆ ಅನ್ನೋದು ಕುತೂಹಲ ಕೆರಳಿಸಿದೆ. ಇನ್ನೊಂದೆಡೆ, ಬಿಜೆಪಿ 3 ರಾಜ್ಯಗಳಲ್ಲಿ ಗೆಲುವು ಸಾಧಿಸಿದ ಬಳಿಕ ಕ್ರೈಸ್ತರೇ ಪ್ರಾಧಾನ್ಯದಲ್ಲಿರೋ ಮಿಜೋರಾಂನಲ್ಲೂ ಎನ್‌ಡಿಎ ಅಧಿಕಾರ ಸ್ಥಾಪಿಸಲಿದೆ ಎಂದು ಅಸ್ಸಾಂ ಸಿಎಂ ಹಾಗೂ NEDA ಸಂಚಾಲಕ ಹಿಮಂತ ಬಿಸ್ವಾ ಶರ್ಮಾ ಫಲಿತಾಂಶ ಹೊರಬೀಳುವ ಮುನ್ನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಇದನ್ನು ಓದಿ: ಮಧ್ಯಪ್ರದೇಶದಲ್ಲಿ ಬಿಜೆಪಿ ಪಾರುಪತ್ಯ: 'ಶಿವರಾಜ'ನ ಜತೆ 'ಮಹಾರಾಜ'ನ ನೆರವಿಗೆ ಕಾಂಗ್ರೆಸ್‌ ಧೂಳೀಪಟ!

ಅದರೆ ಸದ್ಯದ ವಾಸ್ತವ ಸ್ಥಿತಿ ಅದು ನನಸಾಗುವುದು ಕಷ್ಟಸಾಧ್ಯ ಎನ್ನುವಂತಿದೆ. ನೂತನ ZPM ಪಕ್ಷ NDA ಹಾಗೂ INDIA ಒಕ್ಕೂಟ ಎರಡರಿಂದಲೂ ದೂರ ಉಳಿದಿದೆ. ಒಂದು ವೇಳೆ, ಅತಂತ್ರ ವಿಧಾನಸಭೆಯಾದರೆ ಮಾತ್ರ ಬಿಜೆಪಿಯ ನೆರವು ಕೋರಬಹುದು. ಇನ್ನೊಂದೆಡೆ ಆಡಳಿತಾರೂಢ ಎಂಎನ್‌ಎಫ್‌ ಎನ್‌ಡಿಎ ಭಾಗವಾಗಿದ್ದರೂ, ಅದು ಕೇಂದ್ರದಲ್ಲಿ ಮಾತ್ರ ರಾಜ್ಯದಲ್ಲಿ ಅಲ್ಲ ಅಂತ ಅಲ್ಲಿನ ಮುಖ್ಯಮಂತ್ರಿ ಝೋರಂತಂಗಾ ಚುನಾವಣೆಗೂ ಮುನ್ನ ಹೇಳಿದ್ದರು. ಅಲ್ಲದೆ, ಮೋದಿ ಜತೆ ವೇದಿಕೆ ಹಂಚಿಕೊಳ್ಳಲ್ಲ ಎಂದೂ ತಿಳಿಸಿದ್ದರು. 

ಈ ಹಿನ್ನೆಲೆ ಎಂಎನ್‌ಎಫ್‌ ಒಂದು ವೇಳೆ ಅಧಿಕಾರಕ್ಕೆ ಬಂದರೆ ಮಾತ್ರ ಎನ್‌ಡಿಎಗೆ ಅಧಿಕಾರ ಎಂದು ಹೇಳಬಹುದು. ಆದರೆ, ಸರ್ಕಾರದಲ್ಲಿ ಬಿಜೆಪಿ ಪ್ರಮುಖ ಪಾತ್ರ ವಹಿಸೋದು ಕಷ್ಟ. ಇನ್ನೊಂದೆಡೆ, ಸದ್ಯದ ಟ್ರೆಂಡ್‌ನಂತೆ ಜೋರಾಮ್ ಪೀಪಲ್ಸ್ ಮೂವ್‌ಮೆಂಟ್‌ ಮ್ಯಾಜಿಕ್‌ ನಂಬರ್ ಪಡೆದರೆ ಅವರು ಸಹ ಬಿಜೆಪಿಯತ್ತ ಮುಖ ಮಾಡಲ್ಲ. 

ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ಎಕ್ಸಿಟ್‌ ಪೋಲ್‌ಗಳ ಭವಿಷ್ಯ ಉಲ್ಟಾ: ಗೆಲುವಿನತ್ತ ಬಿಜೆಪಿ; ಮಹದೇವ ಹಗರಣಕ್ಕೆ ತಲೆಬಾಗಿದ ಕೈ!

ಮಿಜೋರಾಂನಲ್ಲಿ ಒಟ್ಟು 8.57 ಲಕ್ಷ ಮತದಾರರಿದ್ದು, ನವೆಂಬರ್ 7 ರಂದು 80.66% ರಷ್ಟು ಮತದಾರರು ಮತ ಚಲಾಯಿಸಿದ್ದಾರೆ. 

ಇದನ್ನು ಓದಿ: ಮಧ್ಯ ಪ್ರದೇಶದಲ್ಲಿ ರಾಮಭಕ್ತನೇ ‘ರಾಜ’; ಕಮಲ ಕಿಲಕಿಲ: ಕಮಲ್‌ನಾಥ್‌ ವಿಲವಿಲ; ಲಡ್ಡು ಹಂಚಿದ ಕೈಗೆ ಮತ್ತೆ ಹಿನ್ನೆಡೆ!

ಇದನ್ನು ಓದಿ: ರಾಜಸ್ಥಾನದಲ್ಲಿ ಬಿಜೆಪಿ ಭರ್ಜರಿ ಸೆಂಚುರಿ: ಗೆಹ್ಲೋಟ್‌ಗೆ ತೀವ್ರ ಮುಖಭಂಗ, ಕ್ರ್ಯಾಶ್‌ ಆಗುತ್ತಾ ಪೈಲಟ್‌?