Dog Accident ಆಡಿ ಕಾರಿಗೆ ಬಲಿಯಾದ ಲಾರಾ ಶ್ವಾನಗೆ ಕಣ್ಣೀರಿನ ವಿದಾಯ, ಕಾನೂನು ಕಠಿಣವಾಗ್ಬೇಕು ಎಂದ ರಮ್ಯಾ

* ಲಾರಾ ಶ್ವಾನಗೆ ಕಣ್ಣೀರಿನ ವಿದಾಯ ಹೇಳಿದ ಸ್ಯಾಂಡಲ್​ವುಡ್​ ಕ್ವೀನ್
* ಲಾರಾ ಪಾರ್ಥಿವ ಶರೀರದ ಬಳಿ ಗಾಯತ್ರಿ ಎನ್ನುವರು ಕಣ್ಣೀರು 
* ಲಾರಾ ನಾಯಿಯನ್ನ ಸಹ ಸಣ್ಣ ಮರಿಯಿಂದ ಸಲಹಿದ್ದರು ಗಾಯತ್ರಿ

Sandalwood actress  Ramya urges justice for street dog Lara that died Audi accident by Vishnu

ಬೆಂಗಳೂರು, (ಫೆ.01): ರಸ್ತೆ ಬದಿ ಮಲಗಿದ್ದನಾಯಿ ಲಾರಾ ನಾಯಿ(Dog) ಮೇಲೆ ಉದ್ಯಮಿ ದಿ. ಆದಿಕೇಶವುಲು ಮೊಮ್ಮಗ ಆದಿ ಕಾರು ಹತ್ತಿಸಿದ್ದು, ಇದೀಗ ಇಂದು(ಮಂಗಳವಾರ)  ಲಾರಾ ಶ್ವಾನ ಸಾವನ್ನಪ್ಪಿದೆ. 

ಬೆಂಗಳೂರಿನ ಸುಮನಹಳ್ಳಿ ಪ್ರಾಣಿಗಳ ಸ್ಮಶಾನದಲ್ಲಿ ಯಾರದ್ದೋ ತಪ್ಪಿಗೆ ಬಲಿಯಾಗಿದ್ದ ಲಾರಾ ಎಲ್ಲರೂ ಕಣ್ಣೀರು ಹಾಕುತ್ತಾ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಲಾರಾ ಪಾರ್ಥಿವ ಶರೀರದ ಬಳಿ ಗಾಯತ್ರಿ ಎನ್ನುವರು ಕಣ್ಣೀರು ಇಟ್ಟರು. ಗಾಯಿತ್ರಿ ಅವರು ಬೀದಿ ನಾಯಿಗಳಿಗೆ ಊಟ ಹಾಕಿ ಸಲಹುತ್ತಿದ್ದರು..

Animal Cruelty : ಶ್ವಾನದ ಮೇಲೆ ಕಾರು ಹತ್ತಿಸಿದ ಆದಿ ಬಂಧನ, ಕೆಲ ಹೊತ್ತಲ್ಲೆ ಬಿಡುಗಡೆ

ಲಾರಾ ನಾಯಿಯನ್ನ ಸಹ ಸಣ್ಣ ಮರಿಯಿಂದ ಸಲಹಿದ್ದರು. ಸೆಂಟ್‌ ಪೀಟರ್ಸ್ ಶಾಲಾ ಮಕ್ಕಳು ಸಹ ಲಾರಾಗೆ ಹೂಗುಚ್ಛ ಅರ್ಪಿಸಿ ಅಂತಿಮ ನಮನ ಸಲ್ಲಿಸಿದರು.

ಇನ್ನೂ ಈ ಬಗ್ಗೆ ರಮ್ಯಾ ಮೊನ್ನೆ ಕಿಡಿಕಾರಿದ್ದರು. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಟ್ವೀಟ್​ ಮಾಡಿದ್ದರು. ಇಂದು ಕೂಡ ಲಾರಾ ಅಂತ್ಯಕ್ರಿಯೆಯಲ್ಲಿ ಭಾಗಿಯಾಗುವಂತ ಭಾವುಕ ಪೋಸ್ಟ್​ ಮಾಡಿದ್ದರು..ಅಲ್ಲದೇ ಆರೋಪಿಯ ಮೃಗೀಯ ವರ್ತನೆಯನ್ನ ಖಂಡಿಸಿದ್ದಾರೆ.

Animal Cruelty : ಬೀದಿ ನಾಯಿ ಮೇಲೆ ಆಡಿ ಕಾರು ಹತ್ತಿಸಿ ವಿಕೃತಿ,  ಆದಿಕೇಶವಲು ಮೊಮ್ಮಗನ ಸಂಸ್ಕೃತಿ!

 ಆಕ್ಸಿಡೆಂಟ್ ಆಗತ್ತೆ  ಮನುಷ್ಯ ತಪ್ಪು ಮಾಡ್ತಾನೆ ಸಹಜ. ಆದ್ರೆ ಈ ವಿಚಾರದಲ್ಲಿ ನೋಡಿದಾಗ ಬೇಕಂತಲೇ ನಾಯಿ ಮೇಲೆ ಗಾಡಿ ಹತ್ತಿಸಿದ್ದಾರೆ ಇದನ್ನ ನೋಡಿ ಸಹಿಸಿಕೊಳ್ಳಲು ಆಗಲಿಲ್ಲ ಎಂದು ಆಕ್ರೋಶ ವ್ಯಕಪಡಿಸಿದರು.

ನಮ್ಮ ದೇಶದಲ್ಲಿ ಅನಿಮಲ್ ಲಾ‌ ಸ್ಟ್ರಿಕ್ಟ್ ಇಲ್ಲ. 50 ರೂಪಾಯಿ ಕೊಟ್ಟು ಹೊರಗಡೆ ಬರ್ತಾರೆ. ದಯೆ ಅನ್ನೋದು ಕೇವಲ ಮನುಷ್ಯನಿಗೆ ಅಲ್ಲ. ಪ್ರಕೃತಿಯಲ್ಲಿರುವ ಪ್ರಾಣಿಗಳಿಗೂ ಕೂಡ ಇರಬೇಕು ಎಂದರು.

ಮೊದಲನೆಯದಾಗು ಕಾನೂನು ಕಠಿಣವಾಗಿಬೇಕಿದೆ . ದೊಡ್ಡವರು ದುಡ್ಡಿರೋರು ಕಾನೂನಿನಲ್ಲಿ ಎಸ್ಕೇಪ್ ಆಗ್ತಾರೆ ಕಾನೂನು ಕಠಿಣಗೊಳಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಘಟನೆ ಹಿನ್ನಲೆ
ಜನವರಿ 26ರ ಸಂಜೆ 6.15ರ ಸುಮಾರಿಗೆ ರಸ್ತೆ ಬದಿಯಲ್ಲಿ ಮಲಗಿದ್ದ ಬೀದಿ ನಾಯಿ ಮೇಲೆ ಉದ್ಯಮಿ ಆದಿಕೇಶವುಲು ನಾಯ್ಡು ಮೊಮ್ಮಗ ಕಾರು ಹತ್ತಿಸಿದ್ದರು. ಇದನ್ನು ಉದ್ದೇಶಪೂರ್ವಕವಾಗಿ ಹತ್ತಿಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದರು.

ಕಾರು ಹತ್ತಿಸಿ ಬೀದಿನಾಯಿ ಸಾವು ಪ್ರಕರಣ ಸಂಬಂಧ ಇತ್ತೀಚೆಗೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಬಂಧಿತ ಕಾರು ಚಾಲಕ ಆದಿಕೇಶವನನ್ನ ತರಾಟೆಗೆ ತೆಗೆದುಕೊಂಡಿದ್ದರು. ಇದೇ ರೀತಿ ಸ್ಯಾಂಡಲ್​ವುಡ್ ನಟಿ ರಮ್ಯಾ ಸಹ ಆರೋಪಿಯ ಮೃಗೀಯ ವರ್ತನೆಯನ್ನ ಖಂಡಿಸಿದ್ದರು.

ಮಲಗಿದ್ದ ಬೀದಿ ನಾಯಿ ಮೇಲೆ‌ ಕಾರು ಹತ್ತಿಸಿ ವಿಕೃತಿ ಮೆರೆದಿದ್ದ ಕಾರು ಚಾಲಕ ಆದಿಕೇಶವನನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ. ಉದ್ಯಮಿ ಆದಿಕೇಶವಲು ನಾಯ್ಡು ಮೊಮ್ಮಗ ಆದಿ ಎಂಬಾತನ ವಿರುದ್ಧ ಬದ್ರಿಪ್ರಸಾದ್ ಎಂಬುವರು ದೂರು ನೀಡಿದ್ದರು.

ಜನವರಿ 29 ರಂದು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಬದ್ರಿ ಪ್ರಸಾದ್ ಎಂಬುವರು ದೂರು ನೀಡಿದ್ದರು. ಜ. 31 ರ ಬೆಳಗ್ಗೆ ಘಟನೆ ನಡೆದ ಪಕ್ಕದ ರಸ್ತೆಯ ಚರಂಡಿಯಲ್ಲಿ ಲಾರಾ ಮೃತದೇಹ ಪತ್ತೆಯಾಗಿತ್ತು. ಅದೇ ದಿನ ನಾಯಿಯ ಮೃತದೇಹವನ್ನು ಸಿದ್ದಾಪುರ ಪೊಲೀಸರು ಪೋಸ್ಟ್ ಮಾರ್ಟಮ್​​ಗೆ ರವಾನಿಸಿದ್ದರು. ಇಂದು ಸಂಜೆ ಸುಮನಹಳ್ಳಿ ಪ್ರಾಣಿ ಸ್ಮಶಾನದಲ್ಲಿ ಲಾರಾ ಅಂತಿಮ ಸಂಸ್ಕಾರ ನೆರವೇರಿದೆ.

Latest Videos
Follow Us:
Download App:
  • android
  • ios