ಅಲ್ಲೆ ಡ್ರಾ, ಅಲ್ಲೆ ಬಹುಮಾನ, ಮೂಕ ಪ್ರಾಣಿಗೆ ಹಿಂಸಿಸಲು ಹೋದವನಿಗೆ ಶಿಕ್ಷೆ ಬೀದಿ ನಾಯಿಗೆ ಒದಿಯಲು ಕಾಲೆತ್ತಿ ರಸ್ತೆಯಲ್ಲೇ ಬಿದ್ದ ಅಹಂಕರಾಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಸ್
ಬೆಂಗಳೂರು(ಫೆ.20): ತಪ್ಪು ಮಾಡಿದರೆ ಮುಂದಿನ ಜನ್ಮದಲ್ಲಿ ಪಾಪ ಸಿಗುತ್ತೆ ಅಥವಾ ನರಕ ಅನ್ನೋ ಮಾತುಗಳು ಈಗಿನ ಯುಗದಲ್ಲಿ ಇಲ್ಲ. ಕಾರಣ ಇದು ಡಿಜಿಟಲ್(Digital) ಯುಗ. ಇಲ್ಲಿ ತಪ್ಪು ಮಾಡಿದರೆ ಅಲ್ಲೆ ಶಿಕ್ಷೆ. ಹೀಗೆ ತನ್ನ ಪಾಡಿಗೆ ನಿಂತಿದ್ದ ಬೀದಿ ನಾಯಿಗೆ(Stray Dog) ಒದಿಯಲು ಹೋದ ಅಹಂಕಾರಿಗೆ ಅಲ್ಲೆ ಶಿಕ್ಷೆ ಸಿಕ್ಕಿದೆ. ಹೌದು, ಕಾಲೆತ್ತಿ ಒದಿಯಲು ಹೋದ ಅಹಂಕಾರಿ ಕಾಲು ಜಾರಿ ಬಿದ್ದ ವಿಡಿಯೋ ಭಾರಿ ವೈರಲ್(Viral Video) ಆಗಿದೆ.
ಈ ಘಟನೆ ನಡೆದಿರುವುದು ಎಲ್ಲಿ ಅನ್ನೋ ಮಾಹಿತಿ ಸ್ಪಷ್ಟವಾಗಿಲ್ಲ. ನಗರದಲ್ಲಿ ಅಂಗಡಿ ಮುಂಗಟ್ಟುಗಳ ಮುಂದೆ ಬೈಕ್ ನಿಲ್ಲಿಸಲಾಗಿದೆ. ಇದರ ಪಕ್ಕದಲ್ಲೇ ಬಿಳಿ ಬೀದಿ ನಾಯಿಯೊಂದು ನಿಂತಿದೆ. ಇದರ ಪಕ್ಕದಲ್ಲಿ ಮತ್ತೊಂದು ನಾಯಿ ಕೂಡ ಇದ. ರಸ್ತೆಯಲ್ಲಿ ತನ್ನ ಪಾಡಿಗೆ ನಿಂತಿದ್ದ ನಾಯಿಯನ್ನು ಅದೇ ದಾರಿಯಲ್ಲಿ ಬಂದ ವ್ಯಕ್ತಿ ಒದೆಯಲು ಯತ್ನಿಸಿದ್ದಾನೆ.
ಬೀದಿನಾಯಿಗೆ ಅನ್ನ ಹಾಕಿದ ವೃದ್ಧ... ಭಾವುಕ ವಿಡಿಯೋ ವೈರಲ್
ಯಾವುದರ ಅರಿವೇ ಇಲ್ಲದೆ ನಿಂತಿದ್ದ ನಾಯಿ ಮೇಲೆ ದಾಳಿಗೆ ಮುಂದಾದ ವ್ಯಕ್ತಿ ಕಾಲೆತ್ತಿ ಒದೆಯಲು ಯತ್ನಿಸಿದ್ದಾನೆ. ಅಷ್ಟರಲ್ಲೇ ಕಾಲು ಜಾರಿ ಅಲ್ಲೆ ಬಿದ್ದಿದ್ದಾನೆ. ಇತ್ತ ನಾಯಿ ವ್ಯಕ್ತಿ ಬೀಳುತ್ತಿದ್ದಂತೆ ಭಯದಿಂದ ದೂರ ಓಡಿ ಹೋಗಿದೆ. ರಸ್ತೆ ಮೇಲೆ ಬಿದ್ದಿದ್ದ ವ್ಯಕ್ತಿ ಮತ್ತೆ ಎದ್ದು ನಾಯಿತ್ತ ತೆರಳುವ ವಿಡಿಯೋ ಸಿಸಿಟಿವಿಯಲ್ಲಿ ದಾಖಲಾಗಿದೆ.
