ಚೆನ್ನೈ[ಜು.04]: ತಮ್ಮ ಮಾಜಿ ಪತಿ ಆನಂದ್‌ ರಾಜ್‌ ಎಂಬುವರಿಂದ ಮಗಳನ್ನು ಅಪಹರಣ ಮಾಡಿದ್ದಾರೆ ಎಂಬ ಆರೋಪ ಸಂಬಂಧ ತಮಿಳು ಅವತರಣಿಕೆಯ ಬಿಗ್‌ಬಾಸ್‌-3ರ ಸ್ಪರ್ಧಾಳು ಹಾಗೂ ನಟಿ ವನಿತಾ ವಿಜಯ ಕುಮಾರ್‌ ಅವರನ್ನು ತೆಲಂಗಾಣ ಪೊಲೀಸರು ಬಿಗ್‌ಬಾಸ್‌ ಶೂಟಿಂಗ್‌ ಸೆಟ್‌ನಲ್ಲೇ ವಿಚಾರಣೆ ನಡೆಸಿದ್ದಾರೆ.

ಎರಡು ಗಂಟೆಗಳ ಕಾಲ ನಡೆದ ಈ ವಿಚಾರಣೆ ವೇಳೆ ನಟಿ ವನಿತಾ ಹಾಗೂ ಅವರ ಪುತ್ರಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನ್ಯಾಯಾಲಯದ ಆದೇಶದ ಪ್ರಕಾರ ಮಗುವನ್ನು ವನಿತಾ ಹಾಗೂ ಆನಂದರಾಜ್‌ ಅವರು ಸರದಿಯಲ್ಲಿ ಇಟ್ಟುಕೊಳ್ಳಬೇಕು.

ಆದರೆ, ವನಿತಾ ಅವರು ಮಗುವನ್ನು ಅಪಹರಿಸಿದ್ದಾರೆ ಎಂದು ಆನಂದರಾಜ್‌ ಅವರು ದೂರು ದಾಖಲಿಸಿದ್ದರು.