Krishna Janmabhoomi case: ಶಾಹಿ ಈದ್ಗಾ ಮಸೀದಿ ಸಮೀಕ್ಷೆಗೆ ಮಥುರಾ ಕೋರ್ಟ್ ಆದೇಶ

ಕತ್ರಾ ಕೇಶವ್ ದೇವ್ ದೇವಸ್ಥಾನದಿಂದ 17ನೇ ಶತಮಾನದ ಶಾಹಿ ಈದ್ಗಾ ಮಸೀದಿಯನ್ನು ಕೆಡವಲು ಒತ್ತಾಯಿಸಿ ಹಿಂದೂ ಸಂಘಟನೆಗಳು ಮಾಡಿದ್ದ ಮೊಕದ್ದಮೆಗಳಲ್ಲಿ ಇದು ಒಂದಾಗಿದೆ. ಈ ಮಸೀದಿಯನ್ನು ಕೃಷ್ಣನ ಜನ್ಮಸ್ಥಳದಲ್ಲಿ ನಿರ್ಮಿಸಲಾಗಿದೆ ಎಂಬುದು ಹಿಂದೂ ಸಂಘಟನೆಗಳ ವಾದ. 

mathura court orders survey of shahi idgah mosque from january 2 ash

ಕೃಷ್ಣ ಜನ್ಮಭೂಮಿಯಲ್ಲಿ (Krishna Janmabhoomi) ನಿರ್ಮಾಣವಾಗಿದೆ ಎಂದು ಹೇಳಲಾದ ಶಾಹಿ ಈದ್ಗಾ ಮಸೀದಿಯನ್ನು (Shahi Idgah Mosque ) ಸಮೀಕ್ಷೆ (Survey) ಮಾಡಲು ಉತ್ತರ ಪ್ರದೇಶದ (Uttar Pradesh) ಮಥುರಾದಲ್ಲಿರುವ ನ್ಯಾಯಾಲಯವು (Mathura Court) ಮಹತ್ವದ ಆದೇಶ ನೀಡಿದೆ. ಜನವರಿ 2 ರಿಂದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಸಮೀಕ್ಷೆ ಮಾಡಲು ಕೋರ್ಟ್‌ ಆದೇಶಿಸಿದೆ. ಅಲ್ಲದೆ, ಇದಕ್ಕೆ ಸಂಬಂಧಪಟ್ಟ ವರದಿಯನ್ನು ಜನವರಿ 20ಕ್ಕೆ ನೀಡಲು ಸಹ ಕೋರ್ಟ್‌ ಸೂಚನೆ ನೀಡಿದೆ. ಹಿಂದೂ ಸೇನೆಯ ವಿಷ್ಣು ಗುಪ್ತಾ ಅವರು ಸಲ್ಲಿಸಿದ್ದ ಮೊಕದ್ದಮೆಯ ಮೇರೆಗೆ ನ್ಯಾಯಾಲಯ ಈ ಆದೇಶ ನೀಡಿದೆ. ಕತ್ರಾ ಕೇಶವ್ ದೇವ್ ದೇವಸ್ಥಾನದಿಂದ 17ನೇ ಶತಮಾನದ ಶಾಹಿ ಈದ್ಗಾ ಮಸೀದಿಯನ್ನು ಕೆಡವಲು ಒತ್ತಾಯಿಸಿ ಹಿಂದೂ ಸಂಘಟನೆಗಳು ಮಾಡಿದ್ದ ಮೊಕದ್ದಮೆಗಳಲ್ಲಿ ಇದು ಒಂದಾಗಿದೆ. ಈ ಮಸೀದಿಯನ್ನು ಕೃಷ್ಣನ ಜನ್ಮಸ್ಥಳದಲ್ಲಿ ನಿರ್ಮಿಸಲಾಗಿದೆ ಎಂಬುದು ಹಿಂದೂ ಸಂಘಟನೆಗಳ ವಾದ. 

ಶಾಹಿ ಈದ್ಗಾ ಮಸೀದಿಯನ್ನು 1669-70ರಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ ಕೃಷ್ಣ ಜನ್ಮಭೂಮಿಯಲ್ಲಿ ಕತ್ರ ಕೇಶವ್ ದೇವ್ ದೇವಸ್ಥಾನದ 13.37 ಎಕರೆ ಆವರಣದಲ್ಲಿ ನಿರ್ಮಿಸಲಾಗಿದೆ ಎಂದು ಕೋರ್ಟ್‌ಗೆ ಸಲ್ಲಿಕೆಯಾದ ಅರ್ಜಿಗಳು ಹೇಳಿಕೊಂಡಿದೆ. 

