Asianet Suvarna News Asianet Suvarna News

ಮಥುರಾ ಹೈ ಅಲರ್ಟ್‌, ಮಸೀದಿಯ ಒಳಗೆ ಹನುಮಾನ್‌ ಚಾಲಿಸಾ ಪಠಣ ಮಾಡ್ತೇವೆ ಎಂದ ಹಿಂದು ಮಹಾಸಭಾ!

ಬಾಬ್ರಿ ಮಸೀದಿ ಧ್ವಂಸ ಮಾಡಿದ ವಾರ್ಷಿಕೋತ್ಸವವನ್ನು ಆಚರಣೆ ಮಾಡುವ ಸಲುವಾಗಿ ಮಥುರಾದ ಶಾಹಿ ಈದ್ಗಾ ಮಸೀದಿಯಲ್ಲಿ ಹನುಮಾನ್‌ ಚಾಲೀಸಾ ಪಠಣೆ ಮಾಡುವುದಾಗಿ ಹಿಂದು ಮಹಾಸಭಾ ಘೋಷಣೆ ಮಾಡಿದೆ ಇದರ ಬೆನ್ನಲ್ಲಿಯೇ ಇಡೀ ಮಥುರಾ ನಗರಕ್ಕೆ ಹೈ ಅಲರ್ಟ್‌ ಅನ್ನು ಪೊಲೀಸ್‌ ಪ್ರಕಟಿಸಿದೆ.

Hindu Mahasabha calls for reciting Hanuman Chalisa inside Shahi Masjid Idgah mosque Mathura put on alert san
Author
First Published Dec 6, 2022, 11:21 AM IST

ಮಥುರಾ (ಡಿ.6): ಬಾಬ್ರಿ ಧ್ವಂಸದ ವಾರ್ಷಿಕೋತ್ಸವದ ದಿನವಾದ ಡಿಸೆಂಬರ್ 6 ರಂದು ಮಥುರಾದಲ್ಲಿ ಹೈ ಅಲರ್ಟ್‌ ಘೋಷಣೆ ಮಾಡಲಾಗಿದೆ.  ಮಂಗಳವಾರ ಶಾಹಿ ಈದ್ಗಾ ಮಸೀದಿಯೊಳಗೆ ಹನುಮಾನ್ ಚಾಲೀಸಾ ಪಠಿಸುವುದಾಗಿ ಅಖಿಲ ಭಾರತ ಹಿಂದೂ ಮಹಾಸಭಾ ಘೋಷಿಸಿದೆ. ಶ್ರೀ ಕೃಷ್ಣ ಜನ್ಮಭೂಮಿಯ ಮೂಲ ಗರ್ಭಗುಡಿಯಲ್ಲಿ ಹನುಮಾನ್‌ ಚಾಲೀಸಾವನ್ನು ಓದಲಾಗುವುದು ಎಂದು ಮಹಾಸಭಾ ಹೇಳಿದೆ. ಸಭೆಯಲ್ಲಿ ಮಥುರಾ ಚಲೋ ಘೋಷಣೆ ಮೊಳಗಿದ್ದು, ಜಿಲ್ಲೆಯಲ್ಲಿ ಪೊಲೀಸರು ದೊಡ್ಡ ಮಟ್ಟದ ಅಲರ್ಟ್‌ ಘೋಷಣೆ ಮಾಡಿದ್ದಾರೆ. ಹಿಂದು ಮಹಾಸಭಾ ಈ ಘೋಷಣೆ ಮಾಡಿದ ಬೆನ್ನಲ್ಲಿಯೇ ಪೊಲೀಸರು ಮಸೀದಿಗೆ ತೆರಳುವ ಮಾರ್ಗದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದ್ದು, ಶಾಹಿ ಮಸೀದ ಮಾರ್ಗದ ಕಡೆಗೆ ತೆರಳುವ ಪ್ರತಿ ವಾಹನಗಳ ತಪಾಸಣೆ ಮಾಡುತ್ತಿದ್ದಾರೆ. ಬೆಳಗ್ಗೆ ಶಾಹಿ ಈದ್ಗಾದಲ್ಲಿ ಲಡ್ಡು ಗೋಪಾಲನ ಜಲಾಭಿಷೇಕ ಹಾಗೂ ರುದ್ರಾಭಿಷೇಕ ಮಾಡಲು ಬರುತ್ತಿದ್ದ ಹಿಂದೂ ಮಹಾಸಭಾ ಕಾರ್ಯಕರ್ತ ಸೌರಭ್ ಶರ್ಮಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಭದ್ರತೆಯ ದೃಷ್ಟಿಯಿಂದ ಶಾಹಿ ಈದ್ಗಾ ಮಸೀದಿಯ ಸನಿಹದಲ್ಲಿಯೇ ಹಾದು ಹೋಗುವ ಮಥುರಾ-ವೃಂದಾವನ ರೈಲು ಮಾರ್ಗವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಈ ನಡುವೆ ರಾಷ್ಟ್ರೀಯ ಖಜಾಂಚಿ ದಿನೇಶ್ ಶರ್ಮಾ ವಿಡಿಯೋ ಬಿಡುಗಡೆ ಮಾಡಿದ್ದು, ಹಾಗೇನಾದರೂ ಶಾಹಿ ಈದ್ಗಾ ಮಸೀದಿಯಲ್ಲಿ ಹನುಮಾನ್‌ ಚಾಲೀಸಾ ಓದುವ ತಮ್ಮ ಪ್ರಯತ್ನವನ್ನು ತಡೆದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ. ಹಿಂದು ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷೆ ರಾಜಶ್ರೀ ಚೌಧರಿ ಕೂಡ ಈಗಾಗಲೇ ಮಥುರಾಕ್ಕೆ ತಲುಪಿದ್ದಾರೆ. 

