Asianet Suvarna News Asianet Suvarna News

ಮೊದಲ ಬಾರಿ ಬಂದ ರೈಲಿಗೆ ನೃತ್ಯದ ಮೂಲಕ ಸ್ವಾಗತ

  • ಮೊದಲ ಪ್ಯಾಸೆಂಜರ್ ರೈಲಿಗೆ ಪ್ರಾಯೋಗಿಕ ಚಾಲನೆ
  • ಮಣಿಪುರದ ಖೋಂಗ್‌ಶಾಂಗ್ ರೈಲು ನಿಲ್ದಾಣಕ್ಕೆ ಬಂದ ರೈಲು
  • ಸಂಪ್ರದಾಯಿಕ ನೃತ್ಯದ ಮೂಲಕ ಸ್ವಾಗತ
Manipuri Women Perform Traditional Dance As First Passenger Train Engine Reaches Khongsang akb
Author
Bangalore, First Published Mar 15, 2022, 6:27 PM IST | Last Updated Mar 15, 2022, 6:27 PM IST

ಇಂಫಾಲ್: ಮಣಿಪುರದಲ್ಲಿ ಮೊದಲ ಪ್ಯಾಸೆಂಜರ್ ರೈಲಿನ ಪ್ರಾಯೋಗಿಕ ಚಾಲನೆಯ ಭಾಗವಾಗಿ, ಮಣಿಪುರದ (Manipur) ನೋನಿ (Noney) ಜಿಲ್ಲೆಯಲ್ಲಿ ಹೊಸದಾಗಿ ನಿರ್ಮಿಸಲಾದ ಖೋಂಗ್‌ಶಾಂಗ್ (Khongshang) ರೈಲು ನಿಲ್ದಾಣಕ್ಕೆ ಸೋಮವಾರ ಮೊದಲ ಬಾರಿ ರೈಲು ಆಗಮಿಸಿತ್ತು. ಈ ವೇಳೆ ಮಹಿಳೆಯರು ಸಂಪ್ರದಾಯಿಕ ನೃತ್ಯ ಮಾಡಿ ಸ್ವಾಗತಿಸಿದರು. ಜಿರಿಬಾಮ್-ಇಂಫಾಲ್ (Jiribam-Imphal) ರೈಲ್ವೇ ಲೈನ್ ಯೋಜನೆಯಡಿಯಲ್ಲಿರುವ ಈ ರೈಲು ಮಾರ್ಗ ಈಶಾನ್ಯ ಪ್ರದೇಶದ ಜನರಿಗೆ ರೈಲ್ವೆ ಸಂಪರ್ಕವನ್ನು ಸುಧಾರಿಸುವ ಪ್ರಯತ್ನವಾಗಿದೆ. ಹಿಂದೂಸ್ತಾನ್ ಟೈಮ್ಸ್ ಪ್ರಕಾರ, ಈಶಾನ್ಯ ಗಡಿ ರೈಲ್ವೆಯ ಮುಖ್ಯ ಇಂಜಿನಿಯರ್ ಸಂದೀಪ್ ಶರ್ಮಾ (Sandeep Sharma) ನೇತೃತ್ವದ ಅಧಿಕಾರಿಗಳು ಈ ರೈಲಿನಲ್ಲಿ ಜಿರಿಬಾಮ್‌ನಿಂದ ರಾಣಿ ಗೈಡಿನ್ಲಿಯು (ಕೈಮೈ) ಮತ್ತು ಥಿಂಗೌ ರೈಲು ನಿಲ್ದಾಣಗಳ (Thingou railway station) ಮೂಲಕ ಖೋಂಗ್‌ಶಾಂಗ್ ವರಗೆ ಸುಮಾರು 62 ಕಿ.ಮೀ ಪ್ರಯಾಣಿಸಿದರು. 

