Krishna Janmabhoomi case: ಮಸೀದಿ ತೆರವು ಮಾಡುವ ಅರ್ಜಿ ವಿಚಾರಣೆಗೆ ಒಪ್ಪಿದ ಮಥುರಾ ಕೋರ್ಟ್!

 ಶಾಹಿ ಈದ್ಗಾ ಮಸೀದಿಯನ್ನು ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ 1669-70 ರಲ್ಲಿ ಶ್ರೀಕೃಷ್ಣನ ಜನ್ಮಸ್ಥಳದ ಸಮೀಪವಿರುವ ಕತ್ರಾ ಕೇಶವ್ ದೇವ್ ದೇವಾಲಯದ ಆವರಣದಲ್ಲಿ ನಿರ್ಮಿಸಲಾಯಿತು. ಅರ್ಜಿದಾರರ ಪ್ರಕಾರ, 13.37 ಎಕರೆ ಜಾಗದಲ್ಲಿ ಹರಡಿರುವ ಶ್ರೀ ಕೃಷ್ಣ ಜನ್ಮಭೂಮಿ ದೇವಸ್ಥಾನದ ಒಂದು ಭಾಗವನ್ನು ಕೆಡವಿ ಶಾಹಿ ಈದ್ಗಾ ಮಸೀದಿಯನ್ನು ನಿರ್ಮಿಸಲಾಗಿದೆ. 
 

Mathura court allows plea seeking Survey and ownership of Shahi Idgah Mosque land at Krishna Janmabhoomi san

ಮಥುರಾ (ಮೇ. 19): ಗ್ಯಾನವಾಪಿ ಮಸೀದಿ ಸಂಕೀರ್ಣದ (Gyanvapi masjid complex) ನ್ಯಾಯಾಲಯ ನಿರ್ದೇಶಿತ ವೀಡಿಯೊಗ್ರಫಿ ಸಮೀಕ್ಷೆಯ ಕುರಿತು ನಡೆಯುತ್ತಿರುವ ಚರ್ಚೆಯ ನಡುವೆ, ಕೃಷ್ಣ ಜನ್ಮಭೂಮಿಯ (Krishna Janmabhoomi) ಪಕ್ಕದಲ್ಲಿರುವ ಶಾಹಿ ಈದ್ಗಾ ಮಸೀದಿಯ (survey of Shahi Idgah Mosque) ಸರ್ವೆಗಾಗಿ ಕೋರಿ ಸಲ್ಲಿಸಲಾದ ಮನವಿಯನ್ನು ಆಲಿಸಲು ಇಲ್ಲಿನ ಸಿವಿಲ್ ನ್ಯಾಯಾಲಯವು (Civil Court) ಒಪ್ಪಿಗೆ ನೀಡಿದೆ. 

ಮಥುರಾದ ನೆಲದ ಹಿಂದೂಗಳ ಆರಾಧ್ಯದೈವವಾದ ಕೃಷ್ಣನ ಜನ್ಮಸ್ಥಳ. ವಾರಣಾಸಿಯ ಕಾಶಿ ವಿಶ್ವನಾಥ ದೇಗುಲ ಗ್ಯಾನವಾಪಿ ಮಸೀದಿ ಸಂಕೀರ್ಣದ ಮೇಲೆ ಎಲ್ಲರ ಕಣ್ಣುಗಳು ಅಂಟಿಕೊಂಡಿರುವಾಗ, ಶಾಹಿ ಈದ್ಗಾದ ವೀಡಿಯೋಗ್ರಫಿ ಕೋರಿ ಇದೇ ರೀತಿಯ ಅರ್ಜಿಯನ್ನು ಇತ್ತೀಚೆಗೆ ಮಥುರಾ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.

