Asianet Suvarna News Asianet Suvarna News

ತೃತೀಯ ರಂಗ ರಾಷ್ಟ್ರ ನಾಯಕನಾಗಲು ಹೊರಟ ಕೆಸಿಆರ್‌ಗೆ ತವರಲ್ಲೇ ಮುಖಭಂಗ: ಕನಸಿನ ಕಾರಿಗೆ ಬ್ರೇಕ್‌ ಹಾಕಿದ ಹಸ್ತ!

ಕೆ. ಚಂದ್ರಶೇಖರ್ ರಾವ್ ತಮ್ಮ ಭದ್ರಕೋಟೆಯಾದ ಗಜ್ವೇಲ್ ಕ್ಷೇತ್ರದಲ್ಲಿ ಮುಂದಿದ್ದರೆ, ಕಾಮರೆಡ್ಡಿಯಲ್ಲಿ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ರೇವಂತ್ ರೆಡ್ಡಿ ವಿರುದ್ಧ ಕಣಕ್ಕಿಳಿದಿದ್ದು,  ಆ ಕ್ಷೇತ್ರದಲ್ಲಿ ಹಿನ್ನೆಡೆಯಲ್ಲಿದ್ದಾರೆ.

telangana election results 2023 from third front dreams to crashlanding in own state kcr s huge reversal ash
Author
First Published Dec 3, 2023, 4:34 PM IST

ನವದೆಹಲಿ (ಡಿಸೆಂಬರ್ 3, 2023): ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಕನಸಿನ ಓಟಕ್ಕೆ ತೆರೆ ಬಿದ್ದಂತೆ ಕಾಣುತ್ತಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಭಾರಿ ಗೆಲುವಿನತ್ತ ಸಾಗುತ್ತಿದ್ದು, ಅಧಿಕಾರ ಹಿಡಿಯುವುದು ಬಹುತೇಕ ನಿಚ್ಚಳ. ಜತೆಗೆ,  ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಕೆಸಿಆರ್‌ ತಾವು ಸ್ಪರ್ಧಿಸಿದ 2 ಕಡೆಗಳಲ್ಲಿ ಒಂದು ಕಡೆ ಸೋಲಿನ ಭೀತಿಯಲ್ಲಿದ್ದಾರೆ.

ಕೆ. ಚಂದ್ರಶೇಖರ್ ರಾವ್ ತಮ್ಮ ಭದ್ರಕೋಟೆಯಾದ ಗಜ್ವೇಲ್ ಕ್ಷೇತ್ರದಲ್ಲಿ ಮುಂದಿದ್ದರೆ, ಕಾಮರೆಡ್ಡಿಯಲ್ಲಿ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ರೇವಂತ್ ರೆಡ್ಡಿ ವಿರುದ್ಧ ಕಣಕ್ಕಿಳಿದಿದ್ದು,  ಆ ಕ್ಷೇತ್ರದಲ್ಲಿ ಹಿನ್ನೆಡೆಯಲ್ಲಿದ್ದಾರೆ.

ಇದನ್ನು ಓದಿ: ಮಧ್ಯಪ್ರದೇಶದಲ್ಲಿ ಬಿಜೆಪಿ ಪಾರುಪತ್ಯ: 'ಶಿವರಾಜ'ನ ಜತೆ 'ಮಹಾರಾಜ'ನ ನೆರವಿಗೆ ಕಾಂಗ್ರೆಸ್‌ ಧೂಳೀಪಟ!

ಆಗಿನ ತೆಲಂಗಾಣ ರಾಷ್ಟ್ರ ಸಮಿತಿ ರಾಜ್ಯ ರಚನೆಯ ಚಳುವಳಿಯನ್ನು ಮುನ್ನಡೆಸಿತ್ತು. 2014 ರಲ್ಲಿ ಆಂಧ್ರಪ್ರದೇಶದಿಂದ ನೂತನ ರಾಜ್ಯ ತೆಲಮಗಾಣ ರಚನೆಗೆ ಇವರು ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ, ಒಂದು ದಶಕದ ಕಾಲ ಜನರ ಪ್ರಶ್ನಾತೀತ ಬೆಂಬಲವನ್ನೂ ಹೊಂದಿತ್ತು. ಆದರೆ, ಟಿಆರ್‌ಎಸ್‌ ಬಿಆರ್‌ಎಸ್‌ ಆದ ನಂತರದ ಪರಿಣಾಮವೋ ಏನೋ, ಈಗ ತೆಲಂಗಾಣ ಬದಲಾವಣೆಗೆ ಸಿದ್ಧವಾಗಿದೆ.

ಕೆಸಿಆರ್‌ ಮತ್ತು ಪಕ್ಷದ ಹಿರಿಯ ನಾಯಕರ ವಿರುದ್ಧದ ಭ್ರಷ್ಟಾಚಾರದ ಆರೋಪಗಳು ಬದಲಾವಣೆಗೆ ಭಾಗಶಃ ಕಾರಣವಾಗಿದೆ. ಅಲ್ಲದೆ, ಅವರು ಎನ್‌ಡಿಎ ಸೇರಲು ಪ್ರಯತ್ನಿಸಿದರು ಮತ್ತು ಬಿಜೆಪಿ ತಿರಸ್ಕರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿನೀಡಿದ ಹೇಳಿಕೆಯೂ ದೊಡ್ಡ ಹೊಡೆತವಾಗಿರಬಹುದು.

ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ಎಕ್ಸಿಟ್‌ ಪೋಲ್‌ಗಳ ಭವಿಷ್ಯ ಉಲ್ಟಾ: ಗೆಲುವಿನತ್ತ ಬಿಜೆಪಿ; ಮಹದೇವ ಹಗರಣಕ್ಕೆ ತಲೆಬಾಗಿದ ಕೈ!
.
ನೆರೆಯ ಕರ್ನಾಟಕದಲ್ಲಿ ಭಾರಿ ಗೆಲುವಿನ ನಂತರ ಏರಿಳಿತದಲ್ಲಿರುವ ಕಾಂಗ್ರೆಸ್, ಬಿಆರ್‌ಎಸ್ ಬಿಜೆಪಿಯೊಂದಿಗೆ ಕೈಜೋಡಿಸಿದೆ ಎಂದು ಬಹುತೇಕ ಕಡೆ ಹೇಳಿಕೊಂಡು ಪ್ರಚಾರ ಮಾಡಿತ್ತು. ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷದ ನಾಯಕರಂತೆ, ಕೆಸಿಆರ್‌ ಪುತ್ರಿ ಕೆ.ಕವಿತಾ ಅವರನ್ನು ದೆಹಲಿ ಮದ್ಯ ಹಗರಣದಲ್ಲಿ ಬಂಧನ ಮಾಡುವುದಿರಲಿ, ಕೇಂದ್ರೀಯ ಸಂಸ್ಥೆಗಳು ಪ್ರಶ್ನಿಸಿಲ್ಲ ಎಂದು ಕೈ ಟೀಕೆ ಮಾಡಿತ್ತು. 

ಕಳೆದ ದಶಕದಲ್ಲಿ ಕೆಸಿಆರ್‌ ರಾಷ್ಟ್ರೀಯ ಮಹತ್ವಾಕಾಂಕ್ಷೆಗಳನ್ನು ಹೊಂದಿದ್ದು,  2019 ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ, ಅವರು ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಹೊರಗಿಡುವ ಒಕ್ಕೂಟ ರೂಪಿಸಲು ಪ್ರಯತ್ನಿಸಿದ್ದರು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಒಡಿಶಾ ಸಿಎಂ ನವೀನ್ ಪಟ್ನಾಯಕ್ ಸೇರಿದಂತೆ ವಿವಿಧ ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡಿದ್ದರು.

ಇದನ್ನು ಓದಿ: ಮಧ್ಯ ಪ್ರದೇಶದಲ್ಲಿ ರಾಮಭಕ್ತನೇ ‘ರಾಜ’; ಕಮಲ ಕಿಲಕಿಲ: ಕಮಲ್‌ನಾಥ್‌ ವಿಲವಿಲ; ಲಡ್ಡು ಹಂಚಿದ ಕೈಗೆ ಮತ್ತೆ ಹಿನ್ನೆಡೆ!

ಅದು ವಿಫಲವಾಗಿದ್ದರೂ ಅವರು ಕೈಬಿಡಲಿಲ್ಲ. ಪ್ರತಿಪಕ್ಷಗಳು ಭಾರತ ಒಕ್ಕೂಟವನ್ನು ರಚಿಸುತ್ತಿದ್ದಂತೆ, ಕೆಸಿಆರ್‌ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರಿಗೆ ಹತ್ತಿರವಾಗಲು ಪ್ರಯತ್ನಿಸಿದರು. ನಂತರ, ಒಂದು ದೊಡ್ಡ ಹೆಜ್ಜೆಯಲ್ಲಿ, ತಮ್ಮ ಪಕ್ಷವನ್ನು ಮರುನಾಮಕರಣ ಮಾಡಿ, ತೆಲಂಗಾಣದಿಂದ ರಾಷ್ಟ್ರಕ್ಕೆ ಅಂದರೆ ಭಾರತಕ್ಕೆ ತೆರಳಿದರು. 

ಅನೇಕರು ಗಮನ ಬದಲಾವಣೆಯನ್ನು ಪ್ರಶ್ನಿಸಿದ್ದು, ಇದರಿಂದ ಜನ ತಿರುಗಿಬೀಳಬಹುದು ಎಂದು ಊಹಿಸಿದ್ದರು. ಚುನಾವಣೆಯು ಅವರನ್ನು ಸರಿ ಎಂದು ಸಾಬೀತುಪಡಿಸಿದೆ. ತೆಲಂಗಾಣದ 119 ಸ್ಥಾನಗಳಲ್ಲಿ ಕಾಂಗ್ರೆಸ್ 65ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದು, ಬಿಆರ್‌ಎಸ್‌ 40 ಕ್ಷೇತ್ರ ಗೆಲ್ಲಲು ಸಹ ಪರದಾಡುತ್ತಿದೆ.  

ಇದನ್ನು ಓದಿ: ರಾಜಸ್ಥಾನದಲ್ಲಿ ಬಿಜೆಪಿ ಭರ್ಜರಿ ಸೆಂಚುರಿ: ಗೆಹ್ಲೋಟ್‌ಗೆ ತೀವ್ರ ಮುಖಭಂಗ, ಕ್ರ್ಯಾಶ್‌ ಆಗುತ್ತಾ ಪೈಲಟ್‌?

Follow Us:
Download App:
  • android
  • ios