ಕನೌಜ್‌ನಲ್ಲಿ ವಿವಾಹಿತ ವ್ಯಕ್ತಿಯೊಬ್ಬ ಪತ್ನಿ ಸಾವಿನ ನಂತರ ಆಕೆಯ ಒಬ್ಬಳು ತಂಗಿಯನ್ನು ಮದ್ವೆಯಾಗಿದ್ದ. ಈಗ ಮತ್ತೊಂದು ತಂಗಿಯ ಜೊತೆಗೂ ತನ್ನ ಮದ್ವೆ ಮಾಡಿ ಎಂದು ಆತ ಕರೆಂಟ್ ಟವರ್ ಏರಿ ಹೈಡ್ರಾಮಾ ಮಾಡಿದ್ದಾನೆ. ಘಟನೆಯ ಡಿಟೇಲ್ ಸ್ಟೋರಿ ಇಲ್ಲಿದೆ.

ಕನೌಜ್‌: ವಿವಾಹಿತ ವ್ಯಕ್ತಿಯೋರ್ವಹೆಂಡ್ತಿ ಸಾವಿನ ಬಳಿಕ ಆಕೆಯ ತಂಗಿಯನ್ನು ಮದುವೆಯಾಗಿದ್ದ. ಇದಾದ ಎರಡು ವರ್ಷಗಳ ನಂತರ ಆಕೆಯ ಮತ್ತೊಬ್ಬ ತಂಗಿಯೂ ಬೇಕು ಎಂದು ಆತ ಕರೆಂಟ್ ಟವರ್‌ ಹತ್ತಿದಂತಹ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶ ಕನೌಜ್‌ನಿಂದ ವರದಿಯಾಗಿದೆ. ರಾಜ್‌ ಸಕ್ಸೇನಾ ಎಂಬಾತ 2021ರಲ್ಲಿ ಮಹಿಳೆಯೊಬ್ಬರನ್ನು ಮದುವೆಯಾಗಿದ್ದ. ಆದರೆ ಮದುವೆಯಾಗಿ ಒಂದು ವರ್ಷದ ನಂತರ ಕಾಯಿಲೆಗೊಳಗಾಗಿ ಅವರು ಸಾವನ್ನಪ್ಪಿದ್ದರು. 

ಪತ್ನಿಯ ಸಾವಿನ ನಂತರ ನಾದಿನಿ ಜೊತೆ ಮದ್ವೆ: ಕೊನೆ ಮಗಳ ಮೇಲೂ ಅಳಿಮಯ್ಯನ ಕಣ್ಣು:

ಮೊದಲ ಪತ್ನಿಯ ಸಾವಿನದ ನಂತರ ಈ ರಾಜ್ ಸಕ್ಸೇನಾ ಆಕೆಯ ತಂಗಿಯನ್ನು ಮದುವೆಯಾಗಿದ್ದ. ಇದಾಗಿ ಎರಡು ವರ್ಷದ ನಂತರ ಪತ್ನಿಯ ಮತ್ತೊಬ್ಬಳು ತಂಗಿಯ ಮೇಲೆ ಈತನ ಕಣ್ಣು ಬಿದ್ದಿದ್ದು, ಆಕೆಯನ್ನು ತನಗೆ ಮದುವೆ ಮಾಡಿಕೊಡಿ ಎಂದು ಆತ ಕೇಳಿದ್ದಾನೆ. ಆದರೆ ಈತನ ಈ ಬೇಡಿಕೆಗೆ ಆತನ ಅತ್ತೆ ಮನೆಯವರು ಒಪ್ಪಿಲ್ಲ, ಹೀಗಾಗಿ ಆತ ಗುರುವಾರ ಮುಂಜಾನೆ ಕರೆಂಟ್ ಟವರ್ ಏರಿ ಸಾಯುತ್ತೇನೆ ಎಂದು ತನ್ನಕುಟುಂಬದವರನ್ನು ಬೆದರಿಸಿದ್ದಾನೆ. 

