ಕೈಗಾದಲ್ಲಿ ಉದ್ಯೋಗ ಕೊಡಿಸುವುದಾಗಿ 8 ಲಕ್ಷ ರೂ. ವಂಚನೆ!
ಮೋಸ ಹೋಗುವವರು ಎಲ್ಲಿವರೆಗೆ ಇರುತ್ತಾರೋ, ಅಲ್ಲೀವರೆಗೆ ಮೋಸ ಮಾಡುವವರು ಇರುತ್ತಾರೆ ಅನ್ನೋದು ಮತ್ತೆ ಮತ್ತೆ ಹೇಳಬೇಕಾಗಿಲ್ಲ. ಮೋಸು ಮಾಡುವವರು ಹೊಸ ಹೊಸ ವಿಧಾನದಲ್ಲಿ ಪಂಗನಾಮ ಹಾಕುತ್ತಲೇ ಇರುತ್ತಾರೆ. ಇದೀಗ ಉದ್ಯೋಗ ಕೊಡಿಸುವುದಾಗಿ 8 ಲಕ್ಷ ರೂಪಾಯಿ ವಂಚಿಸಿದ ಘಟನೆ ನಡೆದಿದೆ.
ಬೈಂದೂರು(ನ.20): ಭಾರತದಲ್ಲಿ ಉದ್ಯೋಗ ಕೊಡಿಸುವುದಾಗಿ ಅತೀ ಹೆಚ್ಚು ವಂಚನೆ ಪ್ರಕರಣಗಳು ನಡೆಯುತ್ತಿದೆ. ಪ್ರತಿ ದಿನ ಹತ್ತು ಹಲವು ಈ ರೀತಿಯ ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲೇರುತ್ತವೆ. ಇದೀಗ ಕೈಗಾ ಅಣುವಿದ್ಯುತ್ ಸ್ಥಾವರದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ವ್ಯಕ್ತಿಯೊಬ್ಬ ಸುಮಾರು 20ಕ್ಕೂ ಹೆಚ್ಚು ಯುವಕರಿಗೆ 8 ಲಕ್ಷ ರೂಪಾಯಿಗೂ ಅಧಿಕ ಹಣ ವಂಚಿಸಿದ ಘಟನೆ ನಡೆದಿದೆ.
ಕೈಗಾದ 5, 6ನೇ ಘಟಕ ಕೈ ಬಿಡಲು ಮನವಿ.
ಆರೋಪಿ ರಿತೇಶ್ ಪಟ್ವಾಲ್ ಎಂಬಾತ ತಾನು ಕೈಗಾ ಅಣು ಸ್ಥಾವರದಲ್ಲಿ ಕೆಲಸ ಮಾಡಿಕೊಂಡಿದ್ದು, ತಮ್ಮ ಸಂಸ್ಥೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ, ಸ್ಥಳೀಯ ಯಳಜಿತ್ ಗ್ರಾಮದ ಸತೀಶ (25) ಅವರಿಂದ ಅ.1ರಂದು 20,000 ರು. ನಗದು ಹಣ ಪಡೆದಿದ್ದ. ಅದೇ ರೀತಿ ಮಹೇಶ್, ವಿಜಯ್, ಗೌತಮ್, ನಂದೀಶ, ಸಚಿನ್ ಹಾಗೂ ಇತರರಿಗೆ ಕೆಲಸ ಕೊಡಿಸುವುದಾಗಿ ಹೇಳಿ ಅವರೆಲ್ಲರಿಂದ ಒಟ್ಟು 8 ಲಕ್ಷ ರೂಪಾಯಿಗೂ ಹೆಚ್ಚು ಪಡೆದಿದ್ದಾನೆ.
ದೇಶದ ಅಣು ವಿದ್ಯುತ್ ಕ್ಷೇತ್ರದ ಆತ್ಮಸ್ಥೈರ್ಯ ಹೆಚ್ಚಿಸಿದ ಕೈಗಾ ವಿಶ್ವ ದಾಖಲೆ
ನ.14ರಂದು ಅವರಗೆಲ್ಲರಿಗೂ ನೇಮಕಾತಿ ಪತ್ರವನ್ನು ನೀಡಿ, ವ್ಯಾನಿನಲ್ಲಿ ಕೈಗಾಕ್ಕೆ ಕಳುಹಿಸಿದ್ದ, ಅವರೆಲ್ಲರೂ ಕೈಗಾಕ್ಕೆ ಹೋದಾಗ ಅಲ್ಲಿ ಅಂತಹ ಯಾವುದೇ ಉದ್ಯೋಗ ಖಾಲಿ ಇಲ್ಲ, ಅಲ್ಲದೇ ರಿತೇಶ್ ಎಂಬಾತ ತಮ್ಮಲ್ಲಿ ಉದ್ಯೋಗಿ ಅಲ್ಲ ಎಂದು ತಿಳಿಸಿದಾಗಲೇ ತಾವು ಹಣ ಕೊಟ್ಟು ಮೋಸ ಹೋಗಿರುವುದು ಅರಿವಾಗಿದೆ. ಈ ಬಗ್ಗೆ ಈಗ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.