Asianet Suvarna News Asianet Suvarna News

ಬಳಕೆದಾರರ ಡೇಟಾ ಕದ್ದ ಆರೋಪ; ಚೀನಾ ಸೇರಿ ವಿವಿಧ ದೇಶದ 348 ಅಪ್ಲಿಕೇಶನ್ಸ್‌ ಬ್ಯಾನ್‌!

ಎಲೆಕ್ಟ್ರಾನಿಕ್ಸ್‌ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಲೋಕಸಭೆಗೆ ಲಿಖಿತ ಉತ್ತರದಲ್ಲಿ, ಕೇಂದ್ರ ಸರ್ಕಾರವು ಬಳಕೆದಾರರ ಡೇಟಾ ಕದ್ದ ಅರೋಪದಲ್ಲಿ ಚೀನಾ ಸೇರಿದಂತೆ ವಿವಿಧ ದೇಶಗಳ 348 ಅಪ್ಲಿಕೇಶನ್‌ಗಳನ್ನು ಬ್ಯಾನ್‌ ಮಾಡಿದೆ ಎಂದು ಮಾಹಿತಿ ನೀಡಿದ್ದಾರೆ.

Minister of state for electronics and IT Rajeev Chandrasekhar reply in Lok Sabha Centre Blocks 348 Apps san
Author
Bengaluru, First Published Aug 3, 2022, 10:00 PM IST

ನವದೆಹಲಿ (ಆ. 3): ದೇಶದ ಹೊರಗಿನ ಸರ್ವರ್‌ಗಳಿಗೆ ಅನಧಿಕೃತ ರೀತಿಯಲ್ಲಿ ಬಳಕೆದಾರರ ಮಾಹಿತಿಯನ್ನು ರವಾನಿಸಿದ್ದಕ್ಕಾಗಿ ಗೃಹ ಸಚಿವಾಲಯ ಗುರುತಿಸಿದ್ದ 348 ಮೊಬೈಲ್ ಅಪ್ಲಿಕೇಶನ್‌ಗಳನ್ನು ಸರಕಾರ ನಿರ್ಬಂಧಿಸಿದೆ ಎಂದು ಲೋಕಸಭೆಯಲ್ಲಿ ವಿದ್ಯುನ್ಮಾನ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ. ಲೋಕಸಭೆಗೆ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದು ಈ ಅಪ್ಲಿಕೇಶನ್‌ಗಳು ಚೀನಾ ಸೇರಿದಂತೆ ವಿವಿಧ ದೇಶಗಳು ಅಭಿವೃದ್ಧಿಪಡಿಸಿವೆ ಎಂದಿದ್ದಾರೆ. ಕೇಂದ್ರ ಗೃಹ ಸಚಿವಾಲಯದ ವಿನಂತಿಯ ಆಧಾರದ ಮೇಲೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ 348 ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಿದೆ. ಇವುಗಳುಅಂತಹ ಡೇಟಾ ಪ್ರಸರಣಗಳು ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ, ಭಾರತದ ರಕ್ಷಣೆ ಮತ್ತು ರಾಜ್ಯದ ಭದ್ರತೆಯನ್ನು ಉಲ್ಲಂಘಿಸುತ್ತದೆ" ಎಂದು ಅವರು ಹೇಳಿದರು. ಆದರೆ, ಯಾವ ಸಮಯದಲ್ಲಿ ಈ 348 ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಲಾಗಿದೆ ಎನ್ನುವ ಮಾಹಿತಿಯನ್ನು ಸಚಿವಾಲಯ ನೀಡಿಲ್ಲ. ಈ ಹಿಂದೆ ಭಾರತೀಯರ ಡೇಟಾವನ್ನು ವಿದೇಶಕ್ಕೆ ವರ್ಗಾಯಿಸಲಾಗುತ್ತಿದೆ ಮತ್ತು ಕಳವು ಮಾಡಲಾಗುತ್ತಿದೆ ಎಂಬ ಕಳವಳದ ಮೇಲೆ ಸರ್ಕಾರವು ಜನಪ್ರಿಯ ಗೇಮ್‌ ಅಪ್ಲಿಕೇ‍ಶನ್‌ ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ (ಬಿಜಿಎಂಐ) ಅನ್ನು ನಿಷೇಧಿಸಿದ ಕೆಲವು ದಿನಗಳ ನಂತರ ಈ ಸುದ್ದಿ ಬಂದಿದೆ. ಐಟಿ ಕಾಯ್ದೆಯ ಸೆಕ್ಷನ್ 69 ಎ ಅಡಿಯಲ್ಲಿ ಅಪ್ಲಿಕೇಶನ್ ಅನ್ನು ನಿರ್ಬಂಧಿಸಲಾಗಿದೆ.

