Asianet Suvarna News Asianet Suvarna News

ರಾಷ್ಟ್ರ ರಾಜಧಾನಿಯಲ್ಲಿ ಭಾರಿ ಅಗ್ನಿ ದುರಂತ: ಪೈಂಟ್ ಕಾರ್ಖಾನೆಗೆ ಬೆಂಕಿ: 11 ಜನರ ಬಲಿ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ದೆಹಲಿಯ ಅಲಿಪುರದ ದಯಾಲ್‌ಪುರ ಮಾರ್ಕೆಟ್‌ನಲ್ಲಿರುವ ಪೇಂಟ್ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಫ್ಯಾಕ್ಟರಿ ಒಳಗಿದ್ದ 11 ಜನ ದಾರುಣವಾಗಿ ಸಾವನ್ನಪ್ಪಿದ್ದಾರೆ. 

Massive fire disaster in national capital Paint factory fire 11 killed in Delhi akb
Author
First Published Feb 16, 2024, 8:02 AM IST

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ದೆಹಲಿಯ ಅಲಿಪುರದ ದಯಾಲ್‌ಪುರ ಮಾರ್ಕೆಟ್‌ನಲ್ಲಿರುವ ಪೇಂಟ್ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಫ್ಯಾಕ್ಟರಿ ಒಳಗಿದ್ದ 11 ಜನ ದಾರುಣವಾಗಿ ಸಾವನ್ನಪ್ಪಿದ್ದಾರೆ. ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ. 

ನಾಲ್ವರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಒಬ್ಬರು ಪೊಲೀಸ್ ಸಿಬ್ಬಂದಿ ಆಗಿ ರಕ್ಷಣಾ ಕಾರ್ಯಾಚರಣೆ ವೇಳೆ ಅವರು  ಗಾಯಗೊಂಡಿದ್ದಾರೆ, ದೆಹಲಿ ಅಗ್ನಿ ಶಾಮಕ ಸಿಬ್ಬಂದಿ ಈ ಬಗ್ಗೆ ಮಾತನಾಡಿದ್ದು, ತಮಗೆ ಸಂಜೆ 5.30ರ ಸುಮಾರಿಗೆ  ಪೇಂಟ್ ಫ್ಯಾಕ್ಟರಿಗೆ ಬೆಂಕಿ ಬಿದ್ದಿರುವುದಾಗಿ ಕರೆ ಬಂತು,  ಕೂಡಲೇ 22 ಅಗ್ನಿ ಶಾಮಕ ವಾಹನಗಳು ಸ್ಥಳಕ್ಕೆ ತೆರಳಿದವು ಎಂದು ಹೇಳಿದ್ದಾರೆ. 

ಪ್ರಭಾವಿಗಳ ಕೈವಾಡ, ರಾತ್ರಿ ಗುಡಿಸಲುಗಳಿಗೆ ಬೆಂಕಿ ಇಟ್ಟ ದುರುಳರು, ಚಿತ್ರದುರ್ಗದ ನಗರಸಭೆ ಅಧಿಕಾರಿಗಳ ಕೈವಾಡವೇ?

ಘಟನೆಯ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು,  ಅದರಲ್ಲಿ ಫ್ಯಾಕ್ಟರಿ ಒಳಗಿನಿಂದ ಬೆಂಕಿಯ ಭಾರಿ ಕೆನ್ನಾಲಿಗೆಗಳು ಹೊರ ಬರುತ್ತಿರುವುದು ಹಾಗೂ ದಟ್ಟವಾದ ಹೊಗೆ ಆಕಾಶಕ್ಕೇರಿರುವ ದೃಶ್ಯ ಸೆರೆ ಆಗಿದೆ. ಬೆಂಕಿಯಿಂದಾಗಿ ಸ್ಫೋಟ ಸಂಭವಿಸಿದ್ದು, ಸಮೀಪದ ಅಂಗಡಿ ಹಾಗೂ ಮನೆಗಳಿಗೂ ಬೆಂಕಿ ವ್ಯಾಪಿಸಿಕೊಂಡಿದೆ. ಗಾಯಾಳುಗಳಲ್ಲಿ ಕೆಲವರು ಸಮೀಪದ ಮನೆಗಳಲ್ಲಿ ವಾಸ ಮಾಡುವವರಾಗಿದ್ದಾರೆ.  ಪೊಲೀಸರ ಪ್ರಕಾರ ಫ್ಯಾಕ್ಟರಿ ಒಳಗಿನ ಸ್ಫೋಟದಿಂದ ಬೆಂಕಿ ಕಾಣಿಸಿಕೊಂಡಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. 

ಕಳೆದ ತಿಂಗಳಷ್ಟೇ ದೆಹಲಿಯಲ್ಲಿ ಬಹುಮಹಡಿ ಕಟ್ಟಡವೊಂದರಲ್ಲಿ ನಡೆದ ಅಗ್ನಿ ದುರಂತದಲ್ಲಿ 9 ತಿಂಗಳ  ಹೆಣ್ಣು ಮಗು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದರು ಜನವರಿ 26 ರಂದು ರಾಷ್ಟ್ರ ರಾಜಧಾನಿ ದೆಹಲಿಯ ಶಹ್ದಾರ್ ಪ್ರದೇಶದಲ್ಲಿ ಇರುವ ಬಹುಮಹಡಿ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಈ ದುರಂತ ಸಂಭವಿಸಿತ್ತು.  ಹಾಗೆಯೇ ಜನವರಿ 18 ರಂದು ನಡೆದ ಮತ್ತೊಂದು ಅಗ್ನಿ ದುರಂತದಲ್ಲಿ ಆರು ಜನ ಮೃತಪಟ್ಟಿದ್ದರು. ದೆಹಲಿಯ ಪಿತಂಪುರದಲ್ಲಿರುವ ಬಹುಮಹಡಿ ಕಟ್ಟಡವೊಂದರಲ್ಲಿ ಈ ದುರಂತ ಸಂಭವಿಸಿತ್ತು.

ಚಿಲಿ ಕಾಡ್ಗಿಚ್ಚಿಗೆ 100ಕ್ಕೂ ಹೆಚ್ಚು ಬಲಿ: 200 ಜನ ಕಾಣೆ, 1,600 ಜನರ ಮನೆ ಸುಟ್ಟು ಭಸ್ಮ
 

 

 

Follow Us:
Download App:
  • android
  • ios