ಈ ವಿಡಿಯೋ ಭಾರಿ ವೈರಲ್ ಆಗಿದೆ. ಹಲವರು ಇದು ಕರ್ಮಫಲ ಎಂದಿದ್ದಾರೆ. ಮೂಕ ಪ್ರಾಣಿಗಳ ಹಿಂಸೆಗೆ ಯತ್ನಿಸಿದ ಈ ವ್ಯಕ್ತಿಗೆ ದೇವರು ಸ್ಥಳಕ್ಕೆ ಶಿಕ್ಷೆ ನೀಡಿದ್ದಾನೆ. ಬೀದಿಯಲ್ಲಿದ್ದ ನಾಯಿಗಳು ವ್ಯಕ್ತಿಯನ್ನು ದುರುಗುಟ್ಟಿ ನೋಡುವುದಾಗಲಿ, ಬೊಗಳುವುದಾಗಲಿ ಮಾಡಿಲ್ಲ. ಆದರೂ ನಾಯಿಗೆ ಹಿಂಸೆ ನೀಡಲು ಮುಂದಾಗಿರುವುದು ದುರಂತ. ಈ ರೀತಿಯ ವ್ಯಕ್ತಿಗಳಿಗೆ ದೇವರ ಶಿಕ್ಷೆ ಮಾತ್ರವಲ್ಲ, ಕಾನೂನಿನ ಅಡಿಯಲ್ಲೂ ಶಿಕ್ಷಿಸಬೇಕು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
Dog Accident ಆಡಿ ಕಾರಿಗೆ ಬಲಿಯಾದ ಲಾರಾ ಶ್ವಾನಗೆ ಕಣ್ಣೀರಿನ ವಿದಾಯ, ಕಾನೂನು ಕಠಿಣವಾಗ್ಬೇಕು ಎಂದ ರಮ್ಯಾ
ನಾಯಿ ಮೇಲಿನ ದೌರ್ಜನ್ಯ ಘಟನಗಳು ವರದಿಯಾಗುತ್ತಲೇ ಇದೆ. ಇತ್ತೀಚೆಗೆ ನಾಯಿ ಮೇಲೆ ಕಾರು ಹತ್ತಿಸಿ ಕೊಂದ ಘಟನೆ ಬಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಬೆಂಗಳೂರಿನಲ್ಲಿ ಉದ್ಯಮಿ ಆದಿಕೇಶವಲು ನಾಯ್ಡು ಮೊಮ್ಮಗ ಬೀದಿ ಬದಿಯಲ್ಲಿ ಮಲಗಿದ್ದ ನಾಯಿ ಮೇಲೆ ಕಾರು ಹತ್ತಿಸಿದ್ದರು. ತೀವ್ರವಾಗಿ ಗಾಯಗೊಂಡ ನಾಯಿ ಅಸುನೀಗಿತ್ತು. ಇದು ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದರು. ನಾಯಿ ಮೃತದೇಹ ರಸ್ತೆ ಬದಿಯಲ್ಲಿ ಚರಂಡಿಯಲ್ಲಿ ಪತ್ತೆಯಾಗಿತ್ತು. ಘಟನೆ ರಾಜ್ಯದಲ್ಲಿ ಭಾರಿ ಸದ್ದು ಮಾಡಿತ್ತು. ತಕ್ಷಣವೆ ಪೊಲೀಸರು ಸಿಸಿಟಿವಿ ಸೇರಿದಂತೆ ಇತರ ಮಾಹಿತಿ ಕಲೆ ಹಾಕಿ ಆರೋಪಿಯನ್ನು ಬಂಧಿಸಿದ್ದರು. ಈ ಕುರಿತು ರಾಜ್ಯ ಸೇರಿದಂತೆ ಇತರ ರಾಜ್ಯಗಳಲ್ಲೂ ಪ್ರತಿಭಟನೆಗಳು ನಡೆದಿತ್ತು. ಈ ರೀತಿಯ ಹಲವು ಘಟನೆಗಳು ನಡೆಯುತ್ತಲೇ ಇದೆ. ಕೆಲ ಘಟನೆಗಳು ಮಾತ್ರ ಬೆಳಕಿಗೆ ಬಂದಿದೆ.
ಭಾರತದಲ್ಲಿ ನಾಯಿ ವಿರುದ್ಧದ ನಡಯುತ್ತಿರುವ ಹಿಂಸೆ ಹಾಗೂ ದೌರ್ಜನ್ಯದ ವಿರುದ್ಧ ಹಲವು ಪ್ರತಿಭಟನೆ ಹೋರಾಟಗಳು ನಡೆದಿದೆ. ವರ್ಷಗಳ ಹಿಂದೆ ಬೈಕ್, ಕಾರಿಗೆ ನಾಯಿಯನ್ನು ಕಟ್ಟಿ ಎಳೆದೊಯ್ದು ಘಟನೆ ದೇಶದಲ್ಲಿ ಭಾರಿ ಸದ್ದು ಮಾಡಿತ್ತು. ಈ ಕ್ರೂರ ಘಟನೆಗೆ ದೇಶದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಇನ್ನು ನಾಯಿಯನ್ನು ಹತ್ಯೆ ಮಾಡಿದ ಘಟನೆಗಳು ವರದಿಯಾಗಿದೆ.
