Tata Neu ಅಮೇಜಾನ್, ಜಿಯೋ, ಪೇಟಿಎಂಗೆ ಸೆಡ್ಡು, ಏ.7ಕ್ಕೆ ಟಾಟಾ Neu ಆ್ಯಪ್ ಬಿಡುಗಡೆ!
- ಗ್ರೋಸರಿಯಿಂದ ಗ್ಯಾಜೆಟ್, ಎಲ್ಲವೂ ಒಂದೇ ಆ್ಯಪ್‌ನಲ್ಲಿ ಲಭ್ಯ
- ಭಾರತದ ಮಾರುಕಟ್ಟೆಗೆ ಟಾಟಾ ನ್ಯೂ ಇ ಕಾಮರ್ಸ್ ಲಗ್ಗೆ
- ಏಪ್ರಿಲ್ 7ಕ್ಕೆ ಹೊಚ್ಚ ಹೊಸ ಟಾಟಾ ನ್ಯೂ ಬಿಡುಗಡೆ
ನವದೆಹಲಿ(ಏ.03): ಭಾರತದ ಇ ಕಾಮರ್ಸ್ ಅತೀ ದೊಡ್ಡ ಉದ್ಯಮವಾಗಿದೆ. ವಿದೇಶಿ ಕಂಪನಿಗಳೇ ಇದರಲ್ಲಿ ಅಧಿಪತ್ಯ ಸಾಧಿಸಿದೆ. ಅಮೇಜಾನ್, ಫ್ಲಿಪ್‌ಕಾರ್ಟ್, ಜಿಯೋ ಸೇರಿದಂತೆ ಇ ಕಾಮರ್ಸ್ ಪಟ್ಟಿಯಲ್ಲಿ ದಿಗ್ಗಜರೇ ಮುಂಚೂಣಿಯಲ್ಲಿದ್ದಾರೆ. ಇದೀಗ ಟಾಟಾ ಸಮೂಹ ಏಪ್ರಿಲ್ 7 ರಂದು ಹೊಚ್ಚ ಹೊಸ ಟಾಟಾ ನ್ಯೂ ಆ್ಯಪ್ ಬಿಡುಗಡೆ ಮಾಡುತ್ತಿದೆ. ಟಾಟಾ ಸಮೂಹದ ಘೋಷಣೆ ಇದೀಗ ಇತರ ಇ ಕಾಮರ್ಸ್ ದಿಗ್ಗಜರಿಗೆ ನಡುಕ ಹುಟ್ಟಿಸಿದೆ.
ಸದ್ಯ ಹಲವು ಪ್ರಾಯೋಗಿಕ ಹಂತ ಮುಗಿಸಿರುವ ಟಾಟಾ ನ್ಯೂ ಆ್ಯಪ್, ಏಪ್ರಿಲ್ 7 ರಂದು ಬಿಡುಗಡೆಯಾಗಲಿದೆ. ಗೂಗಲ್ ಪ್ಲೇ ಸ್ಟೋರ್‌ಗಳಲ್ಲಿ ಲಭ್ಯವಾಗಲಿದೆ. ಇಷ್ಟೇ ಅಲ್ಲ ಹಲವು ಕೊಡುಗೆ, ಆಫರ್, ಸವಲತ್ತುಗಳನ್ನು ಟಾಟಾ ನೀಡುತ್ತಿದೆ. ಗ್ರಾಹಕರ ತಡೆ ರಹಿತ ಶಾಪಿಂಗ್ ಅನುಭವ ಸಿಗಲಿದೆ ಎಂದು ಟಾಟಾ ಸಮೂಹ ಹೇಳಿದೆ. ಬಿಗ್‌ಬಾಸ್ಕೆಟ್, 1mg ಗಳಲ್ಲಿನ ಲಾಯಲ್ಟಿ ಕೊಡುಗೆ ಬಜಲು ಅವುಗಳನ್ನು ಟಾಟಾ NeuCoins ಜೊತೆ ವೀಲಿನಗೊಳಿಸಲು ಟಾಟಾ ಸಮೂಹ ಚಿಂತಿಸಿದೆ.
ರತನ್ ಟಾಟಾಗೆ ಭಾರತ ರತ್ನ ಕೊಡಿ ಎಂದಿದ್ದ ಅರ್ಜಿ ತಿರಸ್ಕರಿಸಿದ ಕೋರ್ಟ್: ಕೊಟ್ಟ ಕಾರಣ ಹೀಗಿದೆ!
ಟಾಟಾ ಸೂಪರ್ ಆ್ಯಪ್ ನ್ಯೂ
ಭಾರತದಲ್ಲಿ ಈಗಾಗಲೇ ಹಲವು ಕಂಪನಿಗಳ ಸೂಪರ್ ಆ್ಯಪ್ ಲಭ್ಯವಿದೆ. ಅಮೇಜಾನ್, ಪೇಟಿಎಂ, ಜಿಯೋ ಸೇರಿದಂತೆ ಹಲವಾರು ಕಂಪನಿಗಳು ಸೂಪರ್ ಆ್ಯಪ್ಲಿಕೇಶನ್ ಸೇವೆ ನೀಡುತ್ತಿದೆ. ಹಣ ಪಾವತಿ, ಸ್ಟ್ರೀಮಿಂಗ್, ಶಾಪಿಂಗ್, ಟಿಕೆಟ್ ಬುಕಿಂಗ್, ದಿನಸಿ ಸೇರಿದಂತೆ ಹಲವು ಸೇವೆಗಳನು ಈ ಸೂಪರ್ ಆ್ಯಪ್‌ನಲ್ಲಿ ಲಭ್ಯವಿದೆ. ಇದೇ ರೀತಿಯ ಸೂಪರ್ ಆ್ಯಪ್ ಟಾಟಾ ಬಿಡುಗಡೆ ಮಾಡುತ್ತಿದೆ.
