ಇಂದು ಒಂದೇ ದಿನ 27 ಮದುವೆ ಸಮಾರಂಭ ನಡೆಯಲಿದೆ. ಅತಿಥಿಗಳು, ಆಪ್ತರು ಮದುವೆಯಲ್ಲಿ ಪಾಲ್ಗೊಳ್ಳುವ ಕಾರಣ ಎಂಜಿ ರೋಡ್, ಮಂದಿ ರಸ್ತೆ ಸೇರಿದಂತೆ ಹಲವು ರಸ್ತೆ ಸಂಚಾರ ಬದಲಿಸಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಪೊಲೀಸರ ಅಲರ್ಟ್ ಎನು?
ನವದೆಹಲಿ (ನ.21) ಮದುವೆ ಸೀಸನ್ ಆರಂಭಗೊಂಡಿದೆ. ದೇಶಾದ್ಯಂತ ಮದುವೆ ಮಂಟಪಗಳು ಬುಕ್ ಆಗಿದೆ. ಸಮಾರಂಭಗಳು ನಡೆಯುತ್ತಿದೆ. ವಿಶೇಷ ಅಂದರೆ ಇಂದು ಒಂದೇ ದಿನ ಒಂದೇ ಭಾಗದಲ್ಲಿ 27 ಮಂದಿಗಳು ನಡೆಯುತ್ತಿದೆ. ಈ ಮದುವೆಗೆ ಆಪ್ತರು, ಅತಿಥಿಗಳು, ಕುಟುಂಬಸ್ಥರು ಪಾಲ್ಗೊಲ್ಳುವ ಕಾರಣ ನಗರದಲ್ಲಿ ಟ್ರಾಫಿಕ್ ಜಾಮ್ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ರಾಷ್ಟ್ರ ರಾಜಧಾನಿ ದಿಲ್ಲಿ ಪೊಲೀಸರು ಮಂದಿ ರಸ್ತೆ, ಎಂಜಿ ರೋಡ್, ಬಂಧ್ ರೋಡ್ ಸೇರಿದಂತೆ ಕೆಲ ಪ್ರಮುಖ ರಸ್ತೆಗಳ ಸಂಚರ ಮಾರ್ಗ ಬದಲಿಸಲು ಸೂಚಿಸಿದೆ.
ನವೆಂಬರ 21ರಂದು ದಕ್ಷಿಣ ದೆಹಲಿಯಲ್ಲಿ 27 ಮದುವೆ ಆಯೋಜನೆಗೊಂಡಿದೆ. ಈ ಮದುವೆಗಳಿಗೆ ಕನಿಷ್ಠ 12000 ಮಂದಿ ಪಾಲ್ಗೊಳ್ಳಲಿದ್ದಾರೆ. ಇದರಿಂದ ಹೆಚ್ಚುವರಿಯಾಗಿ 5000 ವಾಹನಗಳು ಮದುವೆ ಮಂಟಪ, ಈ ಭಾಗದ ರಸ್ತೆಗಳಲ್ಲಿ ಓಡಾಡಲಿದೆ. ಇದರಿಂದ ಟ್ರಾಫಿಕ್ ಜಾಮ್ ಹೆಚ್ಚಾಗಲಿದೆ. ಎಸ್ಎಸ್ಎನ್ ಮಾರ್ಗ್, ಬಂಧ್ ರಸ್ತೆ, ಎಂಜಿ ರಸ್ತೆ, ಮಂದಿ ರಸ್ತೆ ಸೇರಿದಂತೆ 8ಕ್ಕೂ ಹೆಚ್ಚು ರಸ್ತೆಗಳಲ್ಲಿ ಸಂಚಾರ ಮಾರ್ಗ ಬದಲಿಸಲು ದಿಲ್ಲಿ ಪೊಲೀಸರು ಸೂಚಿಸಿದ್ದಾರೆ.
ಮದುವೆಯಿಂದ ಹೆಚ್ಚುವರಿ ಟ್ರಾಫಿಕ್ ಪೊಲೀಸ್ ನಿಯೋಜನೆ
ಮದುವೆ ಕಾರಣದಿಂದ ನಗರದ ಒಂದು ಇಡೀ ಭಾಗ ಟ್ರಾಫಿಕ್ ಜಾಮ್ಗೆ ತುತ್ತಾಗುವ ಪರಿಸ್ಥಿತಿ ಇದೇ ಮೊದಲು ಎಂದು ಹೇಳಲಾಗುತ್ತಿದೆ. ನಗರಗಳಲ್ಲಿ ಮದುವೆ ಸಮಾರಂಭದ ವೇಳೆ ಮಂಟಪ, ಪಾರ್ಕಿಂಗ್ ಸುತ್ತ ಮತ್ತ ಟ್ರಾಫಿಕ್ ಜಾಮ್ ಸಾಮಾನ್ಯವಾಗಿತ್ತು. ಆದರೆ ಈ ಬಾರಿ ದಕ್ಷಿಣ ದೆಹಲಿಯ 8ಕ್ಕೂ ಹೆಚ್ಚು ರಸ್ತೆಗಳಲ್ಲಿ ಸಂಚಾರ ಮಾರ್ಗ ಬದಲಿಸಲು ಪೊಲೀಸರು ಮನವಿ ಮಾಡಿದ್ದಾರೆ. ಇತ್ತ ಟ್ರಾಫಿಕ್ ನಿಯಂತ್ರಣಕ್ಕೆ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ.
ಪಾರ್ಕಿಂಗ್ ನಿಯಮ ಕಠಿಣ
ಮದುವೆ ಕಾರಣದಿಂದ ಹೆಚ್ಚುವರಿ ವಾಹನಗಳು ಈ ಭಾಗದಲ್ಲಿ ಕಾಣಿಸಿಕೊಳ್ಳಲಿದೆ. ಜೊತೆಗೆ ಎಲ್ಲೆಂದರಲ್ಲಿ ಪಾರ್ಕ್ ಮಾಡುವುದು ಮದುವೆ ಸಮಾರಂಭಗಳಲ್ಲಿ ಸಾಮಾನ್ಯ. ಆದರೆ 27 ಮದುವೆಗಳು ಇರುವ ಕಾರಣ ಎಲ್ಲೆಂದರಲ್ಲಿ ಪಾರ್ಕ್ ಮಾಡಿದರೆ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.
ಈ ಬಾರಿ ಅತೀ ಹೆಚ್ಚು ಮದುವೆ ಆಯೋಜನೆಗೊಂಡಿದೆ. ಹೀಗಾಗಿ ವ್ಯಾಪಾರಸ್ಥರು ಬರೋಬ್ಬರಿ 6 ಲಕ್ಷ ಕೋಟಿ ರೂಪಾಯಿ ವ್ಯಾಪಾರ ವಹಿವಾಟು ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಮದುವೆ ಶಾಪಿಂಗ್ ಭರ್ಜರಿಯಾಗಿ ನಡೆಯುತ್ತಿದೆ. 2026-27ರ ಮದುವೆ ಸೀಸನ್ ವ್ಯಾಪಾರಸ್ಥರಲ್ಲಿ ಕೊಂಚ ಆಶಾಭಾವನೆ ಮೂಡಿಸಿದೆ.
















