Asianet Suvarna News Asianet Suvarna News

ಸ್ನೇಹಿತನ ರೀಲ್ಸ್‌ಗಾಗಿ ಹಿಂದೆ ತಿರುಗಿದವ ಸತ್ತೇ ಹೋದ: ಕೊನೆ ಕ್ಷಣ ಕ್ಯಾಮರಾದಲ್ಲಿ ಸೆರೆ

ಇತ್ತೀಚೆಗೆ ರೀಲ್ಸ್ ಮಾಡುವ ಭರದಲ್ಲಿ ಯುವ ಜನರು ತಮ್ಮ ಜೀವವನ್ನೇ ಬಲಿ ಕೊಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅದೇ ರೀತಿ ಇಲ್ಲೊಂದು ಕಡೆ ಗೆಳೆಯ ಮಾಡಿದ ರೀಲ್ಸ್‌ಗೆ ಫೋಸ್ ಕೊಡಲು ಹೋಗಿ ಬೈಕ್ ಸವಾರನೋರ್ವ ಸಾವಿನ ಮನೆ ಸೇರಿದ್ದಾನೆ.

man turned back to pose his friends reels while raiding bike was died by accident in maharashtra Dhule Solapur highway akb
Author
First Published Jul 6, 2024, 4:36 PM IST

ಇತ್ತೀಚೆಗೆ ರೀಲ್ಸ್ ಮಾಡುವ ಭರದಲ್ಲಿ ಯುವ ಜನರು ತಮ್ಮ ಜೀವವನ್ನೇ ಬಲಿ ಕೊಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅದೇ ರೀತಿ ಇಲ್ಲೊಂದು ಕಡೆ ಗೆಳೆಯ ಮಾಡಿದ ರೀಲ್ಸ್‌ಗೆ ಫೋಸ್ ಕೊಡಲು ಹೋಗಿ ಬೈಕ್ ಸವಾರನೋರ್ವ ಸಾವಿನ ಮನೆ ಸೇರಿದ್ದಾನೆ. ಮಹಾರಾಷ್ಟ್ರದ ಧೂಲೆ ಸೋಲಾಪುರ ಹೈವೇಯಲ್ಲಿ ಈ ದುರಂತ ನಡೆದಿದೆ. ಇದೆಂಥಾ ದುರಂತ ನೋಡಿ...  ಸ್ನೇಹಿತರಿಬ್ಬರು ಬೈಕ್‌ನಲ್ಲಿ ಕುಳಿತುಕೊಂಡು ಸವಾರಿ ಮಾಡುತ್ತಿದ್ದು, ಈ ವೇಳೆ ಹಿಂಬದಿ ಸವಾರ ಮೊಬೈಲ್‌ನಲ್ಲಿ ರೀಲ್ಸ್ ಮಾಡಲು ಶುರು ಮಾಡಿದ್ದಾನೆ. ತಾನೊಬ್ಬನೇ ರೀಲ್ಸ್ ಮಾಡಿಕೊಂಡು ಸುಮ್ಮನಿದ್ದರೆ ಈ ಅನಾಹುತ ಆಗ್ತಿರಲಿಲ್ವೋ ಏನೋ? ಮುಂದೆ ಬೈಕ್ ಬಿಡ್ತಾ ಇದ್ದ ಸ್ನೇಹಿತನನ್ನು ಕೂಡ ಈತ ರೀಲ್ಸ್‌ಗೆ ಸೆಳೆದಿದ್ದಾನೆ. 

ಇತ್ತ ರಸ್ತೆಯಲ್ಲಿ ತಾವು ಹೋಗುತ್ತಿದ್ದೇವೆ ಡಿವೈಡರ್‌ಗಳಿರುತ್ತವೆ ಬೇರೆ ವಾಹನ ಬರುತ್ತವೆ ಎಂಬ ಯಾವುದರ ಬಗ್ಗೆಯೂ ಯೋಚನೆ ಮಾಡದೇ ಆತನನ್ನು ಗೆಳೆಯನ ಕರೆಗೆ ಓಗೊಟ್ಟು ಕ್ಯಾಮರಾಗೆ ಫೋಸ್ ಕೊಟ್ಟಿದ್ದಾನೆ. ಅದೂ ಒಂದು ಸೆಕೆಂಡ್ ಆಗಿದ್ರೂ ಅನಾಹುತ ಆಗ್ತಿರಲಿಲ್ಲ, ಹಲವು ಸೆಕೆಂಡುಗಳ ಕಾಲ ರಸ್ತೆ ನೋಡುತ್ತಾ ಗಾಡಿ ಓಡಿಸುವ ಬದಲು ಬೈಕ್ ಚಾಲನೆಯಲ್ಲಿರುವಾಗಲೇ  ಕ್ಯಾಮರಾಗೆ ಫೋಸ್ ಕೊಟ್ಟಿದ್ದಾನೆ. ಪರಿಣಾಮ ಮುಂದೆ ಡಿವೈಡರ್‌ಗೆ ಬೈಕ್ ಡಿಕ್ಕಿ ಹೊಡೆದಿದ್ದು, ಗೆಳೆಯ ಸಾವನ್ನಪ್ಪಿದ್ದರೆ, ಸ್ನೇಹಿತನ ಸ್ಥಿತಿ ಚಿಂತಾಜನಕವಾಗಿದೆ. 

