ದೇವಸ್ಥಾನಕ್ಕೆ ನುಗ್ಗಿದ ಭಯೋತ್ಪಾದಕನ ಕಪಾಳಕ್ಕೆ ಭಾರಿಸಿದ ವ್ಯಕ್ತಿ, ಬಳಿಕ ನಡೆದಿದ್ದೇ ಬೇರೆ!

ಭಕ್ತರು ತುಂಬಿದ್ದ ದೇವಸ್ತಾನಕ್ಕೆ ದಿಢೀರ್ ಎಂಟ್ರಿಕೊಟ್ಟ ಭಯೋತ್ಪಾದಕರು. ಜನರನ್ನು ಒತ್ತೆಯಾಳಾಗಿಡುವ ಪ್ರಯತ್ನ. ಇದನ್ನು ನೋಡಿದ ವ್ಯಕ್ತಿಯೊಬ್ಬ ಗನ್ ಹಿಡಿದು ನಿಂತಿದ್ದ ಭಯೋತ್ಪಾದಕನ ಬಳಿಗೆ ತೆರಳಿ ಕಪಾಕ್ಕೆ ಭಾರಿಸಿದ್ದಾನೆ. ಬಳಿಕ ನಡೆದಿದ್ದೇ ಬೇರೆ?
 

Man Slap police who entered temple as Terrorist for Mock drill in Maharashtra ckm

ಮುಂಬೈ(ಆ.09) ಸ್ವಾಮಿನಾರಾಯಣ ದೇವಸ್ಥಾನದಲ್ಲಿ ಭಕ್ತರು ತುಂಬಿದ್ದರು. ಪೂಜೆ ನಡೆಯುತ್ತಿತ್ತು. ಗನ್ ಹಿಡಿದ ಭಯೋತ್ಪಾದಕರು ನೇರವಾಗಿ ದೇವಸ್ಥಾನಗೊಳಗ್ಗೆ ನುಗ್ಗಿ ಬಿಟ್ಟಿದ್ದರು. ಭಕ್ತರರಲ್ಲಿ ಆತಂಕ. ಆದರೆ ಒರ್ವ ವ್ಯಕ್ತಿ ನೇರವಾಗಿ ಉಗ್ರರ ಬಳಿ ತೆರಳಿ ಕಪಾಳಕ್ಕೆ ಭಾರಿಸಿದ್ದಾನೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ಪೊಲೀಸರು ಇದು ಅಣಕು ಪ್ರದರ್ಶನ ಎಂದು ಘೋಷಣೆ ಮಾಡಿದ್ದಾರೆ. ಅಲ್ಲಿಗೆ ಗಂಭೀರವಾಗಿದ್ದ ಅಣುಕು ಪ್ರದರ್ಶನ ಕಾಮಿಡಿಯಾಗಿತ್ತು. ಈ ಅಣುಕು ಪ್ರದರ್ಶನ ನಡೆದಿದ್ದು, ಮಹಾರಾಷ್ಟ್ರದ ಧುಲೆ ನಗರದ ಸ್ವಾಮಿನಾರಾಯಣ ದೇವಸ್ಥಾನದಲ್ಲಿ.

ಮುಖಕ್ಕೆ ಕಪ್ಪು ಬಟ್ಟೆ, ಕೈಯಲ್ಲಿ ಗನ್, ಗ್ರೆನೆಡ್ ಸೇರಿದಂತೆ ಶಸ್ತ್ರಾಸ್ತ್ರ ಹಿಡಿದು ಸ್ವಾಮಿನಾರಾಯಣ ದೇವಸ್ಥಾನಕ್ಕೆ ಅಣುಕು ಪ್ರದರ್ಶ ನೀಡುತ್ತಿದ್ದ ಪೊಲೀಸರು ನುಗ್ಗಿದ್ದರು. ದಿಢೀರ್ ಪ್ರವೇಶದಿಂದ ಭಕ್ತರು ಭಯಬೀತಗೊಂಡಿದ್ದದರು. ಕೆಲ ಹೊತ್ತ ಏನುಮಾಡಬೇಕು ಅನ್ನೋ ಆತಂಕ ಎದುರಾಗಿತ್ತು. ಅಷ್ಟರಲ್ಲೇ ಪೊಲೀಸರು ಇದು ಅಣಕು ಪ್ರದರ್ಶನ ಎಂದು ಸೂಚನೆ ನೀಡಿದ್ದರು. ಆದರೆ ಇದ್ಯಾವುದರ ಪರಿವೇ ಇಲ್ಲದ ವ್ಯಕ್ತಿ, ಬಂಧೂಕು ಹಿಡಿದು ನಿಂತಿದ್ದ ಅಣುಕು ಪ್ರದರ್ಶನದ ಪೊಲೀಸ್ ಬಳಿ ತೆರಳಿದ ವ್ಯಕ್ತಿ ಕಪಾಳಕ್ಕ ಭಾರಿಸಿದ್ದಾನೆ.

 

ಮೈನವಿರೇಳಿಸುವ ಕೋಸ್ಟ್ ಗಾರ್ಡ್ ಅಣಕು ಕಾರ್ಯಾಚರಣೆ: ಸಮುದ್ರದಲ್ಲಿ ಒಂದು ದಿನ ವಿಶೇಷ!

ಅಣುಕು ಪ್ರದರ್ಶನದ ವೇಳೆ ಭಕ್ತರು ಆತಂಕಗೊಂಡಿದ್ದರು. ಭಯೋತ್ಪಾದಕ ದಾಳಿ ಅಥವಾ ಇನ್ನಿತರ ದಾಳಿಗಳ ವೇಳೆ ಸಾರ್ವಜನಿಕರು ಯಾವ ರೀತಿ ಸ್ಪಂದಿಸುತ್ತಾರೆ. ದಾಳಿಯನ್ನು ತಡೆಯಲು ಸಾರ್ವಜನಿಕರ ಪಾತ್ರವೇನು? ಸಮಾಜದಲ್ಲಿ ಒಗ್ಗಟ್ಟಿನಿಂದ ಪರಿಸ್ಥಿತಿ ಎದುರಿಸುವುದು ಹೇಗೆ? ಇಂತಹ ಪರಿಸ್ಥಿತಿಗಳಲ್ಲಿ ಸಾರ್ವಜನಿಕರು ಏನು ಮಾಡಬೇಕು ಅನ್ನೋದರ ಜಾಗೃತಿ ಮೂಡಿಸಲು ಮಹಾರಾಷ್ಟ್ರ ಪೊಲೀಸರು ಅಣುಕು ಪ್ರದರ್ಶನ ಮಾಡಿದ್ದರು.   

 

 

ಸಾರ್ವಜನಿಕರು ಭಯಭೀತಗೊಂಡಿದ್ದರು. ಆದರೆ ಪ್ರತಿಕ್ರಿಯೆ ನೀಡಿದವರು ತೀರಾ ವಿರಳ. ಇದರಲ್ಲಿ 35 ವರ್ಷದ ಪ್ರಶಾಂತ್ ಕುಲಕರ್ಣಿ ನೇರವಾಗಿ ತೆರಳಿ ಕಪಾಳಕ್ಕೆ ಭಾರಿಸಿದ್ದಾನೆ. ಗನ್ ಹಿಡಿದು ಇಲ್ಲೇನು ಮಾಡುತ್ತೀದ್ದೀರಿ ಎಂದು ಪ್ರಶ್ನಿಸಿದ್ದಾನೆ. ಅಣುಕು ಪ್ರದರ್ಶನದ ನಡುವೆ ಕೆಲ ಹೊತ್ತು ಮತ್ತೊಂದು ತಿರುವು ಪಡೆದಿತ್ತು. ಈ ಅಣುಕು ಪ್ರದರ್ಶನದ ವಿಡಿಯೋ ಭಾರಿ ವೈರಲ್ ಆಗಿದೆ.

ಕಾರವಾರ: ಸುರಕ್ಷತೆ, ಬಿಗಿ ಭದ್ರತೆ, ತುರ್ತು ಸಂದರ್ಭ ಸನ್ನದ್ಧತೆಗೆ ಸಾಗರಕವಚ ಅಣಕು ಕಾರ್ಯಾಚರಣೆ

ಈ ರೀತಿಯ ಅಣುಕು ಪ್ರದರ್ಶನ ದೇಶದ ಹಲವು ರಾಜ್ಯಗಳಲ್ಲಿ ನಡೆಯುತ್ತಿರುತ್ತದೆ. ಇತ್ತೀಚೆಗೆ ಮಂಗಳೂರಿನಲ್ಲಿ ಭಯೋತ್ಪಾದನಾ ನಿಗ್ರಹ ತಂಡ ರಚನೆಯ ನಿರ್ದೇಶನದಂತೆ ತರಬೇತಿ ಮುಗಿಸಿ ಆಗಮಿಸಿರುವ ಮಂಗಳೂರಿನ ತಂಡದಿಂದ ಅಣುಕು ಪ್ರದರ್ಶನ ನಡೆದಿತ್ತು. ಭಯೋತ್ಪಾದಕ ದಾಳಿ ಸಂದರ್ಭ ಈ ಕಮಾಂಡೊ ಪಡೆ ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸಲಿದೆ ಎಂಬ ಬಗ್ಗೆ ತಿಳಿಸಲಾಗಿತ್ತು. 

ನಗರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಆಗದಂತೆ ಎಲ್ಲ ರೀತಿಯ ಮುಂಜಾಗೃತಾ ಕ್ರಮಗಳಿಗೆ ಪೊಲೀಸ್‌ ಇಲಾಖೆ ಈಗಾಗಲೇ ಸಕಲ ರೀತಿಯಲ್ಲೂ ಸಮರ್ಥವಾಗಿದೆ. ಇದಕ್ಕೆ ಪೂರಕವಾಗಿ ಸಂಭಾವ್ಯ ಯಾವುದೇ ರೀತಿಯ ದುಷ್ಕೃತ್ಯಗಳನ್ನು ಎದುರಿಸಲು ಪೊಲೀಸ್‌ ಇಲಾಖೆಗೆ ಈ ತಂಡ ಬಲ ತುಂಬಿದೆ ಎಂದು ಪೊಲೀಸ್‌ ಕಮಿಷನರ್‌ ಹೇಳಿದ್ದರು. 

Latest Videos
Follow Us:
Download App:
  • android
  • ios