ಕಂಪನಿಯು ನಿಮಗೆ ನೀಡುವ ಸಂಬಳದಲ್ಲಿ ಪಿಎಫ್‌ ಕಟ್‌ ಮಾಡುತ್ತಿದೆ. ಆದರೆ, ಆ ಹಣವನ್ನು ನಿಮ್ಮ ಪಿಎಫ್‌ ಅಕೌಂಟ್‌ಗೆ ಹಾಕುತ್ತಿಲ್ಲ ಎನ್ನುವ ದೂರುಗಳು ನಿಮ್ಮಲ್ಲೂ ಇರಬಹುದು. ನಿಮ್ಮ ಸಮಸ್ಯೆ ಕೂಡ ಇದಾಗಿದ್ದಲ್ಲಿ, ಎಲ್ಲಿ ದೂರು ನೀಡಬೇಕು ಅನ್ನೋ ವಿವರ ಇಲ್ಲಿದೆ.

ಬೆಂಗಳೂರು (ಜ.8): ಪಿಎಫ್ ಅಥವಾ ಪ್ರಾವಿಡೆಂಟ್ ಫಂಡ್ ಎಂದರೆ ಯಾವುದೇ ಉದ್ಯೋಗಿಯ ತುರ್ತು ನಿಧಿ. ಪಿಎಫ್‌ನಲ್ಲಿ ಉದ್ಯೋಗಿ ಮತ್ತು ಉದ್ಯೋಗದಾತರು ಇಬ್ಬರೂ ಉದ್ಯೋಗಿಯ ಮೂಲ ವೇತನದ 12% ಕೊಡುಗೆ ನೀಡುತ್ತಾರೆ. ಇದರಲ್ಲಿ 8.33% ಉದ್ಯೋಗಿ ಪಿಂಚಣಿ ಯೋಜನೆಗೆ (ಇಪಿಎಸ್) ಹೋಗುತ್ತದೆ, ಆದರೆ 3.67% ಇಪಿಎಫ್‌ಗೆ ಹೋಗುತ್ತದೆ, ಇದರಿಂದ ನಿವೃತ್ತಿಯ ನಂತರ ಆರ್ಥಿಕ ಭದ್ರತೆಯ ಬಗ್ಗೆ ನಿಮಗೆ ಯೋಚನೆ ಇರೋದಿಲ್ಲ. ಹಾಗಿದ್ದರೂ, ಅನೇಕ ಬಾರಿ ಸಂಬಳದಿಂದ ಪಿಎಫ್ ಹಣ ಕಡಿತವಾದರೂ ನಿಮ್ಮ ಪಿಎಫ್ ಖಾತೆಗೆ ಜಮಾ ಆಗುವುದಿಲ್ಲ. ನಿಮ್ಮೊಂದಿಗೂ ಹೀಗೆ ಆಗಿದ್ದರೆ ಹೇಗೆ ಮತ್ತು ಎಲ್ಲಿ ದೂರು ನೀಡಬೇಕು ಅನ್ನೋದರ ವಿವರ ಇಲ್ಲಿದೆ

ನಿಮ್ಮ ಪಿಎಫ್ ಬ್ಯಾಲೆನ್ಸ್ ಅನ್ನು ಹೀಗೆ ಪರಿಶೀಲಿಸಿ: ನಿಮ್ಮಲ್ಲಿ ಯುನಿವರ್ಸಲ್ ಖಾತೆ ಸಂಖ್ಯೆ (ಯುಎಎನ್) ಇದ್ದರೂ ಅಥವಾ ಇಲ್ಲದಿದ್ದರೂ, ನಿಮ್ಮ ಪಿಎಫ್ ಬ್ಯಾಲೆನ್ಸ್ ಅನ್ನು ಪರಿಶೀಲಿಸಲು ಹಲವು ಮಾರ್ಗಗಳಿವೆ. ನಿಮ್ಮ ಬ್ಯಾಲೆನ್ಸ್ ಮಾಹಿತಿಯನ್ನು ಪಡೆಯಲು 9966044425 ಮೊಬೈಲ್ ಸಂಖ್ಯೆಗೆ ಮಿಸ್ಡ್ ಕಾಲ್ ನೀಡಬಹುದು ಅಥವಾ 7738299899 ಗೆ SMS ಕಳುಹಿಸಬಹುದು. ಇದಲ್ಲದೆ, ನೀವು ಇಪಿಎಫ್‌ಒ ಆನ್‌ಲೈನ್ ಪೋರ್ಟಲ್‌ಗೆ ಲಾಗಿನ್ ಆಗುವ ಮೂಲಕ ಅಥವಾ ಉಮಾಂಗ್ ಮೊಬೈಲ್ ಅಪ್ಲಿಕೇಶನ್ ಬಳಸುವ ಮೂಲಕ ನಿಮ್ಮ ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು.