ಈ ಮೊದಲ ಇಂಜಿನ್ ಬರುತ್ತಿದ್ದಂತೆಯೇ ಅನೇಕ ಸ್ಥಳೀಯರು ಎಂಜಿನ್ ಆಗಮನವನ್ನು ಸ್ವಾಗತಿಸಲು ನಿಲ್ದಾಣದಲ್ಲಿ ಜಮಾಯಿಸಿದರು. ಮಹಿಳೆಯರು ರೋಂಗ್‌ಮಿ ಬುಡಕಟ್ಟಿನ ಸಾಂಪ್ರದಾಯಿಕ ನೃತ್ಯಗಳನ್ನು ಪ್ರದರ್ಶಿಸುವ ಮೂಲಕ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. ರೈಲ್ವೆ ಸಚಿವಾಲಯವು ಮಹಿಳೆಯರು ನೃತ್ಯ ಮಾಡುತ್ತಿರುವ ಈ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. 'ಈಶಾನ್ಯ ರೈಲ್ವೆ ಸಂಪರ್ಕವು ಹೆಚ್ಚುತ್ತಿದೆ. ಭಾರತೀಯ ರೈಲ್ವೇ ಮಣಿಪುರದ ಖೋಂಗ್‌ಸಾಂಗ್ ತಲುಪುತ್ತಿದೆ. ಮೊದಲ ರೈಲು ಇಂಜಿನ್ ಜಿರಿಬಾಮ್-ಇಂಫಾಲ್ ರೈಲ್ ಲೈನ್ ಯೋಜನೆಯಡಿಯಲ್ಲಿ ಮಣಿಪುರದ ಖೊಂಗ್ಸಾಂಗ್ ನಿಲ್ದಾಣವನ್ನು ತಲುಪಿತು. ರೈಲು ಬರುತ್ತಿದ್ದಂತೆ ಮಣಿಪುರದ ಜನರು ತಮ್ಮ ಸಾಂಪ್ರದಾಯಿಕ ನೃತ್ಯದ ಮೂಲಕ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು' ಎಂದು ಬರೆದು ಅವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.  

North Karnataka Railway Line: ದಶಕವಾದರೂ ಮುಗಿಯದ ಬಾಗಲಕೋಟೆ-ಕುಡಚಿ ರೈಲು ಮಾರ್ಗ

ಈ ವಿಡಿಯೋ ವೈರಲ್ ಆಗಿದ್ದು, ಹಲವರು ಭಾರತೀಯ ರೈಲ್ವೇಗೆ ಧನ್ಯವಾದ ಹೇಳಿದ್ದಾರೆ. ಒಬ್ಬ ಬಳಕೆದಾರ, "ಧನ್ಯವಾದಗಳು ಭಾರತೀಯ ರೈಲ್ವೆಯ ಉತ್ತಮ ಸಾಧನೆಗಳು ಎಂದು ಕಾಮೆಂಟ್ ಮಾಡಿದ್ದಾರೆ. ವಾವ್ ಇದು ಒಳ್ಳೆಯ ಸುದ್ದಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

Uttara Kannada: ದಾಂಡೇಲಿ-ಅಳ್ನಾವರ ನಡುವೆ ವಿದ್ಯುತ್‌ ಚಾಲಿತ ರೈಲು ಮಾರ್ಗ
 

ಮಣಿಪುರ ಸಿಎಂ (Manipur CM) ಎನ್ ಬಿರೇನ್ ಸಿಂಗ್ (N Biren Singh) ಕೂಡ ಈ ಸುದ್ದಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದು ಇನ್ನೊಂದು ಮೈಲಿಗಲ್ಲು, ಇಂಜಿನ್  ಖೊಂಗ್‌ಸಾಂಗ್ ರೈಲು ನಿಲ್ದಾಣವನ್ನು ತಲುಪಿದೆ ಎಂದು ಹಂಚಿಕೊಳ್ಳಲು ಸಂತೋಷವಾಗಿದೆ. ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ಮಣಿಪುರದಲ್ಲಿ ಸಂಪರ್ಕವನ್ನು ಸುಧಾರಿಸಲು ನೀಡಿದ ಪ್ರಚೋದನೆಯು ರಾಜ್ಯದ ಆರ್ಥಿಕತೆಯನ್ನು ಅಗಾಧವಾಗಿ ಉತ್ತೇಜಿಸುತ್ತದೆ ಎಂದು ಬರೆದಿದ್ದಾರೆ. ಸುಮಾರು ₹ 14,322 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 111 ಕಿಮೀ ಇಂಫಾಲ್-ಜಿರಿಬಾಮ್ ರೈಲು ಮಾರ್ಗ ಮುಂದಿನ ವರ್ಷ ಡಿಸೆಂಬರ್‌ ವೇಳೆಗೆ ಪೂರ್ಣಗೊಳ್ಳಲಿದೆ.
 

Latest Videos
Follow Us:
Download App:
  • android
  • ios