Uttara Kannada: ದಾಂಡೇಲಿ-ಅಳ್ನಾವರ ನಡುವೆ ವಿದ್ಯುತ್ ಚಾಲಿತ ರೈಲು ಮಾರ್ಗ
* ನೈಋುತ್ಯ ರೈಲ್ವೆ ವಲಯದಿಂದ ಕಾಮಗಾರಿ ಆರಂಭ
* ಒಂದು ವರ್ಷದಲ್ಲಿ ಮುಕ್ತಾಯವಾಗುವ ನಿರೀಕ್ಷೆ
* ಉತ್ತರ ಕನ್ನಡ ಜಿಲ್ಲೆಯ ಪ್ರಥಮ ರೈಲು ಮಾರ್ಗ ಎಂಬ ಹೆಗ್ಗಳಿಕೆ
ದಾಂಡೇಲಿ(ಫೆ.20): ದಾಂಡೇಲಿ-ಅಳ್ನಾವರ(Dandeli to Alnavar) ನಡುವೆ ವಿದ್ಯುತ್ ಚಾಲಿತ ರೈಲು(Electric Powered Railway) ಮಾರ್ಗವಾಗಿ ಸದ್ಯದಲ್ಲಿಯೇ ಪರಿವರ್ತನೆಗೊಳ್ಳಲಿದ್ದು, ಈ ಕುರಿತು ಎಲ್ಲ ತಾಂತ್ರಿಕ ಕಾಮಗಾರಿಗಳು ಆರಂಭಗೊಂಡಿವೆ.
ದಾಂಡೇಲಿ- ಅಳ್ನಾವರ ರೈಲು ಮಾರ್ಗವು ಉತ್ತರ ಕನ್ನಡ(Uttara Kananda) ಜಿಲ್ಲೆಯ ಪ್ರಥಮ ರೈಲು ಮಾರ್ಗವಾಗಿದೆ. ಮೀಟರ್‌ಗೇಜ್‌ನಿಂದ ಬ್ರಾಡ್‌ಗೇಜ್ ಆಗಿ ಬದಲಾದ ಆನಂತರದಲ್ಲಿ ಈ ರೈಲುಮಾರ್ಗ ಸ್ಥಗಿತಗೊಂಡಿತ್ತು. ಇಪ್ಪತ್ತು ವರ್ಷಗಳ ಆನಂತರ 3 ವರ್ಷಗಳ ಹಿಂದೆ ಮತ್ತೆ ಆರಂಭವಾಗಿತ್ತು. ಆರಂಭವಾಗಿ ಒಂದೇ ವರ್ಷದಲ್ಲಿ ಕೋವಿಡ್-19(Covid-19) ಹಿನ್ನೆಲೆಯಲ್ಲಿ ಮತ್ತೆ ಸ್ಥಗಿತಗೊಂಡಿತ್ತು. ಆದರೆ ಈಗ ವಿದ್ಯುತ್‌ಚಾಲಿತ ಮಾರ್ಗಕ್ಕೆ ಕೆಲಸ ಆರಂಭಿಸಲಾಗಿದೆ.
ದಾಂಡೇಲಿಯ ರೈಲು ನಿಲ್ದಾಣದ ಹತ್ತಿರ ವಿದ್ಯುತ್ ಕಂಬಗಳನ್ನು ಹಾಕಿ ವಿದ್ಯುತ್ ತಂತಿ ಅಳವಡಿಸುವ ಮತ್ತು ವಿದ್ಯುತ್‌ಚಾಲಿತ ರೈಲು ಸಂಚಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ತಂತ್ರಜ್ಞಾನ(Technology) ಅಳವಡಿಸುವ ಕಾರ್ಯಗಳು ಆರಂಭವಾಗಿವೆ. ಇದರಲ್ಲಿ ಡಬಲ್ ಟ್ರ್ಯಾಕ್(Double Track) ಸಂಪರ್ಕ ಅಳವಡಿಸಲಾಗುತ್ತಿದೆ.
