ಭೂಪೇಶ್ ಬಘೇಲ್ ಅವರನ್ನು ಛತ್ತೀಸ್‌ಗಢ ತಿರಸ್ಕರಿಸಿದೆ. ಅವರ ಭ್ರಷ್ಟಾಚಾರ, ಮದ್ಯ ಹಗರಣ, ಮಹದೇವ್ ಆ್ಯಪ್ ಹಗರಣವು ಇದಕ್ಕೆ ಕೊಡುಗೆ ನೀಡಿದೆ. ಇದು ಫಲಿತಾಂಶವಾಗಿದೆ ಎಂದು ಬಿಜೆಪಿ ನಾಯಕ ರಮಣ್ ಸಿಂಗ್ ಹೇಳಿದ್ದಾರೆ.
ದೆಹಲಿ (ಡಿಸೆಂಬರ್ 3, 2023): ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯಲ್ಲಿ ಬಹುತೇಕ ಎಕ್ಸಿಟ್ ಪೋಲ್‌ಗಳು ಕಾಂಗ್ರೆಸ್‌ಗೆ ಮತ್ತೆ ಅಧಿಕಾರದ ಆಸೆ ಮೂಡಿಸಿದ್ದವು. ಆದರೆ, ಬಹುತೇಕ ಎಕ್ಸಿಟ್ ಪೋಲ್‌ಗಳ ಭವಿಷ್ಯ ತಲೆಕೆಳಗಾಗಿದ್ದು, ಬಿಜೆಪಿಗೆ ಅಧಿಕಾರ ಲಭಿಸುವ ಚಿಗುರೊಡೆದಿದೆ.
ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಬೆಳಗ್ಗೆಯಿಂದ ದೃಢವಾಗಿ ಮುನ್ನಡೆಯಲ್ಲಿದೆ ಎಂದು ಆರಂಭಿಕ ಟ್ರೆಂಡ್‌ಗಳು ತೋರಿಸಿದವು. ಆದರೆ ಬೆಳಗ್ಗೆ 11 ಗಂಟೆಯ ಬಳಿಕ ಬಿಜೆಪಿ ತನ್ನ ಪ್ರತಿಸ್ಪರ್ಧಿಯನ್ನು ಹಿಂದಿಕ್ಕಿದೆ. ಅಲ್ಲದೆ, 50ಕ್ಕೂ ಹೆಚ್ಚು ಸೀಟುಗಳಲ್ಲಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್‌ಗೆ ಸೋಲಾಗುವ ಭೀತಿ ಎದುರಾಗಿದೆ.
ಇದನ್ನು ಓದಿ: ಮಧ್ಯ ಪ್ರದೇಶದಲ್ಲಿ ರಾಮಭಕ್ತನೇ ‘ರಾಜ’; ಕಮಲ ಕಿಲಕಿಲ: ಕಮಲ್‌ನಾಥ್ ವಿಲವಿಲ; ಲಡ್ಡು ಹಂಚಿದ ಕೈಗೆ ಮತ್ತೆ ಹಿನ್ನೆಡೆ!
90 ಕ್ಷೇತ್ರಗಳ ವಿಧಾನಸಭೆ ಚುನಾವಣೆಯಲ್ಲಿ 46 ಮ್ಯಾಜಿಕ್ ನಂಬರ್ ಆಗಿದೆ. ಇನ್ನು, ಕಮಲ ಪಕ್ಷ 50ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದು, ಕಾಂಗ್ರೆಸ್‌ಗೆ 40 ಸೀಟು ಪಡೆಯುವುದು ಸಹ ಕಷ್ಟಸಾಧ್ಯವಾಗಿದೆ. ಬಿಜೆಪಿ ಅಧಿಕಾರಕ್ಕೆ ಬರುವ ಚಿಗುರೊಡೆಯುತ್ತಿದ್ದಂತೆ, ಬಿಜೆಪಿ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಸುದ್ದಿಗಾರರಿಗೆ ಹೇಳಿದ್ದು ಹೀಗೆ..