ನಾದಿನಿ ಜೊತೆ ಮದುವೆಯ ಭರವಸೆ ನೀಡಿ ಕೆಳಗಿಳಿಸಿದ ಪೊಲೀಸರು

ಇದಕ್ಕೂಮೊದಲು ಆತ ತನ್ನ 2ನೇ ಪತ್ನಿಯ ಬಳಿ ತಾನು ನಿನ್ನ ತಂಗಿಯನ್ನು ಮದುವೆಯಾಗುತ್ತೇನೆ ಎಂದು ಹೇಳಿದ್ದಾನೆ. ಆದರೆ ಅದಕ್ಕೆ ಆಕೆ ಸಾಧ್ಯವಿಲ್ಲ ಎಂದು ಹೇಳಿದ್ದಾಳೆ. ಇದರಿಂದ ಕುಪಿತಗೊಂಡ ಆತ ಬಾಲಿವುಡ್‌ನ ಶೋಲೆ ಸಿನಿಮಾ ಸ್ಟೈಲ್‌ನಲ್ಲಿ ಕರೆಂಟ್ ಟವರ್ ಏರಿ ತಾನು ತನ್ನ ನಾದಿನಿಯನ್ನು ಮದುವೆಯಾಗುವುದಾಗಿ ಬೊಬ್ಬೆ ಹಾಕಿದ್ದಾನೆ. ಹೀಗೆ ಹುಚ್ಚುತನ ಮೆರೆದ ಈತನನ್ನು ಕರೆಂಟ್ ಟವರ್‌ನಿಂದ ಕೆಳಗೆ ಇಳಿಸುವುದಕ್ಕೆ ಪೊಲೀಸರಿಗೆ ಸಾಕುಬೇಕು ಆಗಿದೆ. ಸುಮಾರು 7 ಗಂಟೆಗಳ ಕಾಲ ಆತ ಟವರ್ ಹತ್ತಿ ನಾಟಕ ಮಾಡಿದ್ದು, ಕಡೆಯದಾಗಿ ಪೊಲೀಸರು ಆತನಿಗೆ ನಾದಿನಿ ಜೊತೆ ಮದುವೆ ಮಾಡಿಸುವ ಭರವಸೆ ನೀಡಿ ಕೆಳಗಿಳಿಸಿದ್ದಾರೆ. ತನ್ನ ನಾದಿನಿಯೂ ತನ್ನನ್ನು ಪ್ರೀತಿಸುತ್ತಿರುವುದಾಗಿ ಈ ರಾಜ್ ಸಕ್ಸೇನಾ ಹೇಳಿದ್ದಾನೆ.

ಈತ ಟವರ್ ಏರಿ ಹೈಡ್ರಾಮಾ ಮಾಡಿರುವ ದೃಶ್ಯ ಅಲ್ಲಿ ನೆರೆದಿದ್ದ ಜನರ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಈಗ ವೈರಲ್ ಆಗಿದೆ.

ಇದನ್ನೂ ಓದಿ: ಕಾರಿನಿಂದ ಇಳಿದು ನಡುರಸ್ತೆಯಲ್ಲಿ ತಲವಾರ್‌ ಝಳಪಿಸುತ್ತಿದ್ದ ಸಿಖ್ ವ್ಯಕ್ತಿಗೆ ಗುಂಡಿಕ್ಕಿದ ಯುಎಸ್ ಪೊಲೀಸರು

ಇದನ್ನೂ ಓದಿ: ಮಕ್ಕಳ ಪಡೆಯಲು ಸನ್ನಿ ಲಿಯೋನ್ ಬಾಡಿಗೆ ತಾಯ್ತನದ ಮೊರೆ ಹೋಗಿದ್ದೇಕೆ? : ಸನ್ನಿ ಉತ್ತರ ಬಾರಿ ವೈರಲ್

Scroll to load tweet…