ಹಾವುಗಳಂತೂ ತಮ್ಮ ಪಾಡಿಗೆ ತಾವಿರುತ್ತವೆ. ಆದರೆ ಇಲ್ಲೊಬ್ಬ, ಸುಮ್ಮನೆ ತನ್ನ ಪಾಡಿಗೆ ತಾನು ನೆಲದಲ್ಲಿ ಹರಿದಾಡುತ್ತಿದ್ದ ಹಾವಿಗೆ ಗುಂಡಿಕ್ಕಲು ಹೋಗಿದ್ದು, ಪರಿಣಾಮ ಆತನ ಜೀವವೇ ಹೋಗಿದೆ. 

ಸಾಮಾನ್ಯವಾಗಿ ಮನುಷ್ಯರ ಹೊರತಾಗಿ ಹಾವುಗಳೇ ಆಗಲಿ ಇತರ ಪ್ರಾಣಿಗಳೇ ಆಗಲಿ ಪ್ರಚೋದನೆ ಇಲ್ಲದೇ ಯಾವುದೇ ಕಾರಣಕ್ಕೂ ಇತರ ಜೀವಿಗಳ ಮೇಲೆ ದಾಳಿ ಮಾಡುವುದಿಲ್ಲ. ಮಾಂಸಹಾರಿ ಪ್ರಾಣಿಗಳಾದರೂ ಅಷ್ಟೇ ಹಸಿದಿದ್ದಲ್ಲಿ ಮಾತ್ರ ದಾಳಿಗೆ ಮುಂದಾಗುತ್ತವೆ. ಅದೇ ಹೊಟ್ಟೆ ತುಂಬಿದ್ದಲ್ಲಿ ತಮ್ಮಿಷ್ಟದ ಪ್ರಾಣಿ ತಮ್ಮ ಮುಂದೆಯೇ ಸಾಗಿದರೂ ಕ್ಯಾರೇ ಎನ್ನದೇ ಕುಳಿತಿರುತ್ತವೆ. ಅದರಲ್ಲೂ ಹಾವುಗಳಂತೂ ತಮ್ಮ ಪಾಡಿಗೆ ತಾವಿರುತ್ತವೆ. ಆದರೆ ಇಲ್ಲೊಬ್ಬ, ಸುಮ್ಮನೆ ತನ್ನ ಪಾಡಿಗೆ ತಾನು ನೆಲದಲ್ಲಿ ಹರಿದಾಡುತ್ತಿದ್ದ ಹಾವಿಗೆ ಗುಂಡಿಕ್ಕಲು ಹೋಗಿದ್ದು, ಪರಿಣಾಮ ಆತನ ಜೀವವೇ ಹೋಗಿದೆ. 

ಟ್ವಿಟ್ಟರ್‌ನಲ್ಲಿ (Twitter) ಈ ವಿಡಿಯೋವನ್ನು ಇನ್ಸ್ಟಾಂಟ್ ಕರ್ಮ (Instant karma) ಎಂಬ ಪೇಜ್‌ನಿಂದ ಅಪ್‌ಲೋಡ್ ಮಾಡಲಾಗಿದ್ದು, ಲಕ್ಷಾಂತರ ಜನ ವೀಕ್ಷಿಸಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ಹಾವು ಕಲ್ಲು ಮಣ್ಣು ಮಿಶ್ರಿತ ಮಡ್ಡು ರಸ್ತೆಯಲ್ಲಿ ಅಡ್ಡಲಾಗಿ ಹೆಡೆ ಎತ್ತಿ ನಿಂತಿದೆ. ಇದರ ಮೇಲೆ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಈತ ನಡೆಸಿದ ಗುಂಡಿನ ದಾಳಿಯಿಂದ ಹಾವು ಸ್ವಲ್ಪದರಲ್ಲೇ ಪಾರಾಗಿದೆ. ಈತ ಎರಡು ಬಾರಿ ಗುಂಡು ಹಾರಿಸಿದ್ದು, ಈ ವೇಳೆ ಎರಡೂ ದಾಳಿಯಿಂದಲೂ ತಪ್ಪಿಸಿಕೊಂಡ ಹಾವು ಹರಿದಾಡುತ್ತಾ ಇವನ ಬಳಿ ಬಂದು ಈತನಿಗೆ ಕಚ್ಚಿಯೇ ಬಿಟ್ಟಿದೆ. ಇತ್ತ ಇವನು ಹಾರಿಸಿದ ಗುಂಡು ಹಾವಿನ ಅತ್ತಿತ್ತ ಹಾರಿದ್ದು, ಹಾವು ಸ್ವಲ್ಪದರಲ್ಲಿ ತಪ್ಪಿಸಿಕೊಳ್ಳುವ ಜೊತೆ ಈತನಿಗೆ ತಕ್ಕ ಶಿಕ್ಷೆ (Punishment) ನೀಡಿದೆ. ವೀಡಿಯೋದ ಕೊನೆಯಲ್ಲಿ ಈತ ಜೋರಾಗಿ ಚೀರುವುದರ ಜೊತೆ ವಿಡಿಯೋ ಅಂತ್ಯವಾಗುತ್ತದೆ. 