ಜನರು ಮೋದಿಜಿಯವರ ಗ್ಯಾರಂಟಿಯನ್ನು ನಂಬಿದ್ದಾರೆ, ಅದನ್ನೇ ಟ್ರೆಂಡ್‌ಗಳು ತೋರಿಸುತ್ತವೆ. ನಾವು ಅಂಡರ್‌ಕರೆಂಟ್ ಅನ್ನು ನೋಡಿದ್ದೆವು. ಅದು ಇಷ್ಟು ದೊಡ್ಡದಾಗಿದೆ ಎಂದು ತಿಳಿದಿರಲಿಲ್ಲ. ಭೂಪೇಶ್ ಬಘೇಲ್ ಅವರನ್ನು ಛತ್ತೀಸ್‌ಗಢ ತಿರಸ್ಕರಿಸಿದೆ. ಅವರ ಭ್ರಷ್ಟಾಚಾರ, ಮದ್ಯ ಹಗರಣ, ಮಹದೇವ್ ಆ್ಯಪ್ ಹಗರಣವು ಇದಕ್ಕೆ ಕೊಡುಗೆ ನೀಡಿದೆ. ಇದು ಫಲಿತಾಂಶವಾಗಿದೆ ಎಂದು ಹೇಳಿದ್ದಾರೆ.
ಇದನ್ನು ಓದಿ: ರಾಜಸ್ಥಾನದಲ್ಲಿ ಬಿಜೆಪಿ ಭರ್ಜರಿ ಸೆಂಚುರಿ: ಗೆಹ್ಲೋಟ್‌ಗೆ ತೀವ್ರ ಮುಖಭಂಗ, ಕ್ರ್ಯಾಶ್ ಆಗುತ್ತಾ ಪೈಲಟ್?
ಆದರೆ, ಪಕ್ಷ ಅಧಿಕಾರಕ್ಕೆ ಬಂದರೆ ಯಾರು ಮುಖ್ಯಮಂತ್ರಿಯಾಗುತ್ತಾರೆ ಎಂಬುದಕ್ಕೆ ಸರಿಯಾದ ಪ್ರತಿಕ್ರಿಯೆ ನೀಡಲಿಲ್ಲ. ಇದು ಪಕ್ಷದ ನಿರ್ಧಾರವಾಗಿರುತ್ತದೆ, ನಾನು ಎಂದಿಗೂ ಏನನ್ನೂ ಕೇಳಲಿಲ್ಲ, ನನಗೆ ನಿಯೋಜಿಸಲಾದ ಕೆಲಸವನ್ನು ನಾನು ಸಂಪೂರ್ಣ ಸಮರ್ಪಣೆಯಿಂದ ಮಾಡಿದ್ದೇನೆ ಎಂದೂ ಹೇಳಿದ್ದಾರೆ.
ನಾಲ್ಕು ಎಕ್ಸಿಟ್ ಪೋಲ್‌ಗಳು ಕಾಂಗ್ರೆಸ್ ಬಹುಮತದ 46 ಅನ್ನು ದಾಟುತ್ತದೆ ಎಂದು ಭವಿಷ್ಯ ನುಡಿದಿತ್ತು. ಇನ್ನೆರಡು 42 - 44 ಮತ್ತು ಉಳಿದ ಮೂರು 40 ಕ್ಕಿಂತ ಹೆಚ್ಚು ಎಂದು ಭವಿಷ್ಯ ನುಡಿದಿವೆ. 9 ಎಕ್ಸಿಟ್ ಪೋಲ್‌ಗಳಲ್ಲಿ ಎರಡು ಮಾತ್ರ ಬಿಜೆಪಿಗೆ ಗೆಲ್ಲಲು ಬೇಕಾದ 46 + ಸ್ಥಾನಗಳನ್ನು ನೀಡಿತ್ತು.
ಇದನ್ನೂ ಓದಿ: ಸಂಕಷ್ಟದಲ್ಲಿ ಕೆಸಿಆರ್; ನನಸಾಗಲ್ಲ ಹ್ಯಾಟ್ರಿಕ್ ಕನಸು! ಮ್ಯಾಜಿಕ್ ನಂಬರ್ ದಾಟಿದ ಕಾಂಗ್ರೆಸ್
ನವೆಂಬರ್ 7 ಮತ್ತು 17 ರಂದು ಎರಡು ಹಂತಗಳಲ್ಲಿ ಛತ್ತೀಸ್‌ಗಢದಲ್ಲಿ ಚುನಾವಣೆ ನಡೆದಿತ್ತು. ಮತದಾನದ ಪ್ರಮಾಣವು ಶೇಕಡಾ 76.31 ರಷ್ಟಿತ್ತು, ಇದು 2018 ರ ಚುನಾವಣೆಯಲ್ಲಿ ದಾಖಲಾದ ಶೇಕಡಾ 76.88 ಕ್ಕಿಂತ ಸ್ವಲ್ಪ ಕಡಿಮೆಯಾಗಿದೆ.
