ಒಂದೇ ವಾರದಲ್ಲಿ ಬೋಳು ತಲೆ; 3 ಗ್ರಾಮದ ಜನರಲ್ಲಿ ಶುರುವಾಯ್ತು ಆತಂಕ, ತನಿಖೆ ಆರಂಭ!
ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯ ಮೂರು ಗ್ರಾಮಗಳಲ್ಲಿ ನಿವಾಸಿಗಳು ಸಾಮೂಹಿಕ ಕೂದಲು ಉದುರುವಿಕೆಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕೆಲವರು ಒಂದೇ ವಾರದಲ್ಲಿ ಬೋಳಾಗಿದ್ದಾರೆ, ಮತ್ತು ಆರೋಗ್ಯ ಅಧಿಕಾರಿಗಳು ಜಲಮಾಲಿನ್ಯವನ್ನು ಶಂಕಿಸಿದ್ದಾರೆ. ನೀರು ಮತ್ತು ಕೂದಲಿನ ಮಾದರಿಗಳನ್ನು ಪರೀಕ್ಷಿಸಲಾಗುತ್ತಿದೆ.
ಮುಂಬೈ (ಜ.8): ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯ ಮೂರು ಗ್ರಾಮಗಳಲ್ಲಿ ಆತಂಕಕಾರಿ ವಾತಾವರಣ ನಿರ್ಮಾಣವಾಗಿದೆ. ಇಲ್ಲಿನ ನಿವಾಸಿಗಳು ಕಳೆದ ಕೆಲವು ದಿನಗಳಿಂದ ಸಾಮೂಹಿಕವಾಗಿ ಕೂದಲು ಉದುರುವಿಕೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಎಷ್ಟರ ಮಟ್ಟಿಗೆ ಇದು ಪರಿಣಾಮ ಬೀರಿದೆ ಎಂದರೆ, ಕೆಲವು ವ್ಯಕ್ತಿಗಳು ಒಂದೇ ವಾರದಲ್ಲಿ ತಮ್ಮ ತಲೆಯ ಮೇಲಿದ್ದ ಕೂದಲನ್ನು ಕಳೆದುಕೊಂಡು ಬೋಳಾಗಿದ್ದಾರೆ. ಸಾಮೂಹಿಕವಾಗಿ ಇಷ್ಟು ಜನರಲ್ಲಿ ಕೂದಲು ಉದುರುವಿಕೆ ಸಮಸ್ಯೆ ಕಾಣಿಸಿಕೊಂಡಿರುವುದು ರಸಗೊಬ್ಬರಗಳಿಂದ ಉಂಟಾಗಿರುವ ಜಲಮಾಳಿನ್ಯ ಕಾರಣ ಎಂದು ಆರೋಗ್ಯ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಆ ಪ್ರದೇಶದಲ್ಲಿನ ನೀರಿನ ಮಾದರಿಗಳನ್ನು ಮತ್ತು ಗ್ರಾಮಸ್ಥರ ಕೂದಲು ಮತ್ತು ಚರ್ಮದ ಮಾದರಿಗಳನ್ನು ಪರೀಕ್ಷೆಗಾಗಿ ಸಂಗ್ರಹಿಸಿದ್ದಾರೆ.
ಮೂರು ಗ್ರಾಮಗಳಾದ ಬೋರ್ಗಾಂವ್, ಕಲ್ವಾಡ್ ಮತ್ತು ಹಿಂಗ್ನಾದಲ್ಲಿ ಈ ಸಮಸ್ಯೆ ಕಾಣಿಸಿದೆ. ಈ ಗ್ರಾಮಗಳು ಬುಲ್ಧಾನ ಜಿಲ್ಲೆಯ ಶೇಗಾಂವ್ ತೆಹಸಿಲ್‌ನಲ್ಲಿವೆ. ಕಳೆದ ಕೆಲವು ದಿನಗಳಿಂದ ಇಲ್ಲಿ ವಾಸ ಮಾಡುತ್ತಿರುವ ಪುರುಷರು ಹಾಗೂ ಮಹಿಳೆಯರಲ್ಲಿ ಅಪಾರ ಪ್ರಮಾಣದಲ್ಲಿ ಕೂದಲು ಉದುರುವಿಕೆ ಸಮಸ್ಯೆ ಕಾಣುತ್ತಿದೆ. ಕೂದಲು ಉದುರುವಿಕೆ ಪ್ರಾರಂಭವಾದ ನಂತರ, ವ್ಯಕ್ತಿಯು ಒಂದು ವಾರದೊಳಗೆ ಸಂಪೂರ್ಣವಾಗಿ ಬೋಳಾಗುತ್ತಿದ್ದಾರೆ.
ಇನ್ನೂ ಕೆಲವು ಮಂದಿ ಕ್ಯಾಮೆರಾದ ಎದುರಲ್ಲಿಯೇ ಇದನ್ನು ತೋರಿಸಿದ್ದಾರೆ. ತಲೆಯ ಕೂದಲನ್ನು ಸುಮ್ಮನೆ ಕೈಯಲ್ಲಿ ಹಿಡಿದರೂ ಕೂದಲು ಕಿತ್ತು ಕೈಯಲ್ಲಿ ಬರುತ್ತಿದೆ. ಅದರಲ್ಲೂ ಈ ಸಮಸ್ಯೆ ಕಾಣಿಸಿಕೊಂಡ ಒಂದೇ ವಾರದಲ್ಲಿ ತಲೆಯ ಮೇಲೆ ಬಾಲ್ಡ್ ಸ್ಪಾಟ್ ಕಾಣಿಸುತ್ತಿದೆ ಎಂದಿದ್ದಾರೆ. ಈ ಗ್ರಾಮದ ನಿವಾಸಿಗಳ ಆತಂಕ ಹೆಚ್ಚಾದ ಬೆನ್ನಲ್ಲಿಯೇ ಜಿಲ್ಲೆಯ ಅಗ್ರ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಗ್ರಾಮಗಳಿಗೆ ಭೇಟಿ ನೀಡಿದ ಆರೋಗ್ಯ ಇಲಾಖೆಯ ತಂಡದ ಪ್ರಕಾರ, ಸುಮಾರು 50 ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಗುರುತಿಸಲಾಗಿದೆ ಮತ್ತು ವೈದ್ಯರು ಈ ಸಂಖ್ಯೆ ಹೆಚ್ಚಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಚರ್ಮ ಮತ್ತು ಕೂದಲಿನ ಮಾದರಿಗಳನ್ನು ಸಂಗ್ರಹಿಸಲಾಗಿದೆ ಮತ್ತು ಕಲುಷಿತ ನೀರು ಮತ್ತು ಆರೋಗ್ಯ ಸಮಸ್ಯೆಯಿಂದ ಈ ತ್ವರಿತ ಕೂದಲು ಉದುರುವಿಕೆ ಉಂಟಾಗಿರಬಹುದು ಎಂದು ವೈದ್ಯರು ಅಂದಾಜಿಸಿದ್ದಾರೆ. ಸಾಮೂಹಿಕ ಕೂದಲು ಉದುರುವಿಕೆಗೆ ಕಾರಣವನ್ನು ಗುರುತಿಸಲು ವೈದ್ಯರು ಪರೀಕ್ಷೆಯ ಫಲಿತಾಂಶಗಳಿಗಾಗಿ ಕಾಯುತ್ತಿದ್ದಾರೆ, ಅವರು ತಮ್ಮ ಆರೋಗ್ಯದ ಬಗ್ಗೆ ಉತ್ತಮ ಕಾಳಜಿ ವಹಿಸುವಂತೆ ಹಳ್ಳಿಗಳ ಜನರಲ್ಲಿ ಮನವಿ ಮಾಡಿದ್ದಾರೆ.
ಕಂಪನಿ ನಿಮ್ಮ ಪಿಎಫ್ ಕಟ್ ಮಾಡಿದ್ರೂ ಅಕೌಂಟ್‌ಗೆ ಜಮೆ ಮಾಡ್ತಿಲ್ವಾ? ಹಾಗಿದ್ದರೆ ಈ ರೀತಿ ದೂರು ನೀಡಿ
ಗ್ರಾಮಕ್ಕೆ ಭೇಟಿ ನೀಡಿದ ಆರೋಗ್ಯ ತಂಡದಲ್ಲಿ ಶೇಗಾಂವ್ ಆರೋಗ್ಯಾಧಿಕಾರಿ ಡಾ.ದೀಪಾಲಿ ರಾಹೇಕರ್ 'ಇದು ಕಲುಷಿತ ನೀರಿನಿಂದ ಆಗಿರಬಹುದು. ನಾವು ಮಾದರಿಗಳನ್ನು ಸಂಗ್ರಹಿಸಿದ್ದೇವೆ ಮತ್ತು ತೀರ್ಮಾನವನ್ನು ತಲುಪಲು ಅವುಗಳನ್ನು ಪರೀಕ್ಷಿಸುತ್ತೇವೆ' ಎಂದಿದ್ದಾರೆ.
Viral: ಕೇರಳ ಉತ್ಸವದ ಭಯಾನಕ ವಿಡಿಯೋ; ವ್ಯಕ್ತಿಯನ್ನ ಸೊಂಡಿಲಿನಲ್ಲಿ ಎತ್ತಿ ಗರಗರನೆ ತಿರುಗಿಸಿ ಎಸೆದ ಆನೆ!