South East Central Railway Recruitment 2022: ಕ್ರೀಡಾ ಅಭ್ಯರ್ಥಿಗಳಿಗೆ ರೈಲ್ವೆ ಇಲಾಖೆ ಸೇರಲು ಭರ್ಜರಿ ಅವಕಾಶ
ಅಳ್ನಾವರದಿಂದ ದಾಂಡೇಲಿ 22 ಕಿಲೋಮೀಟರ್‌ನಷ್ಟು ಉದ್ದ ಈ ಕಾಮಗಾರಿ ನಡೆಯುತ್ತಿದೆ. ಪ್ರತಿ ಐವತ್ತು ಮೀಟರ್‌ಗೆ ಒಂದರಂತೆ ವಿದ್ಯುತ್ ಕಂಬವನ್ನು ಅಳವಡಿಸಲಾಗುತ್ತಿದೆ. ರೈಲ್ವೆ ಇಲಾಖೆಯ ತಂತ್ರಜ್ಞರು ಈ ಕೆಲಸವನ್ನು ಭರದಿಂದ ನಡೆಸುತ್ತಿದ್ದಾರೆ. ಹುಬ್ಬಳ್ಳಿ(Hubballi) ರೈಲ್ವೆ ವಲಯದಲ್ಲಿ ಒಟ್ಟು 588 ಕಿಲೋಮೀಟರ್ ವಿದ್ಯುದೀಕರಣದ ಕಾರ್ಯ ನಡೆಯಲಿದ್ದು, ಈ ಅಳ್ನಾವರ ಸಂಪರ್ಕದಲ್ಲಿ 37 ಕಿಲೋಮೀಟರ್‌ಗೆ ಅಳವಡಿಸಲಾಗುತ್ತದೆ. ಒಂದೊಮ್ಮೆ ದಾಂಡೇಲಿ ಅಳ್ನಾವರ ರೈಲು ಮಾರ್ಗ ವಿದ್ಯುತ್ ಚಾಲಿತವಾಗಿ ಪರಿವರ್ತನೆಯಾದರೆ ಅದು ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ವಿದ್ಯುತ್‌ಚಾಲಿತ ರೈಲು ಮಾರ್ಗವಾಗಿ ದಾಖಲಾಗಲಿದೆ. ಈ ಕಾಮಗಾರಿ ಸುಮಾರು ಒಂದು ವರ್ಷದಲ್ಲಿ ಮುಕ್ತಾಯವಾಗುವ ನಿರೀಕ್ಷೆ ಇದೆ.
ರೈಲು ಪುನರಾರಂಭವಾಗಿಲ್ಲ:
ಸ್ಥಳೀಯರ ಹೋರಾಟ ಮತ್ತು ಮನವಿಯ ಭಾಗವಾಗಿ ಕಳೆದ 3 ವರ್ಷಗಳ ಹಿಂದೆ ಅಳ್ನಾವರ-ದಾಂಡೇಲಿ ರೈಲು ಆರಂಭವಾಗಿತ್ತಾದರೂ ಕೋವಿಡ್-19 ಕಾರಣದಿಂದಾಗಿ ಮತ್ತೆ ಸ್ಥಗಿತವಾಗಿತ್ತು. ಕೊರೋನಾ ನಿಯಂತ್ರಣಕ್ಕೆ ಬಂದಿದೆ, ಆದರೂ ರೈಲ್ವೆ ಮಾತ್ರ ಇನ್ನೂ ಪುನರಾರಂಭಗೊಂಡಿಲ್ಲ. ಈ ಕುರಿತು ರೈಲ್ವೆ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ಸದ್ಯದಲ್ಲೇ ಪ್ರಾರಂಭವಾಗಲಿದೆ ಎಂಬ ಮಾತನ್ನು ಹೇಳುತ್ತಾರೆ. ವಿದ್ಯುತ್ ಸಂಪರ್ಕ ಕಾಮಗಾರಿ ಮುಗಿಯುವ ವರೆಗೆ ರೈಲು ಆರಂಭವಾಗುವ ಸಾಧ್ಯತೆ ಇಲ್ಲ.
