ಮುಂಬೈ ಸ್ತಬ್ಧಗೊಳಿಸಿದ್ದ ವಿದ್ಯುತ್‌ ಕಡಿತಕ್ಕೆ ಸೈಬರ್‌ ದಾಳಿ ಕಾರಣ?

ಮುಂಬೈ ಸ್ತಬ್ಧಗೊಳಿಸಿದ್ದ ವಿದ್ಯುತ್‌ ಕಡಿತಕ್ಕೆ ಸೈಬರ್‌ ದಾಳಿ ಕಾರಣ?|  ಪ್ರಾಥಮಿಕ ತನಿಖೆ ವೇಳೆ ಮಾಲ್‌ವೇರ್‌ ಬಳಕೆ ಪತ್ತೆ| ಗಡಿ ಬಿಕ್ಕಟ್ಟಿನ ಹಿನ್ನೆಲೆ ಚೀನಾ ಹ್ಯಾಕ​ರ್‍ಸ್ ಕೈವಾಡ?

Mega Mumbai power outage may be result of cyber attack final report awaited pod

ಮುಂಬೈ(ನ.21): ವಾಣಿಜ್ಯ ರಾಜಧಾನಿ ಮುಂಬೈ ಅನ್ನು ಅ.13ರಂದು ಹಲವು ತಾಸುಗಳ ಕಾಲ ಸ್ತಬ್ಧಗೊಳಿಸಿದ್ದ ಮೆಗಾ ವಿದ್ಯುತ್‌ ವ್ಯತ್ಯಯಕ್ಕೆ ಸೈಬರ್‌ ದಾಳಿ ಕಾರಣ ಇರಬಹುದು ಎಂದು ಮಹಾರಾಷ್ಟ್ರ ಸೈಬರ್‌ ಇಲಾಖೆ ಅನುಮಾನ ವ್ಯಕ್ತಪಡಿಸಿದೆ.

ಪಡಘಾ ಮೂಲದ ಲೋಡ್‌ ವಿತರಣಾ ಕೇಂದ್ರಕ್ಕೆ ಮಾಲ್‌ವೇರ್‌ ಅನ್ನು ತೂರಿಸಿರುವುದು ಪ್ರಾಥಮಿಕ ತನಿಖೆ ವೇಳೆ ಕಂಡುಬಂದಿದೆ ಎಂದು ಮಹಾರಾಷ್ಟ್ರ ಸೈಬರ್‌ ಇಲಾಖೆಯ ಮೂಲಗಳು ತಿಳಿಸಿವೆ. ಈ ಸಂಬಂಧ ಉನ್ನತ ತನಿಖೆ ನಡೆಸಲು ಸರ್ಕಾರ ಮಹಾರಾಷ್ಟ್ರ ಸೈಬರ್‌ ಇಲಾಖೆಯನ್ನು ಬಳಸಿಕೊಳ್ಳಲು ನಿರ್ಧರಿಸಿದೆ.

ಮುಂಬೈಗೆ ವಿದ್ಯುತ್ 'ಶಾಕ್': ಬಾಂದ್ರಾ ಸೇರಿ ಹಲವೆಡೆ ಪವರ್ ಕಟ್, ಲೋಕಲ್ ಟ್ರೈನ್ ಸ್ತಬ್ಧ!

ಭಾರತ- ಚೀನಾ ಗಡಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಚೀನಾ ಮೂಲದ ಹ್ಯಾಕರ್‌ಗಳು ಭಾರತದ ಮೇಲೆ ಸೈಬರ್‌ ದಾಳಿ ನಡೆಸಬಹುದು ಎಂದು ಜೂನ್‌ನಲ್ಲಿ ಮಹಾರಾಷ್ಟ್ರ ಸೈಬರ್‌ ಇಲಾಖೆ ಎಚ್ಚರಿಕೆ ನೀಡಿತ್ತು. ಅದಾದ ಬೆನ್ನಿಗೇ ಈ ಘಟನೆ ನಡೆದಿರುವುದರಿಂದ ಚೀನಾ ಮೇಲೆ ಅನುಮೂನ ಮೂಡಲು ಆರಂಭಿಸಿದೆ.

ಮುಂಬೈ ನಗರ, ನವಿ ಮುಂಬೈ ಪ್ರದೇಶ ಸೇರಿದಂತೆ ಥಾಣೆ ಜಿಲ್ಲೆಗೆ ಸರಬರಾಜಾಗುವ ವಿದ್ಯುತ್‌ ಅನ್ನು ಪಡಘಾ ಕೇಂದ್ರದಲ್ಲಿ ನಿರ್ವಹಿಸಲಾಗುತ್ತದೆ. ಅದು ಆಟೋಮ್ಯಾಟಿಕ್‌ ವ್ಯವಸ್ಥೆ ಹೊಂದಿರುವ ಕೇಂದ್ರವಾಗಿದೆ. ಅದರ ಮೇಲೆ ಹ್ಯಾಕರ್‌ಗಳು ದಾಳಿ ನಡೆಸಿರಬಹುದು ಎಂಬ ಸಂಶಯ ಮೂಡಿದೆ.

ಕೈಗಾದಲ್ಲಿ ಉದ್ಯೋಗ ಕೊಡಿಸುವುದಾಗಿ 8 ಲಕ್ಷ ರೂ. ವಂಚನೆ!

ಅ.13ರಂದು ಮುಂಬೈನಲ್ಲಿ ಹಠಾತ್ತನೆ ವಿದ್ಯುತ್‌ ಸ್ಥಗಿತಗೊಂಡಿತ್ತು. ಬೆಳಗ್ಗೆ 10 ಗಂಟೆಗೆ ಆರಂಭವಾದ ಈ ಸಮಸ್ಯೆ ಹಲವು ಲೋಕಲ್‌ ರೈಲುಗಳ ರದ್ದತಿಗೂ ಕಾರಣವಾಗಿತ್ತು. ಮುಂಬೈ ಷೇರುಪೇಟೆ, ಕಚೇರಿ, ವಾಣಿಜ್ಯ ವ್ಯವಹಾರದ ಕಾರ್ಯನಿರ್ವಹಣೆ ಮೇಲೆ ಪರಿಣಾಮ ಬೀರಿತ್ತು. ಮುಂಬೈನ ಗ್ರಾಮೀಣ ಭಾಗದಲ್ಲಿ 10ರಿಂದ 12 ತಾಸಿನವರೆಗೂ ಸಮಸ್ಯೆಯಾಗಿತ್ತು. ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳೂ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ಖಾಸಗಿಯವರಿಂದ ಜನರೇಟರ್‌ ಪಡೆದು ವಿದ್ಯುತ್‌ ಪೂರೈಕೆ ಮಾಡಲಾಗಿತ್ತು.

Latest Videos
Follow Us:
Download App:
  • android
  • ios