ಇ ಮೊಬಿಲಿಟಿ, ಸೋಶಿಯಲ್ ಮೇಸೆಂಜಿಂಗ್, ಡಿಜಿಟಲ್ ಪೇಮೆಂಟ್, ಆಹಾರ, ತಂತ್ರಜ್ಞಾನ, ಆನ್‌ಲೈನ್ ಶಾಪಿಂಗ್, ಯುಟಿಲಿಟಿ ಬಿಲ್ ಸೇರಿದಂತೆ ಹಲವು ಸೇವೆಗಳನ್ನು ಸೂಪರ್ ಆ್ಯಪ್ ನೀಡಲಿದೆ. ಜಾಗತಿಕ ಮಟ್ಟದಲ್ಲೂ ಸೂಪರ್ ಆ್ಯಪ್ ಅತ್ಯಂತ ಯಶಸ್ವಿ ಉದ್ಯಮವಾಗಿದೆ. ಇಂತಹ ಮತ್ತೊಂದು ಮಜಲಿಗೆ ಟಾಟಾ ಸಮೂಹ ತೆರೆದುಕೊಳ್ಳುತ್ತಿದೆ.
Air India ಪ್ರಯಾಣಿಕರೊಂದಿಗೆ ರತನ್ ಟಾಟಾ ಮಾತು, 18 ಸೆಕೆಂಡ್ ಆಡಿಯೋದಲ್ಲಿ ಹೇಳಿದ್ದಿಷ್ಟು
ದಿನಸಿ ಸಾಮಾನು, ಮೊಬೈಲ್ ಸೇರಿದಂತೆ ಗ್ಯಾಜೆಟ್ ಸೇರಿದಂತೆ ಎಲ್ಲವೂ ಟಾಟಾ ನ್ಯೂನಲ್ಲಿ ಲಭ್ಯವಿದೆ. ಇನ್ನು ತ್ವರಿತ ಖರೀದಿ, ತಡೆರಹಿತ ಅನುಭವ ಸಿಗಲಿದೆ. ಇಷ್ಟೇ ಅಲ್ಲ ಖರೀದಿಗೆ ಟಾಟಾ ಪೇ ಮೂಲಕ ಪಾವತಿ ಮಾಡಬಹುದು. ಇದರಿಂದ ಹಲವು ಕ್ಯಾಶ್‌ಬ್ಯಾಕ್ ಸೇರಿದಂತೆ ಆಫರ್ ಪಡೆಯಲಿದ್ದಾರೆ. ಇದನ್ನು ವಿಮಾನ ಟಿಕೆಟ್, ಹೊಟೆಲ್ ಬುಕಿಂಗ್ ಮಾಡುವಾಗ ಬಳಸಿಕೊಳ್ಳಲು ಸಾಧ್ಯವಿದೆ.
ಪಾವತಿ ಸರಳ ಹಾಗೂ ಸುರಕ್ಷಿತವಾಗಿದೆ. NeuCoins, ಕಾರ್ಡ್ ಪೇಮೇಂಟ್, UPI, EMI ಸೇರಿದಂತೆ ಎಲ್ಲಾ ಆಯ್ಕೆಗಳು ಲಭ್ಯವಿದೆ.
ಟಾಟಾ ಯಾವುದೇ ಉತ್ಪನ್ನಗಳು ಅಷ್ಟೇ ಗುಣಮಟ್ಟ ಹೊಂದಿರುತ್ತದೆ. ಇಷ್ಟೇ ಅಲ್ಲ ದೇಶದ ಅಭಿವೃದ್ಧಿಯಲ್ಲಿ, ದೇಶಕ್ಕೆ ಸಂಕಷ್ಟ ಬಂದಾಗ ಟಾಟಾ ಸದಾ ಮುಂದೆ ನಿಂತು ನೆರವು ನೀಡಿದೆ. ಹೀಗಾಗಿ ಟಾಟಾ ದೇಶದ ಹೆಮ್ಮೆಯ ಕಂಪನಿಯಾಗಿದೆ. ಇದೀಗ ಟಾಟಾ ನ್ಯೂ ಸೇವೆ ಭಾರತದಲ್ಲಿ ಅತ್ಯಂತ ಯಶಸ್ವಿಯಾಗುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿದೆ.
ಟಾಟಾ ಸಮೂಹದಿಂದ 1500 ಕೋಟಿ ನೆರವು!
ಸಾಂಕ್ರಮಿಕ ಕೊರೋನಾ ತಡೆ ಹಾಗೂ ಪರಿಹಾರ ಚಟುವಟಿಕೆಗಳಿಗಾಗಿ ಟಾಟಾ ಸಮೂಹ ಸಂಸ್ಥೆ ಬರೋಬ್ಬರಿ 1500 ಕೋಟಿ ರೂಪಾಯಿ ನೀಡಿ ಭಾರತಕ್ಕೆ ನೆರವಾಗಿತ್ತು ಇದರನ್ವಯ ಟಾಟಾ ಟ್ರಸ್ಟ್ 500 ಕೋಟಿ ರು. ಹಾಗೂ ಟಾಟಾ ಗ್ರೂಪ್‌ನ ಒಡೆತನ ಹೊಂದಿದ ಟಾಟಾ ಸನ್ಸ್ 1000 ಕೋಟಿ ರೂಪಾಯಿ ನೀಡಿತ್ತು.