ಹಣ ಎಸೆದು ಸಂಭ್ರಮಿಸಿದ ಫ್ಯಾನ್ಸ; ಈ ಪ್ರೀತಿಗೆ ಅರ್ಹನಲ್ಲ ಎಂದ ಸೋನು ಸೂದ್
ಇತ್ತೀಚಿಗಷ್ಟೆ ಸೋನು ಸೂದ್ ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ(Chiranjeevi) ನಟನೆಯ ಆಚಾರ್ಯ(Acharya) ಸಿನಿಮಾ ಮೂಲಕ ಸೋನು ಸೂದ್ ಅಭಿಮಾನಿಗಳ ಮುಂದೆ ಬಂದಿದ್ದರು. ತೆರೆಮೇಲೆ ಸೋನು ಸೂದ್ ನೋಡುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ನೋಟ್ ಎಸೆದು ಕುಣಿದುಕುಪ್ಪಳಿಸಿದ್ದಾರೆ.
ಬಹುಭಾಷಾ ನಟ, ರಿಯಲ್ ಹೀರೋ ಸೋನು ಸೂದ್(Sonu Sood) ತಮ್ಮ ಸಾಮಾಜಿಕ ಕೆಲಸಗಳನ್ನು ಈಗಲೂ ಮುಂದುವರೆಸಿದ್ದಾರೆ. ಕೊರೊನಾ ಭೀಕರ ಪರಿಸ್ಥಿತಿಯಿಂದ ಹೊರಬಂದ ಮೇಲು ಸೂನು ಸೂದ್ ತಮ್ಮ ಸಮಾಜಮುಖಿ ಕೆಲಸವನ್ನು ನಿಲ್ಲಿಸಿಲ್ಲ. ಕಷ್ಟ ಎಂದವರ ಪಾಲಿಗೆ ನೆರವಾಗುತ್ತಿರುವ ಸೋನು ಸೂದ್ ಸಾಕಷ್ಟು ಜನರ ಪಾಲಿಗೆ ದೇವರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಸೋನು ಸೂದ್ ಅಭಿಮಾನಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತಿರುತ್ತಾರೆ. ಜನರ ಕಷ್ಟಕಗಳಿಗೆ ಸ್ಪಂದಿಸುತ್ತಿರುತ್ತಾರೆ. ಸೋನು ಸೂದ್ ಅವರಿಗೆ ಈಗಲೂ ಅನೇಕ ಮಂದಿ ಸಹಾಯಕೇಳಿ ಫೋನ್ ಮಾಡುತ್ತಿರುತ್ತಾರೆ, ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು ಕಳುಹಿಸುತ್ತಿರುತ್ತಾರೆ.
ಈ ನಡುವೆ ಸೋನು ಸೂದ್ ಸಿನಿಮಾಗಳಲ್ಲಿಯೂ ತೊಡಗಿಕೊಂಡಿದ್ದಾರೆ. ಇತ್ತೀಚಿಗಷ್ಟೆ ಸೋನು ಸೂದ್ ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ(Chiranjeevi) ನಟನೆಯ ಆಚಾರ್ಯ(Acharya) ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ತೆರೆಮೇಲೆ ಸೋನು ಸೂದ್ ನೋಡುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ನೋಟ್ ಎಸೆದು ಕುಣಿದುಕುಪ್ಪಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರರ್ ಆಗಿದೆ. ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ಸೋನು ಸೂದ್ ಈ ಪ್ರೀತಿಗೆ ನಾನು ಅರ್ಹನಲ್ಲ ಎಂದು ಹೇಳಿದ್ದಾರೆ.
ಸೋನ್ ಸೂದ್ ಮೇಲಿನ ಪ್ರೀತಿಯನ್ನು ಅಭಿಮಾನಿಗಳು ನಾನಾರೀತಿ ವ್ಯಕ್ತಪಡಿಸುತ್ತಾರೆ. ಸೋನು ಸೂದ್ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಅದೆಷ್ಟೊ ಅಭಿಮಾನಿಗಳು ಮುಂಬೈನಲ್ಲಿರುವ ಸೋನು ಸೂದ್ ನಿವಾಸಕ್ಕೆ ಹೋಗಿ ಭೇಟಿಯಾಗಿ ಮಾತನಾಡುತ್ತಾರೆ. ಹೀಗಿರುವಾಗ ತೆರೆಮೇಲೆ ಬಂದ ಸೋನು ಸೂದ್ ನೋಡಿ ಫುಲ್ ಖುಷ್ ಆದ ಅಭಿಮಾನಿಗಳು ಹಣ ಚೆಲ್ಲಿದ್ದಾರೆ. ಸೋನು ಸೂದ್ ಆಚಾರ್ಯ ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಬಸವ ಎನ್ನುವ ಪಾತ್ರದಲ್ಲಿ ನಟಿಸಿದ್ದಾರೆ.
'ಬೇಸಿಗೆಗೆ ಚಿಲ್ಡ್ ಬಿಯರ್ ದಾನ ಮಾಡಿ' ಎಂದ ಅಭಿಮಾನಿಗೆ ಸೋನು ಸೂದ್ ಕೊಟ್ಟ Reply ಹೀಗಿತ್ತು..