ಮಸೀದಿ ಆವರಣದಲ್ಲಿ ‘ಹಿಂದೂ ಕಲಾಕೃತಿಗಳು’ ಮತ್ತು ‘ಪ್ರಾಚೀನ ಧಾರ್ಮಿಕ ಶಾಸನಗಳು’ ಇವೆಯೇ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯಲು ವೀಡಿಯೊ ಸಮೀಕ್ಷೆಯನ್ನು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ. ಅದೇ ರೀತಿ, ಗ್ಯಾನವಾಪಿ ಮಸೀದಿ ಪ್ರಕರಣದಲ್ಲೂ ಕೂಡ ಕೆಲವು ಹಿಂದೂ ಭಕ್ತರು ಹಿಂದೂ ದೇವತೆಗಳ ವಿಗ್ರಹಗಳಿವೆಯೇ ಎಂದು ಕಂಡುಹಿಡಿಯಲು ಸಮೀಕ್ಷೆಗೆ ಕೋರಿದ್ದರು.

ಶ್ರೀ ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಮಸೀದಿ ವಿವಾದ: ಅರ್ಜಿದಾರರ ಬೇಡಿಕೆ ಏನು?

* ಶ್ರೀಕೃಷ್ಣ ಜನ್ಮಭೂಮಿಯ 13.37 ಎಕರೆ ಜಮೀನಿನ ಒಡೆತನಕ್ಕೆ ಆಗ್ರಹಿಸಿ ಲಕ್ನೋ ನಿವಾಸಿ ರಂಜನಾ ಅಗ್ನಿಹೋತ್ರಿ ಎಂಬುವವರು ಅರ್ಜಿ ಸಲ್ಲಿಸಿದ್ದರು.

* ಶ್ರೀ ಕೃಷ್ಣ ಜನ್ಮಭೂಮಿಯಲ್ಲಿ ನಿರ್ಮಿಸಲಾಗಿರುವ ಶಾಹಿ ಈದ್ಗಾ ಮಸೀದಿಯನ್ನು ತೆರವು ಮಾಡಬೇಕು ಎಂದು ಅಗ್ನಿಹೋತ್ರಿ ತಮ್ಮ ಮೊಕದ್ದಮೆಯಲ್ಲಿ ಮನವಿ ಮಾಡಿದ್ದಾರೆ.

* ಮಥುರಾದ ಸಿವಿಲ್ ನ್ಯಾಯಾಧೀಶರ ಹಿರಿಯ ವಿಭಾಗದ ಮುಂದೆ ಮಹೇಂದ್ರ ಪ್ರತಾಪ್ ಸಿಂಗ್ ಸಲ್ಲಿಸಿದ ಅರ್ಜಿಯು ಶಾಹಿ ಈದ್ಗಾವನ್ನು ಸೀಲ್ ಮಾಡಲು ಮತ್ತು "ಪ್ರಾಚೀನ ಹಿಂದೂ ಧಾರ್ಮಿಕ ಚಿಹ್ನೆಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಲು" ಭದ್ರತೆಯನ್ನು ನಿಯೋಜಿಸಲು ಕೋರಿದೆ.

* ನ್ಯಾಯಾಲಯದ ಮುಂದೆ ಸಲ್ಲಿಸಲಾದ ಬಹು ಮನವಿಗಳಲ್ಲಿ, ಅರ್ಜಿದಾರರು ಜ್ಞಾನವಾಪಿ ಮಸೀದಿಯ ಮಾದರಿಯಲ್ಲಿ ಈ ಮಸೀದಿ ಆವರಣದಲ್ಲಿ ಹಿಂದೂ ಕಲಾಕೃತಿಗಳು ಮತ್ತು ಪುರಾತನ ಧಾರ್ಮಿಕ ಶಾಸನಗಳ ಅಸ್ತಿತ್ವವನ್ನು ನಿರ್ಧರಿಸಲು ಸೈಟ್ ಮೌಲ್ಯಮಾಪನಕ್ಕಾಗಿ ಕೋರ್ಟ್ ಕಮೀಷನ್ ಅನ್ನೂ ಕೋರಿದ್ದಾರೆ.

