ಮೆಟ್ರೋ ನಿಲ್ದಾಣದಿಂದ ಜಿಗಿದು ಎಂಬಿಎ ವಿದ್ಯಾರ್ಥಿನಿ ಆತ್ಮಹತ್ಯೆ

  • ಮೆಟ್ರೋ ನಿಲ್ದಾಣದಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ
  • ಹೈದರಾಬಾದ್‌ನ ಇಎಸ್‌ಐ ಮೆಟ್ರೋ ನಿಲ್ದಾಣದಲ್ಲಿ ಘಟನೆ
  • ಪೋಷಕರು ಬೈದಿದ್ದಕ್ಕೆ ದುಡುಕಿದ ವಿದ್ಯಾರ್ಥಿ
MBA student commits suicide by jumping from metro station in hyderabad akb

ಹೈದರಾಬಾದ್‌(ಏ.6): ಮೆಟ್ರೋ ನಿಲ್ದಾಣದಿಂದ ಜಿಗಿದು ಎಂಬಿಎ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮುತ್ತಿನ ನಗರಿ ಹೈದರಾಬಾದ್‌ನಲ್ಲಿ ನಡೆದಿದೆ. ಗಂಟೆಗಟ್ಟಲೇ ಫೋನ್‌ನಲ್ಲಿ ಮಾತನಾಡುತ್ತಿದ್ದಳು ಎಂಬ ಕಾರಣಕ್ಕೆ ಪೋಷಕರು ಈ ಯುವತಿಗೆ ಜೋರು ಮಾಡಿದ್ದು, ಇದೇ ಕಾರಣಕ್ಕೆ ಆಕೆ ಪೋಷಕರೊಂದಿಗೆ ಕಿತ್ತಾಡಿಕೊಂಡು ಬಂದು ನಗರದ ನಂತರ ಇಎಸ್‌ಐ ಮೆಟ್ರೋ ನಿಲ್ದಾಣದಿಂದ ಕೆಳಗೆ ಜಿಗಿದು ಸಾವನ್ನಪ್ಪಿದ್ದಾರೆ.

ವರದಿಗಳ ಪ್ರಕಾರ, 21 ವರ್ಷದ  ಯುವತಿ ಬಂಜಾರಾ ಹಿಲ್ಸ್‌ನ ಶ್ರೀ ರಾಮ್ ನಗರದ (Sri Ram Nagar)ನಿವಾಸಿಯಾಗಿದ್ದಾಳೆ. ಈಕೆಗೆ ಮೂವರು ಸಹೋದರರಿದ್ದು, ಪೋಷಕರ ಏಕಮಾತ್ರ ಪುತ್ರಿ ಈಕೆಯಾಗಿದ್ದಳು ಎಂದು ತಿಳಿದು ಬಂದಿದೆ. ಮೆಟ್ರೋ ನಿಲ್ದಾಣದಿಂದ ಜಿಗಿದ ಪರಿಣಾಮ ರಕ್ತದ ಮಡುವಿನಲ್ಲಿ ಬಿದ್ದ ಆಕೆಯನ್ನು ಕೂಡಲೇ  ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಪ್ರಾಥಮಿಕ ತನಿಖೆಯ ಪ್ರಕಾರ ಆಕೆ ತನ್ನ ಗೆಳೆಯನನ್ನು ಮದುವೆಯಾಗಲು ಬಯಸಿದ್ದಳು. ಆದರೆ ಆಕೆಯ ಮನೆಯವರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಪೋಷಕರೊಂದಿಗೆ ತೀವ್ರ ವಾಗ್ವಾದಕ್ಕಿಳಿದ ಆಕೆ ಮಂಗಳವಾರ ಮನೆ ಬಿಟ್ಟು ಹೋಗಿದ್ದಳು.