ಇದನ್ನು ಓದಿ: ಮಥುರಾ ಹೈ ಅಲರ್ಟ್‌, ಮಸೀದಿಯ ಒಳಗೆ ಹನುಮಾನ್‌ ಚಾಲಿಸಾ ಪಠಣ ಮಾಡ್ತೇವೆ ಎಂದ ಹಿಂದು ಮಹಾಸಭಾ!

ಈ ಮಧ್ಯೆ, ಆಗಸ್ಟ್ 15, 1947 ರಂದು ಇದ್ದಂತೆ ಯಾವುದೇ ಪೂಜಾ ಸ್ಥಳದ ಧಾರ್ಮಿಕ ಸ್ಥಾನಮಾನವನ್ನು ಕಾಯ್ದುಕೊಳ್ಳುವ 1991 ರ ಪೂಜಾ ಸ್ಥಳಗಳ ಕಾಯ್ದೆಯಡಿಯಲ್ಲಿ ಈ ಅರ್ಜಿಯನ್ನು ಒಪ್ಪಿಕೊಳ್ಳಲಾಗುವುದಿಲ್ಲ ಎಂದು ಮಥುರಾದ ಸಿವಿಲ್ ನ್ಯಾಯಾಲಯವು ಈ ಹಿಂದೆ ಪ್ರಕರಣವನ್ನು ವಜಾಗೊಳಿಸಿತ್ತು. 

ಆದರೆ, 16 ನೇ ಶತಮಾನದ ಬಾಬರಿ ಮಸೀದಿಯನ್ನು ಒಳಗೊಂಡಿರುವ ಅಯೋಧ್ಯೆ ದೇವಾಲಯ-ಮಸೀದಿ ಪ್ರಕರಣವು ಈ ಕಾನೂನಿಗೆ ಏಕೈಕ ಅಪವಾದವಾಗಿದೆ. ಇದನ್ನು ಪುರಾತನ ದೇವಾಲಯದ ಅವಶೇಷಗಳ ಮೇಲೆ ನಿರ್ಮಿಸಲಾಗಿದೆ ಎಂದು ನಂಬಿದ್ದ ಹಿಂದೂ ಕಾರ್ಯಕರ್ತರು 1992 ರಲ್ಲಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದರು. 2019 ರಲ್ಲಿ ಸುಪ್ರೀಂಕೋರ್ಟ್ ಮಸೀದಿ ಸ್ಥಳವನ್ನು ಹಿಂದೂಗಳಿಗೆ ಭವ್ಯವಾದ ರಾಮಮಂದಿರಕ್ಕಾಗಿ ಹಸ್ತಾಂತರಿಸಿತು ಮತ್ತು ಮಸೀದಿಗಾಗಿ ಪರ್ಯಾಯ ಭೂಮಿಗೆ ಆದೇಶಿಸಿತ್ತು.

ಇದನ್ನೂ ಓದಿ: Krishna Janmabhoomi case: ಶ್ರೀಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ವಿವಾದ: ಅಕ್ಟೋಬರ್‌ 3 ರಿಂದ ವಿಚಾರಣೆ ಆರಂಭ
.
ಇನ್ನು, ಮಥುರಾ ನ್ಯಾಯಾಲಯವು ಕೃಷ್ಣ ಜನ್ಮಭೂಮಿ ಮೊಕದ್ದಮೆಯನ್ನು ಈ ಹಿಂದೆ ವಜಾಗೊಳಿಸಿತ್ತು. ಹಾಗೂ, ಈ ಅರ್ಜಿಯನ್ನು ನೋಂದಾಯಿಸಿದರೆ, ಅನೇಕ ಆರಾಧಕರು ವಿವಿಧ ಪ್ರಕರಣಗಳಲ್ಲಿ ನ್ಯಾಯಾಲಯದ ಮೊರೆ ಹೋಗಬಹುದು ಎಂದೂ ಕೋರ್ಟ್‌ ಅಭಿಪ್ರಾಯಪಟ್ಟಿತ್ತು. ಕೋರ್ಟ್‌ ಆದೇಶದ ವಿರುದ್ಧ ಅರ್ಜಿದಾರರು ಮೇಲ್ಮನವಿ ಸಲ್ಲಿಸಿದ್ದರು.