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮೊಮ್ಮಗಳು ಮತ್ತು ಮಹಾಸಭಾದ ಅಧ್ಯಕ್ಷರಾದ ರಾಜಶ್ರೀ ಚೌಧರಿ ಅವರು ನವೆಂಬರ್‌ 16 ರಂದು ವಾರಣಾಸಿಗೆ ಹೋಗಿದ್ದರು. ಡಿ.6ರಂದು ಶ್ರೀಕೃಷ್ಣ ಜನ್ಮಸ್ಥಳೀ ಮಥುರಾ ಚಲೋ ಎಂಬ ಘೋಷಣೆಯನ್ನು ಅವರು ನೀಡಿದ್ದರು, ಶಾಹಿ ಈದ್ಗಾವನ್ನು ಸಾಕ್ಷಾತ್ ಶ್ರೀ ಕೃಷ್ಣನ ಜನ್ಮಸ್ಥಳ ಎಂದು ಬಣ್ಣಿಸಿ, ಹನುಮಾನ್ ಚಾಲೀಸಾ ಪಠಣ ಮತ್ತು ಲಡ್ಡು ಗೋಪಾಲನ ಜಲಾಭಿಷೇಕವನ್ನು ಸಹ ಘೋಷಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಎಲ್ಲಾ ಹಿಂದೂ ಮುಖಂಡರು ಮಥುರಾ ತಲುಪುವಂತೆ ಮನವಿ ಮಾಡಿದ್ದರು.

ರಾತ್ರಿಯೇ ಪೊಲೀಸರ ಪಥಸಂಚಲನ, 4 ಜಿಲ್ಲೆಗಳಿಂದ ಆಗಮಿಸಿದ ಪೊಲೀಸ್‌ ಪಡೆ, ಡ್ರೋನ್‌ ಕಣ್ಗಾವಲು: ಮಥುರಾದಲ್ಲಿ ಸೋಮವಾರ ರಾತ್ರಿ ಎಸ್‌ಎಸ್‌ಪಿ ಶೈಲೇಶ್‌ ಪಾಂಡೆ ನೇತೃತ್ವದಲ್ಲಿ ಪಥಸಂಚಲನ ನಡೆಸಲಾಗಿದ್ದು, ಅಹಿತಕರ ಘಟನೆ ಸಂಭವಿಸಿದರೆ ಯಾರೊಬ್ಬರನ್ನೂ ಬಿಡುವುದಿಲ್ಲ ಎಂದು ಸಂದೇಶ ನೀಡಲಾಗಿದೆ. ಬರುವ ಮತ್ತು ಹೋಗುವ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ನಿಗಾ ಇಡುವಂತೆ ಪೊಲೀಸ್ ಸಿಬ್ಬಂದಿಗೆ ತಿಳಿಸಲಾಗಿದೆ. ಯಾರಾದರೂ ಅನುಮಾನಾಸ್ಪದವಾಗಿ ಕಂಡುಬಂದರೆ, ಅವರನ್ನು ವಿಚಾರಣೆಗೆ ಒಳಪಡಿಸಿ ಎನ್ನಲಾಗಿದೆ. ಶ್ರೀ ಕೃಷ್ಣ ಜನ್ಮಸ್ಥಾನ ಮತ್ತು ಶಾಹಿ ಈದ್ಗಾದ ಸುತ್ತಲಿನ ಪ್ರದೇಶವನ್ನು 2 ಸೂಪರ್ ವಲಯಗಳು, 4 ವಲಯಗಳು ಮತ್ತು 8 ವಲಯಗಳಾಗಿ ವಿಂಗಡಿಸಲಾಗಿದೆ.

Krishna Janmabhoomi case: ಶ್ರೀಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ವಿವಾದ: ಅಕ್ಟೋಬರ್‌ 3 ರಿಂದ ವಿಚಾರಣೆ ಆರಂಭ

ಆಗ್ರಾ ವಲಯದ ಸುಮಾರು 1260 ಪೊಲೀಸರನ್ನು ಇಲ್ಲಿ ನಿಯೋಜಿಸಲಾಗಿದೆ. ಫಿರೋಜಾಬಾದ್, ಮೈನ್‌ಪುರಿ, ಅಲಿಗಢ ಮತ್ತು ಆಗ್ರಾದಿಂದ ಪಡೆಗಳನ್ನು ಕರೆಸಲಾಗಿದೆ. 2 ಕಂಪನಿ ಪಿಎಸಿ ಮತ್ತು ಗುಪ್ತಚರ ಏಜೆನ್ಸಿಗಳನ್ನು ನಿಯೋಜಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಡ್ರೋನ್ ಕ್ಯಾಮೆರಾಗಳ ಮೂಲಕ ನಿಗಾ ಇಡಲಾಗಿದೆ. ಅನುಮತಿ ಇಲ್ಲದೆ ಯಾವುದೇ ಕಾರ್ಯಕ್ರಮ ನಡೆಸಲು ಬಿಡುವುದಿಲ್ಲ ಎಂದು ಎಸ್‌ಎಸ್‌ಪಿ ಶೈಲೇಶ್ ಪಾಂಡೆ ತಿಳಿಸಿದ್ದಾರೆ. ಗುಪ್ತಚರ ವಿಭಾಗ ನಿರಂತರವಾಗಿ ಬೆಳವಣಿಗೆಗಳ ಮೇಲೆ ಗಮನವಿಟ್ಟಿದೆ ಎಂದಿದ್ದಾರೆ.

Lord Krishna Muslim Devotee ಮಥುರಾದ ಶ್ರೀಕೃಷ್ಣ ಭಕ್ತ ಸೈಯದ್ ಇಬ್ರಾಹಿಂ ಸಮಾಧಿಗೆ ಯೋಗಿ ಆದಿತ್ಯನಾಥ್ ಭೇಟಿ!

30 ವರ್ಷಗಳ ಹಿಂದೆ ಬಾಬ್ರಿ ಮಸೀದಿ ಧ್ವಂಸ: 30 ವರ್ಷಗಳ ಹಿಂದೆ ಇದೇ ದಿನ ಅಯೋಧ್ಯೆಯಲ್ಲಿ ಬಾಬರಿ ಮಸೀದಿಯ ರಚನೆಯನ್ನು ಕೆಡಲವಾಗಿತ್ತು. ಆ ಬಳಿಕ ಸಾಕಷ್ಟು ಹಿಂಸಾತ್ಮಕ ಘಟನೆಗಳು ದೇಶದಲ್ಲಿ ನಡೆದಿದ್ದವು. ಬಳಿಕ ಈ ವಿಚಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಸಾಕಷ್ಟು ವಿಚಾರಣೆಯ ಬಳಿಕ 2019ರಲ್ಲಿ ಪ್ರಕರಣವನ್ನು ಸುಪ್ರೀಂ ಕೋರ್ಟ್‌ ಮುಕ್ತಾಯ ಮಾಡಿದೆ.

Follow Us:
Download App:
  • android
  • ios