ರಾಜಧಾನಿ ಲೆ ಮೆರಿಡಿಯನ್ ಹೊಟೇಲ್‌ನ 12ನೇ ಮಹಡಿಯಿಂದ ಕೆಳಗೆ ಹಾರಿ 50 ವರ್ಷದ ಪರ್ವಿಂದರ್ ಸಿಂಗ್ ಜುನೇಜಾ ಎಂಬುವವರು ಸಾವನ್ನಪ್ಪಿದ್ದಾರೆ. ಮಧ್ಯಾಹ್ನ 12.30ರ ಸುಮಾರಿಗೆ ನಡೆದ ಈ ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಹೊಟೇಲ್ ಕಟ್ಟಡದ 12ನೇ ಮಹಡಿಯಿಂದ ಕೆಳಗೆ ಹಾರಿ 50 ವರ್ಷದ ವ್ಯಕ್ತಿಯೊಬ್ಬರು ಸಾವಿಗೆ ಶರಣಾಗಿರುವ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಫೈವ್ ಸ್ಟಾರ್ ಹೊಟೇಲ್ ಆಗಿರುವ ಲೆ ಮೆರಿಡಿಯನ್ ಹೊಟೇಲ್‌ನ 12ನೇ ಮಹಡಿಯಿಂದ ಕೆಳಗೆ ಹಾರಿ ಇಂದು ಮಧ್ಯಾಹ್ನ ವ್ಯಕ್ತಿಯೊಬ್ಬರು ಸಾವಿಗೆ ಶರಣಾಗಿದ್ದಾರೆ.
ಮಧ್ಯಾಹ್ನ 12.30ರ ಸುಮಾರಿಗೆ ಈ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು 50 ವರ್ಷದ ಪರ್ವಿಂದರ್ ಸಿಂಗ್ ಜುನೇಜಾ ಎಂದು ಗುರುತಿಸಲಾಗಿದೆ. ಅವರು ದೆಹಲಿಯ ಲಜಪತ್‌ನಗರದ ನಿವಾಸಿಯಾಗಿದ್ದು, ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಕಾರಣವಾಗಿದ್ದು ಏನು ಎಂಬ ಬಗ್ಗೆ ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.
ಇದನ್ನೂ ಓದಿ: ರೈಲು ನಿಲ್ದಾಣದ ಪಾರ್ಕಿಂಗ್ ಏರಿಯಾದಲ್ಲಿ ಬೆಂಕಿ: 500 ಬೈಕ್‌ಗಳು ಬೆಂಕಿಗಾಹುತಿ
ಪರ್ವಿಂದರ್ ಸಿಂಗ್ ಅವರು ಕೆಳಗೆ ಬಿದ್ದ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನಾ ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಆಗಮಿಸಿದ್ದು ತನಿಖೆಗೆ ಸಹಕರಿಸುತ್ತಿದ್ದಾರೆ. ಪರ್ವಿಂದರ್ ಜುನೇಜಾ ಅವರ ಸಾವಿಗೆ ಕಾರಣ ತಿಳಿದು ಬಂದಿಲ್ಲ.
ಸುದ್ದಿ ಸಂಸ್ಥೆ ಎಎನ್‌ಐ ಘಟನೆಗೆ ಸಂಬಂಧಿಸಿದಂತೆ ಟ್ವಿಟ್ ಮಾಡಿದ್ದು, 50 ವರ್ಷದ ಪರ್ವಿಂದರ್ ಸಿಂಗ್ ಎಂದು ಗುರುತಿಸಲಾದ ವ್ಯಕ್ತಿಯೊಬ್ಬರು ಲೆ ಮೆರಿಡಿಯನ್ ಹೊಟೇಲ್‌ನಿಂದ ಹಾರಿ ಸಾವಿಗೆ ಶರಣಾಗಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ ಎಂದು ಮಾಹಿತಿ ನೀಡಿದೆ. ಈ ವ್ಯಕ್ತಿ ಕ್ರಿಶ್ಮಸ್ ಸಮಯದಲ್ಲಿ ಹೊಟೇಲ್‌ಗೆ ಬಂದು ಸ್ಟೇ ಆಗಿದ್ದು, ನಂತರ ಹೊರಟು ಹೋಗಿದ್ದರು. ಭಾನುವಾರ ಅವರು ವಾಪಸ್ ಬಂದಿದ್ದು, ಈ ಆಘಾತಕಾರಿ ಕೃತ್ಯವೆಸಗಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: ಮಂಗಳೂರು: ಕಾಂಪೌಂಡ್ ಹಾರಿ ಮನೆ ಅಂಗಳಕ್ಕೆ ಬಂದು ಬಿದ್ದ ಕಾರು: ಚಾಲಕ ಪವಾಡದಂತೆ ಪಾರು: ವೀಡಿಯೋ