ಅಲ್ಲದೆ, ಶ್ರೀಕೃಷ್ಣನ ಭಕ್ತರಾದ ತಮಗೆ ನ್ಯಾಯಾಲಯವನ್ನು ಸಂಪರ್ಕಿಸುವ ಹಕ್ಕಿದೆ ಎಂದು ಅರ್ಜಿದಾರರು ತಮ್ಮ ಮನವಿಯಲ್ಲಿ ವಾದಿಸಿದ್ದಾರೆ. ಹಾಗೂ, ಭಗವಾನ್ ಕೃಷ್ಣನ ನಿಜವಾದ ಜನ್ಮಸ್ಥಳದಲ್ಲಿ ಪೂಜೆ ಮಾಡುವ ಹಕ್ಕಿದೆ ಎಂದೂ ಅವರು ಹೇಳುತ್ತಾರೆ. 

ಇದನ್ನೂ ಓದಿ: Krishna Janmabhoomi case: ಮಸೀದಿ ತೆರವು ಮಾಡುವ ಅರ್ಜಿ ವಿಚಾರಣೆಗೆ ಒಪ್ಪಿದ ಮಥುರಾ ಕೋರ್ಟ್!

ಅಖಿಲ ಭಾರತ ಹಿಂದೂ ಮಹಾಸಭಾ ಈ ತಿಂಗಳ ಆರಂಭದಲ್ಲಿ ಬಾಬರಿ ಮಸೀದಿ ಧ್ವಂಸದ ವಾರ್ಷಿಕೋತ್ಸವದ ಅಂಗವಾಗಿ ಶಾಹಿ ಮಸೀದಿ ಈದ್ಗಾದಲ್ಲಿ ಹನುಮಾನ್ ಚಾಲೀಸಾವನ್ನು ಪಠಿಸಲು ಕರೆ ನೀಡಿತ್ತು. ಆದರೆ, ಇದಕ್ಕೆ ಪೊಲೀಸರು ಅವಕಾಶ ನೀಡಿರಲಿಲ್ಲ. ಹಾಗೂ, ಸಂಘಟನೆಯ ನಾಯಕರಲ್ಲಿ ಒಬ್ಬರನ್ನು ಬಂಧಿಸಲಾಯಿತು ಮತ್ತು 7 ಅಥವಾ 8 ಜನರನ್ನು ಬಂಧಿಸಲಾಗಿತ್ತು.

ಫೆಬ್ರವರಿ 19, 2021 ರಂದು, "ಭಗವಾನ್ ಶ್ರೀ ಕೃಷ್ಣ ವಿರಾಜಮಾನ್ ಮತ್ತು ಇತರರು Vs ಯುಪಿ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಮತ್ತು ಇತರರು" ಎಂಬ ಸಿವಿಲ್ ಮೊಕದ್ದಮೆಯನ್ನು ಮಥುರಾ ಸಿವಿಲ್ ನ್ಯಾಯಾಧೀಶರ (ಹಿರಿಯ ವಿಭಾಗ) ನ್ಯಾಯಾಲಯದ ಮುಂದೆ ಸುನ್ನಿ ಸೆಂಟ್ರಲ್ ಬೋರ್ಡ್ ಆಫ್ ವಕ್ಫ್‌ನ ಒಪ್ಪಿಗೆಯೊಂದಿಗೆ ಟ್ರಸ್ಟ್ ಮಸೀದಿ ಈದ್ಗಾದ 'ನಿರ್ವಹಣಾ ಸಮಿತಿ'ಯಿಂದ ಅಕ್ರಮವಾಗಿ ಕಟ್ಟಿರುವ ಅತಿಕ್ರಮಣ ಮತ್ತು ಕಟ್ಟಡವನ್ನು ತೆಗೆದುಹಾಕಲು ಅರ್ಜಿ ಸಲ್ಲಿಸಲಾಗಿತ್ತು. ​

ಇದನ್ನೂ ಓದಿ: ಅಯೋಧ್ಯೆ ರೀತಿ ಕೋರ್ಟ್‌ನಲ್ಲಿಯೇ ಇತ್ಯರ್ಥವಾಗಲಿದ್ದಾನೆ ಕಾಶಿ ವಿಶ್ವನಾಥ!

Latest Videos
Follow Us:
Download App:
  • android
  • ios