ಹಣ ಕಡಿತವಾದ 42 ಗಂಟೆಯ ಒಳಗೆ ಪಾಸ್‌ಬುಕ್‌ ಅಪ್‌ಡೇಟ್‌ ಆಗಬೇಕು: ನಿಮ್ಮ ಯುಎಎನ್ ಸಕ್ರಿಯವಾಗಿದ್ದರೆ ಮತ್ತು ನೋಂದಾಯಿತವಾಗಿದ್ದರೆ ಮಾತ್ರ ನೀವು ಇಪಿಎಫ್‌ಒ ಪೋರ್ಟಲ್‌ನಲ್ಲಿ ನಿಮ್ಮ ಪಿಎಫ್ ಬ್ಯಾಲೆನ್ಸ್ ಅನ್ನು ವೀಕ್ಷಿಸಬಹುದು. ಇಪಿಎಫ್‌ಒ ಪೋರ್ಟಲ್‌ನಲ್ಲಿ ನೋಂದಣಿಯಾದ 6 ಗಂಟೆಗಳ ನಂತರ ಇಪಿಎಫ್ ಇ-ಪಾಸ್‌ಬುಕ್ ಸೌಲಭ್ಯ ಲಭ್ಯವಿರುತ್ತದೆ. ನಿಮ್ಮ ಪಿಎಫ್ ಬ್ಯಾಲೆನ್ಸ್ ಹಣ ಕಡಿತವಾದ 24 ಗಂಟೆಗಳ ಒಳಗೆ ಪಾಸ್‌ಬುಕ್‌ನಲ್ಲಿ ಅಪ್‌ಡೇಟ್‌ ಆಗುತ್ತದೆ ಅನ್ನೋದು ನೆನಪಿರಲಿ.

ಎಟಿಎಂ ಮೂಲಕವೂ ಪಿಎಫ್‌ ವಿತ್‌ಡ್ರಾ ಮಾಡಲು ಸಾಧ್ಯವಾಗುವ EPFO 3.0 ಲಾಂಚ್‌ ದಿನಾಂಕ ಘೋಷಣೆ!

ಖಾತೆಗೆ ಪಿಎಫ್ ಜಮಾ ಮಾಡದಿದ್ದರೆ ಎಲ್ಲಿ ದೂರು ನೀಡಬೇಕು: ಕಂಪನಿಯು ಪಿಎಫ್ ಖಾತೆಗೆ ಹಣವನ್ನು ಜಮಾ ಮಾಡದಿದ್ದರೆ, ನೀವು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಮೂಲಕ ದೂರು ನೀಡಬಹುದು.

ಇಪಿಎಫ್‌ಒ ಸದಸ್ಯರಿಗೆ Important ನೋಟಿಸ್‌, ಜನವರಿ ಒಳಗಾಗಿ ಈ ಕೆಲಸ ಮಾಡಿ!

- ಮೊದಲು https://epfigms.gov.in/ ಪೋರ್ಟಲ್‌ಗೆ ಭೇಟಿ ನೀಡಿ.

- ಇಲ್ಲಿ ನಿಮ್ಮ ಯುಎಎನ್ ಸಂಖ್ಯೆ ಮತ್ತು ಪಾಸ್‌ವರ್ಡ್ ಅನ್ನು ಹಾಕಿ

- ಈಗ ‘ದೂರು ನೋಂದಾಯಿಸಿ’ (Register Grievance) ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

- ನಂತರ ‘ಪಿಎಫ್ ಜಮಾ ಆಗಿಲ್ಲ’ (Non-Deposit of PF) ಆಯ್ಕೆಯನ್ನು ಆರಿಸಿ.

- ಈಗ ನೀವು ನಿಮ್ಮ ಮತ್ತು ಕಂಪನಿಯ ಹೆಸರಿನ ಜೊತೆಗೆ ಕೇಳಲಾದ ಇತರ ಮಾಹಿತಿಯನ್ನು ಭರ್ತಿ ಮಾಡಿ ಸಬ್‌ಮಿಟ್‌ ಬಟನ್ ಮೇಲೆ ಕ್ಲಿಕ್ ಮಾಡಿ.

- ಇದರ ನಂತರ ದೂರು ದಾಖಲಾಗುತ್ತದೆ. ದೂರು ದಾಖಲಾದ ನಂತರ ನಿಮಗೆ ದೂರು ಸಂಖ್ಯೆ ಸಿಗುತ್ತದೆ. ಇದರ ಮೂಲಕ ನೀವು ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಿ ಸಮಯ ಸಮಯಕ್ಕೆ ಅಪ್‌ಡೇಟ್‌ಗಳನ್ನು ಪಡೆಯಬಹುದು.