Dream interpretation: ಕನಸಲ್ಲಿ ಕಪ್ಪು ಹಾವು ಕಂಡರೆ ಅಶುಭದ ಸೂಚನೆನಾ?
ಕನಸಿನಲ್ಲಿ ಹಾವನ್ನು ನೋಡುವುದು ಅಶುಭವೇ? ಕನಸಲ್ಲಿ ಹಾವು ಕಂಡರೆ ಬೆಚ್ಚುವಂಥ ವಿಷಯವೇ? ಕನಸುಗಳಲ್ಲಿ ಹಾವು ಪದೇ ಪದೇ ಕಾಣಿಸುತ್ತಿದ್ದರೆ ಏನರ್ಥ ತಿಳಿಯೋಣ.
ಹಾವುಗಳನ್ನು ಕಂಡರೆ ಹಲವರ ಬೆನ್ನುಮೂಳೆಯಲ್ಲಿ ನಡುಕ ಹುಟ್ಟುತ್ತದೆ. ಶೀತ-ರಕ್ತದ ಸರೀಸೃಪವು ಸಾವಿನ ಸಂಕೇತವಾಗಿ ಬರಬಹುದು. ಏಕೆಂದರೆ ಒಬ್ಬ ವ್ಯಕ್ತಿಯು ಹಾವಿನ ಕಡಿತದಿಂದ ಸಾಯಬಹುದು. ಅಂತಹ ವಿಷದ ಶಕ್ತಿ ಮತ್ತು ಮಾರಕತೆ ಹಾವಿನದು. ಆದಾಗ್ಯೂ, ಕನಸಿನಲ್ಲಿ ಹಾವುಗಳು ಸಂಪೂರ್ಣವಾಗಿ ವಿಭಿನ್ನ ಅರ್ಥವನ್ನು ಹೊಂದಬಹುದು.
ಕನಸಿನಲ್ಲಿ ಹಾವನ್ನು(Snake dreams) ಕಾಣುವುದು ಸಾಮಾನ್ಯವಾಗಿದೆ. ಬಹಳಷ್ಟು ಜನರಿಗೆ ಕನಸಿನಲ್ಲಿ ಆಗಾಗ ಹಾವು ಕಾಣಿಸುತ್ತಿರುತ್ತದೆ. ಹಾವುಗಳೆಂದರೆ ಮೈಯ್ಯಲ್ಲಿ ಚಳಿ ಹುಟ್ಟುತ್ತವೆ. ಅಂಥ ಹಾವುಗಳು ಕನಸಿನಲ್ಲಿ ಬಂದರೆ ಬೆಚ್ಚಿ ಬೆವರುವವರು ಹಲವರು. ಮತ್ತೆ ಕೆಲವರು ಹಾವನ್ನು ದೇವರೆಂದು ತಿಳಿದಿರುವವರು ಹಾವು ಕನಸಿನಲ್ಲಿ ಬಂದಾಗ, ದೇವರೇ ಏನೋ ಸೂಚನೆ(sign) ಕೊಡುತ್ತಿದ್ದಾನೆ ಎಂದು ತಿಳಿಯುತ್ತಾರೆ. ಇಷ್ಟಕ್ಕೂ ಕನಸಿನಲ್ಲಿ ಹಾವುಗಳನ್ನು ನೋಡುವುದು ಶುಭವೇ ಅಥವಾ ಅಶುಭವೇ?
ಕನಸಿನಲ್ಲಿ ಕಪ್ಪು ಹಾವು ಕಚ್ಚುವುದನ್ನು ನೋಡುವುದು
ಕನಸಿನಲ್ಲಿ ಕಪ್ಪು ಹಾವು ಕಚ್ಚುವುದನ್ನು ನೋಡುವುದು ಅಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಕನಸಿನ ಪುಸ್ತಕದ ಪ್ರಕಾರ, ಕೆಲವು ದೊಡ್ಡ ಸಮಸ್ಯೆಗಳು ನಿಮ್ಮ ಮೇಲೆ ಬರಬಹುದು. ಮುಂದಿನ ದಿನಗಳಲ್ಲಿ ನೀವು ದೊಡ್ಡ ತೊಂದರೆಗೆ ಸಿಲುಕಬಹುದು ಎಂಬುದರ ಸೂಚನೆ ಇದಾಗಿದೆ.
ಕನಸಿನಲ್ಲಿ ಕಪ್ಪು ಹಾವನ್ನು ಕೊಲ್ಲುವುದು
ಕನಸಿನಲ್ಲಿ ಕಪ್ಪು ಹಾವನ್ನು ಕೊಲ್ಲುವುದು ಸಹ ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಕನಸಿನ ವಿಜ್ಞಾನದ ಪ್ರಕಾರ, ನಿಮ್ಮ ಶತ್ರುಗಳ ಮೇಲೆ ನೀವು ಶೀಘ್ರದಲ್ಲೇ ಜಯ ಸಾಧಿಸಬಹುದು ಎಂದರ್ಥ.
ಕಪ್ಪು ಹಾವು ಮತ್ತು ಮುಂಗುಸಿಯ ನಡುವಿನ ಜಗಳ ನೋಡುವುದು
ಕನಸಿನಲ್ಲಿ ಕಪ್ಪು ಹಾವು ಮತ್ತು ಮುಂಗುಸಿಯ ನಡುವಿನ ಜಗಳವನ್ನು ನೋಡುವುದು ಅಶುಭ ಸಂಕೇತ(inauspicious sign)ವೆಂದು ಪರಿಗಣಿಸಲಾಗುತ್ತದೆ. ಕನಸಿನ ಪುಸ್ತಕದ ಪ್ರಕಾರ, ನೀವು ಕಾನೂನು ವಿಷಯದಲ್ಲಿ ಸಿಕ್ಕಿಹಾಕಿಕೊಳ್ಳಬಹುದು. ನೀವು ಯಾರೊಂದಿಗಾದರೂ ಚರ್ಚೆ ನಡೆಸಬಹುದು. ಈ ಕಾರಣಕ್ಕಾಗಿ ನೀವು ಕಾನೂನು ವಿಷಯದಲ್ಲಿ ಸಿಕ್ಕಿಬೀಳಬಹುದು.
ಕನಸಿನಲ್ಲಿ ಕಪ್ಪು ಹಾವನ್ನು ನೋಡಿ
ಕನಸಿನಲ್ಲಿ ಕಪ್ಪು ಹಾವನ್ನು ಹಿಡಿಯುವುದನ್ನು ಮಂಗಳಕರ ಸಂಕೇತ(auspicious sign)ವೆಂದು ಪರಿಗಣಿಸಲಾಗುತ್ತದೆ. ಕನಸಿನ ಪುಸ್ತಕದ ಪ್ರಕಾರ, ನೀವು ಸಧ್ಯದಲ್ಲೇ ವಿತ್ತೀಯ ಪ್ರಯೋಜನಗಳನ್ನು ಪಡೆಯಬಹುದು. ಅಲ್ಲದೆ, ನಿಮ್ಮ ತೊಂದರೆಗಳು ಶೀಘ್ರದಲ್ಲೇ ಕೊನೆಗೊಳ್ಳಬಹುದು ಎಂಬುದನ್ನು ಈ ಕನಸು ಸೂಚಿಸುತ್ತದೆ.
ಕನಸಿನಲ್ಲಿ ಹಾವು ಕಡಿತ(Snake biting in dream)
ಕನಸಿನಲ್ಲಿ ಹಾವು ಕಚ್ಚುವುದನ್ನು ನೋಡುವುದನ್ನು ಸಹ ಅಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ನೀವು ಉದ್ಯೋಗ ಮತ್ತು ವ್ಯವಹಾರದಲ್ಲಿ ಸಮಸ್ಯೆಗಳನ್ನು ಎದುರಿಸಬಹುದು ಎಂದು ಹೇಳಲಾಗುತ್ತದೆ.
ಕನಸಿನಲ್ಲಿ ಹಾವುಗಳು ಮತ್ತು ಪಿತೃ ದೋಷ(Pitru dosha)
ಪಿತೃ ದೋಷ ಅಥವಾ ಮೃತ ಪೂರ್ವಜರ ಶಾಪದಿಂದ ಬಳಲುತ್ತಿರುವ ಜನರು ಹಾವುಗಳ ಬಗ್ಗೆ ಪುನರಾವರ್ತಿತ ಕನಸುಗಳನ್ನು ಹೊಂದಿರುತ್ತಾರೆ. ಆದ್ದರಿಂದ, ಪಿತೃ ದೋಷವನ್ನು ನಿವಾರಿಸಲು ಮತ್ತು ಕನಸಿನಲ್ಲಿ ಹಾವುಗಳನ್ನು ನೋಡುವುದನ್ನು ನಿಲ್ಲಿಸಲು, ತಮ್ಮ ಪೂರ್ವಜರಿಗೆ ಶ್ರಾದ್ಧ ಮತ್ತು ತರ್ಪಣವನ್ನು ಮಾಡುವ ಮೂಲಕ ಕ್ಷಮೆ ಯಾಚಿಸಬೇಕು ಮತ್ತು ಅವರ ಆಶೀರ್ವಾದವನ್ನು ಪಡೆಯಬೇಕು.