* ಈದ್ಗಾವನ್ನು ಕೆಡವಿ ಅದನ್ನು ಅಕ್ರಮ ಎಂದು ಘೋಷಿಸಿ ಸಂಪೂರ್ಣ ಭೂಮಿಯನ್ನು ಡಿ ಫ್ಯಾಕ್ಟೋ ಮಾಲೀಕ ಶ್ರೀ ಕೃಷ್ಣ ವಿರಾಜಮಾನರಿಗೆ ಹಸ್ತಾಂತರಿಸುವಂತೆ ಅರ್ಜಿದಾರರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

* ಅಲ್ಲದೆ, ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ವಿವಾದಿತ ಸ್ಥಳವನ್ನು ಉತ್ಖನನಕ್ಕೆ ಒತ್ತಾಯಿಸಿದ್ದು, ಉತ್ಖನನದ ತನಿಖೆಯ ವರದಿಯನ್ನು ಸಲ್ಲಿಸಬೇಕು ಎಂದು ಹೇಳಿದರು.

 

ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಮಸೀದಿ ವಿಚಾರಣೆ ಮುಕ್ತಾಯ, ಮೇ 19ಕ್ಕೆ ತೀರ್ಪು ಕಾಯ್ದಿರಿಸಿದ ಮಥುರಾ ಕೋರ್ಟ್!

ಏನಿದು ವಿವಾದ:
ಶಾಹಿ ಈದ್ಗಾ ಮಸೀದಿಯನ್ನು ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ 1669-70 ರಲ್ಲಿ ಶ್ರೀಕೃಷ್ಣನ ಜನ್ಮಸ್ಥಳದ ಸಮೀಪವಿರುವ ಕತ್ರಾ ಕೇಶವ್ ದೇವ್ ದೇವಾಲಯದ ಆವರಣದಲ್ಲಿ ನಿರ್ಮಿಸಲಾಯಿತು. ಅರ್ಜಿದಾರರ ಪ್ರಕಾರ, 13.37 ಎಕರೆ ಜಾಗದಲ್ಲಿ ಹರಡಿರುವ ಶ್ರೀ ಕೃಷ್ಣ ಜನ್ಮಭೂಮಿ ದೇವಸ್ಥಾನದ ಒಂದು ಭಾಗವನ್ನು ಕೆಡವಿ ಶಾಹಿ ಈದ್ಗಾ ಮಸೀದಿಯನ್ನು ನಿರ್ಮಿಸಲಾಗಿದೆ. ಮಸೀದಿಯನ್ನು ತೆರವು ಮಾಡಿ ಮಂದಿರಕ್ಕೆ ಭೂಮಿಯನ್ನು ವಾಪಸ್ ನೀಡುವಂತೆ ಒತ್ತಾಯಿಸಿದ್ದಾರೆ. 

Mathura Vrindavan Work: ಅಯೋಧ್ಯೆಯಂತೆ ಮಥುರಾ, ವೃಂದಾವನದಲ್ಲೂ ದೇಗುಲ ನಿರ್ಮಾಣ: ಯೋಗಿ

ಕಳೆದ ವರ್ಷ, ವಕೀಲ ರಂಜನಾ ಅಗ್ನಿಹೋತ್ರಿ ಮತ್ತು ಇತರ ಆರು ಮಂದಿ ಕಳೆದ ವರ್ಷ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಈ ಪ್ರಕರಣದಲ್ಲಿ ಮೊದಲು ಹಕ್ಕು ಸಲ್ಲಿಸಿದ್ದರು. ಸಿವಿಲ್ ನ್ಯಾಯಾಧೀಶರು ಅರ್ಜಿಯನ್ನು ವಜಾಗೊಳಿಸಿದರು, ಅರ್ಜಿದಾರರು ಯಾರೂ ಮಥುರಾದಿಂದ ಈ ವಿಷಯದಲ್ಲಿ ಮಾನ್ಯವಾದ ಪಾಲನ್ನು ಹೊಂದಿರದ ಕಾರಣ ಅದನ್ನು ನಿರ್ವಹಿಸಲಾಗುವುದಿಲ್ಲ ಎಂದು ಹೇಳಿದ್ದರು

Latest Videos
Follow Us:
Download App:
  • android
  • ios