Chikkamagaluru: ಕಚ್ಚಿದ ಹಾವನ್ನೇ ಹಿಡಿದು ಆಸ್ಪತ್ರೆಗೆ ತಂದ: ಕೊಳಕು ಮಂಡಲ ಕಂಡು ಹೌಹಾರಿದ ಜನ

ಈ ವಿಡಿಯೋ ನೋಡಿದ ಅನೇಕರು ಸಾಕಷ್ಟು ಕಾಮೆಂಟ್ ಮಾಡಿದ್ದಾರೆ. ಹಾವಿನ ಮೇಲೆ ಗುಂಡಿನ ದಾಳಿ ಮಾಡಿರುವುದಕ್ಕೆ ಈತನ ವಿರುದ್ಧ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಇದು ಎಲ್ಲಿ ನಡೆದ ಘಟನೆ ಎಂಬ ಬಗ್ಗೆ ಎಲ್ಲೂ ಉಲ್ಲೇಖವಿಲ್ಲ. ನಮ್ಮ ಪರಿಸರದ (Eco system) ಸಮತೋಲನಕ್ಕೆ (Balancing) ಹಾವಿನ ಅಗತ್ಯ ಎಷ್ಟಿದೆ ಎಂಬುದನ್ನು ನಾವು ತಿಳಿಯಬೇಕು. ತಮಾಷೆಯ ಕಾರಣಕ್ಕೆ ನಮಗೆ ಆ ಹಾವುಗಳನ್ನು ಕೊಲ್ಲುವ ಹಕ್ಕಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅದನ್ನು ಅದರಷ್ಟಕ್ಕೆ ಬಿಡುವ ಜೊತೆ ಅದನ್ನು ಇಷ್ಟಪಡದೇ ಅದನ್ನು ಸಾಯಿಸಲು ನೋಡುತ್ತಿರುವುದು ಏಕೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನೀವೇನಕ್ಕೆ ಅದರ ಮೇಲೆ ಹಲ್ಲೆ ಮಾಡಿದ್ದೀರಿ ಕೇವಲ ದೂರ ಸರಿಯಿರಿ ಅದು ಅದರ ರಕ್ಷಣೆ ಮಾಡಿಕೊಳ್ಳುತ್ತಿದೆಯಷ್ಟೇ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

Dream interpretation: ಕನಸಲ್ಲಿ ಕಪ್ಪು ಹಾವು ಕಂಡರೆ ಅಶುಭದ ಸೂಚನೆನಾ?

ಮತ್ತೊಬ್ಬರು ಹಾವಿನೊಂದಿಗೆ ಸರಸ ಬೇಡ ಎಂದು ಕಾಮೆಂಟ್ ಮಾಡಿದ್ದರೆ, ಅದರಲ್ಲಿ ಮೂರನೇ ಗನ್ ಶಾಟ್ ಹೊರಬರಲು ಸಾಧ್ಯವಿಲ್ಲ ಎಂದು ಹಾವು ನಿರ್ಧರಿಸಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದೊಂದು ಡೇರ್‌ಡೆವಿಲ್ ಕೊಬ್ರಾ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಹಾವಿನ ಮೇಲಿನ ಗುಂಡಿನ ದಾಳಿಗೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ (Indian Tradition) ಹಾವಿಗೆ ದೇವರ ಸ್ಥಾನಮಾನವಿದೆ. ಹಾವಿಗೇನಾದರೂ ಹಾನಿ ಮಾಡಿದಲ್ಲಿ, ಅದರ ಶಾಪಕ್ಕೆ ಇಡೀ ಕುಟುಂಬಗಳು, ತಲೆಮಾರು, ತಲೆಮಾರುಗಳೇ ತೊಂದರೆಗೆ ಸಿಲುಕುತ್ತವೆ ಎಂದು ನಂಬಲಾಗಿದೆ. ಇದೇ ಕಾರಣಕ್ಕೆ ಪವಿತ್ರ ತೀರ್ಥಕ್ಷೇತ್ರವಾದ (Holy Pilgrimage) ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗರಾಧನೆ (Nagaraadhane), ಸರ್ಪಸಂಸ್ಕಾರದಂತಹ (sarpa samskara) ಕಾರ್ಯಗಳನ್ನು ನಾಗದೋಷದಿಂದ ಬಳಲುವವರು ಮಾಡುವುದನ್ನು ನೋಡಬಹುದು. ಅಲ್ಲದೇ ಕುಟುಂಬಕ್ಕೆ ಸೇರಿದ ಭೂಮಿಯಲ್ಲಿ ನಾಗನಿಗೆ ಸಂಬಂಧಿಸಿದ ಕಲ್ಲುಗಳಿರುವುದು ಅದಕ್ಕೆ ವಾರ್ಷಿಕವಾಗಿ ಕುಟುಂಬಸ್ಥರೆಲ್ಲಾ ಸೇರಿ ಪೂಜೆ ಸಲ್ಲಿಸುವುದನ್ನು ನೋಡಬಹುದು. 

Scroll to load tweet…