2020 ರಲ್ಲಿ ಜನಪ್ರಿಯ ಕಿರು-ವೀಡಿಯೊ ಪ್ಲಾಟ್‌ಫಾರ್ಮ್ ಟಿಕ್‌ಟಾಕ್ ಸೇರಿದಂತೆ ಸುಮಾರು 200 ಇತರ ಚೀನೀ ಅಪ್ಲಿಕೇಶನ್‌ಗಳ ಜೊತೆಗೆ ಚೀನಾದ ಇಂಟರ್ನೆಟ್ ಸಂಸ್ಥೆ ಟೆನ್ಸೆಂಟ್ ಪ್ರಕಟಿಸಿದ ಪಬ್‌ಜಿ ಮೊಬೈಲ್ ಗೇಮ್‌ ಅನ್ನು ಸರ್ಕಾರವು ನಿಷೇಧಿಸಿತ್ತು. ಆ ನಂತರ ದಕ್ಷಿಣ ಕೊರಿಯಾದ ಗೇಮಿಂಗ್ ಕಂಪನಿ ಕ್ರಾಫ್ಟನ್ ಇಂಕ್ ಭಾರತೀಯ ಮಾರುಕಟ್ಟೆಗಾಗಿ ಬ್ಯಾಟಲ್‌ ಗ್ರೌಂಡ್ಸ್‌ ಮೊಬೈಲ್‌ ಇಂಡಿಯಾ (BGMI) ಅನ್ನು ವಿಶೇಷವಾಗಿ ರಚಿಸಿತ್ತು. ದಕ್ಷಿಣ ಕೊರಿಯಾದ ಸಂಸ್ಥೆಯ ನಿಯಂತ್ರಕ ಫೈಲಿಂಗ್ ಪ್ರಕಾರ, ಮಾರ್ಚ್ ಅಂತ್ಯದ ವೇಳೆಗೆ ಕ್ರಾಫ್ಟನ್‌ನಲ್ಲಿ 13.5% ಪಾಲನ್ನು ಚೀನಾದ ಇಂಟರ್ನೆಟ್‌ ಸಂಸ್ಥೆ ಟೆನ್ಸೆಂಟ್‌ ಹೊಂದಿತ್ತು.

China Apps Fraud: ಚೀನಾ ಆ್ಯಪ್‌ ಕಂಪನಿಗಳ ವ್ಯಾಲೆಟ್‌ನಲ್ಲಿದ್ದ 6 ಕೋಟಿ ಜಪ್ತಿ

ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿಗಳ ವಿರುದ್ಧ ಹೋರಾಡಲು ತೆಗೆದುಕೊಂಡ ಕ್ರಮಗಳ ಕುರಿತು ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಚಂದ್ರಶೇಖರ್, ಪ್ರೆಸ್‌ ಇನ್ಫಾರ್ಮೇಷನ್‌ ಬ್ಯೂರೋ ಅಡಿಯಲ್ಲಿ ಫ್ಯಾಕ್ಟ್‌ ಚೆಕ್‌ ಘಟಕವನ್ನು ಸ್ಥಾಪಿಸಲಾಗಿದೆ. "ಘಟಕವು ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳು ಮತ್ತು ಅದರ ಸ್ವಂತ ವೆಬ್‌ಸೈಟ್‌ನಲ್ಲಿ ಸೂಕ್ತವಾಗಿ ಅವುಗಳನ್ನು ಲೇಬಲ್‌ ಮಾಡುವ ಮೂಲಕ ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ಸಂಬಂಧಿತ ಪ್ರಶ್ನೆಗಳಿಗೆ / ಸುಳ್ಳು ಸುದ್ದಿಗಳಿಗೆ ಪ್ರತಿಕ್ರಿಯಿಸುತ್ತದೆ" ಎಂದು ಅವರು ಹೇಳಿದರು.