MBA ಮುಗಿಸಿ ಅಲೆಯುತ್ತಿದ್ದ ಯುವಕ: ಬುದ್ಧಿ ಹೇಳಿದ್ದಕ್ಕೆ ಆತ್ಮಹತ್ಯೆ

ಸಂಜೆ 5:30 ರ ಸುಮಾರಿಗೆ, ಅವಳು ಮೆಟ್ರೋ ನಿಲ್ದಾಣವನ್ನು (metro station) ಹತ್ತಿ ಅಲ್ಲಿಂದ ಕೆಳಗೆ ಜಿಗಿದಳು. ರಕ್ತದ ಮಡುವಿನಲ್ಲಿ ಯುವತಿ ಬಿದ್ದಿರುವುದನ್ನು ನೋಡಿ ಯಾರೋ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆಕೆಯ ಕೊನೆಯ ಕ್ಷಣಗಳು ಮತ್ತು ಆಕೆಯ ಸಾವಿನ ಹಿಂದಿನ ನಿಜವಾದ ಕಾರಣವನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಮೆಟ್ರೋ ನಿಲ್ದಾಣ ಮತ್ತು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು (CCTV footage) ಪರಿಶೀಲಿಸಿದರು. ಕಳೆದ ತಿಂಗಳು ಬೆಂಗಳೂರಿನಲ್ಲಿ ಪರೀಕ್ಷೆಯಲ್ಲಿ(Exam) ನಕಲು ಮಾಡುವಾಗ ಸಿಕ್ಕಿ ಬಿದ್ದು ಕಾಲೇಜಿನಿಂದ ಡಿಬಾರ್‌ ಆಗಿದ್ದಕ್ಕೆ ಮನನೊಂದು ವಿದ್ಯಾರ್ಥಿನಿಯೊಬ್ಬರು(Student) ಐದು ಅಂತಸ್ತಿನ ಪಿ.ಜಿ. ಕಟ್ಟಡದಿಂದ ಜಿಗಿದು ಆತ್ಮಹತ್ಯೆ(Suicide)ಮಾಡಿಕೊಂಡಿರುವ ಘಟನೆ ಜೀವನ ಭೀಮಾನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು.

ರ‍್ಯಾಂಪ್ ವಾಕ್ ಮಾಡುವಾಗ ವಿದ್ಯಾರ್ಥಿನಿ ಸಾವು!, ಸ್ಟೇಜ್ ಮೇಲೆ ಕಾದಿದ್ದ ಯಮರಾಯ!

ಮುರುಗೇಶ್‌ಪಾಳ್ಯದ ಭವ್ಯಾ(19) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಕೋರಮಂಗಲದ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದ ಭವ್ಯಾ ಶುಕ್ರವಾರ ಪ್ರಥಮ ಸೆಮಿಸ್ಟರ್‌ ಪರೀಕ್ಷೆ ಬರೆಯಲು ಕಾಲೇಜಿಗೆ ಹೋಗಿದ್ದರು. ಕಾಲೇಜಿನಿಂದ ವಾಪಸು ಬಂದ ಆಕೆ ಸಂಜೆ 4.30ರ ಸುಮಾರಿಗೆ ಅಮರಜ್ಯೋತಿ ಬಡಾವಣೆಯಲ್ಲಿ ಐದು ಅಂತಸ್ತಿನ ಪಿ.ಜಿ. ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸ್‌(Police) ಅಧಿಕಾರಿಗಳು ತಿಳಿಸಿದ್ದಾರೆ.

ಭವ್ಯಾ ಆತ್ಮಹತ್ಯೆಗೂ ಮುನ್ನ ಸಹೋದರಿ ದಿವ್ಯಾ ಹಾಗೂ ತಂದೆ ಮೊಬೈಲ್‌ಗೆ ಕರೆ ಮಾಡಿ, ಪರೀಕ್ಷೆ ಬರೆಯುವಾಗ ನಕಲು ಮಾಡಿ ಸಿಕ್ಕಿಬಿದ್ದಿದ್ದು ಕಾಲೇಜಿನಿಂದ ಡಿಬಾರ್‌(Dibar) ಆಗಿದ್ದೇನೆ ಇದರಿಂದ ಮನಸಿಗೆ ನೋವಾಗಿದೆ. ನಾನು ಬದುಕುವುದಿಲ್ಲ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದಾಳೆ. ಬಳಿಕ ತಂದೆ ಹಾಗೂ ಸಹೋದರಿ ಹತ್ತಾರು ಬಾರಿ ಕರೆ ಮಾಡಿದರೂ ಸ್ವೀಕರಿಸಿಲ್ಲ. ನಂತರ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.  ಭವ್ಯಾ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯಕ್ಕೆ ಆತ್ಮಹತ್ಯೆಗೂ ಮುನ್ನ ಸಹೋದರಿ ಹಾಗೂ ತಂದೆ ಮೊಬೈಲ್‌ಗೆ ಕರೆ ಮಾಡಿ ಪರೀಕ್ಷೆ ನಕಲು ಮಾಡುವಾಗ ಸಿಕ್ಕಿಬಿದ್ದು ಡಿಬಾರ್‌ ಆಗಿರುವ ವಿಷಯ ತಿಳಿಸಿದ್ದಳು ಎಂಬುದು ತಿಳಿದು ಬಂದಿದೆ. ಜೀವನ್‌ ಭೀಮಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Latest Videos
Follow Us:
Download App:
  • android
  • ios