East Coast Railway Apprentice Recruitment 2022: ಬರೋಬ್ಬರಿ 756 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ನೈಋುತ್ಯ ರೈಲ್ವೆಯಲ್ಲಿ(South Western Railway) ಹಲವು ಮಾರ್ಗಗಳು ವಿದ್ಯುತ್‌ಚಾಲಿತ ರೈಲು ಮಾರ್ಗವಾಗಿ ಪರಿವರ್ತನೆಗೊಂಡಿವೆ. ಇದೀಗ ಅಳ್ನಾವರ ಮಾರ್ಗದಲ್ಲಿ ದಾಂಡೇಲಿ ಸಹಿತ 37 ಕಿಲೋಮೀಟರ್ ಮಾರ್ಗಕ್ಕೆ ವಿದ್ಯುತ್ ಸಂಪರ್ಕ ನೀಡಲು ಕೆಲಸಗಳು ಆರಂಭಗೊಂಡಿವೆ ಅಂತ ರೈಲ್ವೆ ಇಲಾಖೆಯ ಹುಬ್ಬಳ್ಳಿ ವಲಯದ ಅಧಿಕಾರಿ ವಿಜಯಾ ತಿಳಿಸಿದ್ದಾರೆ.
ನೈಋುತ್ಯ ರೈಲ್ವೆ ವಲಯ ದಾಖಲೆಯ ಪಾರ್ಸೆಲ್ ಸೇವೆ
ನೈಋುತ್ಯ ರೈಲ್ವೆ ವಲಯವೂ(South Western Railway) ಪಾರ್ಸೆಲ್ ಸೇವೆಯಲ್ಲಿ ದಾಖಲೆಯ ಪ್ರಮಾಣದಲ್ಲಿ ಆದಾಯ ಗಳಿಸಿದೆ. 2021-22ರ ಫೆ. 1ರವರೆಗೆ ಬರೋಬ್ಬರಿ 100 ಕೋಟಿ ಆದಾಯವನ್ನು ಪಾರ್ಸೆಲ್ ಸೇವೆಯಿಂದಲೇ ಗಳಿಸಿದೆ. ಪಾರ್ಸೆಲ್ ಸೇವೆಯಿಂದ ಇಷ್ಟೊಂದು ಆದಾಯ ಗಳಿಸಿರುವುದು ಇದೇ ಮೊದಲಾಗಿದೆ. ಕರ್ನಾಟಕ, ಆಂಧ್ರ, ಗೋವಾ ವ್ಯಾಪ್ತಿಯ ವಲಯದಲ್ಲಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ ಮೂರು ವಿಭಾಗಗಳನ್ನು ಹೊಂದಿರುವ ದೊಡ್ಡ ವಲಯವೆನಿಸಿಕೊಂಡಿದೆ. ತನ್ನ ಆದಾಯ ಹೆಚ್ಚಿಸಿಕೊಳ್ಳಲು ವಿವಿಧ ಸಂಪನ್ಮೂಲ ಕ್ರೂಢೀಕರಣಕ್ಕೆ ಮುಂದಾಗುತ್ತದೆ. ಇದೀಗ ಪಾರ್ಸೆಲ್ ಸೇವೆಯ(Parcel Service) ಆದಾಯವನ್ನು(Income) ದ್ವಿಗುಣಗೊಳಿಸಿಕೊಂಡಿರುವುದು ವಿಶೇಷ.
ಕಳೆದ ವರ್ಷ(2020-2021) ಪಾರ್ಸೆಲ್ ಸೇವೆಯಿಂದ ಬರೋಬ್ಬರಿ 48.34 ಕೋಟಿ ಆದಾಯ ಗಳಿಸಿತ್ತು. ಈ ವರ್ಷ ಫೆ. 1ರೊಳಗೆ .100 ಕೋಟಿಗೂ ಅಧಿಕ ಆದಾಯ ಗಳಿಸುವ ಮೂಲಕ ದಾಖಲೆ ಸೃಷ್ಟಿಸಿದೆ.