ಈ ಸಿನಿಮಾ ಬಿಡುಗಡೆ ವೇಳೆ ಸೋನು ಸೂದ್ ಅವರ ಕಟೌಟ್ ಗೆ ಹೂವಿನ ಹಾರ ಹಾಕಿ ಹಾಲಿನ ಅಭಿಷೇಕ ಮಾಡಿದ್ದಾರೆ. ಹಣೆಗೆ ತಿಲಕವಿಟ್ಟು ಆರತಿ ಮಾಡಿ ಅಭಿಮಾನ ವ್ಯಕ್ತಪಡಿಸಿದ್ದಾರೆ. ಸಿನಿಮಾವನ್ನು ಅದ್ದೂರಿ ಸ್ವಾಗತ ಮಾಡಿರುವ ಅಭಿಮಾನಿಗಳು ಸೋನು ಸೂದ್ ಅವರನ್ನು ದೇವರಂತೆ ಕಂಡಿದ್ದಾರೆ. ಈ ವಿಡಿಯೋ ನೋಡಿ ಭಾವುಕರಾಗಿರುವ ಸೋನು ಸೂದ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
'ಧನ್ಯವಾದಗಳು ನನ್ನ ಪ್ರೀತಿಯ ಅಭಿಮಾನಿಗಳಿಗೆ. ನಾನು ಹೆಮ್ಮೆಯಿಂದ ನನ್ನ ಕುಟುಂಬ ಎಂದು ಕರೆಯುತ್ತೇನೆ. ನಾನು ಈ ಪ್ರೀತಿಗೆ ಅರ್ಹನಲ್ಲ. ಆದರೆ ಈ ಪ್ರೀತಿ ಮತ್ತಷ್ಟು ಉತ್ತಮ ಕೆಲಸಕ್ಕೆ ಸ್ಫೂರ್ತಿ ನೀಡುತ್ತೆ. ಲವ್ ಯು ಆಲ್' ಎಂದು ಹೇಳಿದ್ದಾರೆ.
ರಿಯಲ್ ಹೀರೋ ಆಗಿರುವ ಸೋನು ಸೂದ್ ಅವರನ್ನು ಅಭಿಮಾನಿಗಳು ವಿಲನ್ ಆಗಿ ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎನ್ನುವ ಅನುಮಾನ ಚಿತ್ರತಂಡಕ್ಕಿತ್ತು. ಹಾಗಾಗಿ ಚಿತ್ರದ ಅನೇಕ ದೃಶ್ಯಗಳನ್ನು ಬದಲಾಯಿಸಲಾಗಿತ್ತು. ಹೀರೋ ಕೈಯಲ್ಲಿ ಒದೆ ತಿನ್ನುವ ಸೋನು ಸೂದ್ ಅವರನ್ನು ನೋಡಿ ಅಭಿಮಾನಿಗಳು ಸುಮ್ಮನಿರಲ್ಲ ಎಂದು ನಟ ಚಿರಂಜೀವಿ ಸಹ ಹೇಳಿದ್ದರು.
Punjab Election ಸೋನು ಸೂದ್ ಮತಗಟ್ಟೆ ಪ್ರವೇಶ ನಿರಾಕರಿಸಿದ ಪಂಜಾಬ್ ಪೊಲೀಸ್, ಕಾರು ಸೀಝ್!
ಇನ್ನು ಈ ಬಗ್ಗೆ ನಟ ಸೋನು ಸೂದ್ ಸಹ ಮಾತನಾಡಿದ್ದರು. 'ನನ್ನನ್ನು ವಿಲನ್ ಪಾತ್ರದಲ್ಲಿ ಅಭಿಮಾನಿಗಳು ಸ್ವೀಕರಿಸುವುದು ಕಷ್ಟ ಎಂದು ಭಾವಿಸುತ್ತೇನೆ. ನಿರ್ದೇಶಕರು, ಬರಹಗಾರರು ನನ್ನನ್ನು ನೆಗೆಟಿವ್ ಪಾತ್ರಗಳಲ್ಲಿ ತೋರಿಸಲು ಸಾಧ್ಯವಿಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಕೋವಿಡ್ ಗೂ ಮೊದಲು ನಾನು ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದೆ. ಸದ್ಯ ಸ್ಕ್ರಿಪ್ಟ್ ನಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ' ಎಂದು ಹೇಳಿದ್ದರು. ಆದರೀಗ ಸೋನು ಪಾತ್ರಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯಾವುದೇ ಪಾತ್ರವಾಗಲಿ ಸೋನು ಅವರನ್ನು ಜನ ಅಪ್ಪಿಕೊಳ್ಳುತ್ತಾರೆ ಎನ್ನುವುದು ಸಾಭೀತಾಗಿದೆ.
ಆಚಾರ್ಯ ಸಿನಿಮಾದಲ್ಲಿ ಸೋನು ಸೂದ್, ಚಿರಂಜೀವಿ ಜೊತೆ ರಾಮ್ ಚರಣ್ ಕೂಡ ನಟಿಸಿದ್ದಾರೆ. ಕಾಜಲ್ ಅಗರ್ವಾಲ್ ನಾಯಕಿಯಾಗಿ ಮಿಂಚಿದ್ದರು. ಆದರೆ ಕಾಜಲ್ ಪಾತ್ರವನ್ನು ಕಿತ್ತೆಸೆಯಲಾಗಿದೆ. ರಾಮ್ ಚರಣ್ ಗೆ ನಾಯಕಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಸಿನಿಮಾಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ದಕ್ಷಿಣ ಭಾರತೀಯ ಭಾಷೆಗಳಲ್ಲಿ ಮಾತ್ರ ಸಿನಿಮಾ ತೆರೆಗೆ ಬಂದಿದೆ.