ನವದೆಹಲಿ: ರೈಲು ನಿಲ್ದಾಣದಲ್ಲಿ ತಾಯಿಯೊಂದಿಗೆ ಮಲಗಿದ್ದ 7 ತಿಂಗಳ ಹಸುಗೂಸನ್ನು ದುಷ್ಕರ್ಮಿಯೋರ್ವ ಎತ್ತಿಕೊಂಡು ಪರಾರಿಯಾದ ಭಯಾನಕ ಘಟನೆ ನಡೆದಿದ್ದು, ಈ ಆಘಾತಕಾರಿ ದೃಶ್ಯ ರೈಲ್ವೆ ನಿಲ್ದಾಣದ ಫ್ಲಾಟ್‌ಫಾರ್ಮ್‌ನಲ್ಲಿದ್ದ ಕ್ಯಾಮರಾದಲ್ಲಿ ಸೆರೆ ಆಗಿದೆ. ಉತ್ತರಪ್ರದೇಶದ ಮಥುರಾ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. 

ನವದೆಹಲಿ: ರೈಲು ನಿಲ್ದಾಣದಲ್ಲಿ ತಾಯಿಯೊಂದಿಗೆ ಮಲಗಿದ್ದ 7 ತಿಂಗಳ ಹಸುಗೂಸನ್ನು ದುಷ್ಕರ್ಮಿಯೋರ್ವ ಎತ್ತಿಕೊಂಡು ಪರಾರಿಯಾದ ಭಯಾನಕ ಘಟನೆ ನಡೆದಿದ್ದು, ಈ ಆಘಾತಕಾರಿ ದೃಶ್ಯ ರೈಲ್ವೆ ನಿಲ್ದಾಣದ ಫ್ಲಾಟ್‌ಫಾರ್ಮ್‌ನಲ್ಲಿದ್ದ ಕ್ಯಾಮರಾದಲ್ಲಿ ಸೆರೆ ಆಗಿದೆ. ಉತ್ತರಪ್ರದೇಶದ ಮಥುರಾ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. 

ರೈಲು ನಿಲ್ದಾಣದ ಫ್ಲಾಟ್‌ಫಾರ್ಮ್‌ನಲ್ಲಿ ಅನೇಕರು ಮಲಗಿದ್ದು, ಇದೇ ವೇಳೆ ಇಲ್ಲಿಗೆ ಬಂದ ಮಧ್ಯ ವಯಸ್ಸಿನ ವ್ಯಕ್ತಿಯೋರ್ವ ಒಂದು ಸಲ ಯಾರಾದರು ಎಚ್ಚರ ಇರಬಹುದೇ ಎಂದು ಗಮನಿಸುತ್ತಾನೆ. ಬಳಿಕ ಎಲ್ಲರೂ ಗಾಢ ನಿದ್ದೆಯಲ್ಲಿರುವುದನ್ನು ಖಚಿತಪಡಿಸಿಕೊಂಡ ಈತ ಮಗುವಿನ ಒಂದು ಕೈಯಲ್ಲಿ ಹಿಡಿದು ಮೇಲೆತ್ತಿ ಮಗುವನ್ನು ಎತ್ತಿಕೊಂಡ ಅಲ್ಲಿಂದ ಬಿರ ಬಿರನೇ ಓಡಿ ಹೋಗುತ್ತಾನೆ. ಕಪ್ಪು ಪ್ಯಾಂಟ್‌, ಬಿಳಿ ಫಾರ್ಮಲ್‌ ಶರ್ಟ್‌ ಧರಿಸಿ ಇನ್‌ಶರ್ಟ್‌ ಮಾಡಿದ್ದು, ನೋಡಲು ಸಂಭಾವಿತನಂತೆ ಕಾಣುವ ಈತ ಮಗುವನ್ನೆತ್ತಿಕೊಂಡು ವೇಗವಾಗಿ ಅಲ್ಲಿಂದ ಓಡಿ ಹೋಗುತ್ತಿರುವುದು ವಿಡಿಯೋದಲ್ಲಿ ಸೆರೆ ಆಗಿದೆ. 

ಮಗು ಕಿಡ್ನಾಪ್‌ ಕೇಸ್‌: ಬಿಗ್‌ಬಾಸ್‌ ಸೆಟ್ಟಲ್ಲೇ ನಟಿ ವಿಚಾರಣೆ

ಹೀಗೆ ಕಿಡ್ನಾಪ್ ಆದ ಮಗುವಿನ ಪತ್ತೆಗೆ ಪೊಲೀಸರು ಹಲವು ತಂಡಗಳನ್ನು ರಚಿಸಿ ಶೋಧಕ್ಕೆ ಇಳಿದಿದ್ದಾರೆ. ಈ ಬಗ್ಗೆ ಮಥುರಾದ ಜಿಆರ್‌ಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ಮಗುವಿನ ಪತ್ತೆಗೆ ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಪೊಲೀಸರು ಮಾಡುತ್ತಿದ್ದಾರೆ ಎಂದು ಮಥುರಾ ಪೊಲೀಸರು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.

ಅಲ್ಲದೇ ಪೊಲೀಸರು ಮಗು ಕದ್ದೊಯ್ದ ಶಂಕಿತ ಖದೀಮನ ಫೋಟೋವನ್ನು ಮುದ್ರಿಸಿ ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಿದ್ದು, ಈತನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿದಲ್ಲಿ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಿದ್ದಾರೆ. ಅಲ್ಲದೇ ರೈಲ್ವೆ ಪೊಲೀಸ್ ತಂಡ ಉತ್ತರಪ್ರದೇಶದ ಅಲಿಘರ್ ಹಾಗೂ ಹತ್ರಾಸ್‌ನಲ್ಲಿ ಮಗುವಿಗಾಗಿ ಪ್ರತ್ಯೇಕ ತಂಡಗಳಲ್ಲಿ ಶೋಧ ನಡೆಸುತ್ತಿದ್ದಾರೆ. 

ಖಾಸಗಿ ಬಸ್‌'ನಲ್ಲಿ ಮಕ್ಕಳ ಅಪಹರಣ, ಸಾಗಾಟ..!: ಮಕ್ಕಳ ಅಳು ಕೇಳಿ ಉಂಟಾಯಿತು ಅನುಮಾನ

ಈ ವಿಡಿಯೋವನ್ನು ಉತ್ತರಪ್ರದೇಶದ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಚಿನ್ ಕೌಶಿಕ್ ಎಂಬುವರು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದು, ಈ ವ್ಯಕ್ತಿಯನ್ನು ಹಿಡಿಯಲು ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ. ವಿಶೇಷವಾಗಿ ಈ ವಿಡಿಯೋವನ್ನು ನಿಮ ಸಾಮಾಜಿಕ ಜಾಲತಾಣಗಳಲ್ಲಿ ಅದರಲ್ಲೂ ವಿಶೇಷವಾಗಿ ಕಾಸ್ಗಂಜ್, ಬದೌನ್ ಮತ್ತು ಬರೇಲಿ ಭಾಗದಲ್ಲಿ ಹಂಚಿಕೊಳ್ಳಿ ಎಂದು ಅವರು ಮನವಿ ಮಾಡಿದ್ದಾರೆ. ಜೊತೆಗೆ ದೇಶದ ಮಾಧ್ಯಮಗಳು ಕೂಡ ಈ ಬಗ್ಗೆ ಗಮನಹರಿಸುವಂತೆ ಅವರು ಮನವಿ ಮಾಡಿದ್ದಾರೆ.

Scroll to load tweet…