ಆಕಸ್ಮಿಕವಾಗಿ ಬಿಗಿದ ಕುಣಿಕೆ: ಸಾವಿನ ರೀಲ್ಸ್ ಮಾಡಲು ಹೋಗಿ ಸತ್ತೇ ಹೋದ ಯುವಕ

ಈ ಅಪಘಾತದ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಇಬ್ಬರೂ ಯುವಕರು ಮಹಾರಾಷ್ಟ್ರದ ಜಲ್ನಾ ಜಿಲ್ಲೆಗೆ ಸೇರಿದವರಾಗಿದ್ದಾರೆ. ಮಹಾರಾಷ್ಟ್ರದ ಧೂಲೆ ಸೋಲಾಪುರ್ ಹೈವೇಯಲ್ಲಿ ಈ ದುರಂತ ಸಂಭವಿಸಿದೆ. 

ಒಂದು ನಿಮಿಷದ ದೀರ್ಘ ವಿಡಿಯೋದಲ್ಲಿ ಕಾಣಿಸುವಂತೆ ಇಬ್ಬರೂ ಕೂಡ ಹೆಲ್ಮೆಟ್ ಧರಿಸಿಲ್ಲ, ವಾಹನ ಚಾಲನೆ ಮಾಡುತ್ತಿರುವುದನ್ನು ಮರೆತು ಕ್ಯಾಮರಾಗೆ ಫೋಸ್ ಕೊಟ್ಟ ಬೈಕ್ ರೈಡರ್ ಅಪಘಾತ ನಡೆಯುವವರೆಗೂ ಕ್ಯಾಮರಾದಿಂದ ತನ್ನ ದೃಷ್ಟಿ ತೆಗೆದಿಲ್ಲ, ವರದಿಗಳ ಪ್ರಕಾರ ಇವರಲ್ಲೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ವರದಿ ಆಗಿದೆ. ವೀಡಿಯೋದ ಕೊನೆಗೆ ಆಕಾಶ ಕಾಣಿಸುತ್ತಿದೆ. ಅಲ್ಲದೇ ಆಡಿಯೋದಲ್ಲಿ ಅಪಘಾತದ ನಂತರ ಸವಾರ ದಾರಿಯಲ್ಲಿ ಸಾಗುತ್ತಿದ್ದವರ ಬಳಿ ಸಹಾಯ ಕೇಳುತ್ತಿರುವುದು ಕೂಡ ರೆಕಾರ್ಡ್ ಆಗಿದೆ. ನನಗೆ ಸಹಾಯ ಮಾಡಿ, ರಕ್ತ ಸೋರುತ್ತಿದೆ, ನನ್ನ ಕಾಲು ಮುರಿದಿದೆ ಎಂದು ಆತ ಮರಾಠಿಯಲ್ಲಿ ಹೇಳುತ್ತಿರುವುದು ವೈರಲ್ ಆಗಿದೆ. 

ಒಟ್ಟಿನಲ್ಲಿ ರಸ್ತೆ ಬೈಕ್‌ನಲ್ಲಿ ಹೋಗುತ್ತಿದ್ದೇವೆ ಎಂಬುದನ್ನು ಮರೆತು ಕ್ಯಾಮರಾಗೆ ಫೋಸ್‌ ಕೊಟ್ಟ ಯುವಕರ ಈಗ ಮಸಣ ಸೇರಿದ್ದು, ಅಪಾಯಕಾರಿಯಾಗಿ ರೀಲ್ಸ್ ಮಾಡುವವರಿಗೆ (ಕಲಿತರೆ) ಇದೊಂದು  ಪಾಠವಾಗಿದೆ.

ರೀಲ್ಸ್ ಜೀವಕ್ಕಿಂತ ಹೆಚ್ಚ? 100 ಅಡಿ ಎತ್ತರದಿಂದ ಕೆರೆಗೆ ಹಾರಿದ ತರುಣ ಸಾವು: ವೀಡಿಯೋ ವೈರಲ್

 

Latest Videos
Follow Us:
Download App:
  • android
  • ios