MBA ಮುಗಿಸಿ ಅಲೆಯುತ್ತಿದ್ದ ಯುವಕ: ಬುದ್ಧಿ ಹೇಳಿದ್ದಕ್ಕೆ ಆತ್ಮಹತ್ಯೆ

ಎಂಬಿಎ ಮುಗಿಸಿದ ಬಳಿಕ ಅಶ್ವತ್ಥ್, ಕೆಲಸಕ್ಕೆ ಸೇರದೆ ಅಲೆಯುತ್ತಿದ್ದ. ಇನ್ನು ಸ್ಥಳೀಯವಾಗಿ ಪೋಲಿ ಹುಡುಗರ ಸಹವಾಸಕ್ಕೆ ಬಿದ್ದ ಆತ, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದ. ಬುದ್ಧಿ ಮಾತು ಹೇಳಿದ್ದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

parents advice son to get into job MBA Graduate commits suicide in bangalore

ಬೆಂಗಳೂರು(ಫೆ.08): ಪೋಷಕರು ಬುದ್ಧಿ ಮಾತು ಹೇಳಿದ್ದಕ್ಕೆ ಬೇಸರಗೊಂಡು ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಟಿ.ದಾಸರಹಳ್ಳಿ ಸಮೀಪ ಶುಕ್ರವಾರ ನಡೆದಿದೆ.

ಭುವನೇಶ್ವರಿ ನಗರದ ನಿವಾಸಿ ಮಹೇಶ್‌ ಮತ್ತು ಮಂಜಮ್ಮ ದಂಪತಿ ಪುತ್ರ ಅಶ್ವತ್‌್ಥ (22) ಮೃತ ದುರ್ದೈವಿ. ನಂಜನಗೂಡು ತಾಲೂಕಿನ ಅಶ್ವತ್‌್ಥ ಪೋಷಕರು, ಹಲವು ವರ್ಷಗಳ ಹಿಂದೆ ನಗರಕ್ಕೆ ಬಂದು ನೆಲೆಸಿದ್ದಾರೆ. ಖಾಸಗಿ ಕಾಲೇಜಿನಲ್ಲಿ ಆತನ ತಾಯಿ ಮಂಜಮ್ಮ ಸಹಾಯಕಿ ಆಗಿದ್ದರೆ, ತಂದೆ ಕೂಲಿ ಕೆಲಸ ಮಾಡುತ್ತಾರೆ.

 

ಎಂಬಿಎ ಮುಗಿಸಿದ ಬಳಿಕ ಅಶ್ವತ್ಥ್, ಕೆಲಸಕ್ಕೆ ಸೇರದೆ ಅಲೆಯುತ್ತಿದ್ದ. ಇನ್ನು ಸ್ಥಳೀಯವಾಗಿ ಪೋಲಿ ಹುಡುಗರ ಸಹವಾಸಕ್ಕೆ ಬಿದ್ದ ಆತ, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದ. ಹೀಗಾಗಿ ಬಾಗಲಗುಂಟೆ ಠಾಣೆಯಲ್ಲಿ ಆತನ ಮೇಲೆ ದರೋಡೆ ಯತ್ನ ಪ್ರಕರಣ ಸಹ ದಾಖಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ನಡವಳಿಕೆ ಹಿನ್ನೆಲೆಯಲ್ಲಿ ಬೇಸರಗೊಂಡ ಮಹೇಶ್‌, ಮಗನಿಗೆ ಪುಂಡ ಸ್ನೇಹಿತರ ಸಂಗ ಬಿಟ್ಟು ಸರಿ ದಾರಿಯಲ್ಲಿ ಸಾಗುವಂತೆ ಬುದ್ಧಿ ಮಾತು ಹೇಳುತ್ತಿದ್ದರು. ಅದೇ ರೀತಿ ಗುರುವಾರ ರಾತ್ರಿ ಕೂಡಾ ಪುತ್ರನಿಗೆ ಅವರು ಬೈದು ಉಪದೇಶ ಮಾಡಿದ್ದರು. ಇದರಿಂದ ಬೇಸರಗೊಂಡ ಅಶ್ವತ್ಥ್‌, ಮಧ್ಯಾಹ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Latest Videos
Follow Us:
Download App:
  • android
  • ios