Tata Neu ಅಮೇಜಾನ್, ಜಿಯೋ, ಪೇಟಿಎಂಗೆ ಸೆಡ್ಡು, ಏ.7ಕ್ಕೆ ಟಾಟಾ Neu ಆ್ಯಪ್ ಬಿಡುಗಡೆ!

ಸೂಕ್ತ ತನಿಖೆಗೆ ಎಸ್‌ಜೆಎಂ ಆಗ್ರಹ: ಸ್ವದೇಶಿ ಜಾಗರಣ ಮಂಚ್ (SJM) ಮತ್ತು ಲಾಭರಹಿತ ಸಂಸ್ಥೆಯಾಗಿರುವ ಪ್ರಹಾರ್‌, ಬಿಜಿಎಂಇಯ "ಚೀನಾ ಪ್ರಭಾವ" ದ ಬಗ್ಗೆ ತನಿಖೆ ನಡೆಸುವಂತೆ ಸರ್ಕಾರವನ್ನು ಪದೇ ಪದೇ ಕೇಳಿಕೊಂಡಿದೆ ಎಂದು ಪ್ರಹಾರ್ ಅಧ್ಯಕ್ಷ ಅಭಯ್ ಮಿಶ್ರಾ ಹೇಳಿದ್ದಾರೆ. ಎಸ್‌ಜೆಎಂ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಡಳಿತ ಪಕ್ಷಕ್ಕೆ ಹತ್ತಿರವಿರುವ ಪ್ರಭಾವಿ ಹಿಂದೂ ರಾಷ್ಟ್ರೀಯವಾದಿ ಗುಂಪಾಗಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಆರ್ಥಿಕ ವಿಭಾಗವಾಗಿದೆ. "ಹೊಸ ಅವತಾರ ಎಂದು ಕರೆಯಲ್ಪಡು ಬಿಜಿಎಂಐ ಹಿಂದಿನ ಪಬ್‌ಜಿ ಗಿಂತ ಭಿನ್ನವಾಗಿರಲಿಲ್ಲ, ಜೊತೆಗೆ ಟೆನ್ಸೆಂಟ್ ಇನ್ನೂ ಹಿನ್ನೆಲೆಯಲ್ಲಿ ಅದನ್ನು ನಿಯಂತ್ರಿಸುತ್ತಿದೆ" ಎಂದು ಮಿಶ್ರಾ ಹೇಳಿದ್ದರು. ನಿಷೇಧವು ಟ್ವಿಟರ್‌ ಮತ್ತು ಯೂ ಟ್ಯೂಬ್‌ನಲ್ಲಿ ಭಾರತದ ಜನಪ್ರಿಯ ಗೇಮರ್‌ಗಳಿಂದ ದೊಡ್ಡ ಮಟ್ಟದ ಆನ್‌ಲೈನ್ ವಿರೋಧಕ್ಕೆ ಸಾಕ್ಷಿಯಾಗಿತ್ತು. "ಸಾವಿರಾರು ಇಸ್ಪೋರ್ಟ್ಸ್ ಕ್ರೀಡಾಪಟುಗಳು ಮತ್ತು ಕಂಟೆಂಟ್ ಕ್ರಿಯೇಟರ್‌ಗಳ ಜೀವನವು ಬಿಜಿಎಂಐ ಮೇಲೆ ಅವಲಂಬಿತವಾಗಿದೆ ಎಂಬುದನ್ನು ನಮ್ಮ ಸರ್ಕಾರ ಅರ್ಥಮಾಡಿಕೊಂಡಿದೆ ಎಂದು ನಾನು ಭಾವಿಸುತ್ತೇನೆ" ಎಂದು 92,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಟ್ವಿಟರ್ ಬಳಕೆದಾರ ಅಭಿಜೀತ್ ಅಂಧಾರೆ ಟ್ವೀಟ್ ಮಾಡಿದ್ದಾರೆ.
 

Follow Us:
Download App:
  • android
  • ios