ಇಂಧನ ದರದಿಂದ ಕಂಗಾಲಾದ ಜನತೆಗೆ ಮತ್ತೊಂದು ಬರೆ, 14 ವರ್ಷದ ಬಳಿಕ ಬೆಂಕಿ ಪೊಟ್ಟಣ ಬೆಲೆ ಏರಿಕೆ!
- ದೇಶದಲ್ಲಿ ಇಂಧನ ಬೆಲೆ ಏರಿಕೆ, ಅಗತ್ಯ ಬೆಲೆ ಏರಿಕೆಯಿಂದ ಜನ ಕಂಗಾಲು
- ಇದರ ಬೆನ್ನಲ್ಲೇ ಬೆಂಕಿ ಪೊಟ್ಟಣ ಬೆಲೆ ಏರಿಕೆ, ಡಿಸೆಂಬರ್ 1 ರಿಂದ ನೂತನ ದರ
- 14 ವರ್ಷಗಳ ಬಳಿಕ ಬೆಂಕಿ ಪೊಟ್ಟಣ ಬೆಲೆ ಏರಿಕೆ
ನವದೆಹಲಿ(ಅ.23): ಪೆಟ್ರೋಲ್ ಡೀಸೆಲ್(Petrol Diesel) ಬೆಲೆ ಏರಿಕೆಯಿಂದ ಜನ ಹೈರಾಣಾಗಿದ್ದಾರೆ. ಇದರ ಪರಿಣಾಮ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಈ ಶಾಕ್‌ನಿಂದ ಜನರಿಗೆ ಮೇಲೇಳೆಲು ಸಾಧ್ಯವಾಗುತ್ತಿಲ್ಲ. ಇದರ ಬೆನ್ನಲ್ಲೇ ಇದೀಗ ಬೆಂಕಿ ಪೊಟ್ಟಣದ(Matchbox) ಬೆಲೆಯೂ ಏರಿಕೆಯಾಗುತ್ತಿದೆ. ಡಿಸೆಂಬರ್ 1, 2021ರಿಂದ 1 ರೂಪಾಯಿ ಇದ್ದ ಬೆಂಕಿ ಪೊಣ್ಣದ ಬೆಲೆ 2 ರೂಪಾಯಿ ಆಗಲಿದೆ.
ಬರೋಬ್ಬರಿ 14 ವರ್ಷಗಳ ಬಳಿಕ ಬೆಂಕಿ ಪೊಟ್ಟಣದ ಬೆಲೆ ಏರಿಕೆಯಾಗಿದೆ. ಈಗಾಗಲೇ ಬೆಲೆ ಏರಿಕೆ ನಡುವೆ ಇದೀಗ ಸ್ಥಿರ ಬೆಲೆಯಲ್ಲಿದ್ದ ಬೆಂಕಿ ಪೊಟ್ಣಣ ಕೂಡ ವರಸೆ ಬದಲಿಸಿದೆ. ಈ ಬೆಲೆ ಏರಿಕೆ(Price Hike) ನಿರ್ಧಾರವನ್ನು ಎಲ್ಲಾ ಬೆಂಕಿ ಪೊಟ್ಟಣ ಕಂಪನಿಗಳ ಒಕ್ಕೂಟ ತೆಗೆದುಕೊಂಡಿದೆ. ಹಣದುಬ್ಬರ, ಕಚ್ಚಾ ವಸ್ತುಗಳ ಬೆಲೆ ಏರಿಕೆ, ಸಾರಿಗೆ ವೆಚ್ಚಗಳಿಂದ ಬೆಂಕಿ ಪೊಟ್ಟಣವನ್ನು 1 ರೂಪಾಯಿಯಲ್ಲಿ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ಬೆಲೆ ಏರಿಕೆ ಮಾಡಲಾಗುತ್ತಿದೆ ಎಂದು ಬೆಂಕಿ ಪೊಟ್ಟಣ ಕಂಪನಿಗಳು ಹೇಳಿವೆ.
ಬೆಂಕಿ ಪೊಟ್ಟಣ ಸಾಗಿಸುತ್ತಿದ್ದ ಲಾರಿ ಆಕಸ್ಮಿಕ ಬೆಂಕಿಗೆ ಭಸ್ಮ
ಕೊನೆಯದಾಗಿ 2007ರಲ್ಲಿ ಬೆಂಕಿ ಪೊಟ್ಟಣ ಬೆಲೆ ಏರಿಕೆಯಾಗಿತ್ತು. 2007ರಲ್ಲಿ 50 ಪೈಸೆಯಿಂದ 1 ರೂಪಾಯಿಗೆ ಬೆಲೆ ಏರಿಸಲಾಗಿತ್ತು. ಇದೀಗ ಡಿಸೆಂಬರ್ 1 ರಿಂದ 1 ರೂಪಾಯಿಂದ 2 ರೂಪಾಯಿಗೆ ಏರಿಕೆಯಾಗುತ್ತಿದೆ. ಇದಕ್ಕೆ ಕಾರಣ ಬೆಂಕಿ ಪೊಟ್ಟಣ ಉತ್ಪಾದನೆಗೆ ಬೇಕಾಗಿರುವ ಕಚ್ಚಾ ವಸ್ತುಗಳಾದ ಫಾಸ್ಪರಸ್ ಬೆಲೆ 425 ರೂಪಾಯಿಯಿಂದ 810 ರೂಪಾಯಿಗೆ ಏರಿಕೆಯಾಗಿದೆ. ಇನ್ನು ಮೇಣದ ದರ 58 ರಿಂದ 80 ರೂಪಾಯಿಗೆ ಏರಿಕೆಯಾಗಿದೆ. ಹೊರ ಬಾಕ್ಸ್ ಬೋರ್ಡ್ ಬೆಲೆ 36 ರಿಂದ 55 ರೂಪಾಯಿಗೆ ಏರಿಕೆಯಾಗಿದ್ದರೆ, ಒಳ ಬಾಕ್ಸ್ ಬೋರ್ಡ್ ಬೆಲೆ 32 ರೂಪಾಯಿಂದ 58 ರೂಪಾಯಿಗೆ ಏರಿಕೆಯಾಗಿದೆ.
ಸಿಗರೇಟ್ ಹಚ್ಚಲು ಬೆಂಕಿ ಪೊಟ್ಟಣ ಕೇಳಿದ್ದೇ ತಪ್ಪಾಯ್ತಾ? ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ
ಅಕ್ಟೋಬರ್ ತಿಂಗಳಲ್ಲಿ ಪೋಟಾಸಿಯಂ ಕ್ಲೋರೇಟ್ , ಕಾಗದ ಸ್ಪ್ಲಿಂಟ್ ಮತ್ತು ಗಂಧಕದ ಬೆಲೆ ಅಕ್ಟೋಬರ್ ತಿಂಗಳಿನಿಂದ ಹೆಚ್ಚಾಗಿದೆ. ಹೀಗಾಗಿ ಬೆಂಕಿ ಪೊಟ್ಟಣ ಉತ್ಪಾದನೆ ವೆಚ್ಚವೂ ಹೆಚ್ಚಾಗಿದೆ. ಈ ಕಾರಣದಿಂದ ಎಲ್ಲಾ ಕಂಪನಿಗಳು ಜೊತೆಯಾಗಿ ಚರ್ಚಿಸಿ 2 ರೂಪಾಯಿಗೆ ಬೆಲೆ ಏರಿಕೆ ಮಾಡುವ ನಿರ್ಧಾರಕ್ಕೆ ಬಂದಿದೆ.