Asianet Suvarna News Asianet Suvarna News

ಬೀದಿನಾಯಿಗೆ ಅನ್ನ ಹಾಕಿದ ವೃದ್ಧ... ಭಾವುಕ ವಿಡಿಯೋ ವೈರಲ್

  • ಭಾವುಕ ವಿಡಿಯೋ ಶೇರ್ ಮಾಡಿದ ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ
  • ಬೀದಿ ನಾಯಿಗೆ ಅನ್ನ ಹಾಕಿದ ವಯೋವೃದ್ಧ
  • ಟ್ವಿಟ್ಟರ್‌ನಲ್ಲಿ ವಿಡಿಯೋ ವೈರಲ್
Poor Man Feeds Rice to Stray Dog watch viral video akb
Author
Bangalore, First Published Feb 13, 2022, 2:03 PM IST

ಮುದುಕನೊಬ್ಬ ಬೀದಿ ನಾಯಿಗೆ ಆಹಾರ ನೀಡುತ್ತಿರುವ ಹೃದಯಸ್ಪರ್ಶಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ಪ್ರಬಲ ಸಂದೇಶದ ಜೊತೆಗೆ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ನೆಟ್ಟಿಗರು ಈ ವಿಡಿಯೋ ನೋಡಿ ಭಾವುಕರಾಗಿದ್ದಾರೆ.  ದೇವರು ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಮಾನವೀಯತೆಯನ್ನು ತೋರಿಸುವ ಸಾಮರ್ಥ್ಯವನ್ನು ಸೃಷ್ಟಿ ಮಾಡಿದ್ದಾನೆ ಎಂದು ಹಿಂದಿಯಲ್ಲಿ ಬರೆದು  ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ (Dipanshu Kabra) ಈ ವಿಡಿಯೋವನ್ನು ಪೋಸ್ಟ್‌ ಮಾಡಿದ್ದಾರೆ.

ದೇವರು ಪ್ರತಿಯೊಬ್ಬರಿಗೂ ಯಾರಿಗಾದರೂ ಯಾವ ರೀತಿಯಲ್ಲಾದರೂ ಸಹಾಯ ಮಾಡುವ ಸಾಮರ್ಥ್ಯವನ್ನು ನೀಡಿದ್ದಾನೆ. ಈ ವಯೋವೃದ್ಧರೊಬ್ಬರ ಈ ವಿಡಿಯೋ ಬಹುಶಃ ನಮಗೆ ಅದೇ ಸಂದೇಶವನ್ನು ನೀಡುತ್ತಿದೆ ಎಂದು ಅವರು ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ವೀಡಿಯೊದಲ್ಲಿ, ಹಳೆಯ ಮತ್ತು ಹರಿದ ಬಟ್ಟೆಗಳನ್ನು ಧರಿಸಿದ ವೃದ್ಧರೊಬ್ಬರು ತಮ್ಮ ಹಳೆಯ ಸೈಕಲ್‌ನ ಮುಂಭಾಗದಲ್ಲಿ ಬ್ಯಾಗ್ ನೇತು ಹಾಕಿಕೊಂಡು ಬರುತ್ತಿರುವುದನ್ನು ಕಾಣಬಹುದು. ಸೈಕಲ್‌ನ ಹಿಂಭಾಗದಲ್ಲಿ, ಅವರು ಆಗ ತಾನೇ ಬೇಯಿಸಿದ ಬಿಸಿ ಬಿಸಿ ಅನ್ನದ ದೊಡ್ಡ ಮಡಕೆಯನ್ನು ಹೊಂದಿದ್ದಾರೆ. ಆ ವ್ಯಕ್ತಿ ಸೈಕಲ್‌ನ್ನು ಬೀದಿ ನಾಯಿಯ ಬಳಿ ನಿಲ್ಲಿಸಿ, ದೊಡ್ಡ ಸೌಟ್‌ನ್ನು ತೆಗೆದುಕೊಂಡು ರಸ್ತೆಯ ಮೂಲೆಯಲ್ಲಿ ನಾಯಿಗೆ ಸ್ವಲ್ಪ ಅನ್ನವನ್ನು ಬಡಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ಹಸಿದ ನಾಯಿ ತಕ್ಷಣವೇ ಆಹಾರವನ್ನು ತಿನ್ನಲು ಪ್ರಾರಂಭಿಸುತ್ತದೆ ಮತ್ತು ವೃದ್ಧ ಇನ್ನಷ್ಟು ಆಹಾರವನ್ನು ನಾಯಿಗೆ ಬಡಿಸುತ್ತಲೇ ಇದ್ದಾರೆ.

Woman Bites: ನಾಯಿ ವಿಚಾರವಾಗಿ ಜಗಳ... ಶ್ವಾನದ ಮಾಲಕಿಗೆ ಕಚ್ಚಿದ್ದು ನಾಯಿ ಅಲ್ಲ ಮಹಿಳೆ...!

ಈ ವೀಡಿಯೊವನ್ನು 41 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. 4 ಸಾವಿರಕ್ಕೂ ಅಧಿಕ ಜನ ಲೈಕ್‌ ಮಾಡಿದ್ದಾರೆ. ನೋಡುಗರು ಈ ವಿಡಿಯೋವನ್ನು ಇಷ್ಟಪಟ್ಟಿದ್ದು, ನೋಡುಗರ ಕಣ್ಣಂಚಲಿ ಇದು ನೀರು ತರಿಸುತ್ತಿದೆ. ಅಮೀರ್ ಖಾನ್  ನಟನೆಯ ಪಿಕೆ( PK) ಸಿನಿಮಾದ  'ಯೇ ಭಗವಾನ್ ಹೈ ಕಹಾ ರೇ ತು' ಹಾಡು ವಿಡಿಯೊದ ಹಿನ್ನೆಲೆಯಲ್ಲಿ ಕೇಳಿ ಬರುತ್ತಿದೆ. ಅದು ಈ ವಿಡಿಯೋವನ್ನು ಇನ್ನಷ್ಟು ಭಾವುಕವಾಗಿಸುತ್ತಿದೆ.

ಶ್ವಾನಗಳು ಮನುಷ್ಯನ ಉತ್ತಮ ಸ್ನೇಹಿತರು, ತಮ್ಮ ಮಾಲೀಕನೊಂದಿಗೆ ಭಾವಾನಾತ್ಮಕವಾದ ನಂಟು ಹೊಂದಿರುವ ಶ್ವಾನಗಳು ಮನುಷ್ಯ ಹೋದಲೆಲ್ಲಾ ಜೊತೆಯಾಗಿ ಬಂದು ಕಷ್ಟ ಸುಖದಲ್ಲಿ ಜೊತೆ ಇರುತ್ತವೆ. ಆದರೆ ದೃಷ್ಠಿಹೀನ ಶ್ವಾನಗಳಿಗೆ ಹೀಗೆ ಹಿಂಬಾಲಿಸಲು ಸಾಧ್ಯವಿಲ್ಲ. ಇದನ್ನರಿತ ಶ್ವಾನದ ಮಾಲೀಕನೋರ್ವ ಹೊಸ ಐಡಿಯಾ ಮಾಡಿದ್ದು, ಆ ಐಡಿಯಾ ಸಾಮಾಜಿಕ ಜಾಲತಾಣದಲ್ಲಿ ಕೆಲ ದಿನಗಳ ಹಿಂದೆ ವೈರಲ್‌ ಆಗಿತ್ತು.

ನಂಗೂ ಬೇಕು... ಮಹಿಳೆ ತಿನ್ನೋದು ನೋಡಿ ತನ್ನ ತಟ್ಟೆ ತಂದು ಮುಂದಿಟ್ಟ ಶ್ವಾನ

ಈತ ಸಣ್ಣ ಮಕ್ಕಳ ಶೂಗಳಲ್ಲಿ ಇರುವಂತಹ ಪೀ ಪೀ ಸೌಂಡ್ ಬರುವಂತಹ ಪೀಪೀಗಳನ್ನು ತನ್ನ ಚಪ್ಪಲಿ ಹಾಗೂ ಕೆಲವು ಆಟಿಕೆಗಳಿಗೆ ಅಳವಡಿಸಿದ್ದಾನೆ. ಈ ಸದ್ದನ್ನು ಕೇಳುವ ಶ್ವಾನ ಈತನನ್ನೇ ಹಿಂಬಾಲಿಸುತ್ತದೆ. ದೈಹಿಕವಾಗಿ ಅಸಮರ್ಥತೆ ಹೊಂದಿರುವ ಸಾಕು ಬೆಕ್ಕುಗಳು ಅಥವಾ ನಾಯಿಗಳನ್ನು ದತ್ತು ತೆಗೆದುಕೊಳ್ಳುವ ಜನರು ಖಂಡಿತವಾಗಿಯೂ ಬಂಗಾರದ ಹೃದಯವನ್ನು ಹೊಂದಿರುತ್ತಾರೆ. ನಟ ಮತ್ತು ವಕೀಲನಾಗಿರುವ  ರಾಕಿ ಕನಕ (Rocky Kanaka) ಅವರು ತಮ್ಮ ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ ತಮ್ಮ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಅದು ಅವರು ದೃಷ್ಟಿಹೀನ ನಾಯಿಗಳ ಬಗ್ಗೆ ಎಷ್ಟು ಕಾಳಜಿ ವಹಿಸಿದ್ದಾರೆ ಎಂಬುದನ್ನು ತೋರಿಸುತ್ತದೆ. 

ಇದರಲ್ಲಿ ಅವರು ಬೂಟ್‌ನ ಅಡಿಭಾಗದಲ್ಲಿ ತೂತು ಮಾಡಿ ಅದರಲ್ಲಿ ಈ ಸದ್ದು ಮಾಡುವ ಪೀಪೀಗಳನ್ನು ಅಳವಡಿಸುತ್ತಾರೆ. ಇದನ್ನು ಮಾಡಲು ಅವರು ಚಾಕುವನ್ನು ಬಳಸುತ್ತಾರೆ. ಈ ವಿಡಿಯೋವನ್ನು ರೆಕಾರ್ಡ್‌ ಮಡುವ ವ್ಯಕ್ತಿ ಆತನಿಗೆ ನೀನು ಏನು ಮಾಡುತ್ತಿಯಾ ಎಂದು ಕೇಳುತ್ತಾನೆ. ಆದರೆ ಆತ ನಗುತ್ತಾ ಬೂಟಿನ ಅಡಿಭಾಗವನ್ನು ಕತ್ತರಿಸುವುದನ್ನು ಮುಂದುವರಿಸುತ್ತಾನೆ. ನಂತರ ಪೀ ಪೀ ಸದ್ದು ಮಾಡುವ ಪೀಪೀಯನ್ನು ಶೂನ ಅಡಿಭಾಗದಲ್ಲಿ ಇಟ್ಟು ಅದನ್ನು ಭದ್ರಪಡಿಸುತ್ತಾನೆ.
 

Latest Videos
Follow Us:
Download App:
  • android
  • ios