Asianet Suvarna News Asianet Suvarna News

ಮೈನವಿರೇಳಿಸುವ ಕೋಸ್ಟ್ ಗಾರ್ಡ್ ಅಣಕು ಕಾರ್ಯಾಚರಣೆ: ಸಮುದ್ರದಲ್ಲಿ ಒಂದು ದಿನ ವಿಶೇಷ!

ಭಾರತೀಯ ಕೋಸ್ಟ್  ಗಾರ್ಡ್ ನ ಸಪ್ತಾಹ ಕಾರ್ಯಕ್ರಮದ ಅಂಗವಾಗಿ  ಕೋಸ್ಟ್ ಗಾರ್ಡ್‍ನ ‘ವರಾಹ’ ನೌಕೆಯಲ್ಲಿ ಕೋಸ್ಟ್ ಗಾರ್ಡ್ ಸಿಬ್ಬಂದಿಯ ಅಣಕು ಕಾರ್ಯಾಚರಣೆ ನಡೆಯಿತು.

Indian Coast Guard Day mock drill in mangaluru gow
Author
First Published Feb 2, 2023, 10:17 PM IST

ಮಂಗಳೂರು (ಜ.2): ಭಾರತೀಯ ಕೋಸ್ಟ್  ಗಾರ್ಡ್ ನ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಇಂದು ಎ ಡೇ ಅಟ್ ಸೀ ‘ಸಮುದ್ರದಲ್ಲಿ ಒಂದು ದಿನ’ ಎನ್ನುವ ಕಾರ್ಯಕ್ರಮದಲ್ಲಿ ಘನತೆವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಕೋಸ್ಟ್ ಗಾರ್ಡ್‍ನ ‘ವರಾಹ’ ನೌಕೆಯಲ್ಲಿ ಕೋಸ್ಟ್ ಗಾರ್ಡ್ ಸಿಬ್ಬಂದಿಯ ಅಣಕು ಕಾರ್ಯಾಚರಣೆಯನ್ನು ವೀಕ್ಷಿಸಿದರು.

ಅರಬ್ಬೀಯ ಆಳ ಸಮುದ್ರದ ನಡುವೆ ಕೋಸ್ಟ್ ಗಾರ್ಡ್ ಸಿಬ್ಬಂದಿ ನಡೆಸಿದ ತರಹೇವಾರಿ ಕಾರ್ಯಾಚರಣೆಗಳು ಮೈನವಿರೇಳಿಸುವಂತಿದ್ದವು. ಅವುಗಳಿಗೆ ಇನ್ನೊಂದು ನೌಕೆಯಲ್ಲಿ ಆಹ್ವಾನಿತರಾಗಿದ್ದ ಸಾರ್ವಜನಿಕರು  ಸಾಕ್ಷಿಯಾದರು. ಸಮುದ್ರ ತಟದಿಂದ ಸುಮಾರು 15 ನಾಟಿಕಲ್ ಮೈಲು ಆಳ ಸಮುದ್ರದಲ್ಲಿ ತಟ ರಕ್ಷಣಾ ಪಡೆಯ ಒಟ್ಟು ಆರು ಅತ್ಯಾಧುನಿಕ ನೌಕೆಗಳು, ಎರಡು ಹೆಲಿಕಾಪ್ಟರ್‍ಗಳು, ಎರಡು ಡಾರ್ನಿಯರ್ ವಿಮಾನಗಳು ವಿವಿಧ ರೋಚಕ ಕಸರತ್ತುಗಳನ್ನು ಪ್ರದರ್ಶಿಸಿದವು. ಸಮುದ್ರದಲ್ಲಿ ನೌಕೆಗಳು ಅವಘಡಕ್ಕೆ ಈಡಾದರೆ ಅದರ ರಕ್ಷಣೆಯ ಕಾರ್ಯಾಚರಣೆ, ಸಂತ್ರಸ್ತರನ್ನು ರಕ್ಷಿಸುವುದು, ವೈರಿ ಪಡೆಗಳಿಂದ ದಾಳಿಯಾದರೆ ಸಮುದ್ರದ ನಡುವೆ ಕೋಸ್ಟ್ ಗಾರ್ಡ್ ನೌಕೆಗಳು ಮರು ದಾಳಿ ನಡೆಸುವ, ವೈರಿ ವಿಮಾನದ ಮೇಲೆ ದಾಳಿ ನಡೆಸುವ ಅಣಕು ಕಾರ್ಯಾಚರಣೆ ಅತ್ಯಂತ ರೋಚಕವಾಗಿತ್ತು.

ತುರ್ತು ಸಮಯದಲ್ಲಿ ಕೋಸ್ಟ್ ಗಾರ್ಡ್ ನೌಕೆಯಿಂದ ಸಣ್ಣ ಬೋಟ್‍ನ್ನು ಸಮುದ್ರಕ್ಕಿಳಿಸಿ, ಆ ಬೋಟ್‍ಗಳು ಸಮರೋಪಾದಿಯಲ್ಲಿ ಧಾವಿಸಿ ಸಂತ್ರಸ್ತರ ರಕ್ಷಣೆ ಮಾಡುವ ಕಸರತ್ತು ಉಸಿರು ಬಿಗಿಹಿಡಿಯುವಂತಿತ್ತು. ಇದೇ ವೇಳೆ ಸಮುದ್ರದ ನಡುವೆ ಯಾವುದಾದರೂ ಬೋಟ್ ಅವಘಡಕ್ಕೀಡಾಗಿ ಅಗ್ನಿ ಅನಾಹುತ ಸಂಭವಿಸಿದರೆ ಕೋಸ್ಟ್ ಗಾರ್ಡ್ ನೌಕೆಯಿಂದ ಅಗ್ನಿ ನಂದಿಸುವ ಕಾರ್ಯಾಚರಣೆ ಪ್ರದರ್ಶಿಸಲಾಯಿತು. ಡಾರ್ನಿಯರ್ ವಿಮಾನಗಳು ಹಾಗೂ ಎರಡು ಹೆಲಿಕಾಪ್ಟರ್‍ಗಳ ಗಸ್ತು ಕಾರ್ಯಾಚರಣೆಯೂ ನಡೆಯಿತು.

ಅತ್ಯಾಧುನಿಕ ತಂತ್ರಜ್ಞಾನ ಹೊಂದಿರೋ ಯುದ್ದ ನೌಕೆಗಳು ಹಾಗೂ ಹೆಲಿಕ್ಯಾಪ್ಟರ್ಗಳ ಮೂಲಕ ಅದು ಹೇಗೆ ಕೆಲಸ ನಿರ್ವಹಿಸುತ್ತದೆ ಅನ್ನೋದನ್ನು ಪ್ರದರ್ಶನ ಮಾಡಲಾಯಿತು. ಕರಾವಳಿ ಭದ್ರತಾ ಪಡೆ ತನ್ನಲ್ಲಿರೋ ಅತ್ಯಾಧುನಿಕ ರಕ್ಷಣಾ ನೌಕೆಗಳ ಮೂಲಕ ಹೇಗೆ ಅಪಾಯವನ್ನು ಎದುರಿಸುತ್ತದೆ ಅನ್ನೋದನ್ನ ತೋರಿಸಲಾಯಿತು. ದೇಶದೊಳಗೆ ನುಸುಳೋ ದಾಳಿಕೋರರನ್ನು ಎದುರಿಸಲು ಹಾಗೂ ಸಮುದ್ರದಲ್ಲಿ ಸಿಲುಕಿಕೊಂಡು ಅಪಾಯದಲ್ಲಿರೋ ಹಡಗಗಳ ರಕ್ಷಣೆ ಹೇಗೆ ಮಾಡಲಾಗುತ್ತದೆ ಅನ್ನೋದನ್ನ ಈ ಅಣಕು ಕಾರ್ಯಾಚರಣೆ ಮೂಲಕ ತೋರಿಸಲಾಯಿತು.

ದಿಗ್ವಿಜಯ್‌ ಸಿಂಗ್‌ ಹೇಳಿಕೆ ಒಪ್ಪಲ್ಲ ಎಂದ ರಾಹುಲ್‌ ಗಾಂಧಿ, ಸೇನೆಯ ಕಾರ್ಯಾಚರಣೆಗಳಿಗೆ ಸಾಕ್ಷಿ ಬೇಕಿಲ್ಲ ಎಂದ ರಾಗಾ!

ಕರ್ನಾಟಕದಲ್ಲಿ ಮಂಗಳೂರು ಹಾಗೂ ಕಾರವಾರದಲ್ಲಿ ಈ ಕೋಸ್ಟ್ಗಾರ್ಡ್ ಮೂಲಕ ಸಮುದ್ರದ ಮೇಲೆ ಹದ್ದಿನ ಕಣ್ಣು ಇರಿಸಲಾಗುತ್ತದೆ. ಅಪಾಯದಲ್ಲಿ ಸಿಲುಕಿದ ಮೀನುಗಾರರ ರಕ್ಷಣೆಗೆ ಕೂಡ ಮೊದಲು ಧಾವಿಸೋದು ಇದೇ ಕೋಸ್ಟ್ ಗಾರ್ಡ್ ಟೀಮ್. ತೀರಾ ಅಗತ್ಯ ಅನಿಸಿದ್ರೆ ಮಾತ್ರ ಹೆಲಿಕ್ಯಾಪ್ಟರ್ ಹಾಗೂ ಜೆಟ್ ಗಳನ್ನು ಬಳಕೆ ಮಾಡಲಾಗುತ್ತದೆ. ಕರ್ನಾಟಕದ ಕರಾವಳಿಯ ರಕ್ಷಣೆಗೆ ಕಾರವಾರದಲ್ಲಿ ಹೆಲಿಕ್ಯಾಪ್ಟರ್ ವ್ಯವಸ್ಥೆ ಇದ್ರೆ ಜೆಟ್ ಗೋವಾದಿಂದ ತರಿಸಲಾಗುತ್ತದೆ. ಆದರೆ ಇಂದು ಎಲ್ಲಾ ಸನ್ನಿವೇಶಗಳನ್ನು ಇಲ್ಲಿ ಸೃಷ್ಟಿ ಮಾಡಲಾಗಿದ್ದು, ಕೋಸ್ಟ್ಗಾರ್ಡ್ ಬಳಸುವ ಎಲ್ಲಾ ರಕ್ಷಣಾ ವ್ಯವಸ್ಥೆಗಳನ್ನು ವೀಕ್ಷಿಸಲು ಅವಕಾಶ ಮಾಡಲಾಗಿತ್ತು.

Republic Day: ಟೈಗರ್‌ ಕ್ಯಾಟ್‌ ಮಿಸೈಲ್‌, ರಫೇಲ್‌, ಪ್ರಚಂಡ.. ಗಣರಾಜ್ಯೋತ್ಸವದಲ್ಲಿರಲಿದೆ ಭಾರತದ ಸೇನಾಶಕ್ತಿ!

ಇನ್ನು ಬೆಂಕಿ ಅವಘಡ ಸಂಭವಿಸಿದ್ರೆ ಸುಮಾರು 150 ಮೀಟರ್ ದೂರ ನೀರು ಚಿಮ್ಮಿಸುವ ವ್ಯವಸ್ಥೆಯ ಅನಾವರಣ ಕೂಡ ಮಾಡಿದರು. ಕರ್ನಾಟಕ ಕೋಸ್ಟ್ ಗಾರ್ಡ್ ಕಮಾಂಡರ್ ಪ್ರವೀಣ್ ಕುಮಾರ್ ಮಿಶ್ರಾ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ಕೋಸ್ಟ್ ಗಾರ್ಡ್ ನ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.

Follow Us:
Download App:
  • android
  • ios