ಪೊಲೀಸರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಭಾರಿ ದಂಡ ವಿಧಿಸಿದ್ದಾರೆ. ಸಂಚಾರ ನಿಯಮ ಉಲ್ಲಂಘಿಸಿದ ಐದು ವಾಹನಗಳಿಗೆ ತಲಾ 33 ಸಾವಿರ ರೂಪಾಯಿ ದಂಡ ಹಾಕಲಾಗಿದೆ.
ನವದೆಹಲಿ (ನ.28): ಉತ್ತರ ಪ್ರದೇಶದ ನೋಯ್ಡಾದಲ್ಲಿ ಆಘಾತಕಾರಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರಲ್ಲಿ ಅನಾಮಿಕ ವ್ಯಕ್ತಿಗಳು ಹೈವೇನಲ್ಲಿ ವೇಗವಾಗಿ ತಮ್ಮ ಎಸ್‌ಯುವಿಯನ್ನು ಓಡಿಸಿಕೊಂಡು ಹೋಗುವಾಗ ಕಾರಿನ ರೂಫ್‌ನಿಂದ ಹಣವನ್ನು ರಸ್ತೆಗೆ ಎಸೆದಿದ್ದರು. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿತ್ತು. ವಿಡಿಯೋವನ್ನು ನೋಡಿದರೆ, ಕೆಲವು ವ್ಯಕ್ತಿಗಳು ಕಾರ್‌ನ ರೂಫ್‌ನಲ್ಲಿದ್ದು, ಇನ್ನೂ ಕೆಲವು ವ್ಯಕ್ತಿಗಳೂ, ವೇಗವಾಗಿ ಹೋಗುತ್ತಿರುವ ಕಾರ್‌ನ ವಿಂಡೋ ಮೇಲೆ ಕುಳಿತಿದ್ದರು. ಈ ಹಂತದಲ್ಲಿ ನೋಟುಗಳನ್ನು ಅವರು ರಸ್ತೆಗೆ ಎಸೆದಿರುವುದು ದಾಖಲಾಗಿದೆ. ಈ ವಿಡಿಯೋವನ್ನು ನೋಡಿದ ಬಳಿಕ, ಆರೋಪಿಗಳನ್ನು ಪತ್ತೆ ಹಚ್ಚಲು ಯಶಸ್ವಿಯಾಗಿರುವ ಪೊಲೀಸರು ಎಲ್ಲರಿಗ ಭಾರೀ ದಂಡ ವಿಧಿಸಿದ್ದಾರೆ. ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿರುವ ಕಾರಣ ಐದೂ ಕಾರ್‌ಗಳಿಗೆ ತಲಾ 33 ಸಾವಿರ ರೂಪಾಯಿ ದಂಡವನ್ನು ವಿಧಿಸಲಾಗಿದೆ.
ನೋಯ್ಡಾ ಟ್ರಾಫಿಕ್ ಪೊಲೀಸರು ವೀಡಿಯೊದಲ್ಲಿ ಕಂಡುಬರುವ ಐದು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ತಲಾ 33,000 ರೂಪಾಯಿಗಳ ಚಲನ್ ನೀಡಿದ್ದಾರೆ ಎಂದು ವರದಿಗಳಿವೆ. ನೋಯ್ಡಾದ ಹೈವೇಯಲ್ಲಿ ಅತಿವೇಗದಲ್ಲಿ ಚಲಿಸುತ್ತಿರುವ ಕಾರಿನ ರೂಫ್‌ನಿಂದ ಶ್ರೀಮಂತರು ಕರೆನ್ಸಿ ನೋಟುಗಳನ್ನು ಎಸೆದಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕಾರುಗಳು ಹೆದ್ದಾರಿಯಲ್ಲಿ ಅತಿವೇಗದಲ್ಲಿ ಚಲಿಸುತ್ತಿದ್ದವು ಮತ್ತು ಸೆಕ್ಟರ್ -37 ರಿಂದ ಸಿಟಿ ಸೆಂಟರ್ ಪ್ರದೇಶಕ್ಕೆ ಹೋಗುತ್ತಿದ್ದವು. ಎಸ್‌ಯುವಿಗಳಲ್ಲಿ ಪ್ರಯಾಣಿಸುತ್ತಿದ್ದ ಜನರು ಹೆದ್ದಾರಿಯಲ್ಲಿ ನೋಟುಗಳನ್ನು ಎಸೆಯುತ್ತಾ ಮದುವೆ ಮೆರವಣಿಗೆಗೆ ಹೋಗುತ್ತಿದ್ದರು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ನೋಯ್ಡಾ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಶಪಡಿಸಿಕೊಂಡ ವಾಹನಗಳಲ್ಲದೆ, ಇನ್ನೂ ಐದು ವಾಹನಗಳನ್ನು ಗುರುತಿಸಲಾಗಿದೆ ಮತ್ತು ಇತರ ಆರೋಪಿಗಳನ್ನು ಹಿಡಿಯಲು ಪೊಲೀಸರು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ.
ಮೋದಿ ಮತ್ತೆ ಪ್ರಧಾನಿಯಾಗಿದ್ದಕ್ಕೆ ಹಣ ಎಸೆದು ಸಂಭ್ರಮಾಚರಣೆ ಮಾಡಲಾಯ್ತಾ?
ನೋಟುಗಳು ನಿಜವೋ ನಕಲಿಯೋ ಇನ್ನೂ ಸ್ಪಷ್ಟವಾಗಿಲ್ಲ: ಹೆದ್ದಾರಿಯಲ್ಲಿ ಈ ವ್ಯಕ್ತಿಗಳು ನಿಜವಾದ ಅಥವಾ ನಕಲಿ ನೋಟುಗಳನ್ನು ಎಗರಿಸಿದ್ದಾರೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಎಸೆದ ನೋಟುಗಳು ನಿಜವೋ ಅಥವಾ ನಕಲಿಯೋ ಎಂದು ಗುರುತಿಸಲು ತನಿಖೆ ನಡೆಸಲಾಗಿದ್ದು, ನೋಟುಗಳು ನಿಜವೇ ಆಗಿದ್ದರೆ, ಕಾರುಗಳ ರೂಫ್‌ಗಳಿಂದ ಇವರು ಎಸೆದಿರುವ ಮೊತ್ತ ಎಷ್ಟು ಎನ್ನುವ ಬಗ್ಗೆಯೂ ತನಿಖೆ ನಡೆಯುತ್ತಿದೆ. ಪೊಲೀಸರು ಆ ಪ್ರದೇಶದಲ್ಲಿನ ಸಿಸಿಟಿವಿ ಕ್ಯಾಮೆರಾಗಳು ಮತ್ತು ಇತರ ಪ್ರದೇಶಗಳಲ್ಲಿ ಅಳವಡಿಸಲಾಗಿರುವ ಕ್ಯಾಮೆರಾಗಳನ್ನು ಸ್ಕ್ಯಾನ್ ಮಾಡಿ ಇತರ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಹಣ ಎಸೆದು ಸಂಭ್ರಮಿಸಿದ ಫ್ಯಾನ್ಸ; ಈ ಪ್ರೀತಿಗೆ ಅರ್ಹನಲ್ಲ ಎಂದ ಸೋನು ಸೂದ್
