Asianet Suvarna News Asianet Suvarna News

ಮೋದಿ ಮತ್ತೆ ಪ್ರಧಾನಿಯಾಗಿದ್ದಕ್ಕೆ ಹಣ ಎಸೆದು ಸಂಭ್ರಮಾಚರಣೆ ಮಾಡಲಾಯ್ತಾ?

17 ನೇ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಜಯಭೇರಿ ಭಾರಿಸುತ್ತಿದ್ದಂತೇ ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಕೋಟ್ಯಧಿಪತಿಯೊಬ್ಬ ರಸ್ತೆಯಲ್ಲೇ ಹಣ ಎಸೆದು ಸಂಭ್ರಮಾಚರಿಸಿದರು ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಏನಿದರ ಸತ್ಯಾಸತ್ಯತೆ? 

Viral money shower video has no link to PM Modi election victory celebration
Author
Bengaluru, First Published May 27, 2019, 9:16 AM IST

17ನೇ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಜಯಭೇರಿ ಭಾರಿಸುತ್ತಿದ್ದಂತೇ ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಕೋಟ್ಯಧಿಪತಿಯೊಬ್ಬ ರಸ್ತೆಯಲ್ಲೇ ಹಣ ಎಸೆದು ಸಂಭ್ರಮಾಚರಿಸಿದರು ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ವ್ಯಕ್ತಿಯೊಬ್ಬ ಕಂತೆ ಕಂತೆ ಹಣವನ್ನು ನಡುರಸ್ತೆಯಲ್ಲಿಯೇ ಎಸೆಯುತ್ತಿರುವಂತೆ ಭಾಸವಾಗುವ ವಿಡಿಯೋವನ್ನು ಪೋಸ್ಟ್‌ ಮಾಡಿ, ‘ಮೋದಿ ವಿಕ್ಟರಿಯನ್ನು ಕಂಡು ನ್ಯೂಯಾರ್ಕ್ನ ಡೈಮಂಡ್‌ ಮಾರ್ಕೆಟ್‌ನಲ್ಲಿ ನಡೆದ ದೃಶ್ಯ ಇದು. ಕೋಟ್ಯಧಿಪತಿ ಏನು ಮಾಡುತ್ತಿದ್ದಾನೆ ನೀವೇ ನೋಡಿ!’ ಎಂದು ಒಕ್ಕಣೆ ಬರೆಯಲಾಗಿದೆ. ಈ ವಿಡಿಯೋವನ್ನು ಟ್ವೀಟರ್‌ ಮತ್ತು ಫೇಸ್‌ಬುಕ್‌ನಲ್ಲಿ ಹಲವರು ಶೇರ್‌ ಮಾಡಿದ್ದಾರೆ.

ಆದರೆ ನಿಜಕ್ಕೂ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿದ್ದಕ್ಕೆ ನ್ಯೂಯಾರ್ಕ್ನಲ್ಲಿ ಹಣ ಎಸೆದು ಸಂಭ್ರಮಾಚರಿಸಲಾಗಿತ್ತೇ ಎಂದು ಪರಿಶೀಲಿಸಿದಾಗ ಈ ಸುದ್ದಿ ಸುಳ್ಳು ಎಂದು ತಿಳಿದುಬಂದಿದೆ. ಯುಟ್ಯೂಬ್‌ನಲ್ಲಿ ಈ ಕುರಿತು ಹುಡುಕಿದಾಗ 2019 ಮೇ 15ರಂದು ಅಪ್‌ಲೋಡ್‌ ಮಾಡಿರುವ ವಿಡಿಯೋ ಲಭ್ಯವಾಗಿದೆ.

 

ಅದರೊಂದಿಗೆ ‘ನ್ಯೂಯಾರ್ಕ್ನ ಡೈಮಂಡ್‌ ಜಿಲ್ಲೆಯಲ್ಲಿ ಗಾಡ್‌ ಜ್ಯೋ ಕುಶ್‌ ಎಂಬುವವರು 5 ಬಿಲಿಯನ ಡಾಲರ್‌ ಹಣವನ್ನು ಎಸೆದರು’ ಎಂದು ಬರೆಲಾಗಿದೆ. ಆಲ್ಟ್‌ ನ್ಯೂಸ್‌ ಕುಶ್‌ ಅವರ ಇಸ್ಟಾಗ್ರಾಂ ಖಾತೆಯನ್ನೂ ಪತ್ತೆಹಚ್ಚಿದಾಗ ಅದರಲ್ಲೂ ಇದೇ ವಿಡಿಯೋ ಇದೆ. ಅದರಲ್ಲಿ ಕುಶ್‌, ತಾವು ಇಂಜಿನಿಯರ್‌ ಮತ್ತು ಮ್ಯೂಸಿಕ್‌ ಪ್ರೊಡ್ಯೂಸರ್‌ ಎಂದು ಬರೆದುಕೊಂಡಿದ್ದಾರೆ. ಸದ್ಯ ಭಾರತಕ್ಕೆ ಸಂಬಂಧವೇ ಇಲ್ಲದ ಈ ವಿಡಿಯೋ ಪೋಸ್ಟ್‌ ಮಾಡಿ, ಮೋದಿ ಮತ್ತೆ ಪ್ರಧಾನಿಯಾಗಿದ್ದಕ್ಕೆ ನ್ಯೂಯಾರ್ಕ್ನಲ್ಲಿ ಹಣ ಎಸೆದು ಸಂಭ್ರಮಾಚರಣೆ ಎಂದು ಸುಳ್ಳು ಸುದ್ದಿ ಹರಡಲಾಗುತ್ತಿದೆ.

- ವೈರಲ್ ಚೆಕ್ 

Follow Us:
Download App:
  • android
  • ios