Asianet Suvarna News Asianet Suvarna News

ಸ್ಕೂಟರ್ ಒಳನುಗ್ಗಿ ಬೆಚ್ಚನೆ ಮಲಗಿದ್ದ ಹಾವಿನ ರಕ್ಷಣೆ

ನಿನ್ನೆಯಷ್ಟೇ ಬೈಕೇರಿ ನಿಂತ ನಾಗರ ಹಾವೊಂದನ್ನು ಉರಗತಜ್ಞರು ರಕ್ಷಣೆ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇಂದು ಮತ್ತೊಂದು ಹಾವು ಸ್ಕೂಟರ್ ಏರಿ ಬೆಚ್ಚನೆ ಮುದುಡಿ ಮಲಗಿದೆ.

Man rescued snake which was hide inside scooter video goes viral akb
Author
First Published Nov 3, 2022, 8:24 PM IST

ನಿನ್ನೆಯಷ್ಟೇ ಬೈಕೇರಿ ನಿಂತ ನಾಗರ ಹಾವೊಂದನ್ನು ಉರಗತಜ್ಞರು ರಕ್ಷಣೆ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇಂದು ಮತ್ತೊಂದು ಹಾವು ಸ್ಕೂಟರ್ ಏರಿ ಬೆಚ್ಚನೆ ಮುದುಡಿ ಮಲಗಿದೆ. ಸ್ಕೂಟರ್ ಒಳನುಗ್ಗಿ ಬೆಚ್ಚನೆ ಮಲಗಿದ್ದ ಹಾವನ್ನು ಹಾವು ಹಿಡಿಯುವವರು ಬಡಿದೆಬ್ಬಿಸಿದ್ದಾರೆ. ಆದರೆ ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ವರದಿ ಆಗಿಲ್ಲ.  ಹಾವುಗಳು ಸಾಮಾನ್ಯವಾಗಿ ತುಂಬಾ ಸಂಕೀರ್ಣವಾದ ಜಾಗಗಳಲ್ಲಿ ಆಶ್ರಯ ಪಡೆಯುತ್ತವೆ. ಮಳೆಗಾಲ ಮುಗಿಯುತ್ತಾ ಬಂದರೂ ಮಳೆ ಕಡಿಮೆಯಾಗದ ಹಿನ್ನೆಲೆ ಹಾವುಗಳು ಸುರಕ್ಷಿತ ಸ್ಥಳ ಅರಸಿ ಹೀಗೆ ಕಾರು ಬೈಕ್ ಸ್ಕೂಟರ್ (scooter) ಏರಿ ಬೆಚ್ಚಗೆ ಮಲಗಲು ನೋಡುತ್ತಿವೆ. ಕೆಲದಿನಗಳ ಹಿಂದೆ ಶೂ ಒಳಗೆ ಹಾವೊಂದು ಮಲಗಿದ್ದ ವಿಡಿಯೋವೊಂದು ವೈರಲ್ ಆಗಿತ್ತು. 

ಪರಿಸರ ಪ್ರೇಮಿ ಅವಿನಾಶ್ ಯಾದವ್ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್ ಮಾಡಿದ್ದು, ವಿಡಿಯೋದಲ್ಲಿ ಕಾಣಿಸುವಂತೆ ವ್ಯಕ್ತಿಯೊಬ್ಬರು ಸ್ಕೂಟರ್ ಮುಂಭಾಗದ  ಹಾವು ಸ್ಕೂಟರ್ ಮುಂಭಾಗ ಹೆಡ್‌ಲೈಟ್‌ನ ಕೆಳಭಾಗವನ್ನು ತೆರೆದಿದ್ದು, ಈ ವೇಳೆ ಒಳಭಾಗದಲ್ಲಿ ಹಾವೊಂದು ಮುದುಡಿ ಮಲಗಿದ್ದು ಕಾಣಿಸಿದೆ. ನಂತರ ಹಾವನ್ನು ಮೆಲ್ಲ ಮೆಲ್ಲನೇ ಹಿಂಭಾಗದಿಂದ ಮುಟ್ಟಿ ತಟ್ಟಿ ಎಬ್ಬಿಸಿದ್ದು, ನಿಧಾನಕ್ಕೆ ಆ ಜಾಗದಿಂದ ಹಾವನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇವರು ಹಾವನ್ನು ಬರಿಗೈಲಿ ಹೊರ ತೆಗೆದು ರಕ್ಷಣೆ ಮಾಡುತ್ತಿದ್ದರೆ, ಇತರರು ಈ ಇಡೀ ದೃಶ್ಯವನ್ನು ಸುತ್ತಲೂ ನಿಂತು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಿದ್ದಾರೆ. 

ಬೈಕೇರಿ ಹೆಡೆಯೇರಿಸಿ ನಿಂತ ನಾಗಪ್ಪ... ವಿಡಿಯೋ ವೈರಲ್

ಅವಿನಾಶ್ ಯಾದವ್ ಅವರು ಉರಗ ರಕ್ಷಕರಾಗಿದ್ದು, ಹಾವುಗಳ ವಿಡಿಯೋಗಳನ್ನು ಆಗಾಗ ತಮ್ಮ ಅಕೌಂಟ್‌ನಲ್ಲಿ ಹಾಕುತ್ತಿರುತ್ತಾರೆ.  ಆಕ್ಟಿವಾ ವಾಹನದ ಮಾಲೀಕರಿಗೆ ಸೆಕ್ಯೂರಿಟಿ ಎಂದು ಬರೆದು ಅವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಈ ವಿಡಿಯೋವನ್ನು ಸುಮಾರು 29 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಅಲ್ಲದೇ ಹಲವು ಕಾಮೆಂಟ್‌ಗಳನ್ನು ಮಾಡಿದ್ದಾರೆ.  ಇವರು ಬರಿಗೈಲಿ ಹಾವನ್ನು ಹೊರ ತೆಗೆಯುತ್ತಿರುವುದನ್ನು ನೋಡಿದ ಬಳಕೆದಾರರು ನೀವು ಹಾವು ಹೊರ ತೆಗೆಯುತ್ತಿದ್ದೀರಾ ಅಥವಾ ಗಾಡಿಗೆ ಸರ್ವಿಸ್ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಸಹೋದರ ಅದು ಶ್ರೀದೇವಿ ಅಲ್ಲ ಹಾವು ಹಾವು, ಹಿಡಿಯುವ ವೇಳೆ ಸ್ವಲ್ಪವಾದರೂ ಹೆದರಿಕೆ ಇರಲಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನೀವು ಸಂದರ್ಭವನ್ನು ನಿರ್ವಹಿಸಿದ ರೀತಿ ತುಂಬಾ ಚೆನ್ನಾಗಿತ್ತು ಎಂದು ಮತ್ತೊಬ್ಬರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಇದೆಂಥಾ ವಿಚಿತ್ರ... 8 ವರ್ಷದ ಬಾಲಕ ಕಚ್ಚಿ ಹಾವು ಸಾವು

Follow Us:
Download App:
  • android
  • ios