ಮಲಪ್ಪುರಂ ಜಿಲ್ಲೆಯ ಮಸೀದಿಯ ವಾರ್ಷಿಕ ಉತ್ಸವದಲ್ಲಿ ಆನೆಯೊಂದು ಸಿಟ್ಟಿಗೆದ್ದು 17 ಜನರಿಗೆ ಗಾಯಗೊಳಿಸಿದೆ. ಆನೆ ಸೊಂಡಿಲಿನಿಂದ ವ್ಯಕ್ತಿಯೊಬ್ಬರನ್ನು ಎತ್ತಿ ಗಾಳಿಯಲ್ಲಿ ತಿರುಗಿಸಿ ಎಸೆದ ಘಟನೆ ನಡೆದಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ.

ಕೊಚ್ಚಿ (ಜ.8): ತಡರಾತ್ರಿ ಕೇರಳದ ಮಲಪ್ಪುರಂ ಜಿಲ್ಲೆಯ ಮಸೀದಿಯೊಂದರಲ್ಲಿ ವಾರ್ಷಿಕ ಉತ್ಸವದ ವೇಳೆ ಆನೆಯ ಸಿಟ್ಟಿಗೆ ಜನ ಕಂಗಾಲಾಗಿದ್ದಾರೆ. ಆನೆಯ ಸಿಟ್ಟಿನಿಂದಾಗಿ ಕನಿಷ್ಠ 17 ಜನರು ಗಾಯಗೊಂಡಿದ್ದಾರೆ, ಅವರಲ್ಲಿ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಿರೂರಿನಲ್ಲಿ ನಡೆದ ಪುತಿಯಂಗಡಿ ಉತ್ಸವದಲ್ಲಿ ನೂರಾರು ಮಂದಿ ನೆರೆದಿದ್ದರು. ಉತ್ಸವದಲ್ಲಿ ಕನಿಷ್ಠ ಐದು ಆನೆಗಳನ್ನು ಚಿನ್ನದ ತಟ್ಟೆಗಳಿಂದ ಅಲಂಕಾರ ಮಾಡಲಾಗಿತ್ತು. ಅದರ ಹತ್ತಿರದಲ್ಲಿದ್ದ ಜನರು ಆನೆಯನ್ನು ವಿಡಿಯೋ ಮಾಡಲು ಮುಂದಾಗುತ್ತಿದ್ದರು. ಈ ಹಂತದಲ್ಲಿ ಸಿಟ್ಟಾದ ಒಂದು ಆನೆ, ಗುಂಪಿನ ಮೇಲೆ ಏರಿ ಹೋಗುತ್ತದೆ. ಆನೆಯ ಮೇಲೆ ಕುಳಿತಿದ್ದ ಮಾವುತ ಆನೆಯನ್ನು ನಿಯಂತ್ರಣ ಮಾಡಲು ಹರಸಾಹಸ ಪಟ್ಟರೂ ಅದು ಸಾಧ್ಯವಾಗಲಿಲ್ಲ. ಪಕ್ಕಾತು ಶ್ರೀಕುಟ್ಟನ್ ಎಂಬ ಹೆಸರಿನ ಈ ಆನೆ ತನ್ನ ಎದುರಿಗಿದ್ದ ವ್ಯಕ್ತಿಯೊಬ್ಬನ ಕಾಲನ್ನು ಸೊಂಡಿಲಿನಿಂದ ಎಳೆದುಕೊಂಡು ಗಾಳಿಯಲ್ಲಿ ಗರಗರನೆ ತಿರುಗಿಸಿ ಎಸೆದಿದೆ. 

ಬುಧವಾರ ಮುಂಜಾನೆ 12.30ಕ್ಕೆ ಈ ಘಟನೆ ನಡೆದಿದೆ. ಕೃಷ್ಣನ್‌ ಕುಟ್ಟಿ ಎನ್ನುವ ವ್ಯಕ್ತಿಯ ಪರಿಸ್ಥಿತಿ ಗಂಭೀರವಾಗಿದೆ ಎನ್ನುವ ವರದಿಗಳು ಕೇಳಿಬಂದಿದೆ. ಈತನಿಗೆ ಕೋಟಕ್ಕಲ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆನೆ ಸಿಟ್ಟಾದ ಕಾರಣದಿಂದ ಹತ್ತಿರದಲ್ಲಿದ್ದ ಜನರು ದಿಕ್ಕಾಪಾಲಾಗಿ ಓಡುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಹೆಚ್ಚಿನ ಗಾಯಗಳು ಕಾಲ್ತುಳಿತದಂಥ ಪರಿಸ್ಥಿತಿ ನಿರ್ಮಾಣವಾದ ಕಾರಣದಿಂದ ಆಗಿದೆ ಎನ್ನಲಾಗಿದೆ.

ಮಹಿಳೆಯ ದೇಹ ರಚನೆ ಮೇಲೆ ಕಾಮೆಂಟ್ ಮಾಡಿದ್ರೆ ಲೈಂಗಿಕ ಕಿರುಕುಳ: ಹೈಕೋರ್ಟ್

ಈ ವೇಳೆ ಕೆಲವು ವ್ಯಕ್ತಿಗಳು ಚೈನ್‌ಅನ್ನು ಹಿಡಿದು ಆನೆಯನ್ನು ನಿಯತ್ರಿಸಲು ಕೂಡ ಪ್ರಯತ್ನಪಟ್ಟಿದ್ದಾರೆ. ಅಂದಾಜು 2 ಗಂಟೆಯ ಬಳಿಕ ಆನೆ ನಿಯಂತ್ರಣಕ್ಕೆ ಬಂದಿದೆ. ನಂತರ ಆನೆಯನ್ನು ಯಾವುದೇ ಕಾರ್ಯಕ್ರಮಕ್ಕೆ ಬಳಸಿಕೊಳ್ಳಲಾಗಲಿಲ್ಲ. ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿ ಕೊಟ್ಟಕ್ಕಲ್‌ನ ಖಾಸಗಿ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ನಲ್ಲಿದ್ದಾರೆ. ಬಳಿಕ 1.45ರ ಸುಮಾರಿಗೆ ಆನೆಯನ್ನು ನಿಯಂತ್ರಿಸಲಾಗಿದೆ. ನಿಯಮ ಬದ್ಧವಾಗಿಯೇ ಆನೆಯನ್ನು ಪಾಲ್ಗೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಘಟನೆಯ ನಂತರ, ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ ಉಳಿದ ಸಮಾರಂಭಗಳಲ್ಲಿ ಆನೆಗಳನ್ನು ಮೆರವಣಿಗೆ ಮಾಡುವುದನ್ನು ನಿಷೇಧಿಸಿದರು. ಇಂದು ಬೆಳಗ್ಗೆ ಸಮಾರಂಭ ಮುಕ್ತಾಯವಾಗಿದೆ.

ಕೇರಳದ ಖ್ಯಾತ ಆಭರಣ ವ್ಯಾಪಾರಿ ಬಾಬಿ ಚೆಮ್ಮನೂರು ವಿರುದ್ಧ ನಟಿ ಹನಿ ರೋಸ್‌ ಲೈಂ*ಗಿಕ ಕಿರುಕುಳ ಆರೋಪ